ಇಡ್ಲಿ ತಿನ್ನಲು ವರ್ಷಕ್ಕೆ 6 ಲಕ್ಷ ರೂಪಾಯಿ ತೆತ್ತ ಈ ಭೂಪ!

ಪ್ರತಿ ವರ್ಷವು ಮಾರ್ಚ್ 30 ಅನ್ನು ಅಂತಾರಾಷ್ಟ್ರೀಯ ಇಡ್ಲಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ ಅಧ್ಯಯನವೊಂದನ್ನು ಪ್ರಕಟಿಸಿದೆ. ಸ್ವಿಗ್ಗಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಫುಡ್ ಅನ್ನು ಆರ್ಡರ್ ಮಾಡಿದ ಬಗ್ಗೆ ವಿವರಣೆಯನ್ನು ಸ್ವಿಗ್ಗಿ ನೀಡಿದೆ. ಆನ್‌ಲೈನ್ ಫುಡ್ ಡೆಲಿವರಿ ಮಾಡುವ ಸಂಸ್ಥೆಯಾದ ಸ್ವಿಗ್ಗಿ ತಮ್ಮ ಅಧ್ಯಯನವನ್ನು ಪ್ರಕಟಿಸಿದೆ. ಈ ಡೇಟಾದಲ್ಲಿ ಅಪರೂಪದ, ವಿಲಕ್ಷಣ ಸಂಶೋಧನೆಯೊಂದು ಬಹಿರಂಗಪಡಿಸಿದೆ.

ಅತೀ ಡಿಮ್ಯಾಂಡ್‌ನಲ್ಲಿರುವ ಈ ಆನ್‌ಲೈನ್ ಸೇವೆಯನ್ನು ನೀಡುವ ಸಂಸ್ಥೆಯು ಭಾರತದಲ್ಲಿ ಇಡ್ಲಿಯ ಜನಪ್ರಿಯತೆಯನ್ನು ನಿರ್ಧರಿಸಲು ಅದರ ಡೇಟಾವನ್ನು ವಿಶ್ಲೇಷನೆ ಮಾಡಿದೆ. ಈ ಡೇಟಾದಲ್ಲಿ ಹೊರಬಂದ ಮಾಹಿತಿಯು ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ವರದಿಗಳ ಪ್ರಕಾರ, ಭಾರತವು ಹಿಂದಿನ ವರ್ಷದಲ್ಲಿ ಸ್ವಿಗ್ಗಿ ಮೂಲಕ ಸುಮಾರು 33 ಮಿಲಿಯನ್ ಪ್ಲೇಟ್‌ಗಳ ಇಡ್ಲಿಯನ್ನು ಆರ್ಡರ್ ಮಾಡಿದೆ. ವ್ಯಕ್ತಿಯೋರ್ವ ಒಂದು ವರ್ಷದಲ್ಲಿಯೇ 6 ಲಕ್ಷ ರೂಪಾಯಿ ಮೌಲ್ಯದ ಇಡ್ಲಿಯನ್ನು ಆರ್ಡರ್ ಮಾಡಿದೆ ಎಂದು ಡೇಟಾ ಉಲ್ಲೇಖಿಸಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಇಡ್ಲಿ ತಿನ್ನಲು ವರ್ಷಕ್ಕೆ 6 ಲಕ್ಷ ರೂಪಾಯಿ ತೆತ್ತ ಈ ಭೂಪ!

ಇಡ್ಲಿ ಪ್ರೇಮಿ ಆರ್ಡರ್ ಮಾಡಿದ ಇಡ್ಲಿಗಳು

ಹೈದಾರ್‌ಬಾದ್‌ನ ಇಡ್ಲಿ ಪ್ರೇಮಿಯೋರ್ವ ಖಾರದ ಅಕ್ಕಿ ಇಡ್ಲಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂದರೆ, ಅವರು ಹಿಂದಿನ 12 ತಿಂಗಳುಗಳಲ್ಲಿ ಸ್ವಿಗ್ಗಿಯಿಂದ ಇಡ್ಲಿಗಳನ್ನು ಆರ್ಡರ್ ಮಾಡಲು ಒಟ್ಟಾಗಿ 6 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೊತ್ತವನ್ನು ಖರ್ಚು ಮಾಡಿದ್ದಾರೆ. ಓರ್ವ ವ್ಯಕ್ತಿ ಒಂದು ಆಹಾರವನ್ನು ಇಷ್ಟೊಂದು ಇಷ್ಟಪಡಲು ಸಾಧ್ಯವೇ ಎಂಬ ಪ್ರಶ್ನೆಯು ಕೂಡಾ ಹುಟ್ಟಿದೆ. ತಮಗೆ ಇಡ್ಲಿ ತಿನ್ನಬೇಕು ಅನಿಸಿದಾಗೆಲ್ಲ ಈ ವ್ಯಕ್ತಿ ಸ್ವಿಗ್ಗಿಯಲ್ಲಿ ಫುಡ್ ಡೆಲಿವರಿಯನ್ನು ಮಾಡಿದ್ದಾರೆ. ಒಟ್ಟಾಗಿ ಸುಮಾರು ಆರು ಲಕ್ಷ ರೂಪಾಯಿಯ ಆಹಾರವನ್ನು ಆರ್ಡರ್ ಮಾಡಿದ್ದಾರೆ.

Year ender 2022: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಖರೀದಿಗೆ 16.6 ಲಕ್ಷ ರೂ ತೆತ್ತ ಬೆಂಗಳೂರಿಗರು
ಇಷ್ಟು ಮಾತ್ರವಲ್ಲದೆ ಈ ವ್ಯಕ್ತಿಯು ಬೇರೆ ಪ್ರದೇಶಕ್ಕೆ ಭೇಟಿ ನೀಡಿದಾಗೆಲ್ಲ ಇಡ್ಲಿಯನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಹೇಳಿದೆ. "ಎಲ್ಲ ಪ್ರದೇಶದಲ್ಲಿಯೂ ಇಡ್ಲಿ ಹಿಂಬಾಲಿಸುತ್ತದೆ. ಹೈದಾರಾಬಾದ್‌ನ ಓರ್ವ ವ್ಯಕ್ತಿಯು ಕಳೆದ ಒಂದು ವರ್ಷದಲ್ಲಿ ಇಡ್ಲಿಯನ್ನು ಆರ್ಡರ್ ಮಾಡಿದ್ದಾರೆ. ಈ ದಕ್ಷಿಣ ಭಾರತದ ಖಾದ್ಯಕ್ಕಾಗಿ 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ವ್ಯಕ್ತಿಯು ತನಗಾಗಿ, ತನ್ನ ಸ್ನೇಹಿತರಿಗಾಗಿ, ಕುಟುಂಬಕ್ಕಾಗಿ ಒಟ್ಟಾಗಿ 8,428 ಪ್ಲೇಟ್‌ ಇಡ್ಲಿಯನ್ನು ಆರ್ಡರ್ ಮಾಡಿದ್ದಾರೆ. ಚೆನ್ನೈ ಮತ್ತು ಬೆಂಗಳೂರು ನಡುವೆ ತನ್ನ ಪ್ರಯಾಣದಲ್ಲಿ ಇಡ್ಲಿಯನ್ನೇ ಆರ್ಡರ್ ಮಾಡಿದ್ದಾರೆ," ಎಂದು ಸ್ವಿಗ್ಗಿ ಹೇಳಿದೆ.

ಮಾಹಿತಿ ಪ್ರಕಾರ ಸ್ವಿಗ್ಗಿ ಪ್ಲಾಟ್‌ಫಾರ್ಮ್ ಒಂದು ವರ್ಷದಲ್ಲಿ ಸುಮಾರು 33 ಮಿಲಿಯನ್ ಪ್ಲೇಟ್ ಇಡ್ಲಿಯನ್ನು ಆರ್ಡರ್ ಮಾಡಲಾಗಿದೆ. ಹಾಗೆಯೇ ಜನರು ಹೆಚ್ಚಾಗಿ ಇಡ್ಲಿಯನ್ನು ಇಷ್ಟಪಡುತ್ತಿದ್ದಾರೆ. ಬೆಂಗಳೂರು, ಹೈದಾರಾಬಾದ್, ಚೆನ್ನೈನಲ್ಲಿ ಹೆಚ್ಚಾಗಿ ಇಡ್ಲಿಯನ್ನು ಆರ್ಡರ್ ಮಾಡಲಾಗಿದೆ. ದೆಹಲಿ, ಕೋಲ್ಕತ್ತಾ, ಕೊಚ್ಚಿ, ಮುಂಬೈ, ಕೊಯಮತ್ತೂರು, ಪುಣೆ, ವಿಜಾಗ್ ಇತರೆ ನಗರಗಳಲ್ಲಿಯೂ ಇಡ್ಲಿಯನ್ನು ಆರ್ಡರ್ ಮಾಡಲಾಗಿದೆ.

ಸ್ವಿಗ್ಗಿಯಲ್ಲಿ ಖರೀದಿಗೆ 16.6 ಲಕ್ಷ ರೂ ತೆತ್ತ ಬೆಂಗಳೂರಿಗರು

ಕಳೆದ ವರ್ಷದ ಕೊನೆಯಲ್ಲಿ ಆಹಾರ ಡೆಲವರಿ ಮಾಡುವ ಆಪ್ ಆದ ಸ್ವಿಗ್ಗಿ 2022ರ ವಾರ್ಷಿಕ ಪಟ್ಟಿಯ ಏಳನೇ ಆವೃತ್ತಿ 'HOW INDIA SWIGGY'D 2022' ಅನ್ನು ಜಾರಿ ಮಾಡಿದೆ. ಈ ವರದಿಯ ಪ್ರಕಾರ ಬೆಂಗಳೂರಿಗರು 2022ರಲ್ಲಿ ಸ್ವಿಗ್ಗಿಯಲ್ಲಿ ದಿನಸಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು 16.6 ಲಕ್ಷ ರೂಪಾಯಿಯನ್ನು ತೆತ್ತಿದ್ದಾರೆ. ಸ್ವಿಗ್ಗಿಯಲ್ಲಿ ಅಧಿಕ ರೂಪಾಯಿಯ ಉತ್ಪನ್ನವನ್ನು ಆರ್ಡರ್ ಮಾಡಿದ, ಅದು ಕೂಡಾ ಒಂದೇ ಬಾರಿಗೆ ಭಾರೀ ಮೊತ್ತದ ಆರ್ಡರ್ ಮಾಡಿದ ವ್ಯಕ್ತಿಯು ಕೂಡಾ ಬೆಂಗಳೂರಿಗೆ ಸೇರಿದವರು ಆಗಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಗ್ರಾಹಕರೊಬ್ಬರು ಒಂದೇ ಬಾರಿಗೆ ಸುಮಾರು 75,378 ರೂಪಾಯಿಯ ಆರ್ಡರ್ ಅನ್ನು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+