For Quick Alerts
ALLOW NOTIFICATIONS  
For Daily Alerts

Year ender 2022: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಖರೀದಿಗೆ 16.6 ಲಕ್ಷ ರೂ ತೆತ್ತ ಬೆಂಗಳೂರಿಗರು

|

ಆಹಾರ ಡೆಲವರಿ ಮಾಡುವ ಆಪ್ ಆದ ಸ್ವಿಗ್ಗಿ 2022ರ ವಾರ್ಷಿಕ ಪಟ್ಟಿಯ ಏಳನೇ ಆವೃತ್ತಿ 'HOW INDIA SWIGGY'D 2022' ಅನ್ನು ಜಾರಿ ಮಾಡಿದೆ. ಈ ವರದಿಯ ಪ್ರಕಾರ ಬೆಂಗಳೂರಿಗರು 2022ರಲ್ಲಿ ಸ್ವಿಗ್ಗಿಯಲ್ಲಿ ದಿನಸಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು 16.6 ಲಕ್ಷ ರೂಪಾಯಿಯನ್ನು ತೆತ್ತಿದ್ದಾರೆ.

ಸ್ವಿಗ್ಗಿಯಲ್ಲಿ ಅಧಿಕ ರೂಪಾಯಿಯ ಉತ್ಪನ್ನವನ್ನು ಆರ್ಡರ್ ಮಾಡಿದ, ಅದು ಕೂಡಾ ಒಂದೇ ಬಾರಿಗೆ ಭಾರೀ ಮೊತ್ತದ ಆರ್ಡರ್ ಮಾಡಿದ ವ್ಯಕ್ತಿಯು ಕೂಡಾ ಬೆಂಗಳೂರಿಗೆ ಸೇರಿದವರು ಆಗಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಗ್ರಾಹಕರೊಬ್ಬರು ಒಂದೇ ಬಾರಿಗೆ ಸುಮಾರು 75,378 ರೂಪಾಯಿಯ ಆರ್ಡರ್ ಅನ್ನು ಮಾಡಿದ್ದಾರೆ.

ಸ್ವಿಗ್ಗಿ, ಜೊಮ್ಯಾಟೊ ಗ್ರಾಹಕರಿಂದ ಶೇ. 5 ಜಿಎಸ್‌ಟಿ ಸಂಗ್ರಹಿಸಲಿದೆ: ಏನಿದು ಬದಲಾವಣೆ?ಸ್ವಿಗ್ಗಿ, ಜೊಮ್ಯಾಟೊ ಗ್ರಾಹಕರಿಂದ ಶೇ. 5 ಜಿಎಸ್‌ಟಿ ಸಂಗ್ರಹಿಸಲಿದೆ: ಏನಿದು ಬದಲಾವಣೆ?

ನಂತರದ ಸ್ಥಾನದಲ್ಲಿ ಪುಣೆಯ ಗ್ರಾಹಕರೊಬ್ಬರು ಇದ್ದು, ಒಂದೇ ಬಾರಿಗೆ 71,229 ರೂಪಾಯಿಯ ಆರ್ಡರ್ ಅನ್ನು ಮಾಡಿದ್ದಾರೆ. ತನ್ನ ಸಂಪೂರ್ಣ ಟೀಮ್‌ಗೆ ಬರ್ಗರ್ ಹಾಗೂ ಫ್ರೈಸ್ ಅನ್ನು ಈ ಪುಣೆಯ ಗ್ರಾಹಕರು ಆರ್ಡರ್ ಮಾಡಿದ್ದಾರೆ. ಇನ್ನೋರ್ವ ಬೆಂಗಳೂರಿನ ಗ್ರಾಹಕರೊಬ್ಬರು ವಾರದಲ್ಲೇ 118 ಬಾರಿ ಆಹಾರವನ್ನು ಆರ್ಡರ್ ಮಾಡಿದ್ದಾರೆ!

 ಅಧಿಕ ಐಸ್‌ ಕ್ಯೂಬ್, ಕೋಳಿ ಮಾಂಸ ಆರ್ಡರ್ ಮಾಡಿರುವ ಬೆಂಗಳೂರು!

ಅಧಿಕ ಐಸ್‌ ಕ್ಯೂಬ್, ಕೋಳಿ ಮಾಂಸ ಆರ್ಡರ್ ಮಾಡಿರುವ ಬೆಂಗಳೂರು!

ಬೆಂಗಳೂರು ಅಧಿಕವಾಗಿ ಐಸ್‌ ಕ್ಯೂಬ್ ಆರ್ಡರ್ ಮಾಡಿದೆ. ಆ ನಂತರದ ಸ್ಥಾನದಲ್ಲಿ ಮುಂಬೈ, ಚೆನ್ನೈ, ದೆಹಲಿ ಇತ್ತು. ಇನ್ನು ಅತೀ ಶೀಘ್ರದ ಆರ್ಡರ್ ಕೂಡಾ ಬೆಂಗಳೂರಿನಲ್ಲೇ ಮಾಡಲಾಗಿದೆ. 50 ಮೀಟರ್ ದೂರದಲ್ಲಿದ್ದ ಗ್ರಾಹಕರಿಗೆ 1.03 ನಿಮಿಷದಲ್ಲಿಯೇ ಆರ್ಡರ್ ಅನ್ನು ತಲುಪಿಸಲಾಗಿದೆ. ಕೋಳಿಯ ಮಾಂಸವನ್ನು ಭಾರತದಾದ್ಯಂತ ಅಧಿಕವಾಗಿ ಆರ್ಡರ್ ಮಾಡಲಾಗಿದೆ. ಸುಮಾರು 29.86 ಲಕ್ಷ ಬಾರಿ ಕೋಳಿಯ ಮಾಂಸ ಆರ್ಡರ್ ಮಾಡಲಾಗಿದೆ. ಈ ಪಟ್ಟಿಯಲ್ಲಿಯೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಅದಾದ ಬಳಿಕ ಹೈದಾರಾಬಾದ್, ಚೆನ್ನೈನಲ್ಲಿ ಅಧಿಕ ಕೋಳಿ ಮಾಂಸ ಆರ್ಡರ್ ಮಾಡಲಾಗಿದೆ. ಇನ್ನು ಬೇರೆ ಮಾಂಸವನ್ನು ಕೂಡಾ ಮುಂಬೈ ಅಧಿಕ ಆರ್ಡರ್ ಮಾಡಿದೆ. ಮುಂಬೈ, ದೆಹಲಿ-ಎನ್‌ಸಿಆರ್, ಕೋಲ್ಕತ್ತಾ, ಪುಣೆ, ಕೊಯಮತ್ತೂರಿಗಿಂತ ಅಧಿಕವಾಗಿ ಬೇರೆ ಮಾಂಸವನ್ನು ಬೆಂಗಳೂರಿಗರು ಆರ್ಡರ್ ಮಾಡಿದ್ದಾರೆ.

2020ರಲ್ಲಿ ಸೆಕೆಂಡ್ ಗೆ ಒಂದು ಸಲಕ್ಕಿಂತ ಹೆಚ್ಚು ಆರ್ಡರ್ ಆಗಿದೆ ಸ್ವಿಗ್ಗಿಯಲ್ಲಿ ಬಿರಿಯಾನಿ2020ರಲ್ಲಿ ಸೆಕೆಂಡ್ ಗೆ ಒಂದು ಸಲಕ್ಕಿಂತ ಹೆಚ್ಚು ಆರ್ಡರ್ ಆಗಿದೆ ಸ್ವಿಗ್ಗಿಯಲ್ಲಿ ಬಿರಿಯಾನಿ

 ಬಿರಿಯಾನಿ ಅಧಿಕ ಆರ್ಡರ್

ಬಿರಿಯಾನಿ ಅಧಿಕ ಆರ್ಡರ್

2022ರ ವರ್ಷವೂ ಕೋವಿಡ್ ಬಳಿಕ ಸಾಮಾನ್ಯ ಸ್ಥಿತಿಗೆ ಬಂದ ವರ್ಷವಾಗಿದೆ. ಬಿರಿಯಾನಿಯನ್ನು ಅಧಿಕವಾಗಿ ಆರ್ಡರ್ ಮಾಡಲಾಗುತ್ತಿದೆ. ಪ್ರತಿ ನಿಮಿಷಕ್ಕೂ 137 ಬಿರಿಯಾನಿ ಆರ್ಡರ್ ಮಾಡಲಾಗುತ್ತಿದೆ. ಪ್ರತಿ ಸೆಕೆಂಡಿಗೆ 2.28 ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಭಾರತದಲ್ಲಿ ಅಧಿಕವಾಗಿ ವಿದೇಶಿ ಆಹಾರವನ್ನು ಆರ್ಡರ್ ಮಾಡಲಾಗುತ್ತಿದೆ. ರವಾಲಿ (ಇಟಾಲಿಯನ್) ಹಾಗೂ ಬಿಬಿಮ್‌ಬಾಪ್ (ಕೊರಿಯನ್) ಆಹಾವನ್ನು ಅಧಿಕವಾಗಿ ಆರ್ಡರ್ ಮಾಡುತ್ತಿದ್ದಾರೆ. ಚಹಾ, ಪಾನೀಯ, ರೊಟ್ಟಿ, ಪದಾರ್ಥವನ್ನು ಆರ್ಡರ್ ಹೆಚ್ಚಾಗಿ ಮಾಡಿದ್ದಾರೆ.

 ಬೇರೇನು ಆರ್ಡರ್ ಮಾಡಿದ್ದಾರೆ?

ಬೇರೇನು ಆರ್ಡರ್ ಮಾಡಿದ್ದಾರೆ?

ಸ್ವಿಗ್ಗಿ ಆರ್ಡರ್‌ನಲ್ಲಿ ಅಧಿಕವಾಗಿ ಸೇವಿಂಗ್ಸ್ ಮಾಡಿರುವ ಗ್ರಾಹಕರು ಕೂಡಾ ಬೆಂಗಳೂರಿಗೆ ಸೇರಿದವರು ಆಗಿದ್ದಾರೆ. ಬೆಂಗಳೂರಿಗರು ಆಫರ್, ವೋಚರ್ ಮೂಲಕ ಸುಮಾರು 100 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಮುಂಬೈ, ಹೈದಾರಾಬಾದ್, ದೆಹಲಿ ಇದೆ. ಇನ್ನು ಜನರು ಅಧಿಕವಾಗಿ ಚಹಾ ಕಾಫಿಯನ್ನು ಆರ್ಡರ್ ಮಾಡಿದ್ದಾರೆ. ಸ್ವಿಗ್ಗಿಯಲ್ಲಿ ಚಹಾ ಆರ್ಡರ್ 305.55 ಶೇಕಡ ಹೆಚ್ಚಾಗಿದೆ. ಕಾಫಿ ಆರ್ಡರ್ 273.67 ಶೇಕಡ ಅಧಿಕವಾಗಿದೆ. ಹಾಗೆಯೇ ಈರುಳ್ಳಿ, ಟೊಮೊಟೊ, ಆಲೂಗಡ್ಡೆ, ಕಲ್ಲಂಗಡಿ, ಬಾಳೆಹಣ್ಣು, ಎಳನೀರು ಅಧಿಕವಾಗಿ ಆರ್ಡರ್ ಮಾಡಲಾಗಿದೆ.

 ಆರೋಗ್ಯಕರ ಆಹಾರ ಎಲ್ಲಿ ಅಧಿಕ ಆರ್ಡರ್?

ಆರೋಗ್ಯಕರ ಆಹಾರ ಎಲ್ಲಿ ಅಧಿಕ ಆರ್ಡರ್?

ಇನ್ನು ಆರೋಗ್ಯಕರ ಆಹಾರದ ವಿಚಾರಕ್ಕೆ ಬಂದಾಗಲೂ ಕೂಡಾ ಬೆಂಗಳೂರಿಗರು ಪ್ರಥಮ ಸ್ಥಾನದಲ್ಲಿದ್ದಾರೆ. ಬೆಂಗಳೂರು, ಮುಂಬೈ, ಹೈದಾರಾಬಾದ್ ಹಾಗೂ ಪುಣೆಯಲ್ಲಿ ಅಧಿಕವಾಗಿ ಆರೋಗ್ಯಕರ ಆಹಾರವನ್ನು ಖರೀದಿ ಮಾಡಲಾಗುತ್ತಿದೆ. ಡ್ರ್ಯಾಗನ್ ಪ್ರೂಟ್, ಕಿತ್ತಳೆ, ಬೆರೀಸ್, ವುಡ್ ಆಪಲ್ ಅನ್ನು ಅಧಿಕವಾಗಿ ಆರ್ಡರ್ ಮಾಡಲಾಗುತ್ತಿದೆ. ಸುಮಾರು 17 ಲಕ್ಷ ಕಿಲೋ ಗ್ರಾಮ್‌ನಷ್ಟು ಹಣ್ಣುಗಳನ್ನು ಆರ್ಡರ್ ಮಾಡಲಾಗಿದೆ. ಇನ್ನು ಶ್ರೀನಗರ, ಪೋರ್ಟ್ ಬ್ಲೈರ್, ಮುನ್ನಾರ್, ಅಜ್ವಾಲ್, ಜಲ್ನಾ, ಬಿಲಾವರ ಮೊದಲಾದ ಪ್ರದೇಶದಲ್ಲಿ ಮೊದಲ ಬಾರಿಗೆ ಆಹಾರವನ್ನು ಆರ್ಡರ್ ಮಾಡಲಾಗಿದೆ.

English summary

Year ender 2022: Bengaluru User spent Rs 16.6 lakh on buying grocery and essentials on Swiggy Instamart

Year ender 2022: Single order worth over Rs 75k, city-based user buying groceries worth Rs 16.6 lakh: Bengaluru tops Swiggy’s annual report in many ways.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X