ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಫೆಸ್ಟಿವ್ ಬೊನಾನ್ಜಾ ಆರಂಭ ಮಾಡಿರುವುದಾಗಿ ಘೋಷಣೆ ಮಾಡಿದೆ. ಈ ಫೆಸ್ಟಿವಲ್ ಸೀಸನ್‌ನಲ್ಲಿ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡಿದೆ. ಗ್ರಾಹಕರು ಸುಮಾರು 25 ಸಾವಿರ ರೂಪಾಯಿವರೆಗೆ ಹಣವನ್ನು ಉಳಿತಾಯ ಮಾಡಬಹುದು ಅಥವಾ 25 ಸಾವಿರ ರೂಪಾಯಿವರೆಗೆ ಕ್ಯಾಶ್ ಬ್ಯಾಕ್ ಪಡೆಯಲು ಸಾಧ್ಯವಿದೆ.
ಗ್ರಾಹಕರು ಕ್ರೆಡಿಟ್, ಡೆಬಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಕನ್ಸ್ಯೂಮರ್ ಫೈನಾನ್ಸ್ ಅಥವಾ ಕಾರ್ಡ್‌ಲೆಸ್ ಇಎಂಐ ಮೂಲಕ ಈ 25 ಸಾವಿರ ಕ್ಯಾಶ್ ಬ್ಯಾಕ್ ಅನ್ನು ಪಡೆಯಲು ಸಾಧ್ಯವಗಲಿದೆ. ಇನ್ನು ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ಇಎಂಐ ಪಾವತಿ ಮಾಡುವ ಮೂಲಕವು ಕೆಲವು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿರುವ ಐಸಿಐಸಿಐ ಬ್ಯಾಂಕ್ ಫೆಸ್ಟಿವ್ ಬೊನಾನ್ಜಾ ಆರಂಭದ ವಿಚಾರ ತಿಳಿಸಲು ಸಂತೋಷವಾಗುತ್ತದೆ ಎಂದು ಹೇಳಿದೆ.
"ನಮ್ಮ ಗ್ರಾಹಕರಿಗಾಗಿ ನಾವು ಫೆಸ್ಟಿವ್ ಬೊನಾನ್ಜಾವನ್ನು ಆರಂಭ ಮಾಡಿದ್ದೇವೆ ಎಂದು ನಿಮಗೆ ತಿಳಿಸಲು ಸಂತೋಷವಾಗುತ್ತದೆ. ಈ ಫೆಸ್ಟಿವ್ ಬೊನಾನ್ಜಾದಲ್ಲಿ ಗ್ರಾಹಕರು ಖರೀದಿ ಹಾಗೂ ಪಾವತಿಗೆ ಆಫರ್‌ಗಳನ್ನು, ವಿನಾಯಿತಿ ಹಾಗೂ ಕ್ಯಾಶ್ ಬ್ಯಾಕ್ ಅನ್ನು ಪಡೆಯಲು ಸಾಧ್ಯವಾಗಲಿದೆ. ನಾವು ಹಲವಾರು ವಸ್ತುಗಳನ್ನು ಮಾರಾಟ ಮಾಡುವ ಪ್ಲಾಟ್‌ಫಾರ್ಮ್ ಜೊತೆಯಾಗಿ ಈ ಆಫರ್ ನೀಡುತ್ತಿದ್ದೇವೆ," ಎಂದು ಬ್ಯಾಂಕ್ ಮಾಹಿತಿ ನೀಡಿದೆ. ಇನ್ನು "ನಾವು ಗೃಹ ಸಾಲ, ಹಣಕಾಸು ವರ್ಗಾವಣೆ, ಆಸ್ತಿ ಅಡವಿಟ್ಟು ಪಡೆಯು ಸಾಲ, ವೈಯಕ್ತಿಕ ಸಾಲ, ಆಟೋ ಸಾಲ, ದ್ವಿ ಚಕ್ರ ವಾಹನ ಸಾಲ ಪಡೆಯುವವರಿಗೂ ವಿಶೇಷ ಹಬ್ಬದ ಪ್ರಯೋಜನವನ್ನು ಕೂಡಾ ನೀಡುತ್ತಿದ್ದೇವೆ. ಈ ಆಫರ್ ನಮ್ಮ ಗ್ರಾಹಕರಿಗೆ ಸಂತೋಷ, ಉತ್ಸಾಹ ತರಲಿದೆ ಎಂದು ನಂಬಿದ್ದೇವೆ," ಎಂದು ಐಸಿಐಸಿಐ ಬ್ಯಾಂಕ್‌ನ ನಿರ್ದೇಶಕ ರಾಕೇಶ್ ಜ್ಹಾ ಹೇಳಿದ್ದಾರೆ.
ಯಾವೆಲ್ಲ ಪ್ಲಾಟ್‌ಫಾರ್ಮ್‌ನಲ್ಲಿ ಈ ಆಫರ್
ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾ, ಬಿಗ್‌ಬಾಸ್ಕೆಟ್, ಬ್ಲಿಂಕಿಟ್, ಮೇಕ್ ಮೈ ಟ್ರಿಪ್, ಐಫೋನ್ 14, ಸ್ಯಾಮ್‌ಸಂಗ್, ಆಜಿಯೋ, ರಿಲಯನ್ಸ ಡಿಜಿಟಲ್, ಕ್ರೋಮಾ, ಎಲ್‌ಜಿ, ಡೆಲ್, ಸ್ವಿಗ್ಗಿ, ಜೊಮ್ಯಾಟೋ, ಪಿಸಿ ಜ್ಯುವೆಲ್ಲರಿ ಹಾಗೂ ಹಲವಾರು ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಈ ವಿಶೇಷ ಆಫರ್ ಅನ್ನು ಪಡೆಯಲು ಸಾಧ್ಯವಾಗಿದೆ. ಇನ್ನ ಗೃಹ, ವೈಯಕ್ತಿಕ, ಚಿನ್ನದ ಸಾಲಗಳಿಗೂ ಆಫರ್ ಪಡೆಯಬಹುದು. ವಿದ್ಯುತ್, ಗಾಡ್ಜೇಟ್, ಜ್ಯುವೆಲರಿ, ಆಟೋ ಮೊಬೈಲ್, ಫರ್ನಿಚರ್ ಮೊದಲಾದ ವಿಂಗಡನೆಯನ್ನು ಮಾಡಲಾಗಿದೆ. ಈ ವಿಂಗಡನೆ ಮಾಡಲಾದ ವಸ್ತುಗಳ ಖರೀದಿಯನ್ನು ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಮಾಡಿದರೆ ಐಸಿಐಸಿಐ ಬ್ಯಾಂಕ್ ಗ್ರಾಹಕರು ವಿಶೇಷ ವಿನಾಯಿತಿಯನ್ನು ಪಡೆಯಬಹುದು. ಇನ್ನು ಕಾರ್ಡ್‌ಲೆಸ್ ಇಎಂಐ ಹಾಗೂ ನೋ ಕಾಸ್ಟ್ ಇಎಂಐ ವ್ಯವಸ್ಥೆಯನ್ನು ಕೂಡಾ ಬಳಕೆ ಮಾಡಬಹುದು.
ಪ್ಲಾಟ್‌ಫಾರ್ಮ್‌ಗಳಲ್ಲಿರುವ ಆಫರ್ ಏನು?
* ಫ್ಲಿಪ್‌ಕಾರ್ಟ್, ಅಮೆಜಾನ್, ಮಿಂತ್ರಾ, ಟಾಟಾ ಕ್ಲಿಕ್, ಆಜಿಯೋ ಲ್ಯೂಕ್ಸ್‌ನಲ್ಲಿ ಶಾಪಿಂಗ್ ಮಾಡಿದರೆ ಶೇಕಡ 10ರಷ್ಟು ವಿನಾಯಿತಿ
* ಜಾಗತಿಕ ಐಷಾರಾಮಿ ಬ್ರಾಂಡ್: ಅರ್ಮಾನಿ ಎಕ್ಸ್‌ಚೇಂಜ್, ಕನಾಲಿ, ಕ್ಲಾರ್ಕ್ ಮೊದಲಾದ ಜಾಗತಿಕ ಐಷಾರಾಮಿ ಬ್ರಾಂಡ್ ಮೇಲೆ ಶೇಕಡ 10ರಷ್ಟು ವಿನಾಯಿತಿ
* ಎಲೆಕ್ಟ್ರಾನಿಕ್ & ಗಾಡ್ಜೆಟ್: ಎಲ್‌ಜಿ, ಡೆಲ್ ಗಾಡ್ಜೆಟ್‌ಗಳಿಗೆ ಮೊದಲಾದವುಗಳಿಗೆ ಶೇಕಡ 10ರಷ್ಟು ವಿನಾಯಿತಿ. ರಿಲಯನ್ಸ್, ಡಿಜಿಟಲ್, ವಿಜಯ್ ಸೇಲ್ಸ್, ಕ್ರೋಮಾದಲ್ಲಿಯೂ ಆಫರ್
* ಮೊಬೈಲ್ ಫೋನ್: ಐಫೋನ್ 14 ಅನ್ನು ಮಾಸಿಕ 2,497 ರೂಪಾಯಿ ಇಎಂಐ ಮೂಲಕ ಪಡೆಯಲು ಅವಕಾಶ. ಎಂಐ, ವನ್‌ಪ್ಲಸ್, ರಿಯಲ್‌ಮಿ, ಒಪೋ, ವಿವೋ ಮೊಬೈಲ್ ಫೋನ್ ಖರೀದಿಗೆ ಆಕರ್ಷಕ ವಿನಾಯಿತಿ, ಕ್ಯಾಶ್ ಬ್ಯಾಕ್ ಆಫರ್
* ಜ್ಯುವೆಲ್ಲರಿ: ಪ್ರಮುಖ ಬ್ರಾಂಡ್‌ಗಳ ಮೇಲೆ ಶೇಕಡ 10ರಷ್ಟು ವಿನಾಯಿತಿ
* ದಿನಸಿ: ಬಿಗ್ ಬಾಸ್ಕೆಟ್, ಸ್ವಿಗ್ಗಿ, ಇನ್‌ಸ್ಟಾಮಾರ್ಟ್, ಬ್ಲಿಂಕಿಂಟ್, ಈಟ್ ಬೆಟರ್ ಮೊದಲಾದ ಆಪ್‌ಗಳಲ್ಲಿ ದಿನಸಿ ಬೆಲೆಯಲ್ಲಿ ವಿನಾಯಿತಿ
* ಪ್ರವಾಸ: ಮೇಕ್ ಮೈ ಟ್ರಿಪ್, ಯಾತ್ರಾ, ಕ್ಲಿಯರ್‌ಟ್ರಿಪ್, ಈಸ್‌ಮೈಟ್ರಿಪ್, ಪೇಟಿಎಂ ಮೊದಲಾದ ಆಪ್‌ಗಳಲ್ಲಿ ವಿನಾಯಿತಿ
* ಊಟ, ತಿಂಡಿ, ಇತರೆ: ಜ್ಯೊಮಾಟೋ, ಸ್ವಿಗ್ಗಿ, ಈಝಿಡೈನರ್‌ನಲ್ಲಿ ಶೇಕಡ 20ರಷ್ಟು ವಿನಾಯಿತಿ
ಸಾಲದ ಮೇಲೆ ಏನಿದೆ ಆಫರ್?
ಗೃಹ ಸಾಲ: ಬರೀ 1100 ರೂಪಾಯಿ ಪ್ರೋಸೆಸಿಂಗ್ ಫೀಯೊಂದಿಗೆ ಪ್ರಿ ಅಪ್ರೋವ್ ಆದ ಗೃಹ ಸಾಲ ಲಭ್ಯವಾಗಲಿದೆ. ಗೃಹ ಸಾಲದ ಹಣದ ವಹಿವಾಟು, ಆಸ್ತಿ ಮೇಲಿನ ಸಾಲದ ಮೇಲೆ ಗ್ರಾಹಕರು ಶೇಕಡ 50ರಷ್ಟು ವಿನಾಯಿತಿ ಪಡೆಯಲು ಸಾಧ್ಯವಾಗಲಿದೆ
ಕಾರು ಸಾಲ: ಹೊಸ ಕಾರಿಗೆ ಆನ್ ರೋಡ್ ಪ್ರೈಸ್ ಮೇಲೆ ಶೇಕಡ 100ರಷ್ಟು ವಿನಾಯಿತಿ.
ಕನ್ಸ್ಯೂಮರ್ ಫೈನಾನ್ಸ್: ಆಪಲ್, ಒನ್ ಪ್ಲಸ್, ಸ್ಯಾಮ್‌ಸಂಗ್, ಸೋನಿ, ಎಲ್‌ಜಿ ಮೊದಲಾದ ಬ್ರಾಂಡ್‌ಗಳ ಮೇಲೆ ಯಾವುದೇ ವೆಚ್ಚವಿಲ್ಲದ ಇಎಂಐ . ಅಂದರೆ ಬಡ್ಡಿ ಇಲ್ಲದ ಇಎಂಐ
ವೈಯಕ್ತಿಕ ಸಾಲ: ವೈಯಕ್ತಿಕ ಸಾಲ ಪಡೆದರೆ 12 ಇಎಂಐ ಬಳಿಕ ಕ್ಲೋಸ್ ಮಾಡಲು ಯಾವುದೇ ಚಾರ್ಜ್ ಇಲ್ಲ. 12 ಇಎಂಐಗೂ ಮುನ್ನ ಶೇಕಡ 3ರಷ್ಟು ಶುಲ್ಕ
ಟ್ರಾಕ್ಟರ್ ಸಾಲ: 6 ವರ್ಷಗಳ ಕಾಲಕ್ಕೆ ಟ್ರಾಕ್ಟರ್ ಸಾಲವನ್ನು ಪಡೆಯಲು ಸಾಧ್ಯವಾಗಲಿದೆ. ಟ್ರಾಕ್ಟರ್‌ನ ಶೇಕಡ 90ರಷ್ಟು ಮೊತ್ತವನ್ನು ಸಾಲವಾಗಿ ಪಡೆಯಬಹುದು.
ದ್ವಿಚಕ್ರ ವಾಹನ ಸಾಲ: ಆನ್ ರೋಡ್ ಪ್ರೈಸ್ ಮೇಲೆ ಶೇಕಡ 100ರಷ್ಟು ವಿನಾಯಿತಿ. 30 ರೂಪಾಯಿಯಿಂದ 1000 ರೂಪಾಯಿವರೆಗೆ ಇಎಂಐ ಅವಕಾಶ


Click it and Unblock the Notifications