For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಸಿಬ್ಬಂದಿ ವರ್ತನೆ ಬಗ್ಗೆ ಅಸಮಾಧಾನವಾ? ಆರ್‌ಬಿಐಗೆ ದೂರು ಕೊಡುವ ಮಾರ್ಗ

|

ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆಯಾಗಲೀ ಅಥವಾ ಬ್ಯಾಂಕ್ ಸಿಬ್ಬಂದಿಯ ಬಗ್ಗೆಯಾಗಲೀ ನಿಮಗೆ ಅಸಮಾಧಾನ ಇದ್ದರೆ ನೇರವಾಗಿ ಆರ್‌ಬಿಐನಲ್ಲಿ ದೂರು ಸಲ್ಲಿಸುವ ಅವಕಾಶ ಇದೆ. ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿರುವ ಏಕೀಕೃತ ಸಾರ್ವಜನಿಕ ತನಿಖಾಧಿಕಾರಿ ಯೋಜನೆ (Integrated Ombudsman Scheme) ಇದಕ್ಕಾಗಿಯೇ ಇದೆ. ಬ್ಯಾಂಕ್ ಸಿಬ್ಬಂದಿ ನಿಮ್ಮೊಂದಿಗೆ ಅನುಚಿತವಾಗಿ ವರ್ತಸಿದರೆ, ಅಥವಾ ನಿಮ್ಮ ಸಮಸ್ಯೆಯನ್ನು ಸರಿಯಾಗಿ ಆಲಿಸದಿದ್ದರೆ, ಅಥವಾ ಬ್ಯಾಂಕ್‌ನಿಂದ ನಿಮ್ಮ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯದಿದ್ದರೆ, ಹೀಗೆ ಯಾವುದೇ ರೀತಿಯ ಅಸಮಾಧಾನಗಳು ಬ್ಯಾಂಕ್ ವಿಚಾರದಲ್ಲಿ ನಿಮಗಿದ್ದರೆ ಆರ್‌ಬಿಐಗೆ ದೂರು ಹೊತ್ತೊಯ್ಯಬಹುದು.

ಬ್ಯಾಂಕ್ ಮಾತ್ರವಲ್ಲ, ಆರ್‌ಬಿಐ ನಿಯಂತ್ರಣಕ್ಕೆ ಒಳಪಡುವ ಯಾವುದೇ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ), ಎಟಿಎಂ ತೊಂದರೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ದೋಷ ಏನೇ ಇದ್ದರೂ ಓಂಬುಡಸ್‌ಮನ್ ಸ್ಕೀಮ್ ಅಡಿಯಲ್ಲಿ ದೂರು ದಾಖಲಿಸಬಹುದು. ಈ ವ್ಯವಸ್ಥೆಯಲ್ಲಿ ನೀವು ದೂರಿನ ಜೊತೆ ಸಲಹೆಗಳನ್ನೂ ಕೊಡುವ ಅವಕಾಶ ನೀಡಲಾಗುತ್ತದೆ.

ಕಂಪನಿ ಬದಲಿಸಿದಾಗ ಆನ್‌ನೈನಲ್ಲಿ ಪಿಎಫ್ ಖಾತೆ ವರ್ಗಾಯಿಸುವುದು ಹೇಗೆ?ಕಂಪನಿ ಬದಲಿಸಿದಾಗ ಆನ್‌ನೈನಲ್ಲಿ ಪಿಎಫ್ ಖಾತೆ ವರ್ಗಾಯಿಸುವುದು ಹೇಗೆ?

ಮೊದಲು ಬ್ಯಾಂಕ್:
ನೀವು ಆರ್‌ಬಿಐನ ಏಕೀಕೃತ ಸಾರ್ವಜನಿಕ ತನಿಖಾಧಿಕಾರಿ ಬಳಿ ಏಕಾಏಕಿ ದೂರು ನೀಡಲು ಬರುವುದಿಲ್ಲ. ಅದಕ್ಕೆ ಕೆಲ ನಿಯಮಗಳಿವೆ. ನಿಮಗೆ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆ ಬಗ್ಗೆ ಅಸಮಾಧಾನ ಇದ್ದರೆ ಮೊದಲು ಆ ಬ್ಯಾಂಕ್‌ನಲ್ಲೇ ನೀವು ದೂರು ಸಲ್ಲಿಸಬೇಕು. ನಿಮ್ಮ ದೂರಿಗೆ 30 ದಿನದೊಳಗೆ ಉತ್ತರ ನೀಡದಿದ್ದರೆ ಅಥವಾ ನಿಮ್ಮ ದೂರನ್ನು ಆ ಬ್ಯಾಂಕ್ ತಿರಸ್ಕರಿಸಿದರೆ ಆಗ ಮಾತ್ರ ನೀವು ಆರ್‌ಬಿಐ ಮೆಟ್ಟಿಲು ಹತ್ತಬಹುದು.

ಬ್ಯಾಂಕ್ ಬಗ್ಗೆ ಅಸಮಾಧಾನವೇ? ಆರ್‌ಬಿಐಗೆ ನೇರ ದೂರು ಕೊಡುವ ಮಾರ್ಗ

ದೂರು ಸಲ್ಲಿಸುವ ವಿಧಾನ
* ಮೇಲೆ ತಿಳಿಸಿದ ರೀತಿ ನೀವು ಬ್ಯಾಂಕ್‌ನಲ್ಲಿ ನೀಡಿದ ದೂರು ನಿರುಪಯುಕ್ತವೆನಿಸಿದಲ್ಲಿ ಆರ್‌ಬಿಐನ ಈ ಲಿಂಕ್‌ಗೆ ಹೋಗಿ ಆನ್‌ಲೈನ್ ಮೂಲಕ ಕಂಪ್ಲೇಂಟ್ ನೊಂದಾಯಿಸಬಹುದು. ಈ ವೆಬ್ ಲಿಂಕ್‌ನಲ್ಲಿ ದೂರು ನೀಡಲು ಫೈಲ್ ಎ ಕಂಪ್ಲೇಂಟ್ ಎಂದಿರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ದೂರು ನೊಂದಾಯಿಸಲು ಪ್ರತ್ಯೇಕ ಪುಟ ತೆರೆಯುತ್ತದೆ. ಎಲ್ಲಾ ವಿವರ ತುಂಬಿಸಿ ಸಬ್ಮಿಟ್ ಕ್ಲಿಕ್ ಮಾಡಿರಿ.

ಭಾರತದ ಫೋರೆಕ್ಸ್ ಮೀಸಲು 2 ವರ್ಷದಲ್ಲೇ ಕಡಿಮೆ; ಬೇರೆ ದೇಶಗಳಲ್ಲಿ ಹೇಗಿದೆ ಸ್ಥಿತಿ?ಭಾರತದ ಫೋರೆಕ್ಸ್ ಮೀಸಲು 2 ವರ್ಷದಲ್ಲೇ ಕಡಿಮೆ; ಬೇರೆ ದೇಶಗಳಲ್ಲಿ ಹೇಗಿದೆ ಸ್ಥಿತಿ?

* ಆರ್‌ಬಿಐನಿಂದ ಸೆಂಟ್ರಲೈಸ್ಡ್ ರೆಸಿಪ್ಟ್ ಅಂಡ್ ಪ್ರೋಸಸಿಂಗ್ ಸೆಂಟರ್ ವ್ಯವಸ್ಥೆ ಇರುತ್ತದೆ. ಇಲ್ಲಿಗೆ ನೀವು ನೇರವಾಗಿ ಇಮೇಲ್ ಮೂಲಕ ಸಂಪರ್ಕಿಸಬಹುದು. ಅದರ ಇಮೇಲ್ ಐಡಿ ಇಲ್ಲಿದೆ. ನಿಮ್ಮ ದೂರಿನ ಜೊತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಮೇಲ್‌ನಲ್ಲಿಯೇ ಅಟ್ಯಾಚ್ ಮಾಡಿ ಕಳುಹಿಸಬಹುದು.

* ಇನ್ನು, ಮೂರನೇ ವಿಧಾನದಲ್ಲಿ ನೀವು ಪತ್ರದ ಮುಖೇನ ದೂರು ನೊಂದಾಯಿಸಲು ಸಾಧ್ಯವಿದೆ. ಚಂಡೀಗಡದಲ್ಲಿರುವ ಆರ್‌ಬಿಐ ಕಚೇರಿಯ ವಿಳಾಸಕ್ಕೆ ನೀವು ಪತ್ರ ತಲುಪಿಸಬಹುದು. ನೀವೇ ಖುದ್ದಾಗಿ ಹೋಗಿ ಬೇಕಾದರೆ ದೂರು ಪತ್ರ ಕೊಟ್ಟು ಬರಬಹುದು.

English summary

If Bank Staff Misbehaves, Know How To Raise Complaint in RBI

If you have grievances against Bank or its staff, you can file complaint to RBI under Integrated Ombudsman Scheme. Know the ways to raise complaint and the conditions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X