ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಅಧ್ಯಯನಕ್ಕಾಗಿ ವಿದೇಶಕ್ಕೆ ಕಳುಹಿಸುವುದು ಪೋಷಕರಿಗೆ ಸೂಕ್ತವಾದ ಆಯ್ಕೆ ಎನಿಸಿಕೊಳ್ಳುತ್ತದೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ವಿದೇಶಕ್ಕೆ ಪ್ರತಿ ತಿಂಗಳು ಹಣವನ್ನು ಕಳುಹಿಸುವವರು ಈ ತೆರಿಗೆ ಪರಿಣಾಮಗಳನ್ನು ತಿಳಿದಿರಬೇಕು.
ಅನೇಕ ದೇಶಗಳಲ್ಲಿ ದೇಶದೊಳಗೆ ಪಾವತಿಸಿದ ಶೈಕ್ಷಣಿಕ ವೆಚ್ಚಗಳು, ಸಾಮಾನ್ಯವಾಗಿ ತೆರಿಗೆ ವಿನಾಯಿತಿಗಳಿಗೆ ಅರ್ಹತೆ ಪಡೆಯುತ್ತವೆ. ಈಗ, ಇದೇ ತೆರಿಗೆ ಪ್ರಯೋಜನಗಳು ಶೈಕ್ಷಣಿಕ ಕಾರಣಗಳಿಗಾಗಿ ವಿದೇಶಕ್ಕೆ ಕಳುಹಿಸಲಾದ ನಿಧಿಗಳಿಗೆ ವಿಸ್ತರಿಸಲಾಗುತ್ತದೆಯೇ?. ತೆರಿಗೆ ತಜ್ಞ ಸಂದೀಪ್ ಜೈನ್ ಪ್ರಕಾರ ನೀವು ನಿಮ್ಮ ಮಕ್ಕಳಿಗೆ ಅಥವಾ ವಿದೇಶದಲ್ಲಿ ಓದುತ್ತಿರುವ ಯಾವುದೇ ಕುಟುಂಬದ ಸದಸ್ಯರಿಗೆ ಹಣ ಕಳುಹಿಸಿದರೆ ಅದು ಉಡುಗೊರೆಯಾಗಿ ಪರಿಗಣಿಸಲಾಗುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಆದಾಯ ತೆರಿಗೆ ಇಲಾಖೆಯು ಸಾಮಾನ್ಯವಾಗಿ ಉಡುಗೊರೆಗಳ ಮೇಲೆ ತೆರಿಗೆ ವಿನಾಯಿತಿಗಳನ್ನು ನೀಡಲು ನಿಬಂಧನೆಗಳನ್ನು ಹೊಂದಿದೆ. ಅದಕ್ಕೆ ನಿರ್ದಿಷ್ಟ ಮಿತಿಗಳು ಕೂಡಾ ಇರುತ್ತದೆ. ಆದಾಯ ತೆರಿಗೆ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ, ಒಂದು ಆರ್ಥಿಕ ವರ್ಷದಲ್ಲಿ 50,000 ರೂಪಾಯಿವರೆಗೆ ಉಡುಗೊರೆಗಳು ತೆರಿಗೆ ವಿನಾಯಿತಿಯನ್ನು ಹೊಂದಿರುತ್ತದೆ.
ಅಂದರೆ ವಿದೇಶದಲ್ಲಿದ್ದು ಹಣವನ್ನು ಸ್ವೀಕರಿಸುವವರು ಈ ಮಿತಿಯವರೆಗೆ ಯಾವುದೇ ತೆರಿಗೆಗಳನ್ನು ಪಾವತಿಸಬೇಕಾಗಿಲ್ಲ. ನೀವು ವಿದೇಶದಲ್ಲಿ ಶಿಕ್ಷಣದ ವೆಚ್ಚಕ್ಕಾಗಿ ಪಡೆದ ಅಥವಾ ಕಳುಹಿಸಿದ ಮೊತ್ತವು 50,000 ರೂಪಾಯಿಗಿಂತ ಅಧಿಕವಾಗಿದ್ದರೆ, ಹೆಚ್ಚುವರಿ ಮೊತ್ತವನ್ನು ಸ್ವೀಕರಿಸುವವರ ಆದಾಯದ ಭಾಗವಾಗಿ ಪರಿಗಣಿಸಲಾಗುತ್ತದೆ. ತೆರಿಗೆಗಳನ್ನು ಅವುಗಳ ಅನ್ವಯವಾಗುವ ತೆರಿಗೆ ದರವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ.
ಮುಖ್ಯವಾಗಿ, ಉಡುಗೊರೆ ಮೊತ್ತವು ಈ ಮಿತಿಯನ್ನು ಮೀರಿದರೆ 50,000 ರೂಪಾಯಿ ವಿನಾಯಿತಿ ಮಿತಿಯು ಒಟ್ಟು ಮೊತ್ತವನ್ನು ಸರಿದೂಗಿಸುವುದಿಲ್ಲ ಎಂಬುದು ಗಮನಾರ್ಹ. ಈಗ ನಮ್ಮ ಮುಂದೆ ಇರುವುದು ಮಗಳು ತನ್ನ ವಿದೇಶಿ ಶಿಕ್ಷಣ ಪಡೆಯುತ್ತಿರುವಾಗ ಬೆಂಬಲಿಸಲು ಆಕೆಯ ಪೋಷಕರು ಕಳುಹಿಸುವ ಮೊತ್ತದ ಮೇಲೆ ತೆರಿಗೆ ಪಾವತಿಸಬೇಕೇ ಎಂಬುವುದು ಆಗಿದೆ.
ಈ ಪ್ರಶ್ನೆಗೆ ಉತ್ತರವನ್ನು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ತೆರಿಗೆ ಶಾಸನದಲ್ಲಿ ಕಾಣಬಹುದಾಗಿದೆ. ಗಮನಾರ್ಹವಾಗಿ, ಆದಾಯ ತೆರಿಗೆ ಇಲಾಖೆಯು ನಿರ್ದಿಷ್ಟ ಕುಟುಂಬಸ್ಥರಿಗೆ ಉಡುಗೊರೆ ವಿನಾಯಿತಿಗಳನ್ನು ನೀಡುತ್ತದೆ. ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳ ಪ್ರಕಾರ, ತನ್ನ ಮಕ್ಕಳಿಗೆ ತಂದೆಯ ಹಣಕಾಸಿನ ನೆರವು, ವಿದೇಶದಲ್ಲಿ ಅವರ ಶಿಕ್ಷಣಕ್ಕೆ ಧನಸಹಾಯ ಸೇರಿದಂತೆ, ಆದಾಯ ತೆರಿಗೆಯಿಂದ ವಿನಾಯಿತಿಗೆ ಪರಿಗಣಿಸಲಾಗುತ್ತದೆ.
ಇದರರ್ಥ ನಿಮ್ಮ ಮಕ್ಕಳ ವಿದೇಶಿ ಶಿಕ್ಷಣಕ್ಕಾಗಿ ನೀವು ಕಳುಹಿಸುವ ಹಣವು ತೆರಿಗೆಯಿಂದ ಹೊರಗೆ ಉಳಿಯುತ್ತದೆ. ಹೆಚ್ಚುವರಿಯಾಗಿ, ಒಂದು ಹಣಕಾಸು ವರ್ಷದಲ್ಲಿ ವಿದೇಶದಲ್ಲಿರುವ ಸಂಬಂಧಿಕರಿಗೆ 2.5 ಲಕ್ಷ ರೂಪಾಯಿವರೆಗೆ ಕಳುಹಿಸಲು ನಿಮಗೆ ಅನುಮತಿ ಇದೆ. ಈ ಮೊತ್ತವು ತೆರಿಗೆಗೆ ಒಳಗಾಗುವುದಿಲ್ಲ.


Click it and Unblock the Notifications