ಆದಾಯ ತೆರಿಗೆ ಇಲಾಖೆಯು ದೈನಂದಿನ ಕೂಲಿ ಕೆಲಸಗಾರರಿಗೆ ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. ಅದು ಕೂಡಾ ಒಂದೆರಡು ಸಾವಿರ ರೂಪಾಯಿ ಪಾವತಿಸಲು ನೀಡಿರುವ ನೋಟಿಸ್ ಅಲ್ಲ. ಬರೋಬ್ಬರಿ 14 ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಪಾವತಿಸಿದೆ.
ಕೂಲಿ ಕೆಲಸ ಮಾಡುವ ಬಿಹಾರದ ಕರ್ಗಾಹಾರ್ ಗ್ರಾಮದ ಮನೋಜ್ ಯಾದವ್ ಎಂಬವರ ಮನೆಗೆ ಶನಿವಾರ ಆದಾಯ ತೆರಿಗೆ ಇಲಾಖೆಯ ತಂಡವು ಭೇಟಿ ನೀಡಿದೆ. 14 ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಪಾವತಿಸುವಂತೆ ನೋಟಿಸ್ ನೀಡಿದೆ.
ಅಧಿಕಾರಿಗಳ ಪ್ರಕಾರ ಮನೋಜ್ ಯಾದವ್ ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆದಿದೆ. ಈ ರೀತಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆದಿರುವಾಗ ಆದಾಯ ತೆರಿಗೆಯನ್ನು ಪಾವತಿಸುವುದು ಮುಖ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಾದವ್ ಕುಟುಂಬ ಹೇಳುವುದೇನು?
ಇನ್ನು ಆದಾಯ ತೆರಿಗೆ ಇಲಾಖೆಯ ನೋಟಿಸ್ ಬಂದ ಬಳಿಕ ಮನೋಜ್ ಯಾದವ್ ಹಾಗೂ ಆತನ ಕುಟುಂಬಕ್ಕೆ ಶಾಕ್ ಆಗಿದೆ. ಅಧಿಕಾರಿಗಳ ಬಳಿ ಯಾದವ್ ತಾನು ದೈನಂದಿನ ಕೂಲಿ ಕಾರ್ಮಿಕ, ಇಷ್ಟೊಂದು ಮೊತ್ತವನ್ನು ಪಾವತಿಸಲು ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ತನ್ನ ಆಸ್ತಿಯನ್ನು ಹಲವಾರು ಬಾರಿ ಮಾರಾಟ ಮಾಡಿದರೂ ಕೂಡಾ ನನಗೆ ಅಷ್ಟು ಮೊತ್ತ ಲಭ್ಯವಾಗದು ಎಂದು ಕೂಡಾ ಗೊಗರೆದಿದ್ದಾರೆ.

ಮಾಹಿತಿ ಪ್ರಕಾರ ಮನೋಜ್ ಯಾದವ್ ಈ ಹಿಂದೆ ದೆಹಲಿ, ಹರಿಯಾಣ, ಪಂಜಾಬ್‌ನಲ್ಲಿ ಹಲವಾರು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದ್ದರು. ಆದರೆ 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಬಳಿಕ ಉದ್ಯೋಗವನ್ನು ಕಳೆದುಕೊಂಡು ತಮ್ಮ ಊರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದಾರೆ.
ತಾನು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ನನ್ನ ಪ್ಯಾನ್ ಅನ್ನು ಆಧಾರ್ ಪ್ರತಿಯನ್ನು ಪಡೆಯಲಾಗಿತ್ತು. ಅವರೇ ತನ್ನ ದಾಖಲೆಯನ್ನು ದುರ್ಬಳಕೆ ಮಾಡಿರಬೇಕು. ನನ್ನ ಹೆಸರಿನಲ್ಲಿ ಖಾತೆಯನ್ನು ತೆರೆದು ಈ ವಹಿವಾಟು ಅವರೇ ನಡೆಸಿರಬೇಕು ಎಂದು ಮನೋಜ್ ಯಾದವ್ ಆರೋಪ ಮಾಡಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳಿಗೆ ಶಾಕ್
ಇನ್ನು ಮನೋಜ್ ಯಾದವ್‌ಗೆ 14 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲು ಬಂದ ಆದಾಯ ತೆರಿಗೆ ಅಧಿಕಾರಿಗಳಿಗೆ ಮನೋಜ್ ಯಾದವ್ ಮನೆ ನೋಡಿ ಶಾಕ್ ಆಗಿದೆ. ಆತನ ಆರ್ಥಿಕ ಸ್ಥಿತಿಯನ್ನು ನೋಡಿ ಶಾಕ್ ಆಗಿದೆ. ಐಟಿ ನೋಟಿಸ್ ಅನ್ನು ಮುಖ್ಯ ಕಚೇರಿಯಿಂದ ಕಳುಹಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿ ಸತ್ಯ ಭೂಷನ್ ಪ್ರಸಾದ್ ಹೇಳಿದ್ದಾರೆ. ಈ ನಡುವೆ ಮನೋಜ್ ಯಾದವ್ ಕುಟುಂಬವು ಸೋಮವಾರ ಸಂಜೆ ಊರು ಬಿಟ್ಟು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.


Click it and Unblock the Notifications