ನಾವು ದೇಣಿಗೆಯನ್ನು ನೀಡುತ್ತಾ ಇರುತ್ತೇವೆ. ಯಾವುದೇ ಕುಟುಂಬಕ್ಕೆ ತೊಂದರೆ ಉಂಟಾದಾಗ, ಕ್ರೌಡ್‌ಫಂಡಿಂಗ್ ಮೂಲಕ ಸಹಾಯ ಮಾಡುವುದು ಸಾಮಾನ್ಯವಾಗಿದೆ. ಈ ನಡುವೆ ಭಾರತೀಯರು ಎಷ್ಟು ದಾನ ಮಾಡ್ತಾರೆ?, ಯಾವ ರಾಜ್ಯವು ಟಾಪ್ ಸ್ಥಾನದಲ್ಲಿದೆ ಎಂದು ತಿಳಿದಿದೆಯೇ?
ಈ ವರ್ಷ 419,893 ಭಾರತೀಯರು ತಮ್ಮ ಮೊಟ್ಟಮೊದಲ ಆನ್‌ಲೈನ್ ದೇಣಿಗೆಗಳನ್ನು ನೀಡಿದ್ದಾರೆ. ಈ ಪೈಕಿ ಹೆಚ್ಚಿನವರು 500 ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಎಂದು ಕೆಟ್ಟೊ ವಿಶ್ವ ದಯಾ ದಿನದಂದು ಬಿಡುಗಡೆ ಮಾಡಿದ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಮೈಸೂರಿನಿಂದ ಅಧಿಕ ದೇಣಿಗೆ
ಇನ್ನು ನಿಮಗೆ ಯಾವ ಜಿಲ್ಲೆಯು ದೇಣಿಗೆ ನೀಡುವ ವಿಚಾರದಲ್ಲಿ ಟಾಪ್ ಸ್ಥಾನದಲ್ಲಿದೆ ಎಂದು ಕೇಳಿದರೆ ನಮ್ಮ ಕರ್ನಾಟಕದ ಮೈಸೂರು ಆಗಿದೆ!. ಕ್ರೌಡ್‌ಫಂಡಿಂಗ್ ವೇದಿಕೆಯು ಈ ವರ್ಷದ ಅತಿದೊಡ್ಡ ದೇಣಿಗೆಯನ್ನು ಕರ್ನಾಟಕದ ಮೈಸೂರಿನಿಂದ ಪಡೆಯಲಾಗಿದೆ ಎಂದು ಹೇಳಿದೆ.
ಮೈಸೂರು 25,00,000 ರೂಪಾಯಿ ದೇಣಿಗೆ ನೀಡಿದೆ ಎಂದು ವರದಿಯಾಗಿದೆ. ವಾರದ ಇತರ ದಿನಗಳಿಗೆ ಹೋಲಿಸಿದರೆ ಹೆಚ್ಚಿನ ಜನರು ಶುಕ್ರವಾರದಂದು ದಾನ ಮಾಡುತ್ತಾರೆ ಎಂದು ಕೆಟ್ಟೋ ಹೇಳಿದೆ. ಹೈದರಾಬಾದ್‌ನ ದಾನಿಯೊಬ್ಬರು ಕಳೆದ ವರ್ಷ 941 ಬಾರಿ ದೇಣಿಗೆಯನ್ನು ನೀಡಿದ್ದಾರೆ.
ಕೆಟ್ಟೋ ಹಂಚಿಕೊಂಡ ವರದಿ ವಿವರ
ಕೆಟ್ಟೋ ಮೇಲಿನ ಸರಾಸರಿ ದೇಣಿಗೆ 1120 ರೂಪಾಯಿ ಆಗಿದೆ. ಮುಂಬೈ ಪ್ರಾಣಿ ಕಲ್ಯಾಣ ಕಾರಣಗಳನ್ನು ಬೆಂಬಲಿಸುವಲ್ಲಿ ಮುಂದಾಳತ್ವವನ್ನು ವಹಿಸಿದೆ. ತಿರುವನಂತಪುರಂ ನಂತರದ ಸ್ಥಾನದಲ್ಲಿದೆ. ಇನ್ನು ದೆಹಲಿಯ ಜನರು ಶಿಕ್ಷಣಕ್ಕಿಂತ ಹೆಚ್ಚಾಗಿ ಆಹಾರ-ಸಂಬಂಧಿತ ವಿಚಾರಕ್ಕೆ ಬೆಂಬಲಿಸಲು ಆದ್ಯತೆ ನೀಡಿದರು.
ಯುಪಿಐ, ವ್ಯಾಲೆಟ್, ಕಾರ್ಡ್ ಮತ್ತು ಬ್ಯಾಂಕ್ ವರ್ಗಾವಣೆ ಮೂಲಕ ದೇಣಿಗೆಯನ್ನು ಅಧಿಕವಾಗಿ ಮಾಡಲಾಗಿದೆ. ಅಲ್ಲದೆ, ಕೆಟ್ಟೋ ದಾನಿಗಳು ಈ ವರ್ಷ 1.3 ಮಿಲಿಯನ್ ದೇಣಿಗೆಗಳನ್ನು ನೀಡಿದ್ದಾರೆ. ಈ ವರ್ಷ 190,187 ದಾನಿಗಳು ಟಿಪ್ಸ್ ಅನ್ನು ಕೂಡಾ ನೀಡಿದ್ದಾರೆ.
ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಪ್ರತಿ ತಿಂಗಳ ಆರನೇ ತಾರೀಖಿನಂದು ಹೆಚ್ಚಿನ ಸಂಖ್ಯೆಯ ದೇಣಿಗೆಗಳನ್ನು ಪಡೆಯುತ್ತಿದೆ. ಫೆಬ್ರವರಿ 06, 2023 ರಂದು ರಾತ್ರಿ 11:33 ಕ್ಕೆ, ಒಂದೇ ನಿಮಿಷದಲ್ಲಿ ಕೆಟ್ಟೋ ಅತಿ ಹೆಚ್ಚು ದೇಣಿಗೆಗಳನ್ನು ಸ್ವೀಕರಿಸಿದೆ. ದಾನಿಗಳು ಹೆಚ್ಚಾಗಿ ರಾತ್ರಿ 10 ರಿಂದ 11 ಗಂಟೆಯವರೆಗೆ ದೇಣಿಗೆಯನ್ನು ನೀಡುವುದನ್ನು ನಾವು ಕಾಣಬಹುದಾಗಿದೆ.
ಐಟಿ ಕಾಯಿದೆಯಡಿಯಲ್ಲಿ 80ಜಿ ತೆರಿಗೆ ವಿನಾಯಿತಿಗಳ ಅಡಿಯಲ್ಲಿ ಆನ್‌ಲೈನ್ ದಾನಿಗಳು 51,829,651 ರೂಪಾಯಿಗಳನ್ನು ತೆರಿಗೆಯಲ್ಲಿ ಉಳಿಸಿದ್ದಾರೆ ಎಂದು ಕೆಟ್ಟೋ ಹೇಳಿದರು. ವೇಗವಾಗಿ ಬೆಳೆಯುತ್ತಿರುವ ನಿಧಿಸಂಗ್ರಹಣೆ ವಿಭಾಗದಲ್ಲಿ ಸೈನಿಕರಿಗೆ ನೀಡುವ ದೇಣಿಗೆಯಾಗಿದೆ. ಸೈನಿಕರಿಗೆ ಈ ವರ್ಷ ಶೇಕಡ 2675 ರಷ್ಟು ದೇಣಿಗೆ ಅಧಿಕವಾಗಿದೆ.
ಹಿರಿಯ ನಾಗರಿಕರಿಗೆ ದೇಣಿಗೆ ನೀಡುವ ಪ್ರಮಾಣವು ಶೇಕಡ 484.06 ರಷ್ಟು ಹೆಚ್ಚಳವಾಗಿದೆ. ನಮ್ಮ ಹಿರಿಯರು ತಮ್ಮ ಸುವರ್ಣ ವರ್ಷಗಳನ್ನು ಘನತೆಯಿಂದ ಬದುಕುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆಹಾರ ಮತ್ತು ಹಸಿದವರಿಗೆ ಅನ್ನ ನೀಡಲು ದೇಣಿಗೆಯು ಈ ವರ್ಷ ಶೇಕಡ 381.14 ರಷ್ಟು ಏರಿಕೆಯಾಗಿದೆ. ಇದಲ್ಲದೆ, ವಿಧವೆ ಸಬಲೀಕರಣಕ್ಕೆ ದೇಣಿಗೆಗಳು ಶೇಕಡ 100 ರಷ್ಟು ಹೆಚ್ಚಾಗಿದೆ.
ಟಾಪ್ ರಾಜ್ಯಗಳಿವು ನೋಡಿ
ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ತಮಿಳುನಾಡು, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ದೇಶಾದ್ಯಂತ ಅತಿ ಹೆಚ್ಚು ದೇಣಿಗೆ ನೀಡಿದ ಮೊದಲ ಹತ್ತು ರಾಜ್ಯಗಳು ಆಗಿದೆ.


Click it and Unblock the Notifications