ಹೊಸ ವರ್ಷ ಅಂದರೆ 2024ರಲ್ಲಿ ಭಾರತವು ತನ್ನ ಹೆದ್ದಾರಿ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದೆ. ಮುಂಬರುವ ತಿಂಗಳುಗಳಲ್ಲಿ ಹೊಸ ಎಕ್ಸ್‌ಪ್ರೆಸ್‌ವೇಗಳು ದೇಶದ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿವರ್ತಿಸಲು ಸಿದ್ಧವಾಗಿವೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಈ ಎಕ್ಸ್‌ಪ್ರೆಸ್‌ವೇಗಳು ಪೂರ್ಣವಾಗುವ ವೇಳಾಪಟ್ಟಿಯನ್ನು ನಿಖರವಾಗಿ ವಿವರಿಸಿದೆ. ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿದ್ದಾರೆ.

2024 ರ ಬೇಸಿಗೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಯೇ ಇದಾಗಿರುವಂತೆ ಕಾಣುತ್ತಿದೆ. ಅದಕ್ಕೂ ಮುನ್ನವೇ ಆರಂಭಿಸುವ ಸಾಧ್ಯತೆಯಿದೆ. ನಾವು ಹೊಸ ವರ್ಷಕ್ಕೆ ಕಾಲಿಟ್ಟಿರುವಾಗ, ಮುಂಬರುವ ಐದು ಎಕ್ಸ್‌ಪ್ರೆಸ್‌ವೇಗಳ ಪಟ್ಟಿ ಇಲ್ಲಿದೆ, ಮುಂದೆ ಓದಿ...
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ
ನಿರೀಕ್ಷಿತ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ, ರಾಷ್ಟ್ರದ ರಾಜಧಾನಿಯನ್ನು ಅದರ ಆರ್ಥಿಕ ಕೇಂದ್ರವಾದ ಮುಂಬೈಗೆ ಸಂಪರ್ಕಿಸುವ ಭಾರತದ ಉದ್ದ ಮತ್ತು ಪ್ರಮುಖ ಮಾರ್ಗವಾಗಿದೆ. ಮುಂಬರುವ ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಿತಿನ್ ಗಡ್ಕರಿ ಪ್ರಕಾರ, ಎಕ್ಸ್‌ಪ್ರೆಸ್‌ವೇ ಸಿದ್ಧವಾಗಲಿದೆ ಮತ್ತು ಫೆಬ್ರವರಿ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.
ಪ್ರಸ್ತುತ, ಹರಿಯಾಣದ ಸೋಹ್ನಾದಿಂದ ರಾಜಸ್ಥಾನದ ದೌಸಾವರೆಗೆ 209 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ತೆರೆಯಲಾಗಿದೆ. ಒಟ್ಟು 1,386 ಕಿಲೋಮೀಟರ್‌ಗಳಷ್ಟು ದೂರವನ್ನು ವ್ಯಾಪಿಸಿರುವ ಈ ಎಕ್ಸ್‌ಪ್ರೆಸ್‌ವೇ ಐದು ರಾಜ್ಯಗಳಾದ ದೆಹಲಿ, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರಗಳನ್ನು ಹಾದು ಹೋಗುತ್ತದೆ.
ದೆಹಲಿಯು ಒಂಬತ್ತು ಕಿಲೋಮೀಟರ್‌ಗಳಷ್ಟು ಕಡಿಮೆ ವಿಭಾಗ ಹೊಂದಿದ್ದರೆ, ಗುಜರಾತ್ 423-ಕಿಲೋಮೀಟರ್ ವಿಸ್ತಾರ ಹೊಂದಿದೆ. ದೆಹಲಿ-ಮುಂಬೈ ದೂರವನ್ನು 180 ಕಿಲೋಮೀಟರ್‌ಗಳಷ್ಟು ಕಡಿತಗೊಳಿಸುವ ಮಾರ್ಗ ಇದಾಗಿದೆ. ಈ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಸಮಯವನ್ನು 24 ಗಂಟೆಗಳಿಂದ ಕೇವಲ 12 ಕ್ಕೆ ಇಳಿಸಲಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಂತೆ, ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಮತ್ತೊಂದು ನಿರ್ಣಾಯಕ ಎಕ್ಸ್‌ಪ್ರೇವೇ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಶೀಘ್ರದಲ್ಲೇ ಆರಂಭವಾಗಲಿದೆ. ಸುಮಾರು 17,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎನ್‌ಎಚ್‌ಎಐ ನಿರ್ಮಾಣ ಮಾಡಲಾಗಿದೆ.
262-ಕಿಲೋಮೀಟರ್ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಅನ್ನು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ 7 (NE7) ಎಂದೂ ಕರೆಯುತ್ತಾರೆ. ಈ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಎರಡು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದು ವಿಮಾನದ ಅವಧಿಯನ್ನು ಮೀರಿಸುತ್ತದೆ. ಲಘು ವಾಹನಗಳಿಗೆ 120 ಗಂಟೆಗೆ ಕಿಲೋ ಮೀಟರ್ ವೇಗದ ಮಿತಿ ಹೊಂದಿಸಲಾಗಿದೆ.
ದ್ವಾರಕಾ ಎಕ್ಸ್‌ಪ್ರೆಸ್‌ವೇ
ಮಾಲಿನ್ಯದ ಮಟ್ಟವನ್ನು ಎದುರಿಸಲು ವಿಧಿಸಲಾದ ನಿರ್ಮಾಣ ನಿರ್ಬಂಧಗಳಿಂದಾಗಿ ಭಾರತದ ಮೊದಲ ಭೂಮಿಯಿಂದ ಮೇಲೆ ನಿರ್ಮಿಸಲಾಗುವ ನಗರ ಹೆದ್ದಾರಿಯು ಹಲವಾರು ತಿಂಗಳುಗಳ ವಿಳಂಬದ ಸಮಸ್ಯೆಯನ್ನು ಎದುರಿಸಿದೆ. ಆದರೆ ಈಗ ಶೀಘ್ರವೇ ಉದ್ಘಾಟನೆಯಾಗಲಿದೆ.
ಬೇಸಿಗೆಯ ಆರಂಭದ ಮೊದಲು ಉದ್ಘಾಟನೆ ನಿರೀಕ್ಷೆಯಿದೆ. ಉತ್ತರ ಪೆರಿಫೆರಲ್ ರೋಡ್ ಎಂದೂ ಕರೆಯಲ್ಪಡುವ ದ್ವಾರಕಾ ಎಕ್ಸ್‌ಪ್ರೆಸ್‌ವೇ 29 ಕಿಲೋಮೀಟರ್‌ಗಳಷ್ಟು ವಿಸ್ತರಿಸುವ ಅಂತಿಮ ಕಾರ್ಯಗಳು ಈಗ ನಡೆಯುತ್ತಿದೆ. ಈ ಮಹತ್ವದ ಮಾರ್ಗವು ದೆಹಲಿಯ ದ್ವಾರಕಾವನ್ನು ಹರಿಯಾಣದ ಗುರುಗ್ರಾಮ್‌ಗೆ ಸಂಪರ್ಕಿಸುತ್ತದೆ.
ಎನ್‌ಎಚ್-8 (ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇ) ನಲ್ಲಿ ಶಿವ-ಮೂರ್ತಿಯಿಂದ ಪ್ರಾರಂಭವಾಗಿ ಖೇರ್ಕಿ ದೌಲಾ ಟೋಲ್ ಪ್ಲಾಜಾ ಬಳಿ ಮುಕ್ತಾಯಗೊಳ್ಳುತ್ತದೆ. ದ್ವಾರಕಾ ಸೆಕ್ಟರ್ 21, ಗುರುಗ್ರಾಮ್ ಗಡಿ ಮತ್ತು ಬಸಾಯಿ ಮೂಲಕ ಸಾಗುತ್ತದೆ. ಹರಿಯಾಣದ ಮೂಲಕ 19 ಕಿಲೋಮೀಟರ್ ಮತ್ತು ದೆಹಲಿಯ ಮೂಲಕ 10 ಕಿಲೋಮೀಟರ್ ವ್ಯಾಪಿಸಿದೆ.
ಈ ಎಕ್ಸ್‌ಪ್ರೆಸ್‌ವೇ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಶೇಕಡ 50 ರಷ್ಟು ಸಂಚಾರ ದಟ್ಟಣೆಯನ್ನು ನಿವಾರಿಸಲು ಸಹಾಯವಾಗಲಿದೆ.
ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ
ದೆಹಲಿ ಮತ್ತು ಅಮೃತಸರವನ್ನು ಸಂಪರ್ಕಿಸುವ ಮುಂಬರುವ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ನಂತರ ಪ್ರಯಾಣದ ಸಮಯವನ್ನು ಕೇವಲ ನಾಲ್ಕು ಗಂಟೆಗೆ ಇಳಿಸಲಿದೆ. 2024 ರ ಅಂತ್ಯದ ವೇಳೆಗೆ 669 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಆರಂಭವಾಗುವ ನಿರೀಕ್ಷೆಯಿದೆ.
ಈ ಹೊಸ ಮಾರ್ಗವಾಗಿ ದೆಹಲಿಯಿಂದ ಕತ್ರಾಕ್ಕೆ ಆರು ಗಂಟೆಗಳ ಪ್ರಯಾಣವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ. ದೂರವನ್ನು 58 ಕಿಲೋಮೀಟರ್‌ಗಳಷ್ಟು ಕಡಿಮೆ ಮಾಡುತ್ತದೆ. ಎಕ್ಸ್‌ಪ್ರೆಸ್‌ವೇಯು ಅಮೃತಸರದ ಗೋಲ್ಡನ್ ಟೆಂಪಲ್, ತರನ್ ತರನ್‌ನಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ಮತ್ತು ಕತ್ರಾದಲ್ಲಿನ ವೈಷ್ಣೋ ದೇವಿಯಂತಹ ವಿವಿಧ ಧಾರ್ಮಿಕ ಸ್ಥಳಗಳನ್ನು ಪರಸ್ಪರ ಸಂಪರ್ಕಿಸುತ್ತದೆ.
ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ
ಈ ಎಕ್ಸ್‌ಪ್ರೆಸ್‌ವೇಯ ಕೊನೆಯ ಭಾಗದ ನಡೆಯುತ್ತಿರುವ ನಿರ್ಮಾಣವು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಯ ಸನ್ನಿಹಿತ ಉದ್ಘಾಟನೆಯನ್ನು ಸೂಚಿಸುತ್ತದೆ. ಈ ಬೆಳವಣಿಗೆಯು ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಮೂರು ಗಂಟೆಗಳೊಳಗೆ ಕಡಿಮೆ ಮಾಡುತ್ತದೆ.
ಎಕ್ಸ್‌ಪ್ರೆಸ್‌ವೇಯ ಅಂತಿಮ 20-ಕಿಲೋಮೀಟರ್ ವಿಸ್ತರಣೆಯು ರಾಜಾಜಿ ರಾಷ್ಟ್ರೀಯ ಉದ್ಯಾನವನದೊಳಗೆ ಹಾದುಹೋಗುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಏಷ್ಯಾದ ಅತಿ ಉದ್ದದ ಎತ್ತರದ ವನ್ಯಜೀವಿ ಕಾರಿಡಾರ್ ಅನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ. ಈ ಕಾರಿಡಾರ್ 340 ಮೀಟರ್ ಉದ್ದದ ದಾತ್ ಕಾಲಿ ಸುರಂಗವನ್ನು ಹೊಂದಿದೆ.


Click it and Unblock the Notifications