ಓರ್ವ ಸಾಮಾನ್ಯ ಗಣಿತ ಶಿಕ್ಷಕ ಜಾಗತಿಕ ಸ್ಟಾರ್ಟ್-ಅಪ್‌ನ ನಾಯಕರಾಗಿ ಏರಿ, ಭಾರತದ ಸ್ಟಾರ್ಟ್‌ಅಪ್ ಯಶಸ್ಸಿನ ಪೋಸ್ಟರ್ ಬಾಯ್ ಆಗಿ ಬಿಂಬಿತವಾಗಿದ್ದ ಬೈಜು ರವೀಂದ್ರನ್, ಏಕಾಏಕಿ ಕುಸಿತ ಕಂಡು ಈಗ ಭಾರತದ ಉದ್ಯಮ ವಲಯದಲ್ಲಿ ಕಣ್ಣು ತೆರೆಸುವಂತಹ ಉದಾಹರಣೆಯಾಗಿದ್ದಾರೆ.
ಯಾಕೆಂದರೆ ಫೋರ್ಬ್ಸ್ ವರದಿಯ ಪ್ರಕಾರ, ಕಳೆದ ವರ್ಷ ಬೈಜು ರವೀಂದ್ರನ್ ಅವರ ಕುಟುಂಬದ ಮೌಲ್ಯ 30,600 ಕೋಟಿ ರೂಪಾಯಿ ಆಗಿದ್ದು, ಈಗ ಕೇವಲ 833 ಕೋಟಿ ರೂಪಾಯಿ (100 ಮಿಲಿಯನ್ ಡಾಲರ್) ಮೌಲ್ಯ ಹಿಂದಿದ್ದು, ಹೀಗಾಗಿ ಬಿಲಿಯನೇರ್ ಪಟ್ಟ ಕಳೆದುಕೊಂಡಿದ್ದಾರೆ.

ಬೈಜು ರವೀಂದ್ರನ್ ಆನ್‌ಲೈನ್ ಎಜ್ಯು- ಟೆಕ್ ದೈತ್ಯ ಬೈಜೂಸ್ ಅನ್ನು 2011 ರಲ್ಲಿ ಸ್ಥಾಪಿಸಿದ್ದು, 2022 ರಲ್ಲಿ, ಅವರ ಸಂಸ್ಥೆಯು ಸುಮಾರು 1,83,000 ಕೋಟಿ (22 ಬಿಲಿಯನ್ ಡಾಲರ್) ಮೌಲ್ಯವನ್ನು ಹೊಂದಿತ್ತು. ಭಾರತದ ಅತ್ಯಂತ ಮೌಲ್ಯಯುತವಾದ ಯಶಸ್ವಿ ಸ್ಟಾರ್ಟಪ್ ಆಗಿ ಹೊರಹೊಮ್ಮಿದ್ದ ಬೈಜೂಸ್, ತನ್ನ ಒಟ್ಟಾರೆ ಮೌಲ್ಯದಲ್ಲಿ 19 ಬಿಲಿಯನ್ ಡಾಲರ್ ಕಳೆದುಕೊಂಡಿದ್ದು,ಈಗ ಅದರ ಮೌಲ್ಯ 3 ಬಿಲಿಯನ್ ಡಾಲರ್ ( 25,000 ಕೋಟಿ ರೂಪಾಯಿ) ಗಿಂತ ಕಡಿಮೆ ಎಂದು ಅಂದಾಜಿಸಲಾಗಿದೆ.
ಬೈಜೂಸ್ ಸಂಸ್ಥೆಯ ನಷ್ಟಗಳಲ್ಲಿ ವೇಗವಾದ ಏರಿಕೆ ಕಂಡುಬರುತ್ತಿದ್ದು, ಆರ್ಥಿಕ ವರ್ಷ 2020 ರಲ್ಲಿ, ಬೈಜು ರವೀಂದ್ರನ್ ಅವರ ಕಂಪನಿಯ ನಿವ್ವಳ ನಷ್ಟವು 310 ಕೋಟಿ ರೂಪಾಯಿಗಳಷ್ಟಿತ್ತು ಮತ್ತು 2021ರ ಆರ್ಥಿಕ ವರ್ಷದಲ್ಲಿ 4560 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಂಪನಿಯಲ್ಲಿ ಷೇರನ್ನು ಹೊಂದಿರುವ ಯುರೋಪ್‌ನ ಹೂಡಿಕೆ ಸಂಸ್ಥೆ ಪ್ರೋಸಸ್ ನಿಂದ ಬೈಜೂಸ್ ಗೆ ತೀವ್ರ ಹಿನ್ನಡೆಯಾಗಿದ್ದು, ಇದು ಒಂದು ವರ್ಷ,ಎರಡು ತಿಂಗಳಲ್ಲಿ ಮೂರನೇ ಬಾರಿಗೆ ಬೈಜು ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರ ಕಂಪನಿ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ತನ್ನ ಹೂಡಿಕೆಯನ್ನು ಕಡಿಮೆ ಮಾಡಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ, 6 ಬಿಲಿಯನ್ ಡಾಲರ್‌ಗೆ ಇಳಿಸಿದ್ದು ಮತ್ತು ಈ ವರ್ಷದ ಮಾರ್ಚ್‌ನಲ್ಲಿ ಅದನ್ನು 5.1 ಬಿಲಿಯನ್ ಡಾಲರ್‌ಗೆ ಇಳಿಸಿತ್ತು. ಪ್ರೊಸಸ್ ಈಗ ಬೈಜು ರವೀಂದ್ರನ್ ಅವರ ಸಂಸ್ಥೆಯಲ್ಲಿ 3 ಬಿಲಿಯನ್ ಡಾಲರ್‌ಗೆ ಹೊಂದಿದೆ. ಅಂದರೆ ಕಳೆದ 16 ತಿಂಗಳಲ್ಲಿ ಕಂಪನಿಯ ಮೌಲ್ಯ ಶೇಕಡ 86ರಷ್ಟು ಕುಸಿದಿದೆ.ಇದರರ್ಥ ಕಂಪನಿಯಲ್ಲಿ ಬೈಜು ರವೀಂದ್ರನ್ ಅವರ ಶೇಕಡ 18 ಷೇರನ್ನು ಹೊಂದಿದ್ದು, ಅದು ಈಗ 100 ಮಿಲಿಯನ್ ಡಾಲರ್ ಅಥವಾ ಸುಮಾರು 833 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಬೈಜೂಸ್ ಹಿನ್ನಲೆ:
2011 ರಲ್ಲಿ, ಬೈಜು ಅವರು ಮತ್ತು ಅವರ ಪತ್ನಿ ದಿವ್ಯಾ ಗೋಕುಲನಾಥ್ ಬೈಜೂಸ್ ನ್ನು ಸ್ಥಾಪಿಸಿದರು. ಬೈಜು ಅವರು 1980 ರಲ್ಲಿ ಭಾರತದ ಕೇರಳದ ಅಝಿಕೋಡ್ ಗ್ರಾಮದಲ್ಲಿ ಕ್ರಮವಾಗಿ ಭೌತಶಾಸ್ತ್ರ ಮತ್ತು ಗಣಿತ ಶಿಕ್ಷಕರಾದ ರವೀಂದ್ರನ್ ಮತ್ತು ಶೋಭನವಲ್ಲಿಗೆ ಜನಿಸಿದರು. ಅವರು ಮಲಯಾಳಂ ಮಾಧ್ಯಮ ಶಾಲೆಯಲ್ಲಿ ಓದಿದರು, ಅಲ್ಲಿ ಅವರ ತಾಯಿ ಗಣಿತ ಶಿಕ್ಷಕರಾಗಿದ್ದರು ಮತ್ತು ತಂದೆ ಭೌತಶಾಸ್ತ್ರ ಶಿಕ್ಷಕರಾಗಿದ್ದರು.
ಕಣ್ಣೂರಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಬೈಜು ಎರಡು ಬಾರಿ ಕಠಿಣ ಸಿಎಟಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. 2007 ರಲ್ಲಿ ಅವರು ತಮ್ಮ ಉದ್ಯೋಗ ತೊರೆದು ಸಿಎಟಿ ಕೋಚಿಂಗ್ ಸೆಂಟರ್ ಅನ್ನು ಪ್ರಾರಂಭಿಸುವುದರೊಂದಿಗೆ ಅವರ ಉದ್ಯಮಶೀಲತೆಯ ಪ್ರಯಾಣ ಆರಂಭವಾಯಿತು.
ಕಳೆದ ಎರಡು ವರ್ಷಗಳಲ್ಲಿ, ಸುಮಾರು 1.2 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಯುಎಸ್‌ನ ಸಾಲದಾತರೊಂದಿಗೆ ಕಾನೂನು ಸಮರ ಹಾಗೂ 9362.35 ಕೋಟಿ ರೂ. ಮೊತ್ತದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಇವೆರಡು ಬೈಜೂಸ್ ಗೆ ತೀವ್ರ ಹಿನ್ನಡೆ ತಂದೊಡ್ಡಿದೆ.


Click it and Unblock the Notifications