ಕ್ರೆಡಿಟ್ ಕಾರ್ಡ್ ಎಂಬುವುದು ಪ್ರಸ್ತುತ ಜನರು ಸಾಮಾನ್ಯವಾಗಿ ಬಳಕೆ ಮಾಡುವ ಕಾರ್ಡ್ ಆಗಿದೆ. ತಮ್ಮ ದಿನನಿತ್ಯದ ವಹಿವಾಟಿಗೂ ಕೂಡಾ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡುವವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಕ್ರೆಡಿಟ್ ಕಾರ್ಡ್ ಮೊತ್ತ ಮರುಪಾವತಿಯನ್ನು ಬಾಕಿ ಉಳಿಸಿದರೆ ಭಾರೀ ಬಡ್ಡಿ ಪಾವತಿಸಬೇಕಾಗುತ್ತದೆ. ಇದು ನಿಮ್ಮ ಮಾಸಿಕ ಖರ್ಚಿನ ಲೆಕ್ಕಾಚಾರದ ಮೇಲೆ ಏಟು ನೀಡಲಿದೆ. ಕ್ರೆಡಿಟ್ ಕಾರ್ಡ್ ಬಳಕೆ ಎಷ್ಟು ಸರಳ, ಸುಲಭವಾದರೂ ಕೂಡಾ ಒಂಚೂರು ತಪ್ಪಿದರೂ ಸಾಲದ ಹೊರೆಯಲ್ಲಿ ಬೀಳುತ್ತೇವೆ.
ಸಮಯಕ್ಕೆ ಸರಿಯಾಗಿ ಮೊತ್ತ ಪಾವತಿಸಿದರೆ ಕ್ರೆಡಿಟ್ ಕಾರ್ಡ್‌ನಲ್ಲಿ ಯಾವುದೇ ಬಡ್ಡಿದರ ಇಲ್ಲವಾದರೂ, ಸಮಯ ತಪ್ಪಿದರೆ ಭಾರೀ ಬಡ್ಡಿದರ ವಿಧಿಸಲಾಗುತ್ತದೆ. ಆದ್ದರಿಂದಾಗಿ ಕ್ರೆಡಿಟ್ ಕಾರ್ಡ್ ಸಾಲವನ್ನು ನಾವು ತಪ್ಪಿಸಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಕ್ರೆಡಿಟ್ ಕಾರ್ಡ್ ಸಾಲವಾದರೆ ಅದರ ಮರುಪಾವತಿ ನಿಮಗೆ ದೊಡ್ಡ ಹೊರೆಯಾಗಬಹುದು. ಕ್ರೆಡಿಟ್ ಕಾರ್ಡ್ ಸಾಲದಿಂದ ತಪ್ಪಿಸಿಕೊಳ್ಳಲು ನೀವು ಎಷ್ಟು ದೀರ್ಘಾವಧಿ ತೆಗೆದುಕೊಳ್ಳುತ್ತೀರೋ ಅಷ್ಟೇ ಹೊರೆ ಹೆಚ್ಚಾಗಲಿದೆ. ಆದರೆ ಅದಕ್ಕೆ ವೈಯಕ್ತಿಕ ಸಾಲ ಸಹಾಯಕವಾಗಲಿದೆ. ಇಲ್ಲಿದೆ ವಿವರ....
ತ್ವರಿತ ವೈಯಕ್ತಿಕ ಸಾಲ ಎಂದರೇನು?
ನಿರ್ದಿಷ್ಟ ಅವಧಿಗೆ ಬ್ಯಾಂಕ್ ಅಥವಾ ಆನ್‌ಲೈನ್ ಸಾಲದಾತರು ನೀವು ಸಾಲವೇ ತ್ವರಿತ ವೈಯಕ್ತಿಕ ಸಾಲವಾಗಿದೆ. ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ಅರ್ಜಿಯನ್ನು ಹಲವಾರು ಅಂಶಗಳ ಆಧಾರದಲ್ಲಿ ಅನುಮೋದನೆ ಮಾಡಲಾಗುತ್ತದೆ. ನಿಮ್ಮ ಕ್ರೆಡಿಟ್ ರೇಟಿಂಗ್, ಆದಾಯ ಮೊದಲಾದವುಗಳನ್ನು ಪರಿಶೀಲಿಸಲಾಗುತ್ತದೆ. ಸಾಮಾನ್ಯವಾಗಿ ಸಾಲದ ಮೊತ್ತ ಇದರ ಆಧಾರದಲ್ಲಿ ನಿರ್ಧಾರವಾಗುತ್ತದೆ. ನೀವು ಇಂತಹ ಸಾಲಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಕೆಲವೇ ದಿನಗಳಲ್ಲಿ ಸಾಲ ಲಭ್ಯವಾಗಲಿದೆ.
ಕ್ರೆಡಿಟ್ ಕಾರ್ಡ್ ಡೆಬ್ಟ್‌ನಿಂದ ತಪ್ಪಿಸಿಕೊಳ್ಳಲು ಹೇಗೆ ಸಹಾಯಕ?
ವೈಯಕ್ತಿಕ ಸಾಲದ ಹಲವಾರು ಪ್ರಯೋಜನಗಳಲ್ಲಿ ನಿಮ್ಮನ್ನು ಕ್ರೆಡಿಟ್ ಕಾರ್ಡ್ ಸಾಲದ ಹೊರೆಯಿಂದ ತಪ್ಪಿಸಲು ಸಹಾಯ ಮಾಡುವುದು ಕೂಡಾ ಒಂದು ಪ್ರಯೋಜನವಾಗಿದೆ. ಅತೀ ದೊಡ್ಡ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪಾವತಿಸಲು ನೀವು ಸಾಲದ ಮೊತ್ತ ಉಪಯೋಗಿಸಿದರೆ, ನೀವು ಇದರ ಭಾರೀ ಪ್ರಮಾಣದ ಬಡ್ಡಿಯಿಂದ ತಪ್ಪಿಸಿಕೊಳ್ಳಬಹುದು. ಅತೀ ಹೆಚ್ಚು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಿಗೆ ವೈಯಕ್ತಿಕ ಸಾಲವು ಈ ಮೂಲಕವಾಗಿ ಸಹಾಯವಾಗಲಿದೆ.
ಕ್ರೆಡಿಟ್ ಕಾರ್ಡ್ ಸಾಲವು ಭಾರೀ ದುಬಾರಿಯಾಗಿದೆ. ಆದ್ದರಿಂದಾಗಿ ನೀವು ಕ್ರೆಡಿಟ್ ಕಾರ್ಡ್ ಸಾಲವನ್ನು ಒಮ್ಮೆ ಪಾವತಿ ಮಾಡಿಬಿಟ್ಟರೆ, ನಿಮಗೆ ಆ ಬಡ್ಡಿದರ ಪಾವತಿ ಮಾಡುವ ಹೊರೆಯು ತಪ್ಪುತ್ತದೆ. ಆದರೆ ನೀವು ವೈಯಕ್ತಿಕ ಸಾಲದ ಮರುಪಾವತಿಯನ್ನು ಕೂಡಾ ಮಾಡಬೇಕಾಗುತ್ತದೆ ಎಂಬುವುದು ನೆನಪಿಸನಲ್ಲಿರಲಿ. ಆದ್ದರಿಂದಾಗಿ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿದರವನ್ನು ಹೊಂದಿರುವ ವೈಯಕ್ತಿಕ ಸಾಲವನ್ನು ಪಡೆದರೆ ನಿಮಗೆ ಲಾಭವಾಗಲಿದೆ.
ತ್ವರಿತ ವೈಯಕ್ತಿಕ ಸಾಲದ ಪ್ರಯೋಜನಗಳು
ಕಡಿಮೆ ಬಡ್ಡಿದರ: ಕ್ರೆಡಿಟ್ ಕಾರ್ಡ್‌ಗೆ ಹೋಲಿಕೆ ಮಾಡಿದಾಗ ವೈಯಕ್ತಿಕ ಸಾಲವು ಅತೀ ಅಧಿಕ ಬಡ್ಡಿದರವನ್ನು ಹೊಂದಿರುವುದಿಲ್ಲ. ಸಾಮಾನ್ಯವಾಗಿ ನಿಮಗೆ ನಿಗದಿತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಶೇಕಡ 10ರಿಂದ ಶೇಕಡ 30ರ ನಡುವೆ ಇರುತ್ತದೆ.
ಹಣ ಉಳಿತಾಯ: ತ್ವರಿತ ವೈಯಕ್ತಿಕ ಸಾಲವು ಕಡಿಮೆ ಬಡ್ಡಿದರ ಹೊಂದಿರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿಗೆ ಇದನ್ನು ಬಳಸಿದರೆ, ನೀವು ಕಡಿಮೆ ಬಡ್ಡಿದರ ಪಾವತಿಸಬೇಕಾಗುತ್ತದೆ, ಹಣವು ಉಳಿತಾಯವಾಗಲಿದೆ.
ಶೀಘ್ರ ಹಣ ಲಭ್ಯ: ತ್ವರಿತ ವೈಯಕ್ತಿಕ ಸಾಲದಲ್ಲಿ ಸಾಮಾನ್ಯವಾಗಿ ಅತೀ ಕಡಿಮೆ ಅವಧಿಯಲ್ಲಿ ಸಾಲವು ಲಭ್ಯವಾಗಲಿದೆ. ನೀವು ಅತೀ ಅಧಿಕ ಸಾಲವನ್ನು ಅತೀ ಶೀಘ್ರ ಪಾವತಿಸಬೇಕಾದರೆ, ಕಡಿಮೆ ಅವಧಿಯಲ್ಲೇ ವೈಯಕ್ತಿಕ ಸಾಲ ಪಡೆದು ಕ್ರೆಡಿಟ್ ಕಾರ್ಡ್ ಸಾಲ ತೀರಿಸಬಹುದು.
ಸಾಲ ಪಡೆಯುವುದು ಸುಲಭ: ವೈಯಕ್ತಿಕ ಸಾಲವನ್ನು ನಾವು ಆನ್‌ಲೈನ್ ಮೂಲಕ ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚಿನ ಅರ್ಹತೆ ದಾಖಲೆಗಳು ಬೇಕಾಗುವುದಿಲ್ಲ. ಸಾಂಪ್ರಾದಾಯಿಕ ಸಾಲಕ್ಕಿಂತ ಈ ಸಾಲ ಅತೀ ಸರಳವಾಗಿ ಪಡೆಯಬಹುದಾಗಿದೆ.
ಪ್ರಯೋಜನದೊಂದಿಗೆ ನಷ್ಟವು ತಿಳಿದಿರಿ
ಹೆಚ್ಚುವರಿ ಶುಲ್ಕ: ತ್ವರಿತ ವೈಯಕ್ತಿಕ ಸಾಲ ಅರ್ಜಿ ಸಲ್ಲಿಕೆಗೆ ಶುಲ್ಕ ಇರಬಹುದು. ಅರ್ಜಿ ಶುಲ್ಕ, ತಡವಾಗಿ ಮರುಪಾವತಿ ಮಾಡುವ ಶುಲ್ಕ, ಪೂರ್ವಪಾವತಿ ಶುಲ್ಕಗಳನ್ನು ನೀವು ಪಾವತಿಸಬೇಕಾಗುತ್ತದೆ. ಆದ್ದರಿಂದಾಗಿ ಸರಿಯಾಗಿ ಪರಿಶೀಲನೆ ಮಾಡಿ ಸಾಲವನ್ನು ಪಡೆಯಬೇಕಾಗುತ್ತದೆ.
ಸಮಯಕ್ಕೆ ಸರಿಯಾಗಿ ಮರುಪಾವತಿ: ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕಾಗುತ್ತದೆ. ತಡವಾದರೆ ದಂಡವನ್ನು ವಿಧಿಸಲಾಗುತ್ತದೆ. ದಂಡ ಭಾರೀ ಅಧಿಕವಾಗಿರುತ್ತದೆ.ಕಡಿಮೆ ಮರುಪಾವತಿ ಅವಧಿ: ಕೆಲವು ವೈಯಕ್ತಿಕ ಸಾಲಗಳಿಗೆ ಕಡಿಮೆ ಮರುಪಾವತಿ ಅವಧಿ ಇರುತ್ತದೆ. ಅದು ನಿಮಗೆ ಹೊರೆಯಾಗಬಹುದು.
ಈ ಅಂಶ ತಿಳಿಯುವುದು ಮುಖ್ಯ
ಕ್ರೆಡಿಟ್ ಕಾರ್ಡ್ ಸಾಲದಿಂದ ನಾವು ತಪ್ಪಿಸಿಕೊಳ್ಳಲು ತ್ವರಿತ ವೈಯಕ್ತಿಕ ಸಾಲವು ಅತೀ ಸಹಾಯಕವಾಗುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಸಾಲಕ್ಕೆ ಅತೀ ಅಧಿಕ ಬಡ್ಡಿದರವಿದ್ದಾಗ ಮಾತ್ರ ನಮಗೆ ಇದು ಸಹಾಯಕವಾಗಲಿದೆ. ಕಡಿಮೆ ಅವಧಿಯಲ್ಲಿ ಸಾಲದ ಹೊರೆಯಿಂದ ಹೊರಬರಲು ಸಹಾಯಕ. ಹಣವು ಕೂಡಾ ಉಳಿತಾಯವಾಗಲಿದೆ. ಶೇಕಡ 100ರಷ್ಟು ಆನ್‌ಲೈನ್ ಪ್ರಕ್ರಿಯೆ ಇರಲಿದೆ. ಆದರೆ ಆನ್‌ಲೈನ್ ಆಪ್‌ಗಳು ಸುರಕ್ಷಿತವೇ, ನಂಬಿಕಾರ್ಹವೇ, ಬಡ್ಡಿದರ ಎಷ್ಟಿದೆ ಎಂದು ತಿಳಿದುಕೊಳ್ಳಿ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications