ಐಆರ್‌ಸಿಟಿಸಿ ಚಾರ್ ಧಾಮ ಯಾತ್ರಾ ಪ್ರವಾಸ ಪ್ಯಾಕೇಜ್: ಏಪ್ರಿಲ್ 30ರವರೆಗೆ ಕೇದರ್‌ನಾಥ್‌ಗೆ ಹೆಲಿಕಾಫ್ಟರ್ ಸೇವೆ ಈಗಾಗಲೇ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದೆ. ಭಾರತೀಯ ರೈಲ್ವೆಯ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಚಾರ್ ಧಾಮ ಯಾತ್ರಾ ಪ್ರಯಾಣಿಕರಿಗಾಗಿ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ನೀಡಿದ ಆರು ಗಂಟೆಯ ಒಳಗಾಗಿ ಎಲ್ಲ ಟಿಕೆಟ್‌ಗಳು ಬುಕ್ ಆಗಿದೆ. ಭಾರತೀಯ ರೈಲ್ವೆಯ ಈ ಚಾರ್ ಧಾಮ ಯಾತ್ರೆಯು ಏಪ್ರಿಲ್ 25ರಿಂದ ಏಪ್ರಿಲ್ 30ರ ನಡುವೆ ಇರಲಿದೆ.
ಏಪ್ರಿಲ್ 22 ರಿಂದ ಪ್ರಾರಂಭವಾಗುವ ಚಾರ್ ಧಾಮ ಯಾತ್ರೆಯ ಅವಧಿಯಲ್ಲಿ ಕೇದಾರನಾಥ ಧಾಮದ ಪೋರ್ಟಲ್‌ಗಳು ಏಪ್ರಿಲ್ 25 ರಂದು ತೆರೆಯಲ್ಪಡುತ್ತವೆ. ಹೆಲಿಕಾಫ್ಟರ್ ಸೇವೆಯು ಈ ದಿನವೂ ಪ್ರಾರಂಭವಾಗುತ್ತದೆ. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ) ಮೊದಲ ಬಾರಿಗೆ ಐಆರ್‌ಸಿಟಿಸಿಗೆ ಹೆಲಿಕಾಪ್ಟರ್ ಬುಕಿಂಗ್ ಸೇವೆಗಳನ್ನು ವಹಿಸಿಕೊಟ್ಟಿದೆ. ಇದಕ್ಕೂ ಮುನ್ನ ಪ್ರತಿ ಚಾರ್ ಧಾಮ ಯಾತ್ರೆಯ ಸಂದರ್ಭದಲ್ಲಿಯೂ ಹೆಲಿಕಾಫ್ಟರ್ ಸೇವೆಯನ್ನು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಬದ್ರಿ ಕೇದಾರ್ ದೇವಾಲಯ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ಸಿಂಗ್, "ಐಆರ್‌ಸಿಟಿಸಿ 6,263 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಈ ವರ್ಷ ಮೊದಲ ಬಾರಿಗೆ ಐಆರ್‌ಸಿಟಿಸಿಯಲ್ಲಿ ಬುಕ್ಕಿಂಗ್‌ಗಳನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ 30 ರ ನಂತರದ ಅವಧಿಯ ಬುಕಿಂಗ್ ಸಮಯಗಳು ಇನ್ನೂ ನಿರ್ಧರಿಸಲಾಗಿಲ್ಲ," ಎಂದು ತಿಳಿಸಿದ್ದಾರೆ. "ಏಪ್ರಿಲ್ 25 ರಿಂದ ಗುಪ್ತಕಾಶಿ, ಸಿರ್ಸಿ, ಫಾಟಾ ಹೆಲಿಪ್ಯಾಡ್‌ನಿಂದ ಕೇದಾರನಾಥ ಧಾಮ್‌ಗೆ ಹೆಲಿಕಾಫ್ಟರ್ ಸೇವೆಯನ್ನು ನಿಡಲಾಗುತ್ತದೆ. ಒಂಬತ್ತು ಹೆಲಿಕಾಪ್ಟರ್ ಕಂಪನಿಗಳ ಮೂಲಕ ಸೇವೆಯನ್ನು ನಿರ್ವಹಿಸಲಾಗುವುದು," ಎಂಬ ಮಾಹಿತಿಯನ್ನು ಕೂಡಾ ನೀಡಿದ್ದಾರೆ.
ಆರಂಭಿಕವಾಗಿ ತಾಂತ್ರಿಕ ಸಮಸ್ಯೆ
ಆರಂಭದಲ್ಲಿ, ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಶುಲ್ಕ ಪಾವತಿಯಲ್ಲಿನ ತಾಂತ್ರಿಕ ದೋಷಗಳಿಂದಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡುವ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತಿತ್ತು. ಐಆರ್‌ಸಿಟಿಸಿ ಶನಿವಾರ heliyatra.irctc.co.in ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕಿಂಗ್ ಪೋರ್ಟಲ್ ಅನ್ನು ತೆರೆದಿದೆ. ಅದೇ ಸಮಯದಲ್ಲಿ, ಹೆಲಿಕಾಪ್ಟರ್ ಸೇವೆಯ ಮೂಲಕ ಕೇದಾರನಾಥಕ್ಕೆ ಬುಕ್ಕಿಂಗ್ ಮಾಡುವ ಪ್ರಯಾಣಿಕರು ಸಹ ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ ಕಾತರದಿಂದ ಕಾಯುತ್ತಿದ್ದರು.
ಪೋರ್ಟಲ್ ತೆರೆದ ಕೂಡಲೇ ಪೇಮೆಂಟ್ ಗೇಟ್ ವೇಯಲ್ಲಿ ಕೆಲಕಾಲ ತಾಂತ್ರಿಕ ಸಮಸ್ಯೆ ಉಂಟಾಗಿ ಪ್ರಯಾಣಿಕರು ಕೂಡ ತೊಂದರೆ ಅನುಭವಿಸಿದ್ದರು. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಸಿ ರವಿಶಂಕರ್ ಪ್ರಕಾರ ಚಾರ್ ಧಾಮ್ ಯಾತ್ರೆಯ ಬಗ್ಗೆ ಯಾತ್ರಿಕರಲ್ಲಿ ಅಧಿಕ ಉತ್ಸಾಹಿತವಾಗಿದ್ದಾರೆ. ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಭಾನುವಾರ ಬೆಳಗ್ಗೆ ಬದರಿನಾಥ ಧಾಮಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ.
ಏಪ್ರಿಲ್ 27 ರಿಂದ ಬದರಿನಾಥ ಧಾಮ ಯಾಂತ್ರಿಕರಿಗಾಗಿ ತೆರೆಯಲಿದೆ. ಆದ್ದರಿಂದ ವಿವಿಧ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಮತ್ತು ನಿರ್ಮಾಣ ಕಾಮಗಾರಿಗಳಿಂದ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲತೆ ಉಂಟಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರವಾಸ ಪ್ಯಾಕೇಜ್
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‌ಸಿಟಿಸಿ)ವು ಪ್ರವಾಸಿಗರು ಹಾಗೂ ತೀರ್ಥಯಾತ್ರೆ ಹೋಗುವವರಿಗೆ ಚಾರ್‌ಧಾಮ್ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಚಾರ್‌ಧಾಮ್ ಯಾತ್ರಾ ಪ್ಯಾಕೇಜ್ ಹರಿದ್ವಾರ, ಗಂಗೋತ್ರಿ, ಕೇದಾರನಾಥ, ಯಮುನೋತ್ರಿ, ಬದರಿನಾಥ್ ಹಾಗೂ ಋಷಿಕೇಶ್ ಪ್ರವಾಸಿ ತಾಣವನ್ನು ಹೊಂದಿದೆ. ಈ ಇನ್ನು ಈ ಪ್ಯಾಕೇಜ್ 11 ರಾತ್ರಿ ಹಾಗೂ 12 ಹಗಲನ್ನು ಒಳಗೊಂಡಿದ್ದು, 2023ರ ಮೇ 21ರಂದು ಪ್ರವಾಸ ಪ್ರಾರಂಭವಾಗಲಿದೆ.


Click it and Unblock the Notifications