ಬೀಚ್‌ಗಳಲ್ಲಿ ಆರಾಮವಾಗಿ ರಜಾದಿನಗಳನ್ನು ಕಳೆಯಲು ಅಂಡಮಾನ್ ಐಲ್ಯಾಂಡ್ ಒಂದು ಸುಂದರವಾದ ತಾಣವಾಗಿದೆ. ಅಂಡಮಾನ್ ಸುಂದರವಾದ ಕರಾವಳಿ ಪ್ರದೇಶವಾಗಿದೆ. ಸೊಬಗಾದ ಕಾಡಿನ ಸೌದರ್ಯವನ್ನು ನೋಡಲು ಬಯಸುವವರಿಗೆ ಅಂಡಮಾನ್ ಅತ್ಯದ್ಭುತ ಸ್ಥಳವಾಗಿದೆ. ಈಜುಗಾರರಿಗೆ ಅದ್ಭುತವಾದ ಸ್ಥಳ ಕೂಡಾ ಇದಾಗಿದೆ. ನೀವು ಈ ಸ್ಥಳಕ್ಕೆ ಭೇಟಿ ನೀಡಬೇಕು, ಪ್ರವಾಸ ಮಾಡಬೇಕು ಎಂದಾದರೆ ಐಆರ್‌ಸಿಟಿಸಿಯ ಆಫರ್ ನಿಮಗಿದೆ. ಈ ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ.
ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) 6 ದಿನಗಳ 5 ರಾತ್ರಿಗಳ ವಿಮಾನಯಾನ ಪ್ಯಾಕೇಜ್ ಅನ್ನು ನೀಡಿದೆ. ಈ ಪ್ಯಾಕೇಜ್ ಪ್ರಕಾರ ಪ್ರಯಾಣವು ದೆಹಲಿಯಲ್ಲಿ ಮೊದಲ ಆರಂಭವಾಗಲಿದೆ. ಈ ಪ್ಯಾಕೇಜ್‌ನ ಹೆಸರು 'ಅಮೇಜಿಂಗ್ ಅಂಡಮಾನ್ ಎಕ್ಸ್ ದೆಲ್ಲಿ' ಎಂದಾಗಿದೆ. ಈ ಪ್ಯಾಕೇಜ್ ಅಡಿಯಲ್ಲಿ ಮಾರ್ಚ್ 13 ಮತ್ತು ಮಾರ್ಚ್ 27ರಂದು ಅಂಡಮಾನ್ ಪ್ರವಾಸ ಮಾಡಬಹುದು. 4 ಪ್ರವಾಸಿ ತಾಣಗಳು ಇರಲಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ದರ, ಸಮಯ ಇತರೆ ಮಾಹಿತಿ
ನೀವು ಪೋರ್ಟ್ ಬ್ಲೇರ್, ಹಾವ್‌ಲಾಕ್ ಐಸ್‌ಲ್ಯಾಂಡ್, ನೇಲ್, ನಾರ್ತ್ ಬೇ, ರಾಸ್ ಐಸ್‌ಲ್ಯಾಂಡ್‌ಗೆ ಭೇಟಿ ನೀಡಬಹುದು. ಮುಂಜಾನ್ 5:50ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ಆರಂಭವಾಗಲಿದೆ. ಪೋರ್ಟ್ ಬ್ಲೇರ್‌ಗೆ 11 ಗಂಟೆಗೆ ತಲುಪಲಿದೆ. ಅಲ್ಲಿಂದ ಪ್ರಯಾಣ ಮುಂದುವರಿಯುತ್ತದೆ. ಪ್ರವಾಸಿಗರ ಸಂಖ್ಯೆಯ ಆದಾರದಲ್ಲಿ ಪ್ರವಾಸದ ಪ್ಯಾಕೇಜ್ ನಿರ್ಧಾರವಾಗುತ್ತದೆ. ಈ ಪ್ರವಾಸದ ಟಿಕೆಟ್ ದರವು ಪ್ರತಿ ವ್ಯಕ್ತಿಗೆ 53,500 ರೂಪಾಯಿ ಆಗಿದೆ.
ಮೂರು ಜನರು ಜೊತೆಯಾಗಿ ಪ್ರಯಾಣ ಮಾಡುವುದಾದರೆ ಪ್ರತಿ ಒಬ್ಬ ವ್ಯಕ್ತಿಗೆ 53,500 ರೂಪಾಯಿ ಟಿಕೆಟ್ ಇರಲಿದೆ. ಒಬ್ಬರಿಗೆ ಮಾತ್ರ ಪ್ರಯಾಣ ದರವು, ತಲಾ 54,500 ರೂಪಾಯಿ ಆಗುತ್ತದೆ. ಓರ್ವ ವ್ಯಕ್ತಿ ಪ್ರವಾಸ ಮಾಡುವುದಾದರೆ ಪ್ಯಾಕೇಜ್ 67,100 ರೂಪಾಯಿ ಆಗಿರುತ್ತದೆ. 5-11 ವರ್ಷದವರೆಗಿನ ಮಕ್ಕಳಿಗೆ ಬೆಡ್ ಸೇರಿದಂತೆ 48,900 ರೂಪಾಯಿ ಪ್ಯಾಕೇಜ್ ಆಗಿದೆ. ಬೆಡ್ ಇಲ್ಲದೆ, 46,800 ರೂಪಾಯಿ ಆಗಿದೆ. 2-4 ವರ್ಷದ ಮಕ್ಕಳಿಗೆ ಬೆಡ್ ಇಲ್ಲದೆ 35,200 ರೂಪಾಯಿ ಪ್ಯಾಕೇಜ್ ದರವಾಗಿದೆ.
ಪ್ಯಾಕೇಜ್‌ನಲ್ಲಿ ಏನೆಲ್ಲ ಅನ್ವಯವಾಗಲಿದೆ?
* ಗೋ ಫಸ್ಟ್ ಏರ್‌ಲೈನ್ಸ್ ವಿಮಾನ ಟಿಕೆಟ್ (ದೆಹಲಿ - ಪೋರ್ಟ್ ಬ್ಲೇರ್ ಮತ್ತು ಪೋರ್ಟ್ ಬ್ಲೇರ್ - ದೆಹಲಿ)
* ಎಸಿ ರೂಮ್‌ನಲ್ಲಿ ಉತ್ತಮ ವಸತಿ ವ್ಯವಸ್ಥೆ (ಪೋರ್ಟ್ ಬ್ಲೇರ್‌ನಲ್ಲಿ ಮೂರು ರಾತ್ರಿ, ನೇಲ್‌ನಲ್ಲಿ ಒಂದು ರಾತ್ರಿ, ಹಾವ್‌ಲಾಕ್‌ನಲ್ಲಿ ಒಂದು ರಾತ್ರಿ)
* ಎಸಿ ವಾಹನದಲ್ಲಿ ಪ್ರವಾಸ ಮತ್ತು ಸುತ್ತಮುತ್ತಲಿನ ವಾತಾವರಣ ನೋಡುವ ಅವಕಾಶ
* ಹೋಟೆಲ್‌ನಲ್ಲಿ ಊಟ ತಿಂಡಿ ವ್ಯವಸ್ಥೆ, 5 ಬಾರಿ ತಿಂಡಿ, 5 ಡಿನ್ನರ್ ವ್ಯವಸ್ಥೆ
* ಸಮುದ್ರಯಾಣ ಟಿಕೆಟ್ ಪ್ಯಾಕೇಜ್‌ನಲ್ಲಿ ಸೇರ್ಪಡೆ
* ಸೆಲ್ಯೂಲರ್ ಜೈಲ್, ಚಥಾಮ್ ಮಿಲ್, ಸಮುದ್ರಿಕಾ ನವಲ್ ಮೆರೈನ್ ಮ್ಯೂಸಿಯಂನ ಪ್ರವೇಶ ಶುಲ್ಕ ಪ್ಯಾಕೇಜ್‌ನಲ್ಲಿ ಸೇರ್ಪಡೆ
* ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳು ಕೂಡಾ ಪ್ಯಾಕೇಜ್‌ನಲ್ಲಿ ಸೇರ್ಪಡೆ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications