ಅಂಡಮಾನ್‌ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅಂತಹ ಅವಕಾಶವನ್ನು ಮತ್ತೆ ಐಆರ್‌ಸಿಟಿಸಿ ನೀಡಿದೆ. ಈ ಹಿಂದೆ ಮಾರ್ಚ್ 13 ಮತ್ತು ಮಾರ್ಚ್ 27ರಂದು ಅಂಡಮಾನ್ ಪ್ರವಾಸವನ್ನು ನಡೆಸಿದ್ದ ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಈಗ ಮತ್ತೆ 6 ದಿನಗಳ 5 ರಾತ್ರಿಗಳ ಅಂಡಮಾನ್ ಪ್ಯಾಕೇಜ್ ಅನ್ನು ನೀಡಿದೆ.
ಬೀಚ್‌ಗಳಲ್ಲಿ ಆರಾಮವಾಗಿ ರಜಾದಿನಗಳನ್ನು ಕಳೆಯಲು ಅಂಡಮಾನ್ ಐಲ್ಯಾಂಡ್ ಒಂದು ಸುಂದರವಾದ ತಾಣವಾಗಿದೆ. ಅಂಡಮಾನ್ ಸುಂದರವಾದ ಕರಾವಳಿ ಪ್ರದೇಶವಾಗಿದ್ದು ಸೊಬಗಾದ ಕಾಡಿನ ಸೌದರ್ಯವನ್ನು ನೋಡಲು ಬಯಸುವವರಿಗೆ ಅಂಡಮಾನ್ ಅದ್ಭುತ ಸ್ಥಳವಾಗಿದೆ. ಈಜುಗಾರರಿಗೂ ಕೂಡಾ ಅಂಡಮಾನ್ ಉತ್ತಮ ಪ್ರವಾಸಿತಾಣ. ನೀವು ಈ ಸ್ಥಳಕ್ಕೆ ಭೇಟಿ ನೀಡಬೇಕು, ಪ್ರವಾಸ ಮಾಡಬೇಕು ಎಂದಾದರೆ ಐಆರ್‌ಸಿಟಿಸಿಯ ಆಫರ್ ನಿಮಗಿದೆ. ಈ ಪ್ಯಾಕೇಜ್ ಬಗ್ಗೆ ಇಲ್ಲಿದೆ ಮಾಹಿತಿ.

ಆರು ದಿನಗಳ ಪ್ರವಾಸ ಪ್ಯಾಕೇಜ್
ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್‌ನ (ಐಆರ್‌ಸಿಟಿಸಿ) ಅಂಡಮಾನ್ ಪ್ಯಾಕೇಜ್ ಒಟ್ಟು ಐದು ರಾತ್ರಿಗಳು ಆರು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಪ್ರವಾಸಿಗಳು ವಿಮಾನಯಾನವನ್ನು ಮಾಡಲಿದ್ದಾರೆ. ಇದು ಪ್ಯಾಕೇಜ್‌ನಲ್ಲೇ ಒಳಗೊಳ್ಳಲಿದೆ. ಅದು ಕೂಡಾ ಕಡಿಮೆ ದರ ಪ್ಯಾಕೇಜ್ ಇದಾಗಿದೆ.
ನಿಮ್ಮ ಜೇಬಿನಲ್ಲಿ 45,540 ರೂಪಾಯಿ ಇದ್ದರೆ, ನೀವು ಅಂಡಮಾನ್ ಪ್ರವಾಸಕ್ಕೆ ಹೋಗಿ ಬರಬಹುದಾಗಿದೆ. ಅಂದರೆ ಈ ಪ್ಯಾಕೇಜ್ 45,540 ರೂಪಾಯಿಯಿಂದ ಆರಂಭವಾಗುತ್ತದೆ. ಪೋರ್ಟ್ ಬ್ಲೇರ್, ಹಾವ್‌ಲಾಕ್ ಐಸ್‌ಲ್ಯಾಂಡ್, ನೇಲ್ ಐಸ್‌ಲ್ಯಾಂಡ್, ನಾರ್ತ್ ಬೇ, ರಾಸ್ ಐಸ್‌ಲ್ಯಾಂಡ್‌ಗೆ ಭೇಟಿ ನೀಡಬಹುದು. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಪ್ರವಾಸಿಗರು ಅಂಡಮಾನ್‌ನ ಹಲವಾರು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಅಷ್ಟಕ್ಕೂ ಈ ಪ್ರವಾಸ ಪ್ಯಾಕೇಜ್‌ನ ಹೆಸರು ಅಮೇಜಿಂಗ್ ಅಂಡಮಾನ್ ಪ್ಯಾಕೇಜ್ ಆಗಿದೆ.
ಐಆರ್‌ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಯಾವಾಗ ಆರಂಭ?
ಐಆರ್‌ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಆಗಸ್ಟ್ 18ರಂದು ಆರಂಭವಾಗಲಿದೆ. ಈ ಪ್ರವಾಸ ಪ್ಯಾಕೇಜ್‌ನ ಪೂರ್ಣ ಹೆಸರು ಅಮೇಜಿಂಗ್ ಅಂಡಮಾನ್ ಎಕ್ಸ್ ಹೈದಾರಾಬಾದ್ ಆಗಿದೆ. ನೀವು ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಒಬ್ಬರೆ ಪ್ರಯಾಣ ಮಾಡುವುದಾದರೆ ನೀವು 58,440 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಆದರೆ ನೀವು ಇಬ್ಬರು ಜೊತೆಯಾಗಿ ಈ ಪ್ರವಾಸ ಪ್ಯಾಕೇಜ್ ಖರೀದಿ ಮಾಡುವುದಾದರೆ ಪ್ರತಿ ವ್ಯಕ್ತಿಗೆ 45830 ರೂಪಾಯಿ ಅಂಡಮಾನ್ ಪ್ರವಾಸ ಪ್ಯಾಕೇಜ್ ದರವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಮೂವರು ಪ್ರವಾಸ ಮಾಡುವುದಾದರೆ ಪ್ರತಿ ವ್ಯಕ್ತಿಗೆ 45,540 ರೂಪಾಯಿ ಪ್ಯಾಕೇಜ್ ದರವಾಗಿದೆ. ನಿಮ್ಮ ಜೊತೆ 5ರಿಂದ 11 ವರ್ಷದ ಮಗು ಇದ್ದರೆ ಬೆಡ್ ಸಹಿತ ಸಂಪೂರ್ಣ ಪ್ಯಾಕೇಜ್‌ಗೆ 41255 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಇನ್ನು 2ರಿಂದ 11 ವರ್ಷಕ್ಕಿಂತ ಕೆಳವಯಸ್ಸಾಗಿದ್ದರೆ, 37860 ರೂಪಾಯಿ ಪೂರ್ಣ ಪ್ಯಾಕೇಜ್ ದರವಾಗಿದೆ.
ಐಆರ್‌ಸಿಟಿಸಿಯ ಈ ಪ್ರವಾಸ ಪ್ಯಾಕೇಜ್‌ನ ಬುಕಿಂಗ್ ಅನ್ನು ಪ್ರವಾಸಿ ರೈಲ್ವೆಯ ಅಧಿಕೃತ ವೆಬ್‌ಸೈಟ್ ಮೂಲಕ ಮಾಡಬಹುದು. ಐಆರ್‌ಸಿಟಿಸಿಯ ಇತರ ಪ್ರವಾಸ ಪ್ಯಾಕೇಜ್‌ಗಳಂತೆ, ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಸಹ ಪ್ರಯಾಣಿಕರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆಗಳು ಲಭ್ಯವಾಗುತ್ತದೆ. ಇನ್ನು ಪ್ರವಾಸೋದ್ಯಮವನ್ನು ಉತ್ತೇಜನ ಮಾಡುವ ನಿಟ್ಟಿನಲ್ಲಿ ಐಆರ್‌ಸಿಟಿಸಿ ಈಗಾಗಲೇ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಜಾರಿ ಮಾಡಿದೆ. ಅದರಲ್ಲಿ ಬಾಲಿ ಪ್ರವಾಸ ಕೂಡಾ ಒಂದಾಗಿದೆ.
ನಿಮಗೆ ಕಡಿಮೆ ಬೆಲೆಯಲ್ಲಿ ಬಾಲಿ ಪ್ರವಾಸ ಮಾಡಲು ಇದು ಐಆರ್‌ಸಿಟಿಸಿಯ ಉತ್ತಮ ಅವಕಾಶವಾಗಿದೆ. ಇದು ಸುಮಾರು ಆರು ದಿನಗಳ ಪ್ರವಾಸವಾಗಿದ್ದು, ಟೂರ್ ಆಗಸ್ಟ್ 8, 2023ರಿಂದ ಆರಂಭವಾಗುತ್ತದೆ. ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿರುವ ಮಾಹಿತಿಯ ಪ್ರಕಾರ, ಈ ಅಂತರಾಷ್ಟ್ರೀಯ ಪ್ರವಾಸ ಪ್ಯಾಕೇಜ್‌ನಲ್ಲಿ ಉಬುದ್ ಗ್ರಾಮ, ಕ್ರೂಸ್ ಟೂರ್, ತನಾಹ್ ಲಾಟ್ ದೇವಸ್ಥಾನಕ್ಕೆ ಹಾಗೂ ಹಲವಾರು ಬೀಚ್‌ಗಳಿಗೆ ಭೇಟಿ ನೀಡಬಹುದಾಗಿದೆ.


Click it and Unblock the Notifications