ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಇಂತಹ ಪ್ಯಾಕೇಜ್‌ಗಳಲ್ಲಿ ಹಲವಾರು ಪ್ಯಾಕೇಜ್‌ಗಳು ಧಾರ್ಮಿಕ ಪ್ರವಾಸ ಕೇಂದ್ರಗಳನ್ನು ಭಕ್ತರು ಭೇಟಿ ನೀಡಲು ಅವಕಾಶವನ್ನು ನೀಡುವ ಪ್ರವಾಸ ಪ್ಯಾಕೇಜ್‌ಗಳಾಗಿದೆ. ಈ ಪೈಕಿ ಚಾರ್‌ಧಾಮ್ ಪ್ರವಾಸ ಪ್ಯಾಕೇಜ್ ಕೂಡಾ ಒಂದಾಗಿದೆ.
ಚಾರ್‌ಧಾಮ್ ಯಾತ್ರೆಯು ಹರಿದ್ವಾರದಿಂದ ಆರಂಭವಾಗುತ್ತದೆ. ಹಾಗೆಯೇ ಇದು ಸುಮಾರು ಹತ್ತು ರಾತ್ರಿಗಳು, 11 ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಪ್ರಮುಖವಾಗಿ ಬದ್ರಿನಾಥ, ಗಂಗೋತ್ರಿ, ಕೇದರನಾಥ, ಯಮುನೊತ್ರಿಗೆ ಭೇಟಿ ನೀಡುವ ಅವಕಾಶವಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ ಮುಂದೆ ಓದಿ...

ಚಾರ್‌ಧಾಮ್ ಪ್ಯಾಕೇಜ್ ವಿವರ ಇಲ್ಲಿದೆ
ಪ್ಯಾಕೇಜ್ ಹೆಸರು: ಚಾರ್ ಧಾಮ್ ಯಾತ್ರಾ
ಎಲ್ಲಿಂದ ಪ್ರಯಾಣ ಆರಂಭ: ಹರಿದ್ವಾರ
ಪ್ರವಾಸ ಸ್ಥಳಗಳು: ಕೇದರನಾಥ- ಬದ್ರಿನಾಥ- ಗಂಗೋತ್ರಿ- ಯಮುನೊತ್ರಿ
ಪ್ರಯಾಣದ ಆರಂಭ ದಿನಾಂಕ: ಸೆಪ್ಟೆಂಬರ್ 2, 16, ಅಕ್ಟೋಬರ್ 2
ಆಹಾರ: ಉಪಾಹಾರ ಮತ್ತು ರಾತ್ರಿಯ ಭೋಜನ ಲಭ್ಯ. ಮಧ್ಯಾಹ್ನದ ಊಟದ ವ್ಯವಸ್ಥೆ ಪ್ಯಾಕೇಜ್‌ನಲ್ಲಿ ಸೇರಿರುವುದಿಲ್ಲ.
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 75910 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 49970 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 42070 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 24000 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 16790 ರೂಪಾಯಿ ಆಗಿದೆ.
ಪ್ರಯಾಣದ ಸಂಪೂರ್ಣ ವಿವರ
ದಿನ 1: ನಿಗದಿಪಡಿಸಿದ ಸ್ಥಳದಲ್ಲಿ ಭೇಟಿಯಾಗಿ ಬಾರ್ಕೋಟ್ ಪ್ರಯಾಣ. ಬಾರ್ಕೋಟ್‌ಗೆ ಸಂಜೆ ಆಗಮನ ಹೋಟೆಲ್‌ನಲ್ಲಿ ಚೆಕ್ ಇನ್. ಬರ್ಕೋಟ್‌ನಲ್ಲಿ ರಾತ್ರಿಯ ಊಟ
ದಿನ 2: ಮುಂಜಾನೆ ಯಮುನೋತ್ರಿ ದೇವಸ್ಥಾನಕ್ಕೆ ಭೇಟಿ. ಯಮುನೋತ್ರಿಯಿಂದ ಪೋನಿ ಮತ್ತು ಪಾಲ್ಕಿ ಸೇವೆಗಳನ್ನು ಕಾಯ್ದಿರಿಸಲಾಗಿದೆ (ಸ್ವಂತ ವೆಚ್ಚ). ಟ್ರೆಕ್ಕಿಂಗ್ ಕೂಡ ಮಾಡಬಹುದು. ಯಮುನೋತ್ರಿಗೆ ಆಗಮನ ಯಮುನಾ ದೇವಿಯ ದೇವಾಲಯಕ್ಕೆ ಭೇಟಿ. ಪೂಜೆ / ದರ್ಶನದ ನಂತರ ಜಾಂಕಿ ಚಟ್ಟಿಗೆ ವಾಪಾಸ್. ಬಾರ್ಕೋಟ್‌ಗೆ ಆಗಮಿಸಿ ಅಲ್ಲಿ ತಂಗುವುದು.
ದಿನ 3: ಉಪಾಹಾರವಾಗಿ ಹೋಟೆಲ್‌ನಿಂದ ಚೆಕ್‌ಔಟ್ ಆದ ನಂತರ, ಉತ್ತರಕಾಶಿಗೆ ಪ್ರಯಾಣ. ದಾರಿಯಲ್ಲಿ ಬ್ರಹ್ಮಖಾಲ್ ಬಳಿಯ ಪ್ರಕಾಶೇಶ್ವರ - ಮಹಾದೇವ ದೇವಸ್ಥಾನಕ್ಕೆ ಭೇಟಿ. ಉತ್ತರಕಾಶಿಗೆ ಆಗಮಿಸಿ ಹೋಟೆಲ್‌ಗೆ ಚೆಕ್ ಇನ್. ಸಂಜೆ ಕಾಶಿ-ವಿಶ್ವನಾಥ ದೇವಸ್ಥಾನಕ್ಕೆ ಭೇಟಿ. ಉತ್ತರಕಾಶಿಯಲ್ಲಿ ರಾತ್ರಿಯ ಊಟ.
ದಿನ 4: ಮುಂಜಾನೆ 5 ಗಂಟೆಗೆ ಗಂಗೋತ್ರಿ ದೇವಸ್ಥಾನಕ್ಕೆ ಭೇಟಿ. ಗಂಗೋತ್ರಿಯ ಪ್ರಯಾಣವು ಆರಂಭವಾಗುತ್ತದೆ. ಗಂಗೋತ್ರಿ ದೇವಸ್ಥಾನಕ್ಕೆ ಆಗಮಿಸಿದಾಗ ಗಂಗಾ ದೇವಿಯ ಪವಿತ್ರ ದೇವಾಲಯಕ್ಕೆ ಭೇಟಿ. ಉತ್ತರಕಾಶಿಗೆ ಹೋಗಿ ರಾತ್ರಿ ಅಲ್ಲಿ ತಂಗುವುದು.
ದಿನ 5: ಮುಂಜಾನೆಯ ಉಪಹಾರದ ನಂತರ ಹೋಟೆಲ್‌ನಿಂದ ಚೆಕ್ ಔಟ್. ಗುಪ್ತಕಾಶಿ / ಸೀತಾಪುರಕ್ಕೆ ಭೇಟಿ. ರಾತ್ರಿ ಊಟದ ನಂತರ ಹೋಟೆಲ್‌ಗೆ ವರ್ಗಾವಣೆ.
ದಿನ 6: ಮುಂಜಾನೆ 4 ಗಂಟೆಗೆ ಹೋಟೆಲ್‌ನಿಂದ ಚೆಕ್‌ಔಟ್, ಕೇದಾರನಾಥ ಪ್ರಯಾಣಕ್ಕಾಗಿ ಸೋನ್‌ಪ್ರಯಾಗ್‌ನಲ್ಲಿರುವ ಪೋನಿ ಮತ್ತು ಪಾಲ್ಕಿ ಸೇವೆಗಳನ್ನು ಬುಕ್ ಮಾಡಲು ತೆರಳುವುದು (ಸ್ವಂತ ವೆಚ್ಚ). ಬುಕ್ ಮಾಡಿದ ಬಳಿಕ ಸ್ಥಳೀಯ ಶಟಲ್ ಟ್ಯಾಕ್ಸಿ ಮೂಲಕ (ಸ್ವಂತ ವೆಚ್ಚ) ಕೇದಾರನಾಥದ ಬೇಸ್ ಪಾಯಿಂಟ್ ಗೌರಿಕುಂಡ್‌ಗೆ ಪ್ರಯಾಣ. ಟ್ರೆಕ್ಕಿಂಗ್ ಮಾರ್ಗವು ಇಲ್ಲಿಂದ ಪ್ರಾರಂಭ. ಕೇದಾರನಾಥಕ್ಕೆ ಆಗಮಿಸಿ ಧರ್ಮಶಾಲೆಯಲ್ಲಿ ಚೆಕ್‌ಇನ್. ಫ್ರೆಶ್ ಆದ ನಂತರ ಸಂಜೆ ಕೇದಾರನಾಥ ದೇವಸ್ಥಾನಕ್ಕೆ ಭೇಟಿ. ರಾತ್ರಿ ಕೇದಾರನಾಥದಲ್ಲಿ ತಂಗುವುದು.
ದಿನ 7: ಮುಂಜಾನೆ 5 ಗಂಟೆಗೆ ಪೂಜೆ/ದರ್ಶನ/ ಅಭಿಷೇಕಕ್ಕಾಗಿ ಕೇದಾರನಾಥ ದೇವಾಲಯಕ್ಕೆ ಭೇಟಿ. ಉಪಹಾರದ ಬಳಿಕ ಹೋಟೆಲ್‌ನಿಂದ ಚೆಕ್‌ಔಟ್ ಮಾಡಿದ ನಂತರ ಗೌರಿಕುಂಡ್‌ಗೆ 16 ಕಿಮೀ ಚಾರಣ ಆರಂಭಿಸಿ. ಸೀತಾಪುರ / ಗುಪ್ತಕಾಶಿಯಲ್ಲಿ ರಾತ್ರಿ ತಂಗುವುದು.
ದಿನ 8: ಮುಂಜಾನೆ ಉಪಹಾರದ ನಂತರ ಬದರಿನಾಥಕ್ಕೆ ತೆರಳಿ, ಮಾರ್ಗಮಧ್ಯೆ ಜೋಸಿಮಠದ ನರಸಿಂಗ್ ಸ್ವಾಮಿ ದೇವಾಲಯಕ್ಕೆ ಭೇಟಿ. ಸಂಜೆ ಬದರಿನಾಥಕ್ಕೆ ಆಗಮಿಸಿ, ಹೋಟೆಲ್‌ಗೆ ಚೆಕ್‌ಇನ್. ಬಳಿಕ ಬದರಿನಾಥ ದೇವಾಲಯಕ್ಕೆ ಭೇಟಿ. ದೇಗುಲಕ್ಕೆ ಭೇಟಿ ನೀಡಿದ ನಂತರ, ಹೋಟೆಲ್‌ಗೆ ಹಿಂತಿರುಗಿ, ಬದರಿನಾಥದಲ್ಲಿ ರಾತ್ರಿಯ ಊಟ.
ದಿನ 9: ಮುಂಜಾನೆ 4 ಗಂಟೆಗೆ ಅಭಿಷೇಕ/ ಅಲಂಕಾರ ದರ್ಶನಕ್ಕಾಗಿ ಬದರಿನಾಥ ದೇವಾಲಯಕ್ಕೆ ಭೇಟಿ. ಉಪಾಹಾರದ ಬಳಿಕ ಇಂಡೋ - ಟಿಬೆಟ್-ಬಾರ್ಡರ್‌ನಲ್ಲಿರುವ ಭಾರತದ ಕೊನೆಯ ಹಳ್ಳಿಯಾದ ಮನಾಗೆ ಭೇಟಿ. ನಂತರ ಗಣೇಶ್ ಗುಫಾ, ಬಿಯಾಸ್ ಗುಫಾ, ಭೀಮಪೂಲ್ ಮತ್ತು ಸರಸ್ವತಿ ನದಿಗೆ ಭೇಟಿ. ರಾತ್ರಿ ಹೊಟೇಲ್‌ನಲ್ಲಿ ತಂಗುವುದು.
ದಿನ 10: ಮುಂಜಾನೆ ಉಪಹಾರದ ನಂತರ ರುದ್ರಪ್ರಯಾಗದಿಂದ ಹೊರಟು ಹರಿದ್ವಾರಕ್ಕೆ ಪ್ರಯಾಣ. ಅಲ್ಲಿ ನಿಮಗೆ ಒಂದು ದಿನದ ಉಚಿಯ ಸಮಯ. ಹರಿದ್ವಾರದಲ್ಲಿ ರಾತ್ರಿಯ ಭೋಜನ.
ದಿನ 11: ಉಪಾಹಾರವಾದ ಬಳಿಕ ಹೋಟೆಲ್‌ನಿಂದ ಚೆಕ್‌ಔಟ್, ಅಲ್ಲಿಂದ ವಾಪಾಸ್ ಪ್ರಯಾಣ ಮಾಡುವುದು.


Click it and Unblock the Notifications