ಐಆರ್‌ಸಿಟಿಸಿ ಚಾರ್‌ಧಾಮ್ ಯಾತ್ರಾ ಪ್ಯಾಕೇಜ್ 2023: ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‌ಸಿಟಿಸಿ)ವು ಪ್ರವಾಸಿಗರು ಹಾಗೂ ತೀರ್ಥಯಾತ್ರೆ ಹೋಗುವವರಿಗೆ ಇನ್ನೊಂದು ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಚಾರ್‌ಧಾಮ್ ಯಾತ್ರಾ ಪ್ಯಾಕೇಜ್ ಹರಿದ್ವಾರ, ಗಂಗೋತ್ರಿ, ಕೇದಾರನಾಥ, ಯಮುನೋತ್ರಿ, ಬದರಿನಾಥ್ ಹಾಗೂ ಋಷಿಕೇಶ್ ಪ್ರವಾಸಿ ತಾಣವನ್ನು ಹೊಂದಿದೆ.
ಇನ್ನು ಈ ಪ್ಯಾಕೇಜ್ 11 ರಾತ್ರಿ ಹಾಗೂ 12 ಹಗಲನ್ನು ಒಳಗೊಂಡಿದ್ದು, 2023ರ ಮೇ 21ರಂದು ಪ್ರವಾಸ ಪ್ರಾರಂಭವಾಗುತ್ತದೆ.

ಐಆರ್‌ಸಿಟಿಸಿ ಚಾರ್‌ಧಾಮ್ ಯಾತ್ರೆಯು ಮುಂಬೈ ವಿಮಾನ ನಿಲ್ದಾಣದಿಂದ ಪ್ರಾರಂಭಗೊಂಡು, ಬಳಿಕ ದೆಹಲಿ-ಹರಿದ್ವಾರ-ಬಾರ್ಕೋಟ್-ಜಾಂಕಿಚಟ್ಟಿ- ಯಮುನೋತ್ರಿ - ಉತ್ತರಕಾಶಿ -ಗಂಗೋತ್ರಿ - ಗುಪ್ತಕಾಶಿ - ಸೋನಪ್ರಯಾಗ - ಕೇದಾರನಾಥ್-ಬದರಿನಾಥ್- ಹರಿದ್ವಾರ - ದೆಹಲಿ ಮೂಲಕ ಮತ್ತೆ ಮುಂಬೈಗೆ ವಾಪಾಸ್ಸಾಗಲಿದೆ.
ಐಆರ್‌ಸಿಟಿಸಿ ಚಾರ್‌ಧಾಮ್ ಯಾತ್ರಾ ಪ್ರವಾಸ ಪ್ಯಾಕೇಜ್: ನೀವು ತಿಳಿದುಕೊಳ್ಳಬೇಕಾದ ಮಾಹಿತಿ
ಅವಧಿ: 11 ರಾತ್ರಿ/12 ಹಗಲು
ಪ್ರವಾಸದ ಸ್ಥಳಗಳು: ಮುಂಬೈ-ದೆಹಲಿ-ಹರಿದ್ವಾರ-ಬಾರ್ಕೋಟ್-ಜಾಂಕಿಚಟ್ಟಿ- ಯಮುನೋತ್ರಿ - ಉತ್ತರಕಾಶಿ - ಗಂಗೋತ್ರಿ - ಗುಪ್ತಕಾಶಿ- ಸೋನಪ್ರಯಾಗ -ಕೇದಾರನಾಥ - ಬದರಿನಾಥ - ಹರಿದ್ವಾರ - ದೆಹಲಿ-ಮುಂಬೈ.
ಪ್ರಾರಂಭ: ಮುಂಬೈ
ಪ್ರಯಾಣದ ದಿನಾಂಕ: ಮೇ 21, 2023
ಪ್ಯಾಕೇಜ್ ದರವನ್ನು ಪರಿಶೀಲಿಸಿ (ಪ್ರತಿ ವ್ಯಕ್ತಿಗೆ)
ಈ ಪ್ಯಾಕೇಜ್‌ನಡಿ ಮೂವರ ಆಕ್ಯುಪೆನ್ಸಿಗೆ ಒಬ್ಬ ವ್ಯಕ್ತಿಗೆ 67,000ರೂ. ನಿಗದಿಪಡಿಸಲಾಗಿದೆ. ಆದರೆ, ಒಬ್ಬರ ಹಾಗೂ ಇಬ್ಬರ ಆಸೀನಕ್ಕೆ ಪ್ಯಾಕೇಜ್ ದರದಲ್ಲಿ ವ್ಯತ್ಯಾಸವಾಗಲಿದೆ.
ವ್ಯಕ್ತಿಗೆ ದರ ಕ್ಲಾಸ್ :- ಕಂಫರ್ಟ್
ಒಬ್ಬರ ಆಸೀನ: 91400ರೂ.
ಇಬ್ಬರ ಆಸೀನ: 69900ರೂ.
ಮೂವರ ಆಸೀನ: 67000ರೂ.
ಮಕ್ಕಳ ಜತೆಗಿನ ಬೆಡ್(5-11ವರ್ಷ): 44700ರೂ.
ಮಕ್ಕಳೇತರ ಬೆಡ್ (5-11ವರ್ಷ): 38300ರೂ.
ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?
ನಿಮಗೆ ಆಸಕ್ತಿಯಿದ್ದರೆ ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್ www.irctctourism.com ಗೆ ಭೇಟಿ ನೀಡುವ ಮೂಲಕ ಟಿಕೆಟ್ ಬುಕ್ ಮಾಡಬಹುದು. ಟೂರ್ ಪ್ಯಾಕೇಜ್‌ನ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://www.irctctourism.com/pacakage_description?packageCode=WMA59 ಗೆ ಭೇಟಿ ನೀಡಬಹುದು. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥ ಯಾತ್ರೆಯ ನೋಂದಣಿಯನ್ನು ಪ್ರಯಾಣಿಕರು ಮಾತ್ರ ಮಾಡಬಹುದು.
ಆರೋಗ್ಯ ಸಲಹೆಗಳನ್ನು ಇಲ್ಲಿ ಪರಿಶೀಲಿಸಿ
ಹಿರಿಯ ನಾಗರಿಕರು ಪ್ರವಾಸಕ್ಕೆ ಬುಕ್ಕಿಂಗ್ ಮಾಡುವ ಮೊದಲೇ ತಮ್ಮ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡಿರಬೇಕು ಹಾಗೂ ಪ್ರವಾಸದ ವೇಳೆ ಫಿಟ್‌ನೆಸ್ ಪ್ರಮಾಣ ಪತ್ರವನ್ನು ಇಟ್ಟುಕೊಂಡಿರಬೇಕು. 75 ವರ್ಷ ಮೇಲ್ಪಟ್ಟ ಪ್ರಯಾಣಿಕರು ತಮ್ಮ ಜತೆ ಸಹಾಯಕರು\ಯುವ ಕುಟುಂಬದ ಸದಸ್ಯರನ್ನು ಕರೆದುಕೊಂಡು ಬರಬೇಕು. ಹೆಚ್ಚಿನ ಮಾಹಿತಿಗೆ ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


Click it and Unblock the Notifications