ಪ್ರವಾಸ ಮಾಡುವ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ನಮ್ಮ ಅತೀ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡುತ್ತೇವೆ. ತಾಜ್‌ಮಹಲ್, ಮೈಸೂರು ಪ್ಯಾಲೇಸ್ ಮೊದಲಾದವುಗಳು ನಮ್ಮ ಲೀಸ್ಟ್‌ನಲ್ಲಿ ಇರುವಂತೆಯೇ ಧಾರ್ಮಿಕ ಸ್ಥಳಗಳು ಕೂಡಾ ಹಲವಾರು ಮಂದಿ ಪ್ರವಾಸ ಮಾಡಲು ಬಯಸುವ ಪಟ್ಟಿಯಲ್ಲಿರುವ ತಾಣದ ಹೆಸರಾಗಿದೆ. ಈ ನಡುವೆ ರೈಲ್ವೆ ಸಚಿವಾಲಯವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಹಲವಾರು ಪ್ರವಾಸಗಳನ್ನು ಯೋಜಿಸುತ್ತಿದೆ. ಈಗಾಗಲೇ ಉದಯಪುರ, ಚಾರ್‌ಧಾಮ್ ಮೊದಲಾದ ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಕಟಿಸಲಾಗಿದೆ.
ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಚಾರದ ಭಾಗವಾಗಿ ರೈಲ್ವೆ ಸಚಿವಾಲಯವು ವಿವಿಧ ಪ್ರಸಿದ್ಧ ಒಂದು ನಿರ್ದಿಷ್ಟ ಥೀಮ್ ಅನ್ನು ಇಟ್ಟುಕೊಂಡು ಭಾರತ್ ಗೌರವ್ ಪ್ರವಾಸಿ ರೈಲನ್ನು ಆರಂಭಿಸಿದೆ. ಈ ರೈಲಿನ ಮೂಲಕ ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಪ್ರಚಾರ ಮಾಡುತ್ತಿದೆ. ಈಗ ಭಾರತೀಯ ರೈಲ್ವೆಯು ಸಿಖ್ ಧರ್ಮದ ಭಕ್ತರಿಗೆ ಗೌರವ ಸೂಚಕವಾಗಿ ಗುರುಕೃಪಾ ಯಾತ್ರೆಯನ್ನು ಆರಂಭ ಮಾಡಿದೆ. ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ಇಂದಿನಿಂದ ಅಂದರೆ ಏಪ್ರಿಲ್ 5 ರಿಂದ ಈ ಪ್ರವಾಸ ಆರಂಭವಾಗಲಿದೆ.

ಗುರುಕೃಪಾ ಯಾತ್ರಾ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ
1. 11 ದಿನಗಳ 10 ರಾತ್ರಿಗಳ ಪ್ರವಾಸ ಪ್ಯಾಕೇಜ್ ಗುರು ಕೃಪಾ ಯಾತ್ರೆಯಾಗಿದ್ದು, ಇದು ಏಪ್ರಿಲ್ 5ರಿಂದ ಲಕ್ನೋದಿಂದ ಆರಂಭವಾಗಲಿದೆ. ಏಪ್ರಿಲ್ 15ರವರೆಗೆ ಇರಲಿದೆ.
2. ಈ ಪವಿತ್ರ ಪ್ರವಾಸದ ಸಮಯದಲ್ಲಿ, ಯಾತ್ರಿಕರು ಐದು ಪವಿತ್ರ ತಖ್ತ್‌ಗಳನ್ನು ಒಳಗೊಂಡಿರುವ ಸಿಖ್ ಧರ್ಮದ ಅತ್ಯಂತ ಪ್ರಮುಖವಾದ ಪೂಜ್ಯ ತಾಣಗಳಿಗೆ ಭೇಟಿ ನೀಡುವ ಅವಕಾಶವನ್ನು ಹೊಂದಿದ್ದಾರೆ.
3. ಆನಂದಪುರ ಸಾಹಿಬ್‌ನಲ್ಲಿರುವ ಶ್ರೀ ಕೇಸ್‌ಗಢ ಸಾಹಿಬ್ ಗುರುದ್ವಾರ ಮತ್ತು ವಿರಾಸತ್-ಎ-ಖಾಲ್ಸಾ, ಕಿರಾತ್‌ಪುರ್ ಸಾಹಿಬ್‌ನಲ್ಲಿರುವ ಗುರುದ್ವಾರ ಶ್ರೀ ಪಾತಾಳಪುರಿ ಸಾಹಿಬ್, ಸರ್‌ಹಿಂದ್‌ನಲ್ಲಿರುವ ಗುರುದ್ವಾರ ಶ್ರೀ ಫತೇಘರ್ ಸಾಹಿಬ್, ಶ್ರೀ ಅಕಲ್ ತಖ್ತ್ ಸಾಹಿಬ್ ಮತ್ತು ಅಮೃತಸರಳದಲ್ಲಿನ ಶ್ರೀ ಹಮರ್‌ದೀರ್ ಸಾಹಿಬ್, ಬಟಿಂಡಾದಲ್ಲಿ ಶ್ರೀ ದಮದಮ ಸಾಹಿಬ್, ನಾಂದೇಡ್‌ನಲ್ಲಿ ತಖ್ತ್ ಸಚ್‌ಖಂಡ್ ಶ್ರೀ ಹಜೂರ್ ಸಾಹಿಬ್, ಬೀದರ್‌ನಲ್ಲಿ ಗುರುದ್ವಾರ ಶ್ರೀ ಗುರುನಾನಕ್ ಜೀರಾ ಸಾಹಿಬ್ ಮತ್ತು ಪಾಟ್ನಾದಲ್ಲಿ ತಖ್ತ್ ಶ್ರೀ ಹರ್ಮಂದಿರ್ ಜಿ ಪಾಟ್ನಾ ಸಾಹಿಬ್‌ಗೆ ಭೇಟಿ ಈ ಪ್ರವಾಸ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗಿದೆ.
4. ಒಂಬತ್ತು ಸ್ಲೀಪರ್ ಕ್ಲಾಸ್ ಕೋಚ್‌ಗಳು, ಒಂದು AC-3 ಟೈರ್ ಮತ್ತು ಒಂದು AC-2 ಟೈರ್ ಕೋಚ್‌ಗಳೊಂದಿಗಿನ ರೈಲಿನಲ್ಲಿ ಪ್ರವಾಸ ಇರಲಿದೆ.
5. ಐಆರ್‌ಸಿಟಿಸಿ ಯಾತ್ರಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ಸ್ಟ್ಯಾಂಡರ್ಡ್, ಸುಪೀರಿಯರ್ ಮತ್ತು ಕಂಫರ್ಟ್ ಎಂಬ ಮೂರು ಆಯ್ಕೆಗಳು ಇದೆ. ಒಟ್ಟು 678 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ರೈಲಿನ ಪ್ರವಾಸ ಇದಾಗಿದೆ.
6. ಈ ಪ್ರವಾಸ ಪ್ಯಾಕೇಜ್‌ನಲ್ಲಿ ವಿಶೇಷ ಕೋಚ್‌ಗಳಲ್ಲಿ ಆರಾಮದಾಯಕ ರೈಲು ಪ್ರಯಾಣ, ಸಂಪೂರ್ಣ ಆನ್-ಬೋರ್ಡ್ ಮತ್ತು ಆಫ್-ಬೋರ್ಡ್ ಊಟ ಸೌಲಭ್ಯ, ಗುಣಮಟ್ಟದ ಹೋಟೆಲ್‌ಗಳಲ್ಲಿ ವಸತಿ, ರಸ್ತೆ ಪ್ರವಾಸವು ಒಳಗೊಂಡಿರುತ್ತದೆ.
7. ಲಾಂಗರ್‌ಗಳಲ್ಲಿ ಭಾಗವಹಿಸುವ ಆಯ್ಕೆಯು ಪ್ರಮುಖ ಗುರುದ್ವಾರಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಲಭ್ಯವಿರುತ್ತದೆ.
8. ಐಆರ್‌ಸಿಟಿಸಿಯು ರೈಲಿನ ಆಕ್ಯುಪೆನ್ಸಿಯನ್ನು ಗರಿಷ್ಠಗೊಳಿಸಲು ಪ್ರವಾಸಿಗರಿಗೆ ಪ್ರವಾಸವನ್ನು ಆಕರ್ಷಕವಾಗಿ ದರ ನಿಗದಿಪಡಿಸಿದೆ.
9. 11 ದಿನಗಳು, 10 ರಾತ್ರಿಗಳ ಪ್ರವಾಸ ಪ್ಯಾಕೇಜ್‌ನಲ್ಲಿ ದರವು ಪ್ರತಿ ವ್ಯಕ್ತಿಗೆ ರೂ 19,999 (ವಯಸ್ಕರಿಗೆ) ಮತ್ತು ಮಗುವಿಗೆ ರೂ 18,882 ರಿಂದ ಪ್ರಾರಂಭವಾಗುತ್ತದೆ. ಇದು ಪ್ರಮಾಣಿತ ವರ್ಗದ ಅಡಿಯಲ್ಲಿ ಬರುತ್ತದೆ ಮತ್ತು ಆಯ್ಕೆ ಮಾಡಲಾದ ವರ್ಗದ ಆಧಾರದ ಮೇಲೆ ಬೆಲೆ ಬದಲಾಗುತ್ತದೆ.
10. ಗುರುಕೃಪಾ ಯಾತ್ರೆಯೊಂದಿಗೆ, ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಹಾದಿಯಲ್ಲಿ ಈ ಆಧ್ಯಾತ್ಮಿಕ ಪ್ರಯಾಣಕ್ಕೆ ಸಿಖ್ ಧರ್ಮದ ಅನುಯಾಯಿಗಳನ್ನು ಸ್ವಾಗತಿಸಲು ಭಾರತೀಯ ರೈಲ್ವೇ ಸಿದ್ಧವಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications