ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಾಖಂಡದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ರಾಜ್ಯದಾದ್ಯಂತ ಹಲವಾರು ರಸ್ತೆಗಳು ಹಾಳಾಗಿವೆ. ಅಂತಹ ಸವಾಲುಗಳನ್ನು ಎದುರಿಸುವಾಗ, ಯಾತ್ರಿಕರು ಮಾತ್ರ ಎಂದಿಗೂ ಹಿಂಜರಿಯುವುದಿಲ್ಲ.
ಕಳೆದ ವಾರ ಎರಡು ದಿನಗಳ ಕಾಲ ದೇಗುಲ ಮುಚ್ಚಿದ್ದು ಈಗ ಮತ್ತೆ ಭಕ್ತರಿಗಾಗಿ ದೇಗುಲಗಳ ಬಾಗಿಲು ತೆರೆದಿದೆ. ಈಗಾಗಲೇ ಕೇದಾರನಾಥಕ್ಕೆ ತೀರ್ಥಯಾತ್ರೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಡೆಯುತ್ತಿರುವ ರಸ್ತೆ ನಿರ್ಮಾಣವನ್ನು ಗಮನಿಸಿದರೆ, ವಿಮಾನ ಪ್ರಯಾಣವು ಪ್ರಯಾಣಿಕರ ಮೊದಲ ಆದ್ಯತೆಯಾಗಬೇಕಾಗುತ್ತದೆ.

ಇಂಡಿಯನ್ ರೈಲ್ವೇ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾಪೋರೇಷನ್ (ಐಆರ್‌ಸಿಟಿಸಿ) ಅಧಿಕೃತ ವೆಬ್‌ಸೈಟ್ ಮಂಗಳವಾರ (ಆಗಸ್ಟ್ 22) ಮುಂಬರುವ ಸೆಪ್ಟೆಂಬರ್ ತಿಂಗಳಿಗೆ ಹೆಲಿಕಾಪ್ಟರ್ ಸೇವೆಗಳನ್ನು ಕಾಯ್ದಿರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. "ಸೆಪ್ಟೆಂಬರ್ 1, 2023 ರಿಂದ ಸೆಪ್ಟೆಂಬರ್ 30, 2023 ರವರೆಗಿನ ಪ್ರಯಾಣದ ಬುಕಿಂಗ್‌ಗಳು ಆಗಸ್ಟ್ 22, 2023 ರಂದು ಮಧ್ಯಾಹ್ನ 12 ಗಂಟೆಗೆ ತೆರೆಯಲ್ಪಡುತ್ತದೆ," ಎಂದು ಐಆರ್‌ಸಿಟಿಸಿ ಹೇಳಿದೆ.
ಈ ಬುಕಿಂಗ್ ವ್ಯವಸ್ಥೆಗೆ ನಿಮಗಿದೆ ಮಾಹಿತಿ
ಕೇದಾರನಾಥ ಯಾತ್ರೆ/ ಚಾರ್ ಧಾಮ್ ಯಾತ್ರೆಗಾಗಿ ನೋಂದಣಿ: ಬುಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಜನರು ಕೇದಾರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳಬೇಕು. ನೀವು ನೋಂದಾಯಿಸಿಕೊಳ್ಳಲು ಅಗತ್ಯವಾದ ವೈಯಕ್ತಿಕ ವಿವರಗಳು ಮತ್ತು ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
ಐಆರ್‌ಸಿಟಿಸಿ ಹೆಲಿಕಾಪ್ಟರ್ ಬುಕಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ: ಯಶಸ್ವಿ ನೋಂದಣಿಯ ನಂತರ, ಅರ್ಜಿದಾರರು ಅಧಿಕೃತ ಐಆರ್‌ಸಿಟಿಸಿ ಹೆಲಿಕಾಪ್ಟರ್ ಬುಕಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ. (https://www.heliyatra.irctc.co.in/)
ಯುನಿಕ್ ಲಾಗಿನ್ ಐಡಿ ರಚಿಸಿ: ಬುಕಿಂಗ್ ವೆಬ್‌ಸೈಟ್‌ನಲ್ಲಿ, ಅರ್ಜಿದಾರರು ಯುನಿಕ್ ಆದ ಲಾಗಿನ್ ಐಡಿಯನ್ನು ರಚಿಸಬೇಕಾಗುತ್ತದೆ. ಈ ಹಂತದಲ್ಲಿ ಬುಕಿಂಗ್ ಪ್ರಕ್ರಿಯೆಗಾಗಿ ನೀವು ವೈಯಕ್ತಿಕ ಖಾತೆಯನ್ನು ಹೊಂದುವುದು ಮುಖ್ಯವಾಗುತ್ತದೆ.
ಹೆಲಿಕಾಪ್ಟರ್ ಆಪರೇಟರ್, ದಿನಾಂಕ ಮತ್ತು ಸಮಯದ ಸ್ಲಾಟ್ ಅನ್ನು ಆಯ್ಕೆಮಾಡಿ: ಲಾಗಿನ್ ಐಡಿ ಮಾಡಿದ ಬಳಿಕ ಬಳಕೆದಾರರು ತಮ್ಮ ಆದ್ಯತೆಯ ಹೆಲಿಕಾಪ್ಟರ್ ಆಪರೇಟರ್, ಪ್ರಯಾಣದ ದಿನಾಂಕ ಮತ್ತು ಪ್ರಯಾಣಕ್ಕೆ ಸೂಕ್ತವಾದ ಸಮಯದ ಸ್ಲಾಟ್ ಅನ್ನು ಆಯ್ಕೆ ಮಾಡಿರಿ
ಪ್ರಯಾಣಿಕರ ವಿವರಗಳನ್ನು ಒದಗಿಸಿ: ಅರ್ಜಿದಾರರು ಪ್ರಯಾಣಿಸಲಿರುವ ಪ್ರಯಾಣಿಕರ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ಒದಗಿಸುವ ಅಗತ್ಯವಿದೆ. ಈ ವೇಳೆ ತಮ್ಮ ಜೊತೆಯಿರುವ ವ್ಯಕ್ತಿಗಳ ಸಂಖ್ಯೆಯನ್ನು ಕೂಡಾ ನಿರ್ದಿಷ್ಟವಾಗಿ ತಿಳಿಸಬೇಕಾಗುತ್ತದೆ.
ಒಟಿಪಿ ಬರಲಿದೆ, ಅದನ್ನು ನಮೂದಿಸಿ: ಪ್ರಯಾಣಿಕರ ವಿವರಗಳನ್ನು ಪೂರ್ಣಗೊಳಿಸಿದ ನಂತರ, ಒಟಿಪಿ ರಚನೆಯಾಗಲಿದೆ. ಅದು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರಲಿದೆ. ಒಟಿಪಿಯನ್ನು ನಮೂದಿಸಿ.
ಒಟಿಪಿ ನಮೂದಿಸಿ, ವೆರಿಫೈ ಮಾಡಿ: ಒಟಿಪಿ ಅನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿ, ವೆರಿಫೈ ಮಾಡಿಕೊಳ್ಳಿ.
ಟಿಕೆಟ್ ಮೊತ್ತವನ್ನು ಪಾವತಿ ಮಾಡಿ: ಯಶಸ್ವಿ ಒಟಿಪಿ ವೆರಿಫಿಕೇಶನ್ ಬಳಿಕ, ಬುಕಿಂಗ್ ಪ್ರಕ್ರಿಯೆಯಲ್ಲಿ ಪಾವತಿ ಮಾಡುವಂತೆ ಕೇಳಲಾಗುತ್ತದೆ. ಆಯ್ಕೆ ಮಾಡಿದ ಹೆಲಿಕಾಪ್ಟರ್ ಪ್ರಯಾಣಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ದರವನ್ನು ಪಾವತಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಕೇದಾರನಾಥ ಹೆಲಿಕಾಪ್ಟರ್ ಟಿಕೆಟ್ ಬೆಲೆಗಳು:
ಹೆಲಿಕಾಪ್ಟರ್ ಕಂಪನಿಗಳು ಒಂದೇ ದಿನದಲ್ಲಿ ಕೇದಾರನಾಥ ಧಾಮಕ್ಕೆ ಮತ್ತು ಅಲ್ಲಿಂದ ಒಂದು ರೌಂಡ್-ಟ್ರಿಪ್ ಪ್ರಯಾಣಕ್ಕೆ 5,495 ರೂಪಾಯಿಯಿಂದ 7,740 ರೂಪಾಯಿವರೆಗೆ ವಿಧಿಸುತ್ತದೆ. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ನೀತಿಗಳ ಆಧಾರದಲ್ಲಿ ಬೆಲೆಗಳು ಏರಿಳಿತ ಕಾಣುತ್ತದೆ.


Click it and Unblock the Notifications