ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭ ನಡೆದಿದ್ದು, ರಾಮ ಮಂದಿರವನ್ನು ಉದ್ಘಾಟನೆ ಮಾಡಲಾಗಿದೆ. ಈ ನಡುವೆ ಇಂಡಿಯನ್ ರೈಲ್ವೆ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾಪೋರೇಷನ್ (ಐಆರ್‌ಸಿಟಿಸಿ) ರಾಮಾಯಣ ಸಾಗ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ.
ಹೆಸರೇ ಹೇಳುವಂತೆ ಇದು ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಹೋಗುವ ಪ್ರವಾಸವಾಗಿದೆ. ಆದರೆ ಅಯೋಧ್ಯೆಯ ರಾಮಮಂದಿರಕ್ಕೆ ಪ್ರವಾಸವಲ್ಲ, ಬದಲಾಗಿ ಶ್ರೀಲಂಕಾಕ್ಕೆ ಪ್ರವಾಸವಾಗಿದೆ. ಈ ಪ್ಯಾಕೇಜ್ ಮಾರ್ಚ್ 2024ರಲ್ಲಿ ಆರಂಭವಾಗಲಿದೆ. ಮಾರ್ಚ್ 9ರಿಂದ ಮಾರ್ಚ್ 15ರವರೆಗೆ ಪ್ರವಾಸ ಇರಲಿದೆ. ಈ ಪ್ಯಾಕೇಜ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ರಾಮಾಯಣ ಸಾಗ ಪ್ರವಾಸ ಪ್ಯಾಕೇಜ್ ಅವಧಿ
ಐಆರ್‌ಸಿಟಿಸಿಯ ರಾಮಾಯಣ ಸಾಗ ಪ್ರವಾಸ ಪ್ಯಾಕೇಜ್ ಸುಮಾರು 6 ರಾತ್ರಿಗಳು ಮತ್ತು ಏಳು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ರವಾಸ ಪ್ಯಾಕೇಜ್ ಅನ್ನು ಖರೀದಿ ಮಾಡಿದ ಪ್ರವಾಸಿಗರು ಶ್ರೀಲಂಕಾದ ಕೊಲಾಂಬೋ, ಕ್ಯಾಂಡಿ, ನೆಗೊಂಬೊ ಮತ್ತು ನುವಾರಾ ಎಲಿಯಾಕ್ಕೆ ಭೇಟಿ ನೀಡಬಹುದಾಗಿದೆ.
ಪ್ಯಾಕೇಜ್ ದರದ ವಿವರ
* ಟ್ರಿಪಲ್ ಶೇರಿಂಗ್ ರೂಮ್ ಆದರೆ ಪ್ರತಿ ವ್ಯಕ್ತಿಗೆ 71000 ರೂಪಾಯಿ
* ಡಬಲ್ ಶೇರಿಂಗ್ ರೂಮ್ ಆದರೆ ಪ್ರತಿ ವ್ಯಕ್ತಿಗೆ 72200 ರೂಪಾಯಿ
* ಸಿಂಗಲ್ ಶೇರಿಂಗ್ ರೂಮ್ ಆದರೆ ಪ್ರತಿ ವ್ಯಕ್ತಿಗೆ 88800 ರೂಪಾಯಿ
ಪ್ರವಾಸ ಪ್ಯಾಕೇಜ್‌ನಲ್ಲಿ ಏನೆಲ್ಲ ಇರಲಿದೆ?
* ಐಆರ್‌ಸಿಟಿಸಿಯೇ ಹಿಂದಿರುಗುವ ವಿಮಾನಯಾನದ ಖರ್ಚು ನೀಡುತ್ತದೆ. ಅಂದರೆ ಈ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗಿರುತ್ತದೆ. (ಲಕ್ನೋ-ಕೊಲಾಂಬೊ-ಲಕ್ನೋ)
* ತ್ರಿ ಸ್ಟಾರ್ ಹೊಟೇಲ್‌ನಲ್ಲಿ ವಸತಿ ಇರಲಿದೆ. ಟ್ವಿನ್/ ಡಿಬಿಎಲ್/ ಟ್ರಿಪಲ್ ಶೇರಿಂಗ್ ಇರಲಿದೆ.
* ಪ್ರಯಾಣಿಕರಿಗೆ ಒಟ್ಟಾಗಿ ಆರು ಉಪಾಹಾರ, ಆರು ಊಟ, ಆರು ರಾತ್ರಿಯ ಊಟ ನೀಡಲಾಗುತ್ತದೆ.
* ಮೇಲೆ ತಿಳಿಸಲಾದ ಎಲ್ಲ ಪ್ರದೇಶಗಳ ಎಂಟ್ರಿ ಟಿಕೆಟ್ ದರ ಪ್ಯಾಕೇಜ್‌ನಲ್ಲಿ ಸೇರ್ಪಡೆ. ಆದರೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.
ಶೇಕಡ 5 ರಷ್ಟು ಟಿಸಿಎಸ್ ಮೊತ್ತವನ್ನು ಪ್ರವಾಸಿಗರ ಆದಾಯ ತೆರಿಗೆ ದಾಖಲೆಯಲ್ಲಿ ಸೇರಿಸಬಹುದು. ಇದರಿಂದಾಗಿ ಪ್ರವಾಸಿಗರು ಆದಾಯ ತೆರಿಗೆ ರಿಫಂಡ್ ಅನ್ನು ಪಡೆಯುವ ಅವಕಾಶವಿದೆ. 80 ವರ್ಷದವರೆಗೆ ಪ್ರವಾಸ ವಿಮೆ ನೀಡಲಾಗುತ್ತದೆ. ಪ್ರವಾಸ ಪ್ಯಾಕೇಜ್‌ನಲ್ಲೇ ಮ್ಯಾನೇಜರ್ ಸೇವೆ ಮತ್ತು ವೀಸಾ ಶುಲ್ಕ ಸೇರಿರುತ್ತದೆ.
ಭಗವಂತ ರಾಮನಿಗೆ ಸಂಬಂಧಿಸಿದ ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಅವಕಾಶ ಈ ಪ್ರವಾಸ ಪ್ಯಾಕೇಜ್‌ನಲ್ಲಿ ಲಭ್ಯವಾಗುತ್ತದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಅಶೋಕ ವಾಟಿಕಾ, ಸೀತಾ ಅಮ್ಮನ ದೇವಾಲಯ, ಹಕ್ಗಾಲ ಬೊಟಾನಿಕಲ್ ಗಾರ್ಡನ್‌ಗೆ ಭೇಟಿ ನೀಡಬಹುದಾಗಿದೆ. ಕೆಲನಿಯ ದೇವಾಲಯ, ಪಂಚಮುಗ ಆಂಜನೇಯ ದೇವಾಲಯ ಮತ್ತು ಮುನೇಶ್ವರ ದೇವಾಲಯಕ್ಕೂ ಭೇಟಿ ನೀಡಬಹುದಾಗಿದೆ.


Click it and Unblock the Notifications