ನೀವು ಇಪಿಎಫ್ ಕ್ಲೈಮ್ ಮಾಡಲು ನಿರಂತರವಾಗಿ ಅರ್ಜಿ ಸಲ್ಲಿಸುತ್ತಾ ಇದ್ದರೂ ಅರ್ಜಿ ತಿರಸ್ಕಾರವಾಗುತ್ತಿದ್ದೆಯೇ?. ಪದೇ ಪದೇ ನಿಮ್ಮ ಕ್ಲೈಮ್ ತಿರಸ್ಕಾರವಾದರೆ ನಿಮಗೆ ತಲೆ ಬಿಸಿ ಆಗುವುದಿಲ್ಲವೇ?. ಅದಕ್ಕಾಗಿ ಮೊದಲು ಸರ್ಕಾರದ ಮಾರ್ಗಸೂಚಿ ಏನಿದೆ ಎಂದು ನೋಡಿಕೊಳ್ಳಿ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ನೀವು ಸಲ್ಲಿಸುತ್ತಿರುವ ಅರ್ಜಿ ತಿರಸ್ಕಾರವಾಗುವುದಕ್ಕೆ ಸರ್ಕಾರ ಮಾರ್ಗಸೂಚಿಯನ್ನು ಬಿಗಿ ಮಾಡಿರುವುದೇ ಕಾರಣವಾಗಿರಬಹುದು. ಸಚಿವಾಲಯದ ಪ್ರಕಾರ ಉದ್ಯೋಗಿಗಳ ಇಪಿಎಫ್ ಕ್ಲೈಮ್ ನಿಯಮಬಾಹಿರವಾಗಿರುವುದರಿಂದ ತಿರಸ್ಕಾರ ಮಾಡಲಾಗುತ್ತದೆ.
ಉದ್ಯೋಗಿಗಳ ಪಿಎಫ್ ಕ್ಲೈಮ್ ಇಪಿಎಫ್‌ಒನಿಂದ ಹಲವಾರು ಬಾರಿ ತಿರಸ್ಕಾರವಾಗಿದ್ದರೆ, ಅದಕ್ಕೆ ಬೇರೆ ಬೇರೆ ಕಾರಣಗಳು ಇರುತ್ತದೆ. ಸರ್ಕಾರ ಹೇಳಿರುವ ನೀತಿಯನ್ನು ನಾವು ಪಾಲನೆ ಮಾಡಬೇಕು. ಇಲ್ಲವಾದರೆ ತಿರಸ್ಕಾರವಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.

ಕ್ಲೈಮ್ ಮೊತ್ತ ವಿಳಂಬ?
ನೀವು ಕ್ಲೈಮ್ ಮೊತ್ತವನ್ನು ಪಡೆದ ಬಳಿಕವೂ ನಿಮ್ಮ ಕ್ಲೈಮ್ ಮೊತ್ತವನ್ನು ವಿತ್‌ಡ್ರಾ ಮಾಡಿದ ಪ್ರಕ್ರಿಯೆಯಲ್ಲಿನ ಸಮಸ್ಯೆಯನ್ನು ಸರಿಪಡಿಸಲಾಗಿರುವುದಿಲ್ಲ. ಚಂದಾದಾರರು ಸರಿಯಾದ ವಿಧಾನವನ್ನು ಪಾಲಿಸಿಕೊಂಡು ಇಪಿಎಫ್ ಮೊತ್ತ ಕ್ಲೈಮ್ ಮಾಡಿಕೊಳ್ಳಬೇಕು ಎಂದು ಸರ್ಕಾರ ಹೇಳಿಕೊಂಡಿದೆ.
ಪಿಎಫ್ ಚಂದಾದಾರರು, ಇತರರಿಂದ ಹಲವಾರು ದೂರುಗಳು ಬಂದಿದೆ. ಮುಖ್ಯವಾಗಿ ದೌರ್ಜನ್ಯ, ಪಾವತಿ ವಿಳಂಬ, ನಿಗದಿತ ಸಮಯದಲ್ಲಿ ಪಿಎಫ್ ಮೊತ್ತ ಪಾವತಿ ಆಗದಿರುವುದಕ್ಕೆ ಸಂಬಂಧಿಸಿದ ದೂರುಗಳು ಅಧಿಕವಾಗಿ ಬರುತ್ತಿದೆ. ಹಾಗೆಯೇ ಅರ್ಜಿಗಳನ್ನು ಕೂಡಾ ಹಲವಾರು ಕಾರಣದಿಂದಾಗಿ ತಿರಸ್ಕಾರ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ನಾವು ಸಂಬಂಧಪಟ್ಟ ಇಲಾಖೆಗೆ ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಸೂಚನೆಯನ್ನು ನೀಡಿದ್ದೇವೆ. ಎಲ್ಲ ಕ್ಲೈಮ್ ಅನ್ನು ನಾವು ಪರಿಷ್ಕರಣೆ ಮಾಡುತ್ತೇವೆ. ಚಂದಾದಾರರು ತಾವು ಯಾಕಾಗಿ ಈ ಕ್ಲೈಮ್ ಅನ್ನು ಮಾಡುತ್ತಿದ್ದಾರೆ ಎಂದು ಕಾರಣವನ್ನು ನೀಡಬೇಕು. ಸರಿಯಾದ ಕಾರಣವನ್ನು ನೀಡಬೇಕು. ಎಲ್ಲವನ್ನು ಸರಿಯಾಗಿ ಪರಿಶೀಲನೆ ಮಾಡಿದ ಬಳಿಕವೇ ಕ್ಲೈಮ್ ಅನ್ನು ಅನುಮೋದನೆ ಮಾಡಲಾಗುತ್ತದೆ. ಕ್ಲೈಮ್ ಪ್ರಕ್ರಿಯೆಯಲ್ಲಿ ಪದೇ ಪದೇ ತಪ್ಪಾದರೆ ಕ್ಲೈಮ್ ತಿರಸ್ಕಾರ ಮಾಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications