ಕರ್ನಾಟಕ ರಾಜ್ಯ ಮುಖ್ಯಮಂತ್ರಿ, ಹಣಕಾಸು ಸಚಿವ ಬಸವರಾಜ ಬೊಮ್ಮಾಯಿ 2023-24ನೇ ಹಣಕಾಸು ವರ್ಷದ ಬಜೆಟ್ ಮಂಡನೆಯನ್ನು ಫೆಬ್ರವರಿ 17ರಂದು ಮಾಡಿದ್ದಾರೆ. ಈ ಬಜೆಟ್ ಮಂಡನೆ ವೇಳೆ ಬೇರೆ ಬೇರೆ ವಲಯಗಳಿಗೆ ಹೊಸ ಘೋಷಣೆಗಳನ್ನು ಘೋಷಣೆ ಮಾಡಿದ್ದಾರೆ. ಹಾಗೆಯೇ ಕೆಲವು ಘೋಷಣೆಗಳನ್ನು ವಿಸ್ತರಣೆ ಮಾಡಿದ್ದಾರೆ.
2023-24ನೇ ಸಾಲಿನ ಕರ್ನಾಟಕ ಬಜೆಟ್ ಒಟ್ಟು ಗಾತ್ರ 309182 ಕೋಟಿ ರೂಪಾಯಿ ಆಗಿದ್ದು ಇದು ಸರ್‌ಪ್ಲಸ್ ಬಜೆಟ್ ಆಗಿದೆ. 2022-23ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 2 ಲಕ್ಷದ 66 ಸಾವಿರ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯ ಕರ್ನಾಟಕ ಬಜೆಟ್ 3 ಲಕ್ಷ ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ನಿರೀಕ್ಷೆಯಿತ್ತು. ಕರ್ನಾಟಕ ರಾಜ್ಯದಲ್ಲಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಶೇಕಡ 26ರಷ್ಟು ಏರಿಕೆಯಾಗಿದೆ. ಹಾಗೆಯೇ ರಾಜ್ಯದಲ್ಲಿ ತೆರಿಗೆ ಸಂಗ್ರಹವು ಶೇಕಡ 20ರಷ್ಟು ಏರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರೈತರಿಗೆ, ಮೀನುಗಾರರಿಗೆ ಯೋಜನೆಗಳು, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಯೋಜನೆ, ಬೀದಿಬದಿ ವ್ಯಾಪಾರಿಗಳಿಗೆ, ಆಶಾಕಾರ್ಯಕರ್ತೆಯರಿಗೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಆಶಾಕಾರ್ಯಕರ್ತೆಯ ಗೌರವ ಧನ 1000 ರೂಪಾಯಿ ಏರಿಸುವ ಘೋಷಣೆಯನ್ನು ಹಣಕಾಸು ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ಮಾಡಿದ್ದಾರೆ. ಎಲ್ಲ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿ ಆರಂಭದ ಘೋಷಣೆಯನ್ನು ಕೂಡಾ ಮಾಡಿದ್ದಾರೆ. ಬಜೆಟ್ ಪ್ರಮುಖಾಂಶಗಳು ಇಲ್ಲಿದೆ ಮುಂದೆ ಓದಿ...
ಕರ್ನಾಟಕ ಬಜೆಟ್‌ನ ಪ್ರಮುಖಾಂಶಗಳನ್ನು ತಿಳಿಯಿರಿ
* ಕೃಷಿಗೆ ಬಂಪರ್ ನೀಡಿದ ಸಿಎಂ ಬೊಮ್ಮಾಯಿ. ರೈತರಿಗೆ 5ಲಕ್ಷ ವರೆಗೆ ಸಾಲ ಸೌಲಭ್ಯ. ಶೂನ್ಯ ದರದಲ್ಲಿ ಕೃಷಿಕರಿಗೆ ಸಾಲ ಸೌಲಭ್ಯ. ಮಹಿಳಾ ಕಾರ್ಮಿಕರಿಗೆ 500ರೂ. ಸಹಾಯಧನ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ.
* ತೀರ್ಥಹಳ್ಳಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಹತ್ತು ಕೋಟಿ ರೂಪಾಯಿ ಘೋಷಣೆ. ಹಾವೇರಿಯಲ್ಲಿ ಮೀನುಮರಿ, ಉತ್ಪಾದನಾ ಕೇಂದ್ರ ಸ್ಥಾಪನೆ.
* ರಾಜ್ಯದಲ್ಲಿ ಗೃಹಿಣಿ ಶಕ್ತಿ ಯೋಜನೆ ಜಾರಿ ಮಾಡಲಾಗುವುದು. ಗೃಹಿಣಿಯರಿಗೆ ಮಾಸಿಕ 500 ರೂಪಾಯಿ ಸಹಾಯಧನ. ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಫ್ರೀ ಬಸ್ ಪಾಸ್. 350 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ನೀಡಲು ಕ್ರಮ ವಹಿಸಲಾಗುವುದು ಎಂದು ಸಿಎಂ ಹೇಳಿಕೆ.
* ನೇಕಾರ ಸಮ್ಮಾನ್ ನಿಧಿ ಯೋಜನೆಯಡಿ ಸಹಾಯಧನ ಮೊತ್ತ ಹೆಚ್ಚಳ. ಕಳಸಾ ಬಂಡೂರಿ ಯೋಜನೆಗೆ 80 ಕೋಟಿ ರೂ. ನೀಡಿಕೆ. ನಮ್ಮ ನೆಲೆ ಹೆಸರಿನಲ್ಲಿ 10 ಸಾವಿರ ಮನೆ ಹಂಚಿಕೆಗೆ ಕ್ರಮ. ಕುಡಿಯುವ ನೀರಿನ ಯೋಜನೆಗಾಗಿ 11236 ಕೋಟಿ ರೂ. ಮೀಸಲು. ನರೇಗಾ ಯೋಜನೆಗಾಗಿ 1000 ಕೋಟಿ ರೂ.ಮೀಸಲು.
* ಅಬಕಾರಿ ಇಲಾಖೆಯಡಿ 25,000 ಕೋಟಿ ಸಂಗ್ರಹದ ಗುರಿ ಹೊಂದಿದ್ದೇವೆ. ಸಾರಿಗೆ ಇಲಾಖೆಯಿಂದ 10,500 ಕೋಟಿ ಗುರಿ ಇದೆ. 6,500 ಕೋಟಿ ರಾಜಸ್ವ ಸಂಗ್ರಹದ ಗುರಿ ಇದೆ. ನೌಕರರ ಆದಾಯದ ಮಿತಿ ಹೆಚ್ಚಳ. ವಕೀಲರಿಗೆ ಆರೋಗ್ಯ ಸೌಲಭ್ಯ ವಿಮೆ ಕಲ್ಪಿಸಲಾಗುವುದು. ವಿದ್ಯುತ್ ಚಾಲಿತ ಬಸ್ ಖರೀದಿ ಹೆಚ್ಚಳಕ್ಕೆ ಒತ್ತು.
* ರಾಜ್ಯ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪರೀಕ್ಷೆ ವ್ಯವಸ್ಥೆ. 20 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳಿಗೆ ರೀಡಿಂಗ್ ಕಾರ್ನರ್. ಟ್ರಾಫಿಕ್ ನಿರ್ವಹಣೆಗೆ ಮಾಸ್ಟರ್ ಪ್ಲಾನ್. ಬೆಂಗಳೂರು ಟ್ರಾಫಿಕ್ ಕಂಟ್ರೋಲ್ 150 ಕೋಟಿ ರೂ.
* ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ 1,000 ಕೋಟಿ ಮೀಸಲು. ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ. ಪಿಎಂ ಶ್ರೀಯೋಜನೆಯಡಿ 100 ಕೋಟಿ ರೂ. ಮೀಸಲು. 38 ಕುಡಿಯುವ ನೀರಿನ ಯೋಜನೆಗೆ ಅಗತ್ಯ ಅನುದಾನ. ರೈತರ ಸಂಪದ ಯೋಜನೆಗೆ 100 ಕೋಟಿ ರೂ. ಅನುದಾನ
* 781 ಕೋಟಿ ರೂ. ಆರೋಗ್ಯ ಕ್ಷೇತ್ರಕ್ಕೆ ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ. ಜಯದೇವ ಆಸ್ಪತ್ರೆ ಜೊತೆಗೆ 45 ಆಸ್ಪತ್ರೆಗೆ ಮ್ಯಾಪಿಂಗ್. ಸಮುದಾಯ ಕೇಂದ್ರಗಳು ಮೇಲ್ದರ್ಜೆಗೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಒತ್ತು.
* ಕುಮಟಾದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ. ಕರಾವಳಿ ಮಲೆನಾಡಿಗೆ 'ಸಹ್ಯಾದ್ರಿ ಸಿರಿ' ಯೋಜನೆ. ಬೆಂಗಳೂರು ಸೇರಿ ವಿವಿಧೆಡೆ ಕೆರೆ ತುಂಬಿಸುವ ಯೋಜನೆ. ಬೆಂಗಳೂರು ನೆರೆ ಪರಿಸ್ಥಿತಿ ನಿರ್ವಹಣೆಗೆ ಕ್ರಮ. ಬಿಬಿಎಂಪಿ 110 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ. ಮನೆ ಮನೆಗೆ ಆರೋಗ್ಯ ಕಾರ್ಯಕ್ರಮ ಜಾರಿ. ಹಾವೇರಿ ಜಿಲ್ಲೆ ಸವಣೂರಿನಲ್ಲಿ 165 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಆಸ್ಪತ್ರೆ ನಿರ್ಮಾಣ.
ವಿದ್ಯಾರ್ಥಿಗಳಿಗೆ, ಇತರೆ ಘೋಷಣೆ
* ಗ್ರಾಮ ಸಹಾಯಕರ ಹುದ್ದೆಯನ್ನು 'ಜನಸೇವಕ' ಎಂದು ಮರುನಾಮಕರಣ ಮಾಡಲಾಗಿದೆ. ಗ್ರಾಮ ಸಹಾಯಕರ ಮಾಸಿಕ ಗೌರವಧನ 13,000 ರೂ. ಗಳಿಂದ. 14,000 ರೂ. ಗೆ ಹೆಚ್ಚಳ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂ. ನಿಂದ 1500 ರೂ.ಗೆ ಏರಿಕೆ.
* ತಾಯಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ರಾಜ್ಯದ ವಿವಿಧೆಡೆ ತಾಯಿ ಮಕ್ಕಳ ಆಸ್ಪತ್ರೆ ಸ್ಥಾಪನೆ. ಅಪೌಷ್ಠಿಕತೆ ನಿವಾರಣೆಗೆ ಕ್ರಮ. ಕಿರುಧಾನ್ಯ ಬೆಳೆಗಾರರಿಗೆ 10 ಸಾವಿರ ರೂ. ಸಹಾಯಧನ.
* ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಮಕ್ಕಳ ಬಸ್ ಯೋಜನೆಗೆ ಒಟ್ಟು 100 ಕೋಟಿ ಅನುದಾನ ಘೋಷಣೆ. 50 ಕನಕದಾಸ ಶಾಲೆ ನಿರ್ಮಾಣ. 1000 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ. ಎಸ್‌ಸಿ, ಎಸ್‌ಟಿ BPL ಕಾರ್ಡ್ ಹೊಂದಿದವರಿಗೆ ಉಚಿತ ವಿದ್ಯುತ್ ವಿತರಣೆ.
* ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ. ಶೀಘ್ರವೇ 2000 ಹುದ್ದೆ ನೇಮಕಕ್ಕೆ ಕ್ರಮ. ಪೊಲೀಸ್ ಸಿಬ್ಬಂದಿ ವಾಹನ ಖರೀದಿಗೆ 50 ಕೊಟಿ ರೂ. ಅನುದಾನ. ಯುವಜನರಿಗಾಗಿ ಜಿಲ್ಲಾ ತಾಲೂಕು ಸ್ಟೇಡಿಯಂಗಳಲ್ಲಿ ಜಿಮ್ ಸ್ಥಾಪನೆ.
* ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯೂಟಿ ನೀಡಲಾಗುವುದು. ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಸಾವಿರ ರೂ. ಪ್ರೋತ್ಸಾಹ ಧನ. ಎಸ್‌ಸಿ, ಎಸ್‌ಟಿ ನಿಗಮಗಳಿಗೆ 750 ಕೋಟಿ ರೂ. ಅನುದಾನ. ಈ ವರ್ಗದವರಿಗೆ 75 ಯೂನಿಟ್ ಉಚಿತ ವಿದ್ಯುತ್.
* ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೆಟ್ರಿಕ್ ನಂತರದ 100 ವಿದ್ಯಾರ್ಥಿ ನಿಲಯ ಮೇಲ್ದರ್ಜೆಗೆ. ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶಾಲೆ ನಿರ್ಮಾಣ. ವಿದ್ಯಾರ್ಥಿಗಳ ಸಂಖ್ಯಾಬಲ 2500ಕ್ಕೆ ಹೆಚ್ಚಿಸಲಾಗುವುದು.
* 300 ಪದವೀದರ ಮಹಿಳೆಯರಿಗೆ ಐಐಎಂಬಿ ತರಬೇತಿ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 110 ಕೋಟಿ ರೂ. ಖಬರಸ್ತಾನ್ ಅಭಿವೃದ್ಧಿಗೆ 10 ಕೋಟಿ ರೂ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಂಪರ್. ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ.
* ರಾಜ್ಯದ ಮಠ-ಮಂದಿರಗಳ ಅಭಿವೃದ್ಧಿಗೆ 1000 ಕೋಟಿ ರೂಪಾಯಿ. ಕಿತ್ತೂರು ಭಾಗದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ಸ್ಥಾಪನೆ. ಬೆಂಗಳೂರಿನಲ್ಲಿ ಕನ್ನಡಮಾತೆ 'ಭುವನೇಶ್ವರಿ'ಯ ಬೃಹತ್ ಮೂರ್ತಿ ಸ್ಥಾಪನೆ. ರಾಯಚೂರಿನಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಸ್ಥಾಪನೆ. ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಹೆಚ್ಚಳಕ್ಕೆ ಕ್ರಮ.
* ಹೊಸ ಐದು ಲಕ್ಷ ಮನೆಗಳಿಗೆ 5 ಸಾವಿರ ಕೋಟಿ ರೂಪಾಯಿ ಘೋಷಣೆ. ರಾಜ್ಯದಲ್ಲಿ ಅತೀ ವೃಷ್ಠಿಯಿಂದ ಹಾಳಾದ ಮನೆಗಳ ಪುನರ್ ನಿರ್ಮಾಣ. ಮನೆಗಳ ಪುನರ್ ನಿರ್ಮಾಣಕ್ಕೆ 2627 ಕೋಟಿ ರೂಪಾಯಿ ಅನುದಾನ. ಸರ್ಕಾರಿ ಜಾಗದಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ.
ರೈಲ್ವೆ, ಇತರೆ ಘೋಷಣೆಗಳು
* ರಾಜ್ಯದಲ್ಲಿ 19 ಕಾರ್ಮಿಕ ವಿಮಾ ಆಸ್ಪತ್ರೆ ಆರಂಭ. ಗ್ರಾಮ ಪಂಚಾಯಿತಿಗೆ 60 ಲಕ್ಷ ರೂ. ವರೆಗೆ ಅನುದಾನ ಗ್ರಾಮ ಪಂಚಾಯಿತಿಗೆ 22 ಲಕ್ಷ ರೂ.ನಿಂದ 60 ಲಕ್ಷ ರೂ. ವರೆಗೆ ಅನುದಾನ ನೀಡಲು 780 ಕೋಟಿ ರೂ. ಅನುದಾನ ಮೀಸಲು. ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಅನುದಾನ ಪೂರೈಸಲಾಗುತ್ತದೆ.
* ಕರ್ನಾಟಕ ರೈಲ್ವೆ ಕಾಮಗಾರಿಗಳಿಗೆ 1537 ಕೋಟಿ ರೂಪಾಯಿ ಒದಗಿಸಲಾಗುತ್ತಿದೆ. ತುಮಕೂರು- ಶಿಕಾರಿಪುರ, ಬಾಗಲಕೋಟೆ -ಕುಡಚಿ, ಗದಗ-ವಾಡಿ ಸೇರಿದಂತೆ ವಿವಿಧೆ ರೈಲ್ವೆ ಮಾರ್ಗ ಅಭಿವೃದ್ಧಿಗೆ ಅನುದಾನ. ಕೇಂದ್ರ ಸರ್ಕಾರದಿಂದ ಕರ್ನಾಟಕದ ರೈಲ್ವೆ ವಿಭಾಗಕ್ಕೆ 7561 ಕೋಟಿ ರೂ. ನೀಡಿಕೆ.
* ಬೆಂಗಳೂರಿನಲ್ಲಿ ಈ ವರ್ಷ 40.15 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಸಿಲ್ಕ ಬೋರ್ಡ್ ಜಂಕ್ಷನ್‌ನಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವರೆಗೆ ಮೆಟ್ರೋ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
* ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನಗರೇಶ್ವರ ದೇವಸ್ಥಾನ ಪ್ರವಾಸಿ ತಾಣವಾಗಿ ಅಭಿವೃದ್ಧಿ. ಪ್ರವಾಸಿ ತಾಣಗಳಲ್ಲಿನ ಗೈಡ್‌ಗಳ ಪ್ರೋತ್ಸಾಹ ಧನ ಏರಿಕೆ. 2ಸಾವಿರ ರೂಪಾಯಿಯಿಂದ 5 ಸಾವಿರಕ್ಕೆ ಹೆಚ್ಚಳ.
* ಕರ್ನಾಟಕದ ಕಾರಾಗೃಹ ನಿರ್ಮಾಣ ಮತ್ತು ಕಾರಾಗೃಹಗಳ ಆಧುನಿಕರಣಕ್ಕೆ ಕ್ರಮ. 410 ಕೋಟಿ ರೂ. ವೆಚ್ಚದಲ್ಲಿ ಕಾರಾಗೃಹ ನಿರ್ಮಾಣ. 51 ಕೋಟಿ ರೂ. ವೆಚ್ಚದಲ್ಲಿ ಕಾರಾಗೃಹ ಆಧುನೀಕರಣ ಮಾಡಲಾಗುವುದು.
* 2023 -24ನೇ ಪ್ರಸಕ್ತ ಸಾಲಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 7500 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ. ರಾಜ್ಯ ಸಾರಿಗೆ ಇಲಾಖೆಗೆ 10,500 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿ ಮಾಡಲಾಗಿದೆ.
* ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ. ಟ್ಯಾಕ್ಸಿ, ಆಟೋ ಚಾಲಕರು ಮತ್ತು ಇ ಕಾಮರ್ಸ್ ಡೆಲಿವರಿ ಸೇವೆ ನೀಡುತ್ತಿರುವವರ ಕುಟುಂಬಕ್ಕೆ ಭದ್ರತೆ. ಇವರು ಮೃತಪಟ್ಟಿಲ್ಲಿ ಅವರ ಕುಟುಂಬಕ್ಕೆ 2ಲಕ್ಷ ರೂ.ಗಳ ವಿಮಾ ಯೋಜನೆ. ಅಪಘಾತದಿಂದ ಇವರು ಮೃತಪಟ್ಟರೆ 4 ಲಕ್ಷ ರೂ. ವಿಮಾ ಸೌಲಭ್ಯ ಒದಗಿಸಲು 'ಮುಖ್ಯಮಂತ್ರಿ ವಿಮಾ ಯೋಜನೆ' ರೂಪಿಸಲಾಗುವುದು.
* ಗ್ರಾಮೀಣ ಯುಕವರ ಸ್ವಯಂ ಉದ್ಯೋಗ ಪ್ರೋತ್ಸಾಹಿಸಲು ಸಹಾಯ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಯುವಕರ ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ ಹತ್ತು ಸಾವಿರ ರೂ.ನಂತೆ ವಿವಿಧ ಚಟುವಟಿಕೆಗೆ 5 ಲಕ್ಷ ವರೆಗೆ ಸಹಾಯಧನ. 'ಬದುಕುವ ದಾರಿ' ಹೊಸ ಯೋಜನೆ ಜಾರಿ. ವಿದ್ಯಾಭ್ಯಾಸ ಮುಂದುವರಿಸಲು ಇಚ್ಛಿಸುವ ಯುವಕರಿಗೆ ಪ್ರೋತ್ಸಾಹ. ಐಟಿಐ ತರಬೇತಿಗಾಗಿ 1500ರೂ. ಶಿಷ್ಯ ವೇತನ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications