ನಾವು ವರ್ಷದ ಕೊನೆಯಲ್ಲಿ ಆಗಲಿ ಅಥವಾ ಇತರೆ ಸೀಸನ್ ಆಗಲಿ ನಾವು ಪ್ರವಾಸ ಎಂದಾಗ ಗೋವಾ, ಪಾಲಕ್ಕಾಡ್ ಎಂಬ ಆಯ್ಕೆಗಳನ್ನು ಮಾಡುತ್ತೇವೆ. ಆದರೆ ನಮ್ಮ ಕರ್ನಾಟಕದ ಕರಾವಳಿ ಭಾಗದಲ್ಲಿಯೇ ಬೀಚ್‌ಗಳು, ಉತ್ತಮ ಪ್ರವಾಸಿ ತಾಣಗಳು, ದೇವಾಲಯಗಳು ಇದೆ ಎಂಬುವುದು ನಿಮಗೆ ತಿಳಿದಿದೆಯೇ?
ಉಡುಪಿ, ಮಂಗಳೂರು, ಕಾರಾವಾರ ಮೀನಿನ ಊಟಕ್ಕೆ ಮಾತ್ರವಲ್ಲ ಸುಂದರವಾದ ಸ್ಥಳಗಳಿಗೂ ಭಾರತದಲ್ಲಿ ಫೇಮಸ್ ಆಗಿದೆ. ಮಂಗಳೂರಿನ ಐಡಿಯಲ್ ಐಸ್‌ಕ್ರೀಮ್‌ನಿಂದ ಹಿಡಿದು ಕಾಪು ಬೀಚ್‌ನ ಸುಂದರ ದೃಶ್ಯ, ಮಚಿಲಿ ಹೊಟೇಲ್‌ನ ಮೀನಿನ ಸ್ವಾದ. ಅಬ್ಬಾ! ಹೇಳುವುದೇನು? ನೀವೇ ಪ್ರವಾಸ ಹೋಗಿ ನೋಡಿ.

ವೈವಿಧ್ಯಮಯ ಮಂಗಳೂರು
ಮಂಗಳೂರು ವೈವಿಧ್ಯಮಯವಾದ ಸ್ಥಳವಾಗಿದೆ. ಬೀಚ್‌ಗಳಿರುವ, ಬಿಸಿ ತಾಪವಿರುವ, ಹಲವಾರು ಇತಿಹಾಸಗಳಿಗೆ ಸಾಕ್ಷಿಯಾದ ಸ್ಥಳ ಇದಾಗಿದೆ. ಭಾರತದ ಅತೀ ಹಳೆಯ ದೇವಾಲಯಗಳಲ್ಲಿ ಒಂದಾಗ ಮಂಗಳಾದೇವಿ ದೇವಾಲಯ ಮಂಗಳೂರಿನಲ್ಲಿದೆ. ಮಂಗಳೂರಿನ ದಸರಾ ಎಂದರೆ ಮೈಸೂರು ದಸರಾದ ನಂತರದ ಸ್ಥಾನದಲ್ಲಿ ಬರುತ್ತದೆ. ಹಾಗೆಯೇ ಕದ್ರಿ ಮಂಜುನಾಥ ದೇವಾಲಯವು ಮಂಗಳೂರಿನಲ್ಲಿ ಪ್ರಸಿದ್ಧವಾಗಿದೆ.
ಇನ್ನು ಪಣಂಬೂರು ಬೀಚ್, ಮಂಗಳೂರು ಪೋರ್ಟ್, ಮೊದಲಾದವುಗಳಿದೆ. ಇನ್ನು ಉಡುಪಿಯಲ್ಲಿ ಹಲವಾರು ದೇವಾಲಯ, ಮಠಗಳಿದೆ. ಕಾರ್‌ಸ್ಟ್ರೀಟ್ ರೋಡ್‌ನಲ್ಲಿ ದೇವಾಲಯಗಳು ಹಲವಾರಿದೆ. ಕನಕನ ಕಿಂಡಿಯನ್ನು ನಾವು ಉಡುಪಿಯಲ್ಲಿ ನೋಡಬಹುದು, ಸೆಂಟ್ ಮೇರಿಸ್ ಐಲ್ಯಾಂಡ್ ಅನ್ನು ನೋಡಬಹುದು.
ಮುರುಡೇಶ್ವರದಲ್ಲಿ ಸ್ಕೂಬಾ ಡೈವ್ ಮಾಡಿ
ಮುರುಡೇಶ್ವರದಲ್ಲಿ ನಾವು ಸ್ಕೂಬಾ ಡೈವ್ ಕೂಡಾ ಮಾಡಬಹುದು. ಸುಂದರವಾದ ದೇವಾಲಯ ಮತ್ತು ಪ್ರಶಾಂತವಾದ ಬೀಚ್ ಮುರುಡೇಶ್ವರ ಬೀಚ್‌ನಲ್ಲಿದೆ. ನೀರಿನಲ್ಲಿ ಇಳಿದು ಆಡಲು ಬಯಸುವವರಿಗೆ ಉತ್ತಮ ಆಯ್ಕೆ ಇದಾಗಿದೆ. ಅತೀ ದೊಡ್ಡದಾದ ಶಿವನ ಮೂರ್ತಿಯನ್ನು ನಾವು ಮುರುಡೇಶ್ವರದಲ್ಲಿ ನೋಡಬಹುದು.
ಕರ್ನಾಟಕದ ಗೋವಾ
ನಾವು ಗೋಕರ್ಣಕ್ಕೆ ಹೋದರೆ ಅದನ್ನು ನೋಡಿದಾಗಲೇ ಕರ್ನಾಟಕದ ಗೋವಾ ಎಂದು ಅಡಿಯಿಲ್ಲದೆ ಕರೆಯಬಹುದು. ಅಂತಹ ಬೀಚ್ ಮತ್ತು ವಾತಾವರಣವನ್ನು ಗೋಕರ್ಣ ಹೊಂದಿದೆ. ಹಾಗೆಯೇ ಪ್ರವಾಸಿಗರ ತಾಣ ಇದಾಗಿದೆ. ಓಂ, ಕುಡ್ಲೆ ಮೊದಲಾದ ಬೀಚ್‌ಗಳು ಇಲ್ಲಿದೆ.
ನೀವು ನೋಡಲೇಬೇಕಾದ ಸ್ಥಳಗಳು
ಮಂಗಳೂರು: ಮಂಗಳೂರಿನಲ್ಲಿ ಹಲವಾರು ದೇವಾಲಯಗಳು ಮತ್ತು ಚರ್ಚ್‌ಗಳಿದೆ. ಮಂಗಳಾದೇವಿ ದೇವಾಲಯ, ಕದ್ರಿ ಮಂಜುನಾಥ ದೇವಾಲಯ, ಮಿಲಾಗ್ರಿಸ್ ಚರ್ಚ್, ಉಳ್ಳಾಲ ದರ್ಗಾ ಪ್ರಮುಖ ದೇಗುಲಗಳಾಗಿದೆ. ಪಣಂಬೂರು, ತಣ್ಣೀರುಬಾವಿ, ಉಳ್ಳಾಲ ಬೀಚ್, ಸುರತ್ಕಲ್ ಬೀಚ್ ಪ್ರಮುಖ ಬೀಚ್‌ಗಳಾಗಿದೆ. ಮಂಗಳೂರಿಗೆ ನೀವು ಹೋದರ ಪ್ರಸಿದ್ಧ ಗಡ್‌ಬಡ್ ಐಸ್ ಕ್ರೀಮ್ ಅನ್ನು ಮಿಸ್ ಮಾಡಲೇಬಾರದು.
ಉಡುಪಿ: ದೇವಾಲಯಗಳ ನಾಡದ ಉಡುಪಿಯು ಒಂದು ಸಾಂಸ್ಕೃತಿಕ ತಾಣವಾಗಿದೆ. ನೀವು ಕೃಷ್ಣನ ದೇಗುಲ ಸೇರಿದಂತೆ ಚಂದ್ರಮೌಳೇಶ್ವರ ಮತ್ತು ಅನಂತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಐವತ್ತು ವರ್ಷ ಹಳೆಯ ಮಿತ್ರಾ ಸಮಾಜದಲ್ಲಿ ನೀವು ಉಡುಪಿಯ ಊಟ ಸವಿಯಬಹುದು. ಕಾಪು ಮತ್ತು ಮಲ್ಪೆ ಬೀಚ್ ಇಲ್ಲಿನ ಫೇಮಸ್ ತಾಣಗಳು. ಹಾಗೆಯೇ ಸೆಂಟ್ ಮೇರಿಸ್ ಐಸ್‌ಲ್ಯಾಂಡ್ ಇಲ್ಲಿದೆ.
ಮರವಂತೆ: ಕಂಚುಗೋಡಿನ ಬೀಚ್ ಹಾಗೂ ಮೀನುಗಾರಿಕೆ ಪ್ರದೇಶವೇ ಮರವಂತೆ ಆಗಿದೆ. ಕುಂದಾಪುರದಲ್ಲಿ ಈ ಬೀಚ್ ಮಾತ್ರವಲ್ಲದೆ ಹಲವಾರು ಐತಿಹಾಸಿಕ ದೇವಾಲಯಗಳಿದೆ. ಆನೆಗುಂಡಿ ಶ್ರೀ ವಿನಾಯಕ ದೇವಾಲಯ ಮತ್ತು ಮೂಕಾಂಬಿಕ ದೇವಿ ದೇವಾಲಯವು ಇಲ್ಲಿದೆ.
ಮರುಡೇಶ್ವರ: ಮುರುಡೇಶ್ವರ ನೀವು ಭೇಟಿ ನೀಡಲೇಬೇಕಾದ ದೇವಾಲಯವಾಗಿದೆ. ಶಿನ ದೇವಾಲಯ ಇದಾಗಿದ್ದು, ಅತೀ ದೊಡ್ಡದಾದ ಶಿವ ಮೂರ್ತಿಯಿದೆ. ಹಾಗೆಯೇ ಬೀಚ್ ಕೂಡಾ ಇದೆ.
ಗೋಕರ್ಣ: ಈ ಮೇಲೆ ಹೇಳಿದಂತೆ ಕರ್ನಾಟಕದ ಗೋವಾ ಗೋಕರ್ಣವಾಗಿದೆ. ಇದು ಬೀಚ್ ಮತ್ತು ರೆಸಾರ್ಟ್‌ಗಳಿಗೆ ಫೇಮಸ್ ಆಗಿದೆ. ನಗರದಲ್ಲಿ ಮಹಬಲೇಶ್ವರ ದೇವಾಲಯವಿದೆ. ಮಹಾಗಣಪತಿ ದೇವಾಲಯವು ಕೂಡಾ ಇಲ್ಲಿದೆ.


Click it and Unblock the Notifications