ಕರ್ನಾಟಕದಲ್ಲಿ ಕೆಲವು ನಗರಗಳಲ್ಲಿ ಮಳೆಯಿದ್ದರೆ, ಕೆಲವು ನಗರಗಳಲ್ಲಿ ಚಳಿಯಿದೆ. ಇನ್ನು ಕೆಲವು ನಗರಗಳಲ್ಲಿ ಅಧಿಕ ತಾಪಮಾನವಿದ್ದರೆ, ಕೆಲವೆಡೆ ಬರ ಉಂಟಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ರೈತರಿಗೆ ಬರ ಪರಿಹಾರವನ್ನು ನೀಡಬೇಕು ಎಂಬ ಆಗ್ರಹ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಹೆಜ್ಜೆ ಮುಂದಿರಿಸಿದೆ.
ಬರ ಪರಿಹಾರ ಘೋಷಣೆ ಮಾಡುವಂತೆ ನಾನಾ ಕಡೆಯಿಂದ ಒತ್ತಡ ಹೇರಲಾಗಿದೆ. ಈ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದಿಂದ ಸರಕಾರದಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿರುವಾಗಲೇ ಪ್ರತಿ ರೈತನಿಗೆ 2000 ರೂಪಾಯಿವರೆಗೆ ನೆರವು ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ. ಡಿಸೆಂಬರ್ 5 ರಂದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಈ ಘೋಷಣೆ ಮಾಡಲಾಗಿದೆ.

ಎನ್‌ಡಿಆರ್‌ಎಫ್ ಫಂಡ್‌ಗಾಗಿ ಕರ್ನಾಟಕದ ಮನವಿಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸರ್ಕಾರ ಈಗ ಏನು ಮಾಡುವುದು ಎಂದು ನಿರ್ಧಾರ ಮಾಡಲಿದೆ. ಸದ್ಯಕ್ಕೆ ಅರ್ಹ ರೈತರಿಗೆ ಬರ ಪರಿಹಾರವಾಗಿ ತಲಾ ಎರಡು ಸಾವಿರ ರೂಪಾಯಿಯನ್ನು ನೀಡಲಾಗುತ್ತದೆ ಎಂದು ಸಿಎಂ ಹೇಳಿದರು.
ಮೊದಲ ಕಂತಾಗಿ ಸರಕಾರ ಪ್ರತಿ ರೈತರಿಗೆ 2 ಸಾವಿರ ರೂಪಾಯಿಯನ್ನು ನೀಡಲಿದೆ. ಉಳಿದ ಹಣವನ್ನು ಕೇಂದ್ರದಿಂದ ಬಿಡುಗಡೆ ಮಾಡಿದ ನಂತರ ರೈತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಇದೇ ಸಂದರ್ಭದಲ್ಲಿ ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಗೆ ಎರಡು ತಿಂಗಳು ಕಳೆದರೂ ಸ್ಪಂದಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಅರ್ಹರೇ?, ಹೀಗೆ ಚೆಕ್ ಮಾಡಿ
ರಾಜ್ಯದಲ್ಲಿ ಸುಮಾರು 220 ಕ್ಕೂ ಅಧಿಕ ತಾಲೂಕುಗಳು ಬರಪೀಡಿತವಾಗಿದೆ ಎಂದು ಸರ್ಕಾರವು ಘೋಷಣೆ ಮಾಡಿದೆ. ಬರ ಪರಿಹಾರ ನೀಡಲು ಕೇಂದ್ರದ ಅಧ್ಯಯನ ತಂಡ ಬಂದು ಹೋಗಿದೆ. ಆದರೆ ಇನ್ನು ಕೂಡಾ ಪರಿಹಾರ ನೀಡಲಾಗಿಲ್ಲ. ಈಗ ಕರ್ನಾಟಕ ಸರ್ಕಾರವೇ ಅರ್ಹ ರೈತರಿಗೆ ಬರ ಪರಿಹಾರವನ್ನು ನೀಡಲು ಮುಂದಾಗಿದೆ.
ಹಂತ 1: ಮೊದಲಿಗೆ ನೀವು https://parihara.karnataka.gov.in/service87/ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ನಂತರ ನಿಮಗೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ವರ್ಷ, ಸೀಸನ್, calamity type ಎಂದು ಕಾಣಿಸಲಿದೆ. ಅಲ್ಲಿ ಆಯ್ಕೆಯನ್ನು ಮಾಡಿಕೊಳ್ಳಿ.
ಹಂತ 3: ಸೀಸನ್‌ನಲ್ಲಿ ಖಾರಿಫ್ ಮತ್ತು calamity type ನಲ್ಲಿ Flood ಆಯ್ಕೆ ಮಾಡಿ. ಅದಾದ ಬಳಿಕ Get report ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರದ ಪುಟದಲ್ಲಿ ಯಾವೆಲ್ಲ ರೈತರಿಗೆ ಬರ ಪರಿಹಾರದ ಮೊತ್ತ ಲಭ್ಯವಾಗಲಿದೆ ಎಂಬ ಮಾಹಿತಿ ಸಿಗಲಿದೆ.
ಹಣ ಜಮೆಯಾಗಿದೆಯಾ?, ಹೀಗೆ ಚೆಕ್ ಮಾಡಿ
ಹಂತ 1: ಮೊದಲು https://landrecords.karnataka.gov.in/PariharaPayment/ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 2: ಆಧಾರ್ ಸಂಖ್ಯೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ calamity type drough ಎಂದು ಆಯ್ಕೆ ಮಾಡಿ, ವರ್ಷ 2022-23 ಎಂದು ಆಯ್ಕೆ ಮಾಡಿ
ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಭರ್ತಿ ಮಾಡಿ. ವಿವರಗಳನ್ನು ಪಡೆಯಲು ಎಂಬ ಆಯ್ಕೆ ಕ್ಲಿಕ್ ಮಾಡಿದರೆ ಬರ ಪರಿಹಾರದ ಸ್ಟೇಟಸ್ ಲಭ್ಯವಾಗಲಿದೆ.
ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರವು ಎನ್‌ಡಿಆರ್‌ಎಫ್ ನಿಧಿಯಡಿ ಬರ ಪರಿಹಾರಕ್ಕಾಗಿ 4,663 ಕೋಟಿ ರೂಪಾಯಿಗಳನ್ನು ಕೋರಿ ಕೇಂದ್ರಕ್ಕೆ ಮೆಮೊರಾಂಡಮ್ ಕಳುಹಿಸಿದೆ. ರಾಜ್ಯದಲ್ಲಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಈ ನಡುವೆ ರಾಜ್ಯ ಸರ್ಕಾರವು ಮಧ್ಯಾವಧಿ ಬೆಳೆ ನಷ್ಟ ಮತ್ತು ಬಿತ್ತನೆ ವೈಫಲ್ಯಕ್ಕೆ 6.5 ಲಕ್ಷ ರೈತರಿಗೆ 460 ಕೋಟಿ ರೂಪಾಯಿಗಳನ್ನು ಪಿಡಿ ಖಾತೆಯಲ್ಲಿ ಲಭ್ಯವಿರುವ 780 ಕೋಟಿ ರೂಪಾಯಿಗಳಿಂದ ಬಿಡುಗಡೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.


Click it and Unblock the Notifications