ಕರ್ನಾಟಕದಲ್ಲಿ ಮಹಿಳೆಯರಿಗೆ ಹಾಗೂ ರೈತರಿಗಾಗಿ ಹಲವಾರು ಯೋಜನೆಗಳು ಇರುವಂತೆಯೇ ಜನರು ಸ್ವ ಉದ್ಯೋಗವನ್ನು ಮಾಡಲು ಸಹಾಯವಾಗುವ ಯೋಜನೆ ಕೂಡಾ ಇದೆ. ಆ ಪೈಕಿ ಸ್ವ ಉದ್ಯೋಗ ಯೋಜನೆ ಕೂಡಾ ಒಂದಾಗಿದೆ. ಕರ್ನಾಟಕ ಸ್ವ ಉದ್ಯೋಗ ಯೋಜನೆಯು ಕರ್ನಾಟಕ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಯಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಈ ಯೋಜನೆಯ ನಿರ್ವಹಣೆಯನ್ನು ಮಾಡುತ್ತದೆ.
ತಮ್ಮದೇ ಆದ ಉದ್ಯೋಗವನ್ನು ಸೃಷ್ಟಿ ಮಾಡಲು ಬಯಸುವ ಕರ್ನಾಟಕದ ಜನರಿಗೆ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ. ರಾಜ್ಯದಲ್ಲಿ ನಿರುದ್ಯೋಗ ದರವನ್ನು ಕಡಿಮೆ ಮಾಡುವುದು ಮತ್ತು ಸ್ವ ಉದ್ಯೋಗ ಸೃಷ್ಟಿ ಮಾಡಲು ಈ ಯೋಜನೆಯು ಉತ್ತೇಜನವನ್ನು ನೀಡುತ್ತದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ರಾಷ್ಟ್ರೀಕೃತ/ ಬ್ಯಾಂಕ್‌ಗಳು ಈ ಯೋಜನೆಯಡಿಯಲ್ಲಿ ಫಲಾನುಭವಿಗೆ ಸಾಲವನ್ನು ನೀಡುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವುದು ಅಥವಾ ಅಭಿವೃದ್ಧಿಪಡಿಸುವುದು, ಸಣ್ಣ ಪ್ರಮಾಣದ ಕೈಗಾರಿಕೆಗಳು, ಸೇವಾ ವಲಯ, ಕೃಷಿ ಆಧಾರಿತ ಚಟುವಟಿಕೆಗಳು, ಯಾವುದೇ ಇತರ ಸ್ವ ಉದ್ಯೋಗ ಸೃಷ್ಟಿ ಚಟುವಟಿಕೆಗಾಗಿ ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆಯಬಹುದು. ಅರ್ಹ ಫಲಾನುಭವಿಗಳು ಕರ್ನಾಟಕ ಆನ್‌ಲೈನ್ ಅಪ್ಲಿಕೇಶನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಹತೆ ಏನು ತಿಳಿಯಿರಿ
* ಕರ್ನಾಟಕದ ನಿವಾಸಿಗಳು ಆಗಿರಬೇಕು.
* ಅರ್ಜಿಯ ವಯಸ್ಸು 18 ವರ್ಷದಿಂದ 55 ವರ್ಷಗಳವರೆಗೆ ಇರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಹೀಗಿರಬೇಕು:-
* ಗ್ರಾಮೀಣ ಪ್ರದೇಶದಲ್ಲಿ 81,000 ರೂಪಾಯಿ ಆಗಿರಬೇಕು.
* ನಗರ ಪ್ರದೇಶದಲ್ಲಿ 1,03,000 ರೂಪಾಯಿ ಆಗಿರಬೇಕು.
ಅರ್ಜಿದಾರರು ಈ ಕೆಳಗಿನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು:-
* ಮುಸ್ಲಿಮರು.
* ಸಿಖ್ಖರು.
* ಪಾರ್ಸಿಗಳು.
* ಜೈನರು.
* ಕ್ರಿಶ್ಚಿಯನ್ನರು.
* ಬೌದ್ಧಧರ್ಮ.
ಪ್ರಯೋಜನಗಳು ಏನಿದೆ ನೋಡಿ
* ಯೋಜನಾ ವೆಚ್ಚದಲ್ಲಿ ಕನಿಷ್ಠ ಶೇಕಡ 33ರಷ್ಟು ಸಬ್ಸಿಡಿ
* ಯೋಜನೆಯ ವೆಚ್ಚದ ಮೇಲೆ ಗರಿಷ್ಠ 1,00,000 ರೂಪಾಯಿ ಸಬ್ಸಿಡಿ
ಬೇಕಾದ ದಾಖಲೆಗಳು ಯಾವುದು?
* ಕರ್ನಾಟಕದ ನಿವಾಸ ಪುರಾವೆ.
* ಜಾತಿ ಪ್ರಮಾಣ ಪತ್ರ.
* ಆದಾಯ ಪ್ರಮಾಣಪತ್ರ.
* ಆಧಾರ್ ಕಾರ್ಡ್.
* ಯೋಜನಾ ವರದಿ.
* ಪಾಸ್‌ಪೋರ್ಟ್ ಗಾತ್ರದ ಫೋಟೋ.
ಹೇಗೆ ಅರ್ಜಿ ಸಲ್ಲಿಸುವುದು?
ಹಂತ 1: ಅರ್ಹ ಫಲಾನುಭವಿಗಳು ಕರ್ನಾಟಕ ಆನ್‌ಲೈನ್ ಅಪ್ಲಿಕೇಶನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಲಾಗಿನ್ ಮಾಡಲು ಒಟಿಪಿ ಅನ್ನು ಪರಿಶೀಲಿಸಿ.
ಹಂತ 3: ಪೋರ್ಟಲ್‌ನಲ್ಲಿ ವೈಯಕ್ತಿಕ ವಿವರಗಳು, ಸಂಪರ್ಕ ವಿವರಗಳು, ಯೋಜನೆಯ ವಿವರಗಳನ್ನು ಭರ್ತಿ ಮಾಡಿ
ಹಂತ 4: ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ 5: ಒಮ್ಮೆ ನೀವು submit ಬಟನ್ ಅನ್ನು ಕ್ಲಿಕ್ ಮಾಡಿದರೆ, ಅರ್ಜಿ ಸಲ್ಲಿಕೆಯಾಗುತ್ತದೆ.
ಹಂತ 6: ಅರ್ಜಿ ನಮೂನೆ ಮತ್ತು ಎಲ್ಲಾ ದಾಖಲೆಗಳನ್ನು ಪರಿಗಣನೆಗಾಗಿ ಆಯ್ಕೆ ಸಮಿತಿಗೆ ಕಳುಹಿಸಲಾಗುತ್ತದೆ.


Click it and Unblock the Notifications