ಕರ್ನಾಟಕ ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಹೊಂದಿದೆ. ಈ ಪೈಕಿ ಹಲವು ಯೋಜನೆಗಳು ಮಹಿಳೆಯರಿಗೆ ಸಹಾಯಕವಾದ ಯೋಜನೆಯಾಗಿದೆ. ಆ ಪೈಕಿ ತಾಯಿ ಭಾಗ್ಯ ಯೋಜನೆ ಕೂಡಾ ಒಂದಾಗಿದೆ. 2009ರಲ್ಲಿ ಈ ಯೋಜನೆ ಆರಂಭವಾಗಿದೆ. ಗರ್ಭಿಣಿ ಮಹಿಳೆ ಮತ್ತು ಹಾಲುಣಿಸುವ ತಾಯಿಗಾಗಿ ಈ ಯೋಜನೆಯಾಗಿದೆ. ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯಡಿಯಲ್ಲಿ ಗರ್ಭಿಣಿಯಾದಾಗಿನಿಂತ ಮಗು ಹೆತ್ತು ಕೆಲವು ಸಮಯದವರೆಗೂ ಸರ್ಕಾರವು ಉಚಿತ ಚಿಕಿತ್ಸೆ ಸೌಲಭ್ಯವನ್ನು ಒದಗಿಸುತ್ತದೆ. ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ನಿಗದಿತ ಖಾಸಗಿ ಮೆಡಿಕಲ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು, ಪ್ರಯೋಜನ ಏನಿದೆ, ಹೇಗೆ ಅರ್ಜಿ ಸಲ್ಲಿಸುವುದು, ಬೇಕಾದ ದಾಖಲೆಗಳ ಬಗ್ಗೆ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ, ಮುಂದೆ ಓದಿ....

ಯೋಜನೆ ಬಗ್ಗೆ ಪ್ರಮುಖ ಮಾಹಿತಿ
ಈ ಯೋಜನೆಯು ಪ್ರಮುಖವಾಗಿ ಬಡ ಮಹಿಳೆಯರಿಗೆ ಸಹಾಯ ಮಾಡಲಿದೆ. ಬಡ ವರ್ಗದ ಮಹಿಳೆಯರು ಉಚಿತವಾಗಿ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸಹಾಯ ಮಾಡಲಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾದರೂ ಕೂಡಾ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತ ಚಿಕಿತ್ಸೆ ಇರುತ್ತದೆ. ಆದ್ದರಿಂದ ನೀವು ಅಡ್ಮಿಟ್ ಆಗಲು ಬಯಸುವ ಆಸ್ಪತ್ರೆಯಲ್ಲಿ ತಾಯಿ ಭಾಗ್ಯ ಇದೆಯೇ ಎಂದು ನೋಡಿಕೊಳ್ಳಬೇಕಾಗುತ್ತದೆ.
ಈ ಯೋಜನೆಯಲ್ಲಿ ದಾಖಲಾತಿಯಿಂದ ಹಿಡಿದು ಡಿಸ್‌ಚಾರ್ಜ್‌ವರೆಗೂ ಎಲ್ಲ ಚಿಕಿತ್ಸೆಯು ಉಚಿತವಾಗಿರುತ್ತದೆ. ಮೊದಲ ಎರಡು ಮಕ್ಕಳ ಹೆರಿಗೆ ವೇಳೆ ಮಾತ್ರ ಈ ಯೋಜನೆ ಪ್ರಯೋಜನ ಲಭ್ಯವಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರವು ಪ್ರತಿ ಡೆಲಿವರಿಗೆ 3000 ರೂಪಾಯಿ ಪಾವತಿಸುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ಡೆಲಿವರಿಗೆ 1500 ರೂಪಾಯಿ ಸರ್ಕಾರ ಪಾವತಿಸುತ್ತದೆ. ಎಲ್ಲ ರೀತಿಯ ಡೆಲಿವರಿಯೂ ಇದರಲ್ಲಿ ಒಳಗೊಳ್ಳುತ್ತದೆ.
ಈ ಪ್ರಯೋಜನದ ಅರ್ಹತೆ ಯಾರಿಗೆ?
* ಕರ್ನಾಟಕದ ನಿವಾಸಿಗಳು
* ಗರ್ಭಿಣಿ ಹೆಂಗಸು ಅಥವಾ ಮಗುವಿಗೆ ಹಾಲುಣಿಸುತ್ತಿರುವ ತಾಯಿ
* ಬಿಪಿಎಲ್ ಪಡಿತರ ಹೊಂದಿರುವ ಗರ್ಭಿಣಿ ಮಹಿಳೆಯರು
* ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದವರು
ಯೋಜನೆಯ ಪ್ರಯೋಜನಗಳು ಏನಿದೆ?
* ಗರ್ಭಿಣಿ ಮಹಿಳೆಯರಿಗೆ ನಿಗದಿತ ಖಾಸಗಿ ಮತ್ತು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ ಪಡೆಯುವ ಅವಕಾಶ
* ಗರ್ಭಿಣಿಯಾದ ಮತ್ತು ಹೆರಿಗೆಯಾದ ಬಳಿಕ ಉಚಿತ ಚಿಕಿತ್ಸೆ
* ಗರ್ಭಿಣಿಯರಿಗೆ ಉಚಿತ ಸಾರಿಗೆ ಸೌಲಭ್ಯ.
* ತಪಾಸಣೆ ಮತ್ತು ಔಷಧಿಗಳ ವೆಚ್ಚ ಉಚಿತ
ಬೇಕಾದ ದಾಖಲೆಗಳು ಯಾವುದು?
* ಕರ್ನಾಟಕದ ನಿವಾಸಿಗಳು ಎಂದು ಖಚಿತಪಡಿಸುವ ದಾಖಲೆ
* ಬಿಪಿಎಲ್ ಕಾರ್ಡ್ ಅಥವಾ ರೇಷನ್ ಕಾರ್ಡ್
* ಜಾತಿ ಪ್ರಮಾಣಪತ್ರ
* ಆಧಾರ್ ಕಾರ್ಡ್
* ಎಎನ್‌ಸಿ ರಿಜಿಸ್ಟ್ರೇಷನ್ ನಂಬರ್
* ಮೊಬೈಲ್ ನಂಬರ್
ತಾಯಿ ಭಾಗ್ಯಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
* ಆಶಾ ಕಾರ್ಯಕರ್ತರು ಅಥವಾ ಕಿರಿಯ ಮಹಿಳಾ ಆರೋಗ್ಯಾಧಿಕಾರಿಯ ಮೂಲಕ ನಾವು ಕರ್ನಾಟಕ ತಾಯಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
* ಅರ್ಹ ಫಲಾನುಭವಿಗಳು ತಮ್ಮ ಆಶಾ ಕಾರ್ಯಕರ್ತರು ಅಥವಾ ತಮ್ಮ ಪ್ರದೇಶದ ಕಿರಿಯ ಮಹಿಳಾ ಆರೋಗ್ಯಾಧಿಕಾರಿಯನ್ನು ತಾವಾಗಿಯೇ ಭೇಟಿ ಮಾಡಬೇಕಾಗುತ್ತದೆ.
* ಆಶಾ ಕಾರ್ಯಕರ್ತರು ಅಥವಾ ಕಿರಿಯ ಮಹಿಳಾ ಆರೋಗ್ಯಾಧಿಕಾರಿಯನ್ನು ರಿಜಿಸ್ಟ್ರೇಷನ್ ಮಾಡಿಕೊಂಡು ಗರ್ಭಿಣಿಯರಿಗೆ ಎಎನ್‌ಸಿ ಕಾರ್ಡ್ ಅನ್ನು ನೀಡುತ್ತಾರೆ.
* ಈ ಎಎನ್‌ಸಿ ಕಾರ್ಡ್ ಅನ್ನು ತೋರಿಸಿ ನೀವು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ.


Click it and Unblock the Notifications