ಮಾವು ಹಣ್ಣುಗಳ ರಾಜ ಎಂದು ಪರಿಗಣಿಸಲಾಗಿದೆ. ಹಾಗೆಯೇ ಇದು ಬೇಸಿಗೆಯಲ್ಲಿ ಬೆಳೆಯುವ ಹಣ್ಣಾಗಿದೆ. ಆದರೆ ಪೋರಬಂದರ್‌ನ ಆದಿತ್ಯನ ಹಳ್ಳಿಯಲ್ಲಿ, ಈಗಲೇ ಮಾವು ಮಾರುಕಟ್ಟೆಗೆ ಬಂದಿದೆ. ಹೌದು, ಕೇಸರ್ ಮಾವಿನ ಹಣ್ಣುಗಳು ಚಳಿಗಾಲದಲ್ಲಿ ಮರಗಳಲ್ಲಿ ನೇತಾಡುತ್ತಿದೆ.
ಪೋರಬಂದರ್ ಮಾರುಕಟ್ಟೆಗೆ ಕೇಸರಿ ಮಾವಿನ ಪೆಟ್ಟಿಗೆಗಳು ಮಾರಾಟಕ್ಕೆ ಬಂದಿವೆ. ಬೇಸಿಗೆಯಲ್ಲಿ ಬೆಳೆಯುವ ಈ ಮಾವು ಚಳಿಗಾಲದಲ್ಲಿ ಲಭ್ಯವಾದರೆ ಹೇಗೆ ಹೇಳಿ?. ಬುಧವಾರ ಪೋರಬಂದರ್ ಮಾರ್ಕೆಟ್‌ಗೆ ಈ ಬೇಸಿಗೆ ಕೇಸರ್ ಮಾವಿನ ಹಣ್ಣುಗಳು ಬಂದಂತೆ ಬೇಡಿಕೆ ಕೂಡಾ ಅಧಿಕವಾಗಿದೆ. ಎರಡೂ ಬಾಕ್ಸ್‌ಗಳನ್ನು ಕೂಡಾ ಹರಾಜು ಮಾಡಲಾಗಿದ್ದು, ಕೇಸರ್ ಮಾವಿನ ಎರಡು ಬಾಕ್ಸ್‌ಗಳು ಕೊನೆಯದಾಗಿ ಸುದಾಮ ಹಣ್ಣಿನ ಕಂಪನಿ ಪಾಲಾಗಿದೆ.

ಹರಾಜಿನಲ್ಲಿ ಎಷ್ಟು ಬೆಲೆಗೆ ಮಾರಾಟ?
ಗಿರ್ ಕೇಸರ್ ಮಾವಿನ ಹಣ್ಣು ಎಂದು ಕೂಡಾ ಹೆಸರುವಾಸಿಯಾದ ಈ ಮಾವು ಹರಾಜಿನಲ್ಲಿ 1 ಕೆಜಿಗೆ ಬರೋಬ್ಬರಿ 1551 ರೂಪಾಯಿಯಂತೆ ಮಾರಾಟವಾಗಿದೆ. ಈ ಬೆಲೆ ಐತಿಹಾಸಿಕ ಬೆಲೆಯಾಗಿದೆ ಎಂದು ವರದಿ ಹೇಳುತ್ತದೆ. ಒಟ್ಟಾರೆಯಾಗಿ 10 ಕೆಜಿ ಮಾವಿನ ಎರಡೂ ಬಾಕ್ಸ್ 30 ಸಾವಿರ ರೂಪಾಯಿಗೆ ಮಾರಾಟವಾಗಿದೆ.
ಇನ್ನು ನಿಜವಾದ ಮಾವಿನ ಋತುವಿಗೆ ಇನ್ನೂ ಐದು ತಿಂಗಳು ಬಾಕಿ ಇದೆ. ಸಾಮಾನ್ಯವಾಗಿ ಪ್ರತಿ ವರ್ಷ ಬೇಸಿಗೆಯಲ್ಲಿ ಮಾರ್ಚ್-ಏಪ್ರಿಲ್ ತಿಂಗಳಿನಿಂದ ಮಾವು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆದರೆ ಹವಾಮಾನ ವೈಪರೀತ್ಯವೋ ಅಥವಾ ಇನ್ನಾವುದೋ ಕಾರಣವೋ ಈ ಹಳ್ಳಿಯಲ್ಲಿ ಚಳಿಗಾಲದಲ್ಲಿಯೇ ಮರದಲ್ಲಿ ಮಾವು ಬೆಳೆದಿದೆ.
ಈ ಗಿರ್ ಕೇಸರ್ ಮಾವು ಕೂಡಾ ಸಾಮಾನ್ಯ ಇತರೆ ಮಾವಿನಂತೆ ಬೇಸಿಗೆ ಅವಧಿಯಲ್ಲಿಯೇ ಬೆಳೆಯುವ ಮಾವಾಗಿದೆ. ಆದರೆ ಚಳಿಗಾಲದಲ್ಲಿಯೇ ಈಗ ಬೆಳೆದಿದೆ. ಇದು ರೈತರು, ವ್ಯಾಪಾರಸ್ಥರನ್ನು ಅಚ್ಚರಿಗೊಳಿಸಿದೆ. ಗಿರ್ ಪ್ರದೇಶದ ಕೇಸರ್ ಮಾವು ಮತ್ತು ಪೋರಬಂದರ್ ಜಿಲ್ಲೆಯ ಸ್ಥಳೀಯ ಮಾವಿಗೆ ಗುಜರಾತ್ ಹಾಗೂ ವಿದೇಶಗಳಲ್ಲಿ ಉತ್ತಮ ಬೇಡಿಕೆಯಿದೆ.
ಪೋರಬಂದರ್ ಜಿಲ್ಲೆಯ ಹನುಮಾನ್ ಗಡ್, ಬಿಲೇಶ್ವರ್, ಖಂಬಲಾ ಮತ್ತು ಕಟ್ವಾನಾ ಮತ್ತು ಆದಿತ್ಯನಾ ಸೇರಿದಂತೆ ಅಣೆಕಟ್ಟಿನ ಉದ್ದಕ್ಕೂ ಇರುವ ಹಳ್ಳಿಗಳ ಭೂಮಿ ಮಾವಿನ ಬೆಳೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿ ಹೇರಳವಾಗಿ ಕೇಸರಿ ಮಾವು ಉತ್ಪಾದನೆಯಾಗುತ್ತಿದೆ. ಪೋರಬಂದರ್ ಜಿಲ್ಲೆಯ ಈ ಸ್ಥಳೀಯ ಗ್ರಾಮಗಳ ಕೇಸರ್ ಮಾವಿನ ಹಣ್ಣುಗಳು ಅವುಗಳ ಗುಣಮಟ್ಟ ಮತ್ತು ದೊಡ್ಡ ಗಾತ್ರದ ಕಾರಣದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ.


Click it and Unblock the Notifications