ಕೆಜಿಎಫ್, ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಸಿನಿಮಾದ ಮೂಲಕವೇ ಜನಮನ ಗೆದ್ದ ನಮ್ಮ ಕನ್ನಡ ಸೂಪರ್ ಸ್ಟಾರ್ ನಟ ಯಶ್ ಅಭಿಮಾನಿಗಳ ಪ್ರಮಾಣದಲ್ಲಿ ಎಷ್ಟು ಶ್ರೀಮಂತರೋ ಅಷ್ಟೇ ಆದಾಯದಲ್ಲಿಯೂ ಕೂಡಾ ಶ್ರೀಮಂತರಾಗಿದ್ದಾರೆ.
ಜನವರಿ 8 ರ 1986 ರಂದು ಹುಟ್ಟಿದ ಯಶ್ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ ಆಗಿದೆ. ಪ್ರಮುಖವಾಗಿ ಯಶ್ ಕೆಜಿಎಫ್ ಚಾಪ್ಟರ್ 1 ಚಿತ್ರದ ಮೂಲಕ ಜನಪ್ರಿಯರಾಗಿದ್ದಾರೆ. ಇದರಿಂದ ಹೆಚ್ಚಿನ ಆದಾಯವನ್ನು ಕೂಡಾ ಗಳಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಯಶ್ ಆದಾಯ, ಆಸ್ತಿ, ಕಾರುಗಳ ವಿವರ ಇಲ್ಲಿದೆ ಮುಂದೆ ಓದಿ...

ಕೆಜಿಎಫ್ 2ಗೆ ಯಶ್ ಪಡೆಯುವುದೆಷ್ಟು?
ಕೆಜಿಎಫ್ ಚಾಪ್ಟರ್ 2ಗೆ ಯಶ್ ತಮ್ಮ ಪಾತ್ರಕ್ಕೆ ಎಷ್ಟು ಶುಲ್ಕ ವಿಧಿಸಿದ್ದಾರೆ ಎಂಬುದು ಎಲ್ಲರೂ ತಿಳಿದುಕೊಳ್ಳಲು ಬಯಸುವ ದೊಡ್ಡ ಪ್ರಶ್ನೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಯಶ್ ಕೆಜಿಎಫ್ 2 ಗಾಗಿ 25 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ. ಇಲ್ಲದಿದ್ದರೆ, ಪ್ರತಿ ಚಿತ್ರಕ್ಕೆ 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ.
ಯಶ್ ನಿವ್ವಳ ಆದಾಯ ಎಷ್ಟಿದೆ?
ಯಶ್ ಅವರ ಒಟ್ಟು ನಿವ್ವಳ ಆದಾಯವು 7 ಮಿಲಿಯನ್ ಡಾಲರ್‌ಗಳು ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 53 ಕೋಟಿ ರೂಪಾಯಿಗಳಿಗೆ ಸಮಾನವಾಗಿರುತ್ತದೆ. ಯಶ್ ಅಧಿಕವಾಗಿ ಚಲನಚಿತ್ರಗಳು, ಜಾಹೀರಾತುಗಳು ಮತ್ತು ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಪಡೆಯುತ್ತಿದ್ದಾರೆ.
ತಾನು ನಟಿಸುವ ಚಿತ್ರಕ್ಕೆ ಪಡೆಯುವ ಸಂಭಾವನೆ ಮಾತ್ರವಲ್ಲದೆ ನಟ ಸಿನಿಮಾದಲ್ಲಿ ಲಾಭದ ಪಾಲನ್ನು ಕೂಡಾ ಪಡೆಯುತ್ತಾರೆ. ಹಾಗೆಯೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ಭಾರೀ ಪ್ರಮಾಣದ ಆದಾಯವನ್ನು ನಟ ಪಡೆಯುತ್ತಾರೆ.
ನಿವ್ವಳ ಆದಾಯ: 7 ಮಿಲಿಯನ್ ಡಾಲರ್
ಭಾರತೀಯ ರೂಪಾಯಿಯಲ್ಲಿ: 53 ಕೋಟಿ ರೂಪಾಯಿ
ಮಾಸಿಕ ಆದಾಯ: 1 ಕೋಟಿ ರೂಪಾಯಿಗೂ ಅಧಿಕ
ವಾರ್ಷಿಕ ಆದಾಯ: 12 ಕೋಟಿ ರೂಪಾಯಿಗೂ ಅಧಿಕ
ಆದಾಯದ ಮೂಲ: ಸಿನಿಮಾ, ಬ್ರ್ಯಾಂಡ್ ಅಂಬಾಸಿಡರ್, ಜಾಹೀರಾತು
ಯಶ್ ಸಿನಿಮಾದಲ್ಲಿ ಲಾಭ, ಉತ್ತಮ ಸಂಭಾವನೆ ಪಡೆಯುವುದರ ಜೊತೆಗೆ ದಾನ, ಸಾಮಾಜಿಕ ಕಾರ್ಯಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಆದಾಯ ತೆರಿಗೆ ಪಾವತಿಯಲ್ಲಿ ಯಶ್ ಕೂಡಾ ಅಗ್ರಸ್ಥಾನದಲ್ಲಿರುವವರು ಆಗಿದ್ದಾರೆ. ದೇಶದ ಅತಿ ಹೆಚ್ಚು ತೆರಿಗೆ ಪಾವತಿದಾರರಲ್ಲಿ ಒಬ್ಬರು ಆಗಿದ್ದಾರೆ.
ಯಶ್ ಆಸ್ತಿ, ಕಾರುಗಳು
ಯಶ್ ಆಸ್ತಿ: ಯಶ್ ಕರ್ನಾಟಕದ ಪ್ರಧಾನ ಪ್ರದೇಶದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಮನೆಯನ್ನು ಹೊಂದಿದ್ದಾರೆ. ಹಾಗೆಯೇ ಈ ರಿಯಲ್ ಎಸ್ಟೇಟ್ ಆಸ್ತಿಯ ಅಂದಾಜು ಮೌಲ್ಯ ಸುಮಾರು 5 ಕೋಟಿ ರೂಪಾಯಿ ಆಗಿದೆ.
ಕಾರುಗಳು: ಯಶ್ ಕಾರು ಸಂಗ್ರಹ ಪ್ರಮಾಣವು ಸಾಕಷ್ಟು ದೊಡ್ಡದಾಗಿದೆ. ಯಶ್ ವಿಶ್ವದ ಕೆಲವು ಅತ್ಯುತ್ತಮ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಯಶ್ ಒಡೆತನದ ಕಾರು ಬ್ರ್ಯಾಂಡ್‌ಗಳಲ್ಲಿ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್ ಮತ್ತು ಆಡಿ ಸೇರಿವೆ.


Click it and Unblock the Notifications