ನಿರಂತರವಾಗಿ ಸೆಲೆಬ್ರೆಟಿಗಳು ದುಬಾರಿಯಾದ ಕಾರು, ಎಸ್‌ಯುವಿ ಖರೀದಿ ಮಾಡುವ ಸುದ್ದಿಗಳು ಕೇಳಿಬರುತ್ತಿದೆ. ಬಾಲಿವುಡ್, ಸಾಂಡಲ್‌ವುಡ್, ಕ್ರಿಕೆಟಿಗರು ಸೇರಿದಂತೆ ಹಲವಾರು ಜನಪ್ರಿಯ ವ್ಯಕ್ತಿಗಳು ಈ ಒಂದೆರಡು ತಿಂಗಳ ಅಂತರದಲ್ಲಿ ದುಬಾರಿ ಕಾರುಗಳನ್ನು ಖರೀದಿ ಮಾಡಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ಇರುವ ದುಬಾರಿ ಕಾರು ಖರೀದಿಸಿದ ವ್ಯಕ್ತಿಗಳ ಪಟ್ಟಿಯಲ್ಲಿ ಕೆಜಿಎಸ್ ಸ್ಟಾರ್, ಸ್ಯಾಂಡಲ್‌ವುಡ್ ಖ್ಯಾತ ನಟ ಯಶ್ ಕೂಡಾ ಇದ್ದಾರೆ.
ಹೌದು, ನಾವು ಕಳೆದ ಎರಡು ತಿಂಗಳ ಅವಧಿಯಲ್ಲಿ ನಡೆದ ಬೆಳವಣಿಗೆಯನ್ನು ಗಮನಿಸಿದಾಗ ಹಲವಾರು ಮಂದಿ ಸೆಲೆಬ್ರೆಟಿಗಳು ದುಬಾರಿ, ಐಷಾರಾಮಿ ಕಾರುಗಳನ್ನು ಖರೀದಿ ಮಾಡಿರುವುದನ್ನು ನಾವು ಕಾಣಬಹುದಾಗಿದೆ. ಈ ಪೈಕಿ ಬಹುತೇಕ ಸೆಲೆಬ್ರೆಟಿಗಳು ಈ ದುಬಾರಿ ಕಾರುಗಳ ಕಲೆಕ್ಷನ್‌ಗೆ ಹೆಸರುವಾಸಿಯಾಗಿದ್ದಾರೆ. ಈ ಎರಡು ತಿಂಗಳ ಅವಧಿಯಲ್ಲಿ ಕಾರು ಖರೀದಿ ಮಾಡಿದ ಸೆಲೆಬ್ರೆಟಿಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ....

ದುಬಾರಿ ಎಸ್‌ಯುವಿ ಖರೀದಿಸಿದ ಯಶ್
ಕೆಜಿಎಸ್, ರಾಮಚಾರಿ ಸಿನಿಮಾದ ಮೂಲಕ ಜನಪ್ರಿಯತೆಯನ್ನು ಪಡೆದಿರುವ ಯಶ್ ಕಳೆದ ನಾಲ್ಕೈದು ದಿನಗಳ ಹಿಂದೆ ದುಬಾರಿಯಾದ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಈ ಎಸ್‌ಯುವಿ ಬೆಲೆಯು ಸುಮಾರು ನಾಲ್ಕು ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಕಾರಿನ ಮುಂದೆ ನಿಂತು ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬ ಫೋಟೋಗೆ ಫೋಸ್ ನೀಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯಶ್ ಒಡೆತನದ 2023 ರ ಲ್ಯಾಂಡ್ ರೋವರ್ ರೇಂಜ್ ರೋವರ್ ಕಪ್ಪು ಬಣ್ಣದ ಕ್ಲಾಸಿ ಶೇಡ್ ಅನ್ನು ಹೊಂದಿದೆ. ಇನ್ನು ಈ ಎಸ್‌ಯುವಿಯನ್ನು ಬಾಲಿವುಡ್ ಸ್ಟಾರ್‌ಗಳಾದ ಸೋನಮ್ ಕಪೂರ್, ನಿಮ್ರಾತ್ ಕೌರ್, ಆದಿತ್ಯ ರಾಯ್ ಕಪೂರ್, ಮಲೈಕಾ ಅರೋರಾ ಮೊದಲಾದವರು ಹೊಂದಿದ್ದಾರೆ. ಇದು ಇತ್ತೀಚಿನ ಜನರೇಷನ್‌ನ ಅತೀ ನೆಚ್ಚಿನ ಎಸ್‌ಯುವಿಗಳಲ್ಲಿ ಒಂದಾಗಿದೆ.
ಲ್ಯಾಂಬೋರ್ಗಿನಿ ಖರೀದಿಸಿದ ತೆಂಡೂಲ್ಕರ್
ಜನಪ್ರಿಯ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಈಗ ಅತೀ ದುಬಾರಿಯಾದ, ಅತೀ ವೇಗವಾದ ಎಸ್‌ಯುವಿ ಲ್ಯಾಂಬೋರ್ಗಿನಿ ಉರುಸ್ ಎಸ್ ಅನ್ನು ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಹೆಚ್ಚಾಗಿ ಅತೀ ವೇಗವಾಗಿ ಓಡಬಲ್ಲ ಕಾರುಗಳನ್ನು ಖರೀದಿ ಮಾಡುತ್ತಾ ಬಂದಿದ್ದಾರೆ. ಈ ಕ್ರಿಕೆಟ್ ದಿಗ್ಗಜನ ಗ್ಯಾರೇಜ್‌ನಲ್ಲಿ ಈಗಾಗಲೇ ಹಲವಾರು ದುಬಾರಿ ಕಾರುಗಳು ಇದೆ. ಭಾರತದಲ್ಲಿನ ಇತ್ತೀಚಿನ ಲ್ಯಾಂಬೋರ್ಗಿನಿಗಳಲ್ಲಿ ಲ್ಯಾಂಬೋರ್ಗಿನಿ ಉರುಸ್ ಎಸ್ ಕೂಡಾ ಒಂದಾಗಿದೆ.
ಹಾಗೆಯೆ ಇದು ನೂತನ ಮಾಡೆಲ್ ಆಗಿದೆ. ಈ ಮಾಡೆಲ್ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ಬಳಿಯೂ ಇಲ್ಲ. ಆದರೆ ಮುಕೇಶ್ ಅಂಬಾನಿಯ ಬಳಿ ಲ್ಯಾಂಬೋರ್ಗಿನಿ ಉರುಸ್ ಇದೆ. ಸಚಿನ್ ತೆಂಡೂಲ್ಕರ್ ಹಲವಾರು ಉನ್ನತ ಶ್ರೇಣಿಯ ಕಾರುಗಳನ್ನು ಹೊಂದಿದ್ದರೂ ಕೂಡಾ ಇದು ಅವರ ಮೊದಲ ಲ್ಯಾಂಬೋರ್ಗಿನಿ ಕಾರು ಆಗಿದೆ. ಕ್ರಿಕೆಟ್‌ನ ದೇವರು ಎಂದು ಕರೆಯಲ್ಪಡುವ ಈ ದಿಗ್ಗಜನ ಬಳಿ ಹಲವಾರು ಐಷಾರಾಮಿ ಕಾರುಗಳು ಇದೆ. ಪೋರ್ಷೆ 911 ಟರ್ಬೊ ಎಸ್, ಪೋರ್ಷೆ ಕಯೆನ್ನೆ ಟರ್ಬೊ, ಬಿಎಂಡಬ್ಲ್ಯೂ i8 ಮತ್ತು ಇತರ ಹಲವಾರು ದುಬಾರಿಯ ಕಾರುಗಳಿದೆ.

2.69 ಕೋಟಿ ರೂ.ಯ ಕಾರು ಖರೀದಿಸಿದ ಕಿಯಾರಾ ಅಡ್ವಾಣಿ
ಕಿಯಾರಾ ಅಡ್ವಾಣಿ ಪ್ರಸ್ತುತ ಬಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಹೆಚ್ಚಾಗಿ ಜನರ ಬಾಯಲ್ಲಿ ಕೇಳಿ ಬರುವ ಹೆಸರು ಆಗಿದೆ. ಇತ್ತೀಚೆಗೆ ನಟಿ ಕಿಯಾರಾ ಅಡ್ವಾಣಿ 2.69 ಕೋಟಿ ರೂಪಾಯಿ ಮೌಲ್ಯದ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್580 ಐಷಾರಾಮಿ ಸೆಡಾನ್ ಖರೀದಿಸಿದ್ದಾರೆ. ಭೂಲ್ ಭೂಲೈಯಾ 2 ಸ್ಟಾರ್ ಕಿಯಾರಾ ಅಡ್ವಾಣಿ ಈಗಾಗಲೇ ತನ್ನ ದುಬಾರಿ ಕಾರು ಸಂಗ್ರಹಣೆಗೆ ಹೆಸರುವಾಸಿಯಾಗಿದ್ದಾರೆ, ಈಗ ತನ್ನ ಗ್ಯಾರೇಜ್‌ನಲ್ಲಿ ಮರ್ಸಿಡಿಸ್-ಮೇಬ್ಯಾಕ್ S580 ಅನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.
1.95 ಕೋಟಿ ರೂ. ಮೌಲ್ಯದ ಅಜಯ್ ದೇವ್‌ಗನ್ ಕಾರು
ಆಟೋಮೊಬೈಲ್ ಮೇಲೆ ಅತೀ ಹೆಚ್ಚಿನ ಆಸಕ್ತಿ ಹೊಂದಿರುವ ಜನಪ್ರಿಯ ವ್ಯಕ್ತಿಗಳಲ್ಲಿ, ಸ್ಟಾರ್ ನಟರುಗಳಲ್ಲಿ ಅಜಯ್ ದೇವಗನ್ ಕೂಡಾ ಒಬ್ಬರಾಗಿದ್ದಾರೆ. ಅಜಯ್ ದೇವ್‌ಗನ್ ಇತ್ತೀಚೆಗೆ ತನ್ನ ಈ ಕಾರುಗಳ ಸಂಗ್ರಹಕ್ಕೆ ಹೊಸ ಸೇರ್ಪಡೆಯನ್ನು ಮಾಡಿಕೊಂಡಿದ್ದಾರೆ. ವರದಿಯ ಪ್ರಕಾರ ನಟ ಅಜಯ್ ದೇವ್‌ಗನ್ ಸುಮಾರು 1.95 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ i7 ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ.
ಬುಲೆಟ್‌ಪ್ರೂಫ್ ಎಸ್‌ಯುವಿ ಆಮದು ಮಾಡಿಕೊಂಡ ಸಲ್ಮಾನ್
ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಈ ಹಿಂದೆ ಅತೀ ದುಬಾರಿ ಎಸ್‌ಯುವಿಯನ್ನು ಆಮದು ಮಾಡಿಕೊಂಡಿದ್ದಾರೆ. ನಿಸ್ಸಾನ್‌ನ ಈ ಪಟ್ರೋಲ್ ಎಸ್‌ಯುವಿ ಬುಲೆಟ್ ಪ್ರೂಫ್ ಅನ್ನು ಹೊಂದಿದ್ದು, ಇದು ಈವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗದ ಎಸ್‌ಯುವಿ ಆಗಿದೆ. ಅತೀ ದುಬಾರಿ ಎಸ್‌ಯುವಿಗಳಲ್ಲಿ ಇದು ಒಂದಾಗಿದೆ.


Click it and Unblock the Notifications