ಬಾಲಿವುಡ್ ಸ್ಟಾರ್‌ಗಳು ದುಬಾರಿಯಾದ, ಐಷಾರಾಮಿ ಕಾರುಗಳನ್ನು ಖರೀದಿ ಮಾಡುವ ಸುದ್ದಿಗಳು ನಾವು ನೋಡುತ್ತಾ ಬಂದಿದ್ದೇವೆ. ಇತ್ತೀಚೆಗೆ 1.95 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರುನ್ನು ಅಜಯ್ ದೇವ್‌ಗನ್ ಖರೀದಿ ಮಾಡಿದ ಬಗ್ಗೆಯೂ ವರದಿಯಾಗಿದೆ. ಈಗ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೂಡಾ ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ ಬಗ್ಗೆ ವರದಿಯಾಗಿದೆ.
ಕಿಯಾರಾ ಅಡ್ವಾಣಿ ಪ್ರಸ್ತುತ ಬಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಹೆಚ್ಚಾಗಿ ಜನರ ಬಾಯಲ್ಲಿ ಕೇಳಿ ಬರುವ ಹೆಸರು ಆಗಿದೆ. ಈ ಜನಪ್ರಿಯ ನಟಿ ಕಿಯಾರಾ ಅಡ್ವಾಣಿ 2.69 ಕೋಟಿ ರೂಪಾಯಿ ಮೌಲ್ಯದ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್580 ಐಷಾರಾಮಿ ಸೆಡಾನ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಮರ್ಸಿಡಿಸ್-ಮೇಬ್ಯಾಕ್ S580 ಕಾರಿನ ಬಗ್ಗೆ ಮಾಹಿತಿ
ಭೂಲ್ ಭೂಲೈಯಾ 2 ಸ್ಟಾರ್ ಕಿಯಾರಾ ಅಡ್ವಾಣಿ ಈಗಾಗಲೇ ತನ್ನ ದುಬಾರಿ ಕಾರು ಸಂಗ್ರಹಣೆಗೆ ಹೆಸರುವಾಸಿಯಾಗಿದ್ದಾರೆ, ಈಗ ತನ್ನ ಗ್ಯಾರೇಜ್‌ನಲ್ಲಿ ಮರ್ಸಿಡಿಸ್-ಮೇಬ್ಯಾಕ್ S580 ಅನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಕಿಯಾರಾ ಇತ್ತೀಚೆಗೆ ಕಾರನ್ನು ಖರೀದಿಸಿದ್ದಾರೆ ಎಂಬುವುದು ತಿಳಿದುಬಂದಿದೆ.
ರಿಜಿಸ್ಟಾರ್ ಪ್ಲೇಟ್‌ನ ಪ್ರಕಾರ ಕಿಯಾರಾ ಅಡ್ವಾಣಿ ಈ ಕಾರನ್ನು ಮೇ 26ರಂದು ಖರೀದಿ ಮಾಡಿದ್ದಾರೆ. ಮರ್ಸಿಡಿಸ್-ಮೇಬ್ಯಾಕ್ ಸೆಡಾನ್‌ಗಳು ಆರಾಮ ಮತ್ತು ಐಷಾರಾಮಿ ಫೀಚರ್‌ಗಳಿಗೆ ಹೆಸರುವಾಸಿಯಾಗಿದೆ. ಮೇಬ್ಯಾಕ್ S580 ಕಾರು ವಿಶೇಷವಾದ ಕಾರು ಆಗಿದೆ. ಯಾಕೆಂದರೆ ಇದು ಮೊದಲ 'ಮೇಡ್-ಇನ್ ಇಂಡಿಯಾ' ಮರ್ಸಿಡಿಸ್-ಮೇಬ್ಯಾಕ್ ಆಗಿದೆ.
ಕಿಯಾರಾ ಅಡ್ವಾಣಿ ಒಡೆತನದ ಮರ್ಸಿಡಿಸ್-ಮೇಬ್ಯಾಕ್ S580 48 ವೋಲ್ಟ್‌ಗಳ EQ ಬೂಸ್ಟ್ ಅನ್ನು ಹೊಂದಿದೆ. 4.0-ಲೀಟರ್ V8 ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಸಲೂನ್ 496 Bhp ಮತ್ತು 700 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಷ್ಟೊಂದು ಬೆಲೆಯನ್ನು ನೀಡಿದ ಕಾರಿನಿಂದ ಯಾವೆಲ್ಲ ನಿರೀಕ್ಷೆ ಮಾಡಬಹುದೋ ಅದೆಲ್ಲ ಐಷಾರಾಮಿಯನ್ನು ಕಾರು ಹೊಂದಿದೆ.
ಮೇಬ್ಯಾಕ್ S580 ಪ್ರೀಮಿಯಂ ಲೆದರ್ ಅಪ್ಹೋಲ್ಸ್ಟರಿ, ಬ್ಯಾಕ್ ಸೀಟ್‌ನಲ್ಲಿ ಮಸಾಜ್, ಮರ್ಸಿಡಿಸ್ MBUX ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಹಲವಾರು ವಿಶೇಷ ಫೀಚರ್ ಅನ್ನು ಹೊಂದಿದೆ. ಇದು ವಿಶೇಷ ಡೋರ್‌ಮೆನ್ ಫೀಚರ್ ಅನ್ನು ಸಹ ಹೊಂದಿದೆ. ಇದು ಹಿಂಬದಿಯ ಪ್ರಯಾಣಿಕರಿಗೆ ಕೈ ಸನ್ನೆಯೊಂದಿಗೆ ಸ್ವಯಂಚಾಲಿತವಾಗಿ ಕಾರಿನ ಡೋರ್ ಅನ್ನು ಮುಚ್ಚಲು ಅವಕಾಶ ನೀಡುತ್ತದೆ. ಹೊಸ ಮೇಬ್ಯಾಕ್ ಹೊರತಾಗಿ, ಕಿಯಾರಾ ಆಡಿ A8 L, ಮರ್ಸೆಡೆಸ್ ಬೆನ್ಜ್ ಇ-ಕ್ಲಾಸ್, ಬಿಎಂಡಬ್ಲ್ಯೂ X5 ನಂತಹ ಐಷಾರಾಮಿ ವಾಹನಗಳನ್ನು ಸಹ ಹೊಂದಿದೆ.
ಅಜಯ್ ದೇವ್‌ಗನ್ ಬಳಿ ಇರುವ 1.95 ಕೋಟಿ ರೂ. ಕಾರು
ವರದಿಯ ಪ್ರಕಾರ ನಟ ಅಜಯ್ ದೇವ್‌ಗನ್ ಸುಮಾರು 1.95 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ i7 ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ i7 ಭಾರತದಲ್ಲಿ ಬ್ರ್ಯಾಂಡ್‌ನ ಪ್ರಮುಖ ಇವಿ ಆಗಿದೆ. ಕಾರ್ಟೊಕ್ ವರದಿಯ ಪ್ರಕಾರ, ನಟ ಅಜಯ್ ದೇವ್‌ಗನ್ ಖರೀದಿ ಮಾಡಿರುವ ಬಿಎಂಡಬ್ಲ್ಯೂ i7 ಇವಿ ಟ್ವಿಲೈಟ್ ಪರ್ಪಲ್ ಪರ್ಲ್ ಮೆಟಾಲಿಕ್‌ನ ಕ್ಲಾಸಿ ಶೇಡ್ ಅನ್ನು ಹೊಂದಿದೆ.
ಈ ಕಾರಿನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರುಗಳು ಇದೆ. ಈ ಎರಡು ಕಾರುಗಳು ಜೊತೆಯಾಗಿ 544 ಹಾರ್ಸ್‌ಪವರ್ ಮತ್ತು 745 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 550 ಕಿಲೋ ಮೀಟರ್‌ಗೂ ಅಧಿಕ ರೇಂಜ್ ಅನ್ನು ಹೊಂದಿರುವ ಬಿಎಂಡಬ್ಲ್ಯೂ i7 ಟಾಪ್ ಸ್ಪೀಡ್ ಗಂಟೆಗೆ 239 ಕಿಲೋ ಮೀಟರ್ ಅನ್ನು ಹೊಂದಿದೆ. ಇದು 4.7 ಸೆಕೆಂಡ್‌ಗಳಲ್ಲಿ 0 ರಿಂದ 100 ಕಿಮೀ/ಗಂ ವೇಗದಲ್ಲಿ ಓಡಬಲ್ಲದು.


Click it and Unblock the Notifications