ದೇಶದಲ್ಲಿ ಹೆದ್ದಾರಿ ವಿಸ್ತರಣೆ ಕಾರ್ಯ ಅತೀ ಶೀಘ್ರವಾಗಿ ನಡೆಯುತ್ತಿದೆ. ಆದರೂ ಇಂದಿಗೂ ಕೂಡಾ ಮಹಿಳಾ ಪ್ರಯಾಣಿಕರು ಪಡುವ ಒಂದು ಕಷ್ಟ ಹಾಗೆಯೇ ಇದೆ. ದೂರದ ಪ್ರಯಾಣ ಮಾಡುವಾಗ ಸಾರ್ವಜನಿಕ ಶೌಚಾಲಯ ಬಳಸುವುದು ಮಹಿಳೆಯರಿಗೆ ಒಂದು ಕನಸು ಎಂದರೂ ತಪ್ಪಾಗಲಾರದು. ಆದರೆ ಈ ಕೆಲವು ಸ್ಟಾರ್ಟ್‌ಅಪ್‌ಗಳು ಬದಲಾವಣೆಯನ್ನು ಮಾಡುತ್ತಿದೆ. ಹೆದ್ದಾರಿಗಳಲ್ಲಿ ನೈರ್ಮಲ್ಯ ಹೊಂದಿರುವ ಶೌಚಾಲಯ ಸ್ಥಾಪನೆ ಮಾಡುತ್ತಿದೆ.
ಸ್ಟಾರ್ಟ್‌ಅಪ್‌ಗಳಾದ ಲಾವಟೋ, ಟ್ರಾವ್‌ಲೌಂಜ್, ಲೂಟೆಲ್ ಮತ್ತು ಎಲೂ ಹೆದ್ದಾರಿಗಳಲ್ಲಿ ಸ್ಮಾರ್ಟ್ ಟಾಯ್ಲೆಟ್ ಅನ್ನು ಆರಂಭಿಸುತ್ತಿದೆ. ಸ್ಲೀಪಿಂಗ್ ಪಾಡ್ ಮತ್ತು ಇವಿಗಳ ಚಾರ್ಜಿಂಗ್ ಸ್ಟೇಷನ್‌ಗಳನ್ನೂ ಆರಂಭಿಸುತ್ತಿದೆ. ಕೃಷ್ಣಗಿರಿ (ಬೆಂಗಳೂರು-ಚೆನ್ನೈ ಹೆದ್ದಾರಿ) ಸೇರಿದಂತೆ ಹಲವೆಡೆ ಈ ಸ್ಮಾರ್ಟ್ ಟಾಯ್ಲೆಟ್ ಆರಂಭಿಸಲಾಗಿದೆ. ಈ ಸ್ಮಾರ್ಟ್ ಟಾಯ್ಲೆಟ್‌ಗಳಿಂದ ಏನೆಲ್ಲ ಪ್ರಯೋಜನವಾಗಲಿದೆ, ಎಂಬ ಬಗ್ಗೆ ಇಲ್ಲಿದೆ ವಿವರ...
ಸ್ಲೀಪಿಂಗ್ ಪಾಡ್, ಮಂಗಳಮುಖಿಯರಿಗೆ ಪ್ರತ್ಯೇಕ ಟಾಯ್ಲೆಟ್
ಬೆಂಗಳೂರು ಮೂಲದ ಲಾವಟೋ ಸ್ಟಾರ್ಟ್‌ಅಪ್ 2018ರಿಂದ ಸ್ವಚ್ಛತೆಯ ಸೇವೆಯನ್ನು ನೀಡುತ್ತಾ ಬಂದಿರುವ ಖಾಸಗಿ ಸಂಸ್ಥೆಆಗಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 44 (ತಮಿಳುನಾಡಿನ ಕೃಷ್ಟನಗರಿ) ಯಲ್ಲಿ ಸೇವೆಯನ್ನು ನೀಡುತ್ತಿದೆ. ಇಲ್ಲಿಯ ಸೇವೆಗೆ ಗೂಗಲ್ ಮ್ಯಾಪ್‌ನಲ್ಲಿ 1,300ಕ್ಕೂ ಅಧಿಕ ರಿವೀವ್ ಮತ್ತು 4.5 ರೇಟಿಂಗ್ಸ್ ಲಭ್ಯವಾಗಿದೆ. ಟಾಯ್ಲೆಟ್ ಬಳಸಲು 30 ರೂಪಾಯಿ ಮತ್ತು ಸ್ನಾನ ಮಾಡಲು 200 ರೂಪಾಯಿ ಶುಲ್ಕ ತೆರಬೇಕಾಗುತ್ತದೆ.
"ಮುಖ್ಯವಾಗಿ ಮಹಿಳೆಯರಿಗೆ ಸಹಕಾರಿಯಾಗಬೇಕೆಂಬ ಉದ್ದೇಶವನ್ನು ಸ್ಟಾರ್ಟ್ ಅಪ್ ಹೊಂದಿದೆ. ನಾವು ಶಾಪಿಂಗ್ ಮಾಲ್, ನಗರಗಳು, ಯಾತ್ರಾಸ್ಥಳಗಳು, ಪ್ರವಾಸಿ ತಾಣಗಳಿಗೂ ನಮ್ಮ ಸೇವೆ ವಿಸ್ತರಿಸಲಿದ್ದೇವೆ. ಕರ್ನಾಟಕದಲ್ಲಿ ನಾವು ಇಂತಹ ಸ್ಮಾರ್ಟ್ ಟಾಯ್ಲೆಟ್‌ಗಳನ್ನು ಆರಂಭಿಸಲಿದ್ದೇವೆ, ಮುಖ್ಯವಾಗಿ ಹಂಪಿ ಸ್ಕಂದಗಿರಿಯಲ್ಲಿ," ಎಂದು ತಿಳಿಸಿದ್ದಾರೆ. ಮಂಗಳಮುಖಿಯರಿಗೆ, ವಿಶೇಷ ಚೇತನರಿಗೆ, ಮಕ್ಕಳಿಗೆ ಪ್ರತ್ಯೇಕ ಟಾಯ್ಲೆಟ್‌ಗಳಿದೆ.
ಇವಿ ಚಾರ್ಜಿಂಗ್, ಉಚಿತ ವೈಫೈ
ಕೇರಳ ಮೂಲದ ಬಿಯಾಂಕ್ ಗ್ರೂಪ್ ಪಾಲಕ್ಕಾಡ್‌ನ ವಾಲಾಯರ್‌ನಲ್ಲಿ (ಸಲೇಮ್-ಕೊಚ್ಚಿ ಹೆದ್ದಾರಿ) ಸ್ಮಾರ್ಟ್ ಟಾಯ್ಲೆಟ್ ಅನ್ನು ಹೊಂದಿದೆ. ಇದರ ಉದ್ಘಾಟನೆ ಈ ತಿಂಗಳೇ ನಡೆಯಲಿದೆ. ಸ್ಲೀಪಿಂಡ್ ಪಾಡ್, ಕಾರು ಸ್ವಚ್ಛಗೊಳಿಸುವ ಅವಕಾಶ, ಇವಿ ಚಾರ್ಜಿಂಗ್ ಪಾಯಿಂಟ್, ಪಾರ್ಕಿಂಗ್ ಫೆಸಿಲಿಟಿ, ಫಸ್ಟ್ ಏಡ್, ಫ್ರೀ ವೈಫೈ ಅನ್ನು ಇಲ್ಲಿ ನೀಡಲಾಗುತ್ತದೆ. ಕೇರಳದಲ್ಲಿ ತನ್ನ ಸೇವೆಯನ್ನು ವಿಸ್ತರಿಸುವ ಉದ್ದೇಶವನ್ನು ಈ ಸಂಸ್ಥೆಯು ಹೊಂದಿದೆ.
ಮಹಿಳೆಯರಿಗೆ ಹೆಚ್ಚು ಸಹಾಯಕ
ಈ ಹಿಂದೆ ತನ್ನ ಸ್ನೇಹಿತೆ, ಈಗ ಪತ್ನಿ ಪ್ರಯಾಣದ ವೇಳೆ ಕಷ್ಟಪಡುವುದನ್ನು ನೋಡಿ ರಾಯಪುರ ಮೂಲದ ಎಲೂ ಸ್ಥಾಪಕ ದೀಪ್‌ತೆಂಡು ರಾಯ್ ಈ ಸ್ಟಾರ್ಟ್ಅಪ್ ಆರಂಭಿಸಿದ್ದಾರೆ. "ನಾವು ಜಗ್‌ದಲ್ಪುರದಿಂದ ರಾಯಪುರಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ಈ ಮಾರ್ಗದಲ್ಲಿ ಎಲ್ಲಿಯೂ ಸಾರ್ವಜನಿಕ ಟಾಯ್ಲೆಟ್ ಇಲ್ಲದ ಕಾರಣ ಯಾರೂ ಇಲ್ಲದ ಒಳ ಪ್ರದೇಶಕ್ಕೆ ಹೋಗಿ ನನ್ನ ಪತ್ನಿ ಮೂತ್ರ ಮಾಡಬೇಕಾಗಿತ್ತು. ಇದು ನಾನು ಸ್ಟಾರ್ಟ್‌ಅಪ್ ಆರಂಭಿಸಲು ಕಣ್ಣು ತೆರೆಸಿದೆ," ಎಂದು ಹೇಳಿದ್ದಾರೆ.
2018ರಲ್ಲಿ ಎಲೂವನ್ನು ಆರಂಭಿಸಿದ್ದಾರೆ. "ವಾರಾಂತ್ಯದಲ್ಲಿ 100-120 ಮಂದಿ ಸೇವೆಯನ್ನು ಬಳಸುತ್ತಾರೆ, ವಾರದ ದಿನದಲ್ಲಿ 50-80 ಮಂದಿ ಸೇವೆಯನ್ನು ಬಳಸುತ್ತಾರೆ. ಸೇವೆಯನ್ನು ಬಳಸಲು 30 ರೂಪಾಯಿ ಪಾವತಿಸಬೇಕಾಗುತ್ತದೆ. ಪ್ರತಿ ಎಲೂ ಲಾಂಗ್‌ನಲ್ಲಿ ಮೂರು ಮಹಿಳಾ ಶೌಚಾಲಯಗಳು ಇರುತ್ತದೆ. ಹಾಲುಣಿಸುವ ಕೊಠಡಿ ಇರುತ್ತದೆ. ಎಟಿಎಂ ಆರಂಭದ ಬಗ್ಗೆ ಬ್ಯಾಂಕ್‌ನೊಂದಿಗೆ ಮಾತುಕತೆ ನಡೆಯುತ್ತಿದೆ," ಎಂದು ತಿಳಿಸಿದ್ದಾರೆ.
ಸ್ಮಾರ್ಟ್ ರೆಸ್ಟ್‌ರೂಮ್‌ಗಳು
ಬೋಪಾಲ್ ಮೂಲದ ಸ್ಟಾರ್ಟ್‌ಅಪ್ ಸಂಸ್ಥೆಯಾದ ಲೂಟೆಲ್ ಅನ್ನು ಯಶ್ವಂತ್ ಸುತಾರ್ ಸ್ಥಾಪಿಸಿದ್ದಾರೆ. ಇಲ್ಲಿ ಇವಿ ಚಾರ್ಚಿಂಗ್, ರಿಫ್ರೆಶ್‌ಮೆಂಟ್ (ಪ್ರೀಮಿಯಂ ಕ್ವಾಲಿಟಿ ಕ್ಲೀನ್ ಮತ್ತು ನೈರ್ಮಲ್ಯ ಸೇವೆ), ರಿಫ್ಯೂಲ್ (ಆಹಾರ ಮತ್ತು ಪಾನೀಯ) ಸೇವೆ ಇದೆ. ಕೆಲವು ವರ್ಷಗಳ ಹಿಂದೆ ಯಶ್ವಂತ್ ಸುತಾರ್ ಪತ್ನಿ ನೀಲಮ್ ಸಿಂಗ್ ಪ್ರಯಾಣ ಮಾಡುವಾಗ ಶೌಚಾಲಯಕ್ಕೆ ಹೋಗಲು ಭಾರೀ ಕಷ್ಟಪಟ್ಟಿದ್ದಾರೆ. ಇದಾದ ಬಳಿಕ ಸ್ಮಾರ್ಟ್ ಟಾಯ್ಲೆಟ್ ನಿರ್ಮಾಣವಾಗಿದೆ.


Click it and Unblock the Notifications