For Quick Alerts
ALLOW NOTIFICATIONS  
For Daily Alerts

ಸವರನ್ ಗೋಲ್ಡ್ ಬಾಂಡ್ಸ್ (SGB) ಹೂಡಿಕೆ ಬಗ್ಗೆ ನಿಮಗೆಷ್ಟು ಗೊತ್ತು?

By ಅನಿಲ್ ಆಚಾರ್
|

ಭಾರತದಲ್ಲಿ ಚಿನ್ನದ ವ್ಯಾಮೋಹ ಜಾಸ್ತಿ ಎಂಬುದನ್ನು ಹೊಸದಾಗಿ ಹೇಳುವ ಅಗತ್ಯ ಇಲ್ಲ. ಯಾವುದೇ ಹಬ್ಬ- ಹರಿದಿನ ಸಂದರ್ಭದಲ್ಲಿ ಚಿನ್ನದ ಬೆಲೆ ಮೇಲೇರಿ ಬಿಡುತ್ತದೆ. ಈ ಹಿಂದೆಲ್ಲ ಚಿನ್ನವನ್ನು ಖರೀದಿಸಬೇಕು ಎಂದಾದಲ್ಲಿ ಆಭರಣ ಸ್ವರೂಪದಲ್ಲೇ ಖರೀದಿಸಬೇಕಿತ್ತು. ಆದರೆ ಸಮಯ ಕಳೆದಂತೆ ಚಿನ್ನವನ್ನು ವಿವಿಧ ಸ್ವರೂಪದಲ್ಲಿ ಕೊಳ್ಳಬಹುದು.

ಅಂಥದ್ದೊಂದು ಬಗೆಯಲ್ಲಿ ಸವರನ್ ಗೋಲ್ಡ್ ಬಾಂಡ್ಸ್ ಅಥವಾ ಎಸ್ ಜಿಬಿ ಕೂಡ ಒಂದು. ಈ ಸವರನ್ ಗೋಲ್ಡ್ ಬಾಂಡ್ಸ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಿತರಿಸುತ್ತದೆ. ಚಿನ್ನದ ಬೆಲೆಯನ್ನು ನಿರ್ಧರಿಸುವುದಕ್ಕೆ ನಿರ್ದಿಷ್ಟ ವಿಧಾನ ಅನಸರಿಸಲಾಗುತ್ತದೆ. ಮತ್ತು ನಿಶ್ಚಿತವಾದ ಬಡ್ಡಿ ದರ ನೀಡಲಾಗುತ್ತದೆ.

ಮೆಚ್ಯೂರಿಟಿ ಸಂದರ್ಭದಲ್ಲಿ ಚಿನ್ನದ ಬೆಲೆ ಎಷ್ಟಿರುತ್ತದೋ ಅಷ್ಟು ಮಾಲೀಕರಿಗೆ ದೊರೆಯುತ್ತದೆ. ಸವರನ್ ಗೋಲ್ಡ್ ಬಾಂಡ್ಸ್ ಪರಿಚಯಿಸುವ ಉದ್ದೇಶ ಏನೆಂದರೆ, ಚಿನ್ನದ ಬೇಡಿಕೆಯನ್ನು ಫಿಸಿಕಲ್ ಆಸ್ತಿಯಿಂದ ಹಣಕಾಸು ಉಳಿತಾಯ ಎಂಬಂತೆ ಬದಲಿಸಬೇಕು ಎಂಬುದಾಗಿದೆ.

ಸವರನ್ ಗೋಲ್ಡ್ ಬಾಂಡ್ 2020-21 ಸಿರೀಸ್ IX ಸಬ್ ಸ್ಕ್ರಿಪ್ಷನ್ ಶುರುಸವರನ್ ಗೋಲ್ಡ್ ಬಾಂಡ್ 2020-21 ಸಿರೀಸ್ IX ಸಬ್ ಸ್ಕ್ರಿಪ್ಷನ್ ಶುರು

ಸವರನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡುವ ಮತ್ತೊಂದು ಅನುಕೂಲ ಅಂದರೆ, ಅಪ್ರಾಪ್ತ ಮಕ್ಕಳ ಹೆಸರಲ್ಲಿ ಹಣ ಹಾಕಬಹುದು. ಇದನ್ನು ಹೊರತುಪಡಿಸಿದರೆ ಈ ಬಾಂಡ್ ಗಳಲ್ಲಿ ಪೇಪರ್ ಅಥವಾ ಡಿಮ್ಯಾಟ್ ಸ್ವರೂಪದಲ್ಲಿ ಮಾಡಬಹುದು. ಫಿಸಿಕಲ್ ಸ್ವರೂಪದಲ್ಲಿ ಖರೀದಿಸಿದರೆ ಚಿನ್ನವನ್ನು ಸಂಗ್ರಹಿಸುವುದು ಕಷ್ಟ. ಆಭರಣಗಳಿಗೆ ತಗುಲುವಂತೆ ತಯಾರಿಕಾ ವೆಚ್ಚ ಇವುಗಳಿಗೆ ಬೀಳುವುದಿಲ್ಲ. ಸವರನ್ ಗೋಲ್ಡ್ ಬಾಂಡ್ಸ್ ಹೂಡಿಕೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಇದೆ.

ಸವರನ್ ಗೋಲ್ಡ್ ಬಾಂಡ್ಸ್ ನಲ್ಲಿ ಯಾರು ಹೂಡಿಕೆ ಮಾಡಬಹುದು?

ಸವರನ್ ಗೋಲ್ಡ್ ಬಾಂಡ್ಸ್ ನಲ್ಲಿ ಯಾರು ಹೂಡಿಕೆ ಮಾಡಬಹುದು?

ಭಾರತೀಯ ನಾಗರಿಕರು ಯಾರು ಬೇಕಾದರೂ ಸವರನ್ ಗೋಲ್ಡ್ ಬಾಂಡ್ಸ್ ನಲ್ಲಿ ಹೂಡಿಕೆ ಮಾಡಬಹುದು. ವೈಯಕ್ತಿಕ, ಹಿಂದೂ ಅವಿಭಕ್ತ ಕುಟುಂಬ (ಎಚ್ ಯುಎಫ್), ವಿಶ್ವವಿದ್ಯಾಲಯಗಳು, ಟ್ರಸ್ಟ್ ಗಳು, ಚಾರಿಟೇಬಲ್ ಟ್ರಸ್ಟ್ ಗಳು ಹೂಡಬಹುದು. ಈ ಹೂಡಿಕೆ ಭಾರತೀಯರಿಗಾಗಿಯೇ ಮೀಸಲಿರಿಸಲಾಗಿದೆ. ಸವರನ್ ಗೋಲ್ಡ್ ಬಾಂಡ್ ಗಳಲ್ಲಿ ಆನ್ ಲೈನ್ ಮೂಲಕ ಎಲ್ಲರೂ ಹೂಡಿಕೆ ಮಾಡಲು ಸಾಧ್ಯವಿಲ್ಲ. ಇದು ವೈಯಕ್ತಿಕ ನಿವಾಸಿಗಳಿಗೆ ಮೀಸಲಾದದ್ದು.

ಸವರನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡುವುದು ಹೇಗೆ?

ಸವರನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡುವುದು ಹೇಗೆ?

ಸವರನ್ ಗೋಲ್ಡ್ ಬಾಂಡ್ ಗಳಲ್ಲಿ ಹಣ ಹೂಡಿಕೆ ಮಾಡಲು ಬಯಸುವವರು ಬ್ಯಾಂಕ್ ಶಾಖೆಗಳಲ್ಲಿ, ಸ್ಟಾಕ್ ಎಕ್ಸ್ ಚೇಂಜ್ ಗಳು, ಅಂಚೆ ಕಚೇರಿ ಅಥವಾ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.ನಲ್ಲಿ ದೊರೆಯುವ ಅರ್ಜಿಯನ್ನು ತುಂಬಬೇಕು. ಷೆಡ್ಯೂಲ್ಡ್ ಬ್ಯಾಂಕ್ ಗಳ ವೆಬ್ ಸೈಟ್ ನಲ್ಲಿ ಲಭ್ಯ ಇರುವ ಅರ್ಜಿಗಳನ್ನಾದರೂ ತುಂಬಬಹುದು. ಹೂಡಿಕೆದಾರರು ಈ ಬಾಂಡ್ ಗಳ ಫಿಸಿಕಲ್ ಡೆಲಿವರಿ ಪಡೆಯಬಹುದು ಅಥವಾ ಆನ್ ಲೈನ್ ಸ್ವರೂಪದಲ್ಲೇ ತಮ್ಮ ಡಿಮ್ಯಾಟ್ ಖಾತೆಯಲ್ಲಿ ಇರಿಸಿಕೊಳ್ಳಬಹುದು. ನೆನಪಿರಲಿ, ಅರ್ಜಿಯಲ್ಲಿ ಪ್ಯಾನ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು.

ಸವರನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಷರತ್ತುಗಳು
 

ಸವರನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಷರತ್ತುಗಳು

ಹೂಡಿಕೆದಾರರು ಕನಿಷ್ಠ 1 ಗ್ರಾಮ್ ಚಿನ್ನವನ್ನು ಖರೀದಿ ಮಾಡಬೇಕು. ಗರಿಷ್ಠ ಮಿತಿ 4 ಕೇಜಿ. ಬಾಂಡ್ ಮೆಚ್ಯೂರಿಟಿ ಅವಧಿ 8 ವರ್ಷಗಳು. ಐದು ವರ್ಷದ ನಂತರ ಹೂಡಿಕೆಯಿಂದ ಹೊರಬರುವುದಕ್ಕೆ ಅವಕಾಶ ಇದೆ.

ಸವರನ್ ಗೋಲ್ಡ್ ಬಾಂಡ್ ರಿಡೆಂಪ್ಷನ್

ಸವರನ್ ಗೋಲ್ಡ್ ಬಾಂಡ್ ರಿಡೆಂಪ್ಷನ್

ಇಂಡಿಯನ್ ಬುಲಿಯನ್ ಅಂಡ್ ಜುವೆಲ್ಲರ್ಸ್ ಅಸೋಸಿಯೇಷನ್ಸ್ ಪ್ರಕಟಿಸುವ 999 ಶುದ್ಧತೆಯ ಚಿನ್ನದ ದರವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮರುಪಾವತಿಯ ಹಿಂದಿನ ಮೂರು ಬಿಜಿನೆಸ್ ಡೇಸ್ ಸರಾಸರಿ ದರವನ್ನು ಇದಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೂಡಿಕೆದಾರರಿಗೆ ಒಂದು ತಿಂಗಳು ಮುಮ್ಚಿತವಾಗಿ ಮಾಹಿತಿ ನೀಡಲಾಗುತ್ತದೆ. ಮತ್ತು ರಿಡೆಂಪ್ಷನ್ ಅಥವಾ ಮೆಚ್ಯೂರಿಟಿ ಮೊತ್ತವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ.

ತೆರಿಗೆ ಕಡಿತದ ಲೆಕ್ಕಾಚಾರ ಹೇಗೆ?

ತೆರಿಗೆ ಕಡಿತದ ಲೆಕ್ಕಾಚಾರ ಹೇಗೆ?

ರಿಡೆಂಪ್ಷನ್ ನಿಂದ ವೈಯಕ್ತಿಕವಾಗಿ ದೊರೆಯುವ ಗಳಿಕೆಗೆ ವಿನಾಯಿತಿ ಇದೆ. ಆದರೆ ಸವರನ್ ಗೋಲ್ಡ್ ಬಾಂಡ್ ಗಳಿಗೆ ದೊರೆಯುವ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆ 1961 ನಿಯಮಾವಳಿ ಅನುಸಾರ ತೆರಿಗೆ ಬೀಳುತ್ತದೆ. ಮೆಚ್ಯೂರಿಟಿ ನಂತರ ರಿಡೀಮ್ ಮಾಡಿದಲ್ಲಿ ಕ್ಯಾಪಿಟಲ್ ಗೇಯ್ನ್ಸ್ ಗೆ ವಿನಾಯಿತಿ ಇದೆ. ಎಸ್ ಜಿಬಿ ಹೂಡಿಕೆ ಮೇಲೆ ದೊರೆಯುವ ಬಡ್ಡಿಗೆ ಟಿಡಿಎಸ್ ಅನ್ವಯ ಆಗುತ್ತದೆ.

English summary

Know All About Sovereign Gold Bonds Investment

Here is the must know details about Sovereign Gold Bonds (SGB) investment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X