ಫಿಮೇಲ್ ಹಿಟ್ಟ್ ಮೆಷಿನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದೀಪಿಕಾ ಪಡುಕೋಣೆ ಸಿನಿಮಾಗಳಲ್ಲಿ ತನ್ನ ಪಾತ್ರ, ಇತರೆ ಉದ್ಯಮಗಳ ಮೂಲಕ ಎಂದಿಗೂ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 2006 ರಲ್ಲಿ ಐಶ್ವರ್ಯ ಚಿತ್ರದ ಮೂಲಕ ಎಂಟ್ರಿ ನೀಡಿದ ದೀಪಿಕಾ ನಂತರ ಒಂದು ವರ್ಷದ ನಂತರ 2007 ರಲ್ಲಿ ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು.
ಈಗ ದೀಪಿಕಾ ಪಡುಕೋಣೆ 2023 ರಲ್ಲಿ ಉತ್ತಮ ಆದಾಯವನ್ನು ಹೊಂದಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ಯಶಸ್ವಿಯಾಗುತ್ತಿದ್ದಂತೆ ದೀಪಿಕಾ ಪಡುಕೋಣೆಯ ನಿವ್ವಳ ಆದಾಯದಲ್ಲಿ ಸೊನ್ನೆಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಲಿವುಡ್‌ನಲ್ಲಿಯೂ ದೀಪಿಕಾ ಮಿಂಚಿದ್ದಾರೆ. ದೀಪಿಕಾ ನಿವ್ವಳ ಆದಾಯ ಎಷ್ಟಿದೆ ಎಂಬ ವಿವರ ಇಲ್ಲಿದೆ ಮುಂದೆ ಓದಿ...

ದೀಪಿಕಾ ಪಡುಕೋಣೆ ನಿವ್ವಳ ಆದಾಯ ಎಷ್ಟಿದೆ?
ದೀಪಿಕಾ ಪಡುಕೋಣೆ ನಿವ್ವಳ ಆದಾಯವು ಸುಮಾರು 60 ಮಿಲಿಯನ್ ಯುಎಸ್ ಡಾಲರ್ (500 ಕೋಟಿ ರೂಪಾಯಿ) ಆಗಿದೆ. ನಟಿ ಒಂದು ಸಿನಿಮಾಕ್ಕೆ ಅಂದಾಜು 3 ಮಿಲಿಯನ್ ಡಾಲರ್ ಅಥವಾ 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆಕೆಯ ಮಾಸಿಕ ಆದಾಯ 365,769 ಯುಎಸ್ ಡಾಲರ್ ಅಥವಾ 3 ಕೋಟಿ ರೂಪಾಯಿ ಆಗಿದೆ. ವಾರ್ಷಿಕವಾಗಿ ದೀಪಿಕಾ 4 ಮಿಲಿಯನ್ ಡಾಲರ್ ಅಥವಾ 40 ಕೋಟಿ ರೂಪಾಯಿ ಆದಾಯವನ್ನು ಗಳಿಸುತ್ತಾರೆ.
ಬ್ರ್ಯಾಂಡ್ ಅಂಬಾಸಿಡರ್ ದೀಪಿಕಾ ಗಳಿಕೆ
ದೀಪಿಕಾ ಪಡುಕೋಣೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಉತ್ತಮ ಆದಾಯವನ್ನು ಗಳಿಸುತ್ತಾರೆ. ಪಠಾಣ್ ನಟಿ ಒಂದು ಜಾಹೀರಾತಿಗೆ 975,466 ಯುಎಸ್‌ಡಿ ಅಥವಾ 8 ಕೋಟಿ ರೂಪಾಯಿ ಶುಲ್ಕವನ್ನು ವಿಧಿಸುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ದೀಪಿಕಾ ಪಡುಕೋಣೆ ನಿವ್ವಳ ಮೌಲ್ಯವು ಶೇಕಡ 40 ರಷ್ಟು ಏರಿಕೆಯಾಗಿದೆ.
ನಾಲ್ಕು ವರ್ಷದಲ್ಲಿ ನಿವ್ವಳ ಆದಾಯ ಬೆಳವಣಿಗೆ
2022 ರಲ್ಲಿ ದೀಪಿಕಾ ಪಡುಕೋಣೆ ನಿವ್ವಳ ಆದಾಯವು 45 ಮಿಲಿಯನ್ ಡಾಲರ್ (357 ಕೋಟಿ ರೂಪಾಯಿ) ಆಗಿತ್ತು. 2021 ರಲ್ಲಿ ನಿವ್ವಳ ಆದಾಯ 40 ಮಿಲಿಯನ್ ಡಾಲರ್ (330 ಕೋಟಿ ರೂಪಾಯಿ) ಆಗಿತ್ತು. 2020 ರಲ್ಲಿ, ದೀಪಿಕಾ ಪಡುಕೋಣೆ ಆದಾಯ 36 ಮಿಲಿಯನ್ ಡಾಲರ್ (300 ಕೋಟಿ ರೂಪಾಯಿ) ಆಗಿದೆ. 2019 ರಲ್ಲಿ ಇದು ಸುಮಾರು 32 ಮಿಲಿಯನ್ ಡಾಲರ್ (270 ಕೋಟಿ ರೂಪಾಯಿ) ಆಗಿತ್ತು.
82°Eಯಿಂದ ಪಡೆಯುವ ಗಳಿಕೆ ಗೊತ್ತಾ?
ದೀಪಿಕಾ ಪಡುಕೋಣೆ ಮತ್ತು ಜಿಗರ್ ಶಾ ನವೆಂಬರ್ 2022 ರಲ್ಲಿ 82°E ಅನ್ನು ಪ್ರಾರಂಭಿಸಿದರು. ಆರಂಭವಾದ ಮೊದಲ ಆರು ಎಂಟು ತಿಂಗಳಲ್ಲಿ 82°E ಅಂದಾಜು 12 ಮಿಲಿಯನ್ ಡಾಲರ್ (100 ಕೋಟಿ ರೂಪಾಯಿ) ಗಳಿಸಿದೆ.
ಕಾಕ್ಟೇಲ್ ನಟಿ ಒಡೆತನದ ಆಸ್ತಿಗಳು
2013 ರಲ್ಲಿ, ದೀಪಿಕಾ ಪ್ರಭಾದೇವಿಯಲ್ಲಿ ಸುಮಾರು 1 ಮಿಲಿಯನ್ ಯುಎಸ್ ಡಾಲರ್ (16 ಕೋಟಿ ರೂಪಾಯಿ) ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೂಡ ಬಾಂದ್ರಾದಲ್ಲಿ ತಮ್ಮ ಕನಸಿನ ಮನೆಯನ್ನು ಖರೀದಿಸಲು 154 ಮಿಲಿಯನ್ ಡಾಲರ್ (119 ಕೋಟಿ ರೂಪಾಯಿ) ಖರ್ಚು ಮಾಡಿದ್ದಾರೆ.
ಕ್ವಾಡ್ರಪ್ಲೆಕ್ಸ್ 11,266 ಚದರ ಅಡಿ ಆಗಿದೆ ಮತ್ತು 1,300 ಚದರ ಅಡಿ ವಿಶೇಷ ಟೆರೇಸ್ ಅನ್ನು ಹೊಂದಿದೆ. ಶಾರುಖ್ ಖಾನ್ ಮನೆ ಮನ್ನತ್ ಪಕ್ಕದಲ್ಲಿದೆ. ದಂಪತಿಗಳು ವರ್ಲಿಯ ಬ್ಯೂಮೊಂಡೆ ಟವರ್ಸ್‌ನಲ್ಲಿರುವ 5ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ದಂಪತಿಗೆ ಸುಮಾರು ಯುಎಸ್‌ಡಿ 4 ಮಿಲಿಯನ್ (40 ಕೋಟಿ ರೂಪಾಯಿ) ವೆಚ್ಚವಾಗಿದೆ. ದಂಪತಿಗಳು ಅಲಿಬಾಗ್‌ನಲ್ಲಿ ಸುಮಾರು 2 ಯುಎಸ್‌ಡಿ (22 ಕೋಟಿ ರೂಪಾಯಿ) ಬಂಗಲೆಯನ್ನು ಸಹ ಖರೀದಿಸಿದರು.
ನಟಿಯ ಗ್ಯಾರೇಜ್‌ನಲ್ಲಿರುವ ಕಾರುಗಳಿದು ನೋಡಿ
ದೀಪಿಕಾ ಪಡುಕೋಣೆ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯೂ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 203,626 ಯುಎಸ್ ಡಾಲರ್ ಅಥವಾ 1.67 ಕೋಟಿ ರೂಪಾಯಿ ಮೌಲ್ಯದ ಮರ್ಸಿಡೀಸ್ ಮೇಬ್ಯಾಕ್ S500 ಅನ್ನು ಹೊಂದಿದ್ದಾರೆ. ಆಡಿ A8 ಮತ್ತು ಆಡಿ Q7 ಸೇರಿದಂತೆ ಐಷಾರಾಮಿ ಆಡಿ ಕಾರುಗಳನ್ನು ಹೊಂದಿದ್ದಾರೆ.
ಕಾರುಗಳ ಬೆಲೆ ಕ್ರಮವಾಗಿ 191,432 ಯುಎಸ್ ಡಾಲರ್ (1.57 ಕೋಟಿ ರೂಪಾಯಿ) ಮತ್ತು 113,819 ಯುಎಸ್ ಡಾಲರ್ (93.35 ಲಕ್ಷ ರೂಪಾಯಿ) ಆಗಿದೆ. ಬಿಎಂಡಬ್ಲ್ಯೂ 5 ಸೀರಿಸ್ ಅನ್ನು ಕೂಡಾ ದೀಪಿಕಾ ಹೊಂದಿದ್ದು ಇದು ಐಷಾರಾಮಿ ಕಾರು ಆಗಿದೆ. ಈ ಕಾರನ್ನು 78,033 ಯುಎಸ್ ಡಾಲರ್ ಅಥವಾ 64 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ.
ದೀಪಿಕಾ ಹೊಂದಿರುವ ಇತರ ದುಬಾರಿ ಆಸ್ತಿಗಳು
ನಟಿ ಇಪಿಗಾಮಿಯಾ, ಸೂಪರ್‌ಟೈಲ್ಸ್ ಮತ್ತು ಹಲವಾರು ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ದೀಪಿಕಾ ವೈಯಕ್ತಿಕ ಹೂಡಿಕೆ ಸುಮಾರು 4 ಮಿಲಿಯನ್ ಡಾಲರ್ ಅಥವಾ 35 ಕೋಟಿ ರೂಪಾಯಿ ಆಗಿದೆ. ಇನ್ನು 9,754 ಡಾಲರ್ (8 ಲಕ್ಷ ರೂಪಾಯಿ) ಮೌಲ್ಯದ ಟಿಸ್ಸಾಟ್ ಕ್ಲಾಸಿಕ್ ಪ್ರಿನ್ಸ್ ಡೈಮಂಡ್ಸ್ ವಾಚ್ ಸೇರಿದಂತೆ ಹಲವಾರು ದುಬಾರಿ ಆಸ್ತಿಗಳನ್ನು ಪಡುಕೋಣೆ ಹೊಂದಿದ್ದಾರೆ.
4,877 ಡಾಲರ್ (4 ಲಕ್ಷ ರೂಪಾಯಿ) ಮೌಲ್ಯದ ಕಾರ್ಟಿಯರ್ ಲವ್ ಬ್ರೇಸ್ಲೆಟ್ ಅನ್ನು ಸಹ ಹೊಂದಿದ್ದಾರೆ. ನಟಿ ಹಲವಾರು ದುಬಾರಿ ಪರ್ಸ್‌ಗಳನ್ನು ಹೊಂದಿದ್ದಾರೆ. 9,754 ಡಾಲರ್ (8 ಲಕ್ಷ ರೂಪಾಯಿ) ಹರ್ಮ್ಸ್ ಬಿರ್ಕಿನ್ ಬ್ಯಾಗ್, 2,743 ಡಾಲರ್ (2.25 ಲಕ್ಷ ರೂಪಾಯಿ) ಫೆಂಡಿ ಡಾಟ್‌ಕಾಮ್ ಸ್ಯಾಚೆಲ್ ಹೊಂದಿದ್ದಾರೆ.


Click it and Unblock the Notifications