UPI And UPI Lite: ಯುಪಿಐ ಹಾಗೂ ಯುಪಿಐ ಲೈಟ್‌ ಪಾವತಿ ವ್ಯವಸ್ಥೆ ನಡುವೆ ಏನಿದೆ ವ್ಯತ್ಯಾಸ?

ದೇಶದಲ್ಲಿ ಡಿಜಿಟಲ್‌ ರೂಪದ ಹಣ ಪಾವತಿಗಾಗಿ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿರುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ ಅಥವಾ ಯುಪಿಐ ಹೆಚ್ಚಿನ ಜನಪ್ರಿಯತೆ ಪಡೆದಿದ್ದು, ದಿನನಿತ್ಯದ ಹಣ ವ್ಯವಹಾರಗಳಿಗೆ ಜನರ ಅತ್ಯವಶ್ಯಕ ವ್ಯವಸ್ಥೆಯಾಗಿ ಬದಲಾಗಿದೆ.

ಈ ಯುಪಿಐ ಡಿಜಿಟಲ್‌ ಪಾವತಿ ವ್ಯವಸ್ಥೆಯು ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದು, ಎನ್‌ಪಿಸಿಐ ಇತ್ತೀಚೆಗೆ ಹೆಚ್ಚು ಗ್ರಾಹಕರನ್ನು ತಲುಪಲು ಹಾಗೂ ಪೇಮೆಂಟ್‌ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸುವುದಕ್ಕೆ ಯುಪಿಐ ಲೈಟ್‌ ಸರ್ವೀಸ್‌ ಅನ್ನು ಕೂಡ ಪ್ರಾರಂಭಿಸಿದೆ.

 ಯುಪಿಐ ಹಾಗೂ ಯುಪಿಐ ಲೈಟ್‌ ಪಾವತಿ ವ್ಯವಸ್ಥೆ ನಡುವೆ ಏನಿದೆ ವ್ಯತ್ಯಾಸ?

ಯುನೈಟೆಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಹಾಗೂ ಯುಪಿಐ ಲೈಟ್‌ ಡಿಜಿಟಲ್‌ ಪೇಮೆಂಟ್‌ ಜಗತ್ತಿನಲ್ಲಿರುವ ಎರಡು ಪ್ರಮುಖ ವ್ಯವಸ್ಥೆಗಳಾಗಿವೆ. ಯುಪಿಐ ಪೂರ್ಣ ಹಾಗೂ ವೈಶಿಷ್ಟ್ಯಗಳಿಂದ ಕೂಡಿದ ಸೇವೆಯಾಗಿದ್ದು, ಹಲವು ಬ್ಯಾಂಕ್‌ ಖಾತೆಗಳು ಹಾಗೂ ವ್ಯಾಪಕ ಶ್ರೇಣಿಗಳ ನಿರಂತರ ಸೇವೆಯನ್ನು ಒದಗಿಸುವ ವ್ಯವಸ್ಥೆಯಾಗಿದೆ.

ಇದು 24/7 ಸೇವೆ ಒದಗಿಸುತ್ತಿದ್ದು, ನೀವು ಬಳಸುವ ಸ್ಮಾರ್ಟ್‌ಫೋನ್‌ ಮೂಲಕ ಬ್ಯಾಂಕ್‌ಗಳೊಂದಿಗೆ ಹಣ ವರ್ಗಾವಣೆಗೆ ನಿರಂತರವಾಗಿ ಕೆಲಸ ಮಾಡುತ್ತದೆ. ವರ್ಚುವಲ್‌ ಐಡಿ, ಬ್ಯಾಂಕ್‌ ಖಾತೆ ಸಂಖ್ಯೆ, ಮೊಬೈಲ್‌ ನಂಬರ್‌ ಅಥವಾ ಕ್ಯೂಆರ್‌ ಕೋಡ್‌ ಮೂಲಕ ಯುಪಿಐನಡಿ ಹಣ ವರ್ಗಾವಣೆಯನ್ನು ಮಾಡಬಹುದು. ಒಂದು ಮೊಬೈಲ್‌ ಆಪ್‌ ಮೂಲಕ ಹಲವಾರು ಹಣ ವರ್ಗಾವಣೆ ವ್ಯವಹಾರವನ್ನು ನಿರ್ವಹಿಸಬಹುದು.

ಯುಪಿಐ ಲೈಟ್‌ ಅಂದರೇನು?

2022ರ ಸೆಪ್ಟಂಬರ್‌ನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಯುಪಿಐ ಲೈಟ್‌ ಆವೃತ್ತಿಯನ್ನು ಪರಿಚಯಿಸಿತ್ತು. ಇದು ನಿಮ್ಮ ಮೊಬೈಲ್‌ನಲ್ಲಿ ಡಿಜಿಟಲ್‌ ವ್ಯಾಲೆಟ್‌ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಯುಪಿಐ ಲೈಟ್‌ನಡಿ ಯುಪಿಐ ಪಿನ್‌ ಇಲ್ಲದೆ ಸಣ್ಣ ಮೊತ್ತವನ್ನು ಬಹಳ ಸುಲಭ ಮತ್ತು ತ್ವರಿತವಾಗಿ ವರ್ಗಾವಣೆ ಮಾಡಬಹುದು.

ಯುಪಿಐ ಲೈಟ್‌ನ ಮತ್ತೊಂದು ವಿಶೇಷತೆ ಅಂದರೆ ಒಂದು ದಿನದಲ್ಲಿ ಎಷ್ಟು ಬೇಕಾದರೂ ವ್ಯವಹಾರವನ್ನು ಮಾಡಬಹುದು. ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಮೊತ್ತದ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಭಾರತದಂಥಹ ದೇಶದಲ್ಲಿ ಡಿಜಿಟಲ್‌ ಪೇಮೆಂಟ್‌ ಅನ್ನು ಪ್ರತಿಯೊಬ್ಬರ ಕೈಗೆಟಕುವಂತೆ ಮಾಡುವ ಉದ್ದೇಶದಿಂದಲೇ ಯುಪಿಐ ಲೈಟ್‌ ಅನ್ನು ಪರಿಚಯಿಸಲಾಗಿದೆ.

ಅಂದರೆ, ಜನರನ್ನು ಡಿಜಿಟಲ್‌ ಪೇಮೆಂಟ್‌ಗಳತ್ತ ಉತ್ತೇಜಿಸುವುದಕ್ಕೆ ಸಣ್ಣ ವ್ಯವಹಾರಗಳನ್ನು ಮಾಡುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಯುಪಿಐ ಲೈಟ್‌ ಪ್ರಾರಂಭಿಸಲಾಗಿದೆ. ಬಳಕೆದಾರರು ಈ ಯುಪಿಐ ಪ್ರತಿ ವ್ಯವಹಾರದಲ್ಲಿ 200 ರೂಪಾಯಿವರೆಗೆ ಯಾವುದೇ ಪಿನ್‌ ಇಲ್ಲದೆ ವರ್ಗಾವಣೆ ಮಾಡಬಹುದು.

ಜತೆಗೆ, ಬಳಕೆದಾರರು 2000 ರೂಪಾಯಿವರೆಗೆ ತಮ್ಮ ವ್ಯಾಲೆಟ್‌ಗೆ ವರ್ಗಾಯಿಸಬಹುದು. ಅಂದರೆ ವ್ಯಾಲೆಟ್‌ಗೆ ಪ್ರತಿದಿನ 4000 ರೂಪಾಯಿವರೆಗೆ ವ್ಯವಹಾರದ ಮಿತಿಯನ್ನು ನೀಡಲಾಗಿದೆ.

ಯುಪಿಐ ಹಾಗೂ ಯುಪಿಐ ಲೈಟ್‌ಗೆ ಇರುವ ವ್ಯತ್ಯಾಸವೇನು?

ಈ ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಸುಲಭ ಹಾಗೂ ಕಡಿಮೆ ಮೊತ್ತದ ಹಣದ ವ್ಯವಹಾರವನ್ನು ಯುಪಿಐ ಲೈಟ್‌ನಲ್ಲಿ ಮಾಡಬಹುದು. ಆದರೆ ಯುಪಿಐ ವ್ಯವಸ್ಥೆಯಡಿ ಪ್ರತಿದಿನ ಹಣ ವರ್ಗಾವಣೆಗೆ ಮಿತಿಯನ್ನು ನಿಗದಿಪಡಿಸಲಾಗಿದೆ. ಇನ್ನು ಯುಪಿಐನಲ್ಲಿ 200 ರೂಪಾಯಿವರೆಗೆ ಎಷ್ಟು ಬಾರಿ ಬೇಕಾದರೂ ಪಾವತಿ ಮಾಡಬಹುದು. ಅಲ್ಲದೆ, ಯುಪಿಐ ಲೈಟ್‌ನಡಿ ಯುಪಿಐ ಪಿನ್‌ ಅನ್ನು ನಮೂದಿಸುವ ಅಗತ್ಯವಿಲ್ಲ.

ಯುಪಿಐ ಲೈಟ್‌ ವ್ಯವಸ್ಥೆಯನ್ನು ಬಳಸುವ ಗ್ರಾಹಕರಿಗೆ ತಾವು ಮಾಡುವ ಡಿಜಿಟಲ್‌ ಪ್ರತಿದಿನದ ವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಎಸ್‌ಎಂಎಸ್‌ ಸಂದೇಶದ ಮೂಲಕ ಮಾಹಿತಿಯನ್ನು ನೀಡುತ್ತದೆ.

ಈ ನಡುವೆ ಈ ಲೈಟ್‌ನ ಮತ್ತೊಂದು ವೈಶಿಷ್ಟ್ಯತೆ ಅಂದರೆ ಇಂಟರ್‌ನೆಟ್‌ನ ಸಹಾಯವಿಲ್ಲದೆಯೂ ಯುಪಿಐ ವ್ಯವಹಾರಗಳನ್ನು ಮಾಡಬಹುದು. ಆದರೆ ಯುಪಿಐ ವ್ಯಾಲೆಟ್‌ಗೆ ಹಣ ಜಮೆ ಮಾಡುವಾಗ ಅದು ಆನ್‌ಲೈನ್‌ ಮೂಲಕವೇ ಅಪ್‌ಡೇಟ್‌ ಆಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+