ಒಡಿಐ ವಿಶ್ವಕಪ್ 2023ರ ಅಕ್ಟೋಬರ್ 5 ರಂದು ಆರಂಭವಾಗಿದೆ. ಈಗ ವಿಶ್ವದ ಅಗ್ರ 10 ತಂಡಗಳು ವಿಶ್ವ ಚಾಂಪಿಯನ್ ಆಗಲು ಮೈದಾನದಲ್ಲಿ ಇಳಿದು ಆಟದಲ್ಲಿ ತೊಡಗಿದೆ. ಈ ಹಿಂದೆ ಏಷ್ಯಾ ಕಪ್‌ನಲ್ಲಿ ಭಾರತವು ಭಾರೀ ಪ್ರಮಾಣದಲ್ಲಿ ಬಹುಮಾನವನ್ನು ಪಡೆದಿದೆ. ಈಗ ವಿಶ್ವ ಕಪ್‌ನಲ್ಲಿ ಯಾವ ತಂಡ ಪಡೆಯಲಿದೆ ಎಂದು ನಾವು ಕಾದುನೋಡಬೇಕಿದೆ.
ಏಷ್ಯಾ ಕಪ್‌ನಲ್ಲಿ ಬಿಸಿಸಿಐ ಅಧ್ಯಕ್ಷ ರೋಗರ್ ಬಿನ್ನಿ ಭಾರತ ತಂಡದ ನಾಯಕ ರೋಹಿತ್ ಶರ್ಮಾರಿಗೆ 150000 ಯುಎಸ್ ಡಾಲರ್ ಚೆಕ್ ಅನ್ನು ನೀಡಿದ್ದಾರೆ. ಅಂದರೆ ಏಷ್ಯಾ ಕಪ್ 2023 ರ ಭಾರತದ ಬಹುಮಾನವು 12463552.50 ರೂಪಾಯಿ (ಒಂದು ಕೋಟಿ 24 ಲಕ್ಷ 63 ಸಾವಿರದ ಐನ್ನೂರ ಐವತ್ತೆರಡು ರೂಪಾಯಿ) ಆಗಿದೆ ಎಂದು ವರದಿಯಾಗಿದೆ. ವಿಶ್ವಕಪ್‌ನ ವಿಜೇತರು ಮತ್ತು ರನ್ನರ್-ಅಪ್‌ಗಳು ಪಡೆಯುವ ಬಹುಮಾನ ಮೊತ್ತವೆಷ್ಟು?, ಇಲ್ಲಿದೆ ವಿವರ ಮುಂದೆ ಓದಿ....

ವಿಶ್ವಕಪ್ ವಿಜೇತರ ಬಹುಮಾನ ಮೊತ್ತವೆಷ್ಟು?
ಈ ಅಂತಾರಾಷ್ಟ್ರೀಯ ಕ್ರಿಕೆಟ್ ಈವೆಂಟ್ ಒಟ್ಟು 10 ಮಿಲಿಯನ್ ಡಾಲರ್ ಅಥವಾ ಅಂದಾಜು 84 ಕೋಟಿ ರೂಪಾಯಿ ಬಹುಮಾನವನ್ನು ಹೊಂದಿದೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಅದಾದ ಬಳಿಕ ವಿಜೇತರು ಒಟ್ಟು 4 ಮಿಲಿಯನ್ ಡಾಲರ್ (ಅಂದಾಜು 33 ಕೋಟಿ ರೂಪಾಯಿ) ಬಹುಮಾನವನ್ನು ಪಡೆಯುತ್ತಾರೆ. ರನ್ನರ್ ಅಪ್ ತಂಡವು 2 ಮಿಲಿಯನ್ ಡಾಲರ್ ಅಥವಾ (ಅಂದಾಜು 16.5 ಕೋಟಿ ರೂಪಾಯಿ) ಪಡೆಯುತ್ತಾರೆ.
ಎಲ್ಲಾ 10 ಭಾಗವಹಿಸುವ ತಂಡಗಳು ಮುಖಾಮುಖಿಯಾಗುತ್ತಿದೆ. ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಗೆಲ್ಲುವ ಬಹುಮಾನದ ಹಣವನ್ನು ಪ್ರತಿ ಗೆಲುವಿಗೆ 40,000 ಡಾಲರ್ ಅಥವಾ ಅಂದಾಜು 33 ಲಕ್ಷ ರೂಪಾಯಿ ಎಂದು ಇರಿಸಲಾಗಿದೆ. ತಂಡವು ನಾಕೌಟ್ ಹಂತಗಳಿಗೆ ಅರ್ಹತೆ ಪಡೆಯಲು ವಿಫಲವಾದರೂ, ಆ ತಂಡ 100,000 ಡಾಲರ್ ಅಥವಾ 8.4 ಲಕ್ಷ ರೂಪಾಯಿ ಪಡೆಯುತ್ತಾರೆ.
"ಬಹುಮಾನದ ಮೊತ್ತವು ಮುಂಬರುವ 2025 ರಲ್ಲಿ ನಡೆಯುವ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಒಂದು ದಾರಿ ಹೊಂದಿಸುತ್ತದೆ. ಜುಲೈ 2023 ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಪುರುಷ ಮತ್ತು ಮಹಿಳೆಯರ ಕ್ರಿಕೆಟ್‌ಗೆ ಸಮಾನ ಮೊತ್ತವನ್ನು ಘೋಷಿಸಲಾಗುತ್ತದೆ," ಎಂದು ಐಸಿಸಿ ಈ ಹಿಂದೆಯೇ ಹೇಳಿದೆ.
ವಿಶ್ವಕಪ್ 2023 ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಆರಂಭವಾಗಿದೆ. ಈ ಹಿಂದಿನ ಸೀಸನ್‌ನಲ್ಲಿ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮೊದಲ ಆಟವಾಡಿದ್ದಾರೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಗಳಿಸಿದೆ. ಭಾರತ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆಡಿದ್ದು, ಭರ್ಜರಿ ಗೆಲುವು ಪಡೆದಿದೆ. ಲೀಗ್ ಪಂದ್ಯದಲ್ಲಿ ಒಟ್ಟಾಗಿ 9 ಬಾರಿ ಭಾರತ ಜಯಗಳಿಸಿದೆ.
2023ರ ಒಡಿಐ ವಿಶ್ವಕಪ್‌ಗೆ ಭಾರತೀಯ ತಂಡ ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ .


Click it and Unblock the Notifications