ದೇಶದಲ್ಲಿ ಪ್ರಸ್ತುತ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮತ್ತು ಆಧಾರ್ ಕಾರ್ಡ್ ಅತೀ ಮುಖ್ಯವಾದ ಎರಡು ದಾಖಲೆಗಳಾಗಿದೆ. ಪ್ಯಾನ್ ಎಂಬುದು ತೆರಿಗೆ ಉದ್ದೇಶಗಳಿಗಾಗಿ ಜನರು ಮತ್ತು ಘಟಕಗಳಿಗೆ ಭಾರತದ ಆದಾಯ ತೆರಿಗೆ ಇಲಾಖೆ ನೀಡುವ ಹತ್ತು ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಇದು ಪ್ರತಿ ತೆರಿಗೆದಾರರಿಗೆ ಮುಖ್ಯವಾಗಿ ಬೇಕಾದ ದಾಖಲೆಯಾಗಿದೆ.
ತೆರಿಗೆದಾರರ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಈ ಪ್ಯಾನ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತದೆ. ಭೌತಿಕ ಪ್ಯಾನ್ ಕಾರ್ಡ್ ಅನ್ನು ಪಡೆಯಲು ಅಂಚೆ, ಇತರೆ ಕಾರ್ಯಗಳಿಂದಾಗಿ ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಪ್ರಕ್ರಿಯೆಯನ್ನು ವೇಗವಾಗಿ ಮಾಡಲು, ಇ-ಪ್ಯಾನ್‌ಗಳನ್ನು ನೀಡಲಾಗುತ್ತದೆ. ಇದು ಎಲೆಕ್ಟ್ರಾನಿಕ್ ವಿಧಾನವಾಗಿದೆ. ಇದರಿಂದಾಗಿ ಪ್ಯಾನ್ ಕಾರ್ಡ್ ವಿತರಣೆಯ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ.

ಇ-ಪ್ಯಾನ್ ಬಗ್ಗೆ ತಿಳಿಯಿರಿ
ಇ-ಪ್ಯಾನ್ ಸೌಲಭ್ಯವು ಮಾನ್ಯವಾದ ಆಧಾರ್ ಸಂಖ್ಯೆಯನ್ನು ಹೊಂದಿರುವ ಅರ್ಜಿದಾರರಿಗೆ ತಕ್ಷಣವೇ ಪ್ಯಾನ್ ನೀಡುವುದು ಆಗಿದೆ. ಅರ್ಜಿದಾರರಿಗೆ ಪಿಡಿಎಫ್ ರೂಪದಲ್ಲಿ ಪ್ಯಾನ್ ಕಾರ್ಡ್ ಅನ್ನು ನೀಡಲಾಗುತ್ತದೆ ಮತ್ತು ಇದು ಉಚಿತವಾಗಿದೆ. ಇ-ಪ್ಯಾನ್ ಆಧಾರ್‌ನ ಇ-ಕೆವೈಸಿ ಡೇಟಾವನ್ನು ಆಧರಿಸಿ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ನೀಡಲಾದ ಡಿಜಿಟಲ್ ಸಹಿ ಮಾಡಿದ ಪ್ಯಾನ್ ಕಾರ್ಡ್ ಆಗಿದೆ.
ತ್ವರಿತ ಇ-ಪ್ಯಾನ್ ಸೇವೆಯು ಎಲ್ಲಾ ವೈಯಕ್ತಿಕ ತೆರಿಗೆದಾರರಿಗೆ ಲಭ್ಯವಿರುತ್ತದೆ. ಇದು ಪೂರ್ವ-ಲಾಗಿನ್ ಸೇವೆಯಾಗಿದೆ, ಅಲ್ಲಿ ನೀವು:
* ಆಧಾರ್ ಮತ್ತು ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯ ಸಹಾಯದಿಂದ ಎಲೆಕ್ಟ್ರಾನಿಕ್ ರೂಪದಲ್ಲಿ ಡಿಜಿಟಲ್ ಸಹಿ ಮಾಡಿದ ಪ್ಯಾನ್ ಅನ್ನು ಉಚಿತವಾಗಿ ಪಡೆಯಬಹುದು.
* ಆಧಾರ್ ಇ-ಕೆವೈಸಿ ಪ್ರಕಾರ ಪ್ಯಾನ್ ವಿವರಗಳನ್ನು ಅಪ್‌ಡೇಟ್ ಮಾಡಬಹುದು.
* ಪ್ಯಾನ್‌ನ ಹಂಚಿಕೆ / ಅಪ್‌ಡೇಟ್ ನಂತರ ಇ-ಕೆವೈಸಿ ವಿವರಗಳ ಆಧಾರದ ಮೇಲೆ ಇ-ಫೈಲಿಂಗ್ ಖಾತೆಯನ್ನು ರಚಿಸಬಹುದು.
* ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೊದಲು ಅಥವಾ ನಂತರ ಇ-ಪ್ಯಾನ್ ವಿನಂತಿಯ ಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಬಹುದು
* ಇ-ಪ್ಯಾನ್ ಅನ್ನು ಡೌನ್‌ಲೋಡ್ ಮಾಡಬಹುದು
ಇ-ಪ್ಯಾನ್ ಪ್ರಯೋಜನಗಳು
* ಸುಲಭ ಮತ್ತು ಕಾಗದರಹಿತ ಪ್ರಕ್ರಿಯೆ
* ನಿಮಗೆ ಬೇಕಾಗಿರುವುದು ಆಧಾರ್ ಮತ್ತು ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಮಾತ್ರ
* ಇ-ಪ್ಯಾನ್‌ಗಳು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ
* ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು, ಹಣಕಾಸಿನ ವಹಿವಾಟುಗಳನ್ನು ನಡೆಸಲು, ಕೆವೈಸಿ, ಮೊದಲಾದವುಗಳಿಗೆ ಇ-ಪ್ಯಾನ್ ಬಳಕೆ ಮಾಡಬಹುದು.
ಇ-ಪ್ಯಾನ್ ಪಡೆಯುವುದು ಹೇಗೆ?
ಹಂತ 1: ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ https://www.incometax.gov.in/iec/foportal/ ಗೆ ಭೇಟಿ ನೀಡಿ
ಹಂತ 2: ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಹೋಗಿ, Instant e-PAN ಕ್ಲಿಕ್ ಮಾಡಿ.
ಹಂತ 3: ಇ-ಪ್ಯಾನ್ ಪುಟದಲ್ಲಿ, Get New e-PAN ಕ್ಲಿಕ್ ಮಾಡಿ.
ಹಂತ 4: Get New e-PAN ಪೇಜ್‌ನಲ್ಲಿ ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ,
ಹಂತ 5: I confirm ಎಂದಿರುವಲ್ಲಿ ಚೆಕ್‌ಬಾಕ್ಸ್ ಕ್ಲಿಕ್ ಮಾಡಿ, Continue ಕ್ಲಿಕ್ ಮಾಡಿ.
ಗಮನಿಸಿ: ಆಧಾರ್ ಈಗಾಗಲೇ ಮಾನ್ಯವಾದ ಪ್ಯಾನ್‌ಗೆ ಲಿಂಕ್ ಮಾಡಿದ್ದರೆ, ನಮೂದಿಸಿದ ಆಧಾರ್ ಸಂಖ್ಯೆಯನ್ನು ಈಗಾಗಲೇ ಪ್ಯಾನ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಕಾಣುತ್ತದೆ. ಯಾವುದೇ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ, ನಮೂದಿಸಿದ ಆಧಾರ್ ಸಂಖ್ಯೆಯನ್ನು ಯಾವುದೇ ಸಕ್ರಿಯ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿಲ್ಲ ಎಂದು ಕಾಣಿಸುತ್ತದೆ.
ಹಂತ 6: ಒಟಿಪಿ ಪುಟದಲ್ಲಿ, "ನಾನು ನಿಯಮಗಳನ್ನು ಓದಿದ್ದೇನೆ ಮತ್ತು ಮುಂದುವರೆಯಲು ಸಮ್ಮತಿಸುತ್ತೇನೆ" (I have read the consent terms and agree to proceed further ಎಂದಿರುದನ್ನು ಕ್ಲಿಕ್ ಮಾಡಿ, ಬಳಿಕ Continue ಕ್ಲಿಕ್ ಮಾಡಿ.
ಹಂತ 7: ಆಧಾರ್‌ನೊಂದಿಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿ. ಯುಐಡಿಎಐ ಜೊತೆಗೆ ಆಧಾರ್ ವಿವರಗಳನ್ನು ಮೌಲ್ಯೀಕರಿಸಲು ಚೆಕ್‌ಬಾಕ್ಸ್ ಅನ್ನು ಆಯ್ಕೆ ಮಾಡಿ, Continue ಕ್ಲಿಕ್ ಮಾಡಿ.
ಹಂತ 8: I Accept ಎಂದಿರುವ ಚೆಕ್‌ಬಾಕ್ಸ್ ಅನ್ನು ಆಯ್ಕೆ ಮಾಡಿ, Continue ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಶಸ್ವಿಯಾದ ಬಳಿಕ ಸ್ವೀಕೃತಿ ಸಂಖ್ಯೆಯೊಂದಿಗೆ ಸಂದೇಶ ಕಾಣಲಿದೆ. ನೀವು ಸ್ಟೇಟಸ್ ಚೆಕ್ ಮಾಡಲೆಂದರು ಈ ಸ್ವೀಕೃತಿ ಐಡಿಯನ್ನು ಇಟ್ಟುಕೊಳ್ಳಿ. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ಕೂಡಾ ಸಂದೇಶ ಬರಲಿದೆ.


Click it and Unblock the Notifications