ನೀವು ಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಣೆ ಮಾಡುವುದಾದರೆ, ಬಹುತೇಕ ಖಾಸಗಿ ವಲಯದ ಉದ್ಯೋಗಿಗಳು ನಿವೃತ್ತಿ ಬಳಿಕ ಗಳಿಕೆಯನ್ನು ಮಾಡುವ ಅರ್ಹತೆಯನ್ನು ಹೊಂದಿದ್ದಾರೆ. ಇನ್ನು ಖಾಸಗಿ ಉದ್ಯೋಗಿಗಳು ಮಾತ್ರವಲ್ಲದೆ, ಸರ್ಕಾರಿ ಉದ್ಯೋಗಿಗಳು ಕೂಡಾ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಇಪಿಎಫ್ ಕಾಯ್ದೆಯನ್ನು ಅನುಮೋದಿಸಿದ ಬಳಿಕ ಇಪಿಎಫ್ ಅನ್ನು ಜಾರಿ ಮಾಡಲಾಗಿದೆ.
ನಿಯಮದ ಪ್ರಕಾರ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆಯು ಪ್ರತಿ ಇಪಿಎಫ್ ಖಾತೆದಾರರಿಗೆ ಯುಎಎನ್ ಅಥವಾ ಯುನಿಕ್ ಅಕೌಂಟ್ ನಂಬರ್ ಅನ್ನು ನೀಡುತ್ತದೆ. ಇದಕ್ಕೆ ಉದ್ಯೋಗಿಗಳು ಮತ್ತು ಉದ್ಯೋಗದಾತರು ಕೊಡುಗೆ ನೀಡಬೇಕಾಗುತ್ತದೆ. ನೀವು ಇಪಿಎಫ್ ಕಾಲ್ಕುಲೇಟರ್ ಮೂಲಕ ನಿಮ್ಮ ನಿವೃತ್ತಿ ನಿಧಿಯನ್ನು ಲೆಕ್ಕಹಾಕಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಇಪಿಎಫ್ ಹೂಡಿಕೆ ಮೂಲಕ ಮಾಸಿಕ 7,071 ಪಿಂಚಣಿ ಪಡೆಯುವುದು ಹೇಗೆ, ಇದರ ಲೆಕ್ಕಾಚಾರ ಹೇಗೆ ಎಂದು ತಿಳಿಯಲು ಮುಂದೆ ಓದಿ...

ಇಪಿಎಫ್ ಖಾತೆಗೆ ಉದ್ಯೋಗಿಗಳು ತಮ್ಮ ಶೇಕಡ 12ರಷ್ಟು ಮಾಸಿಕ ಮೂಲ ಆದಾಯದ ಪಾಲನ್ನು ಕೊಡುಗೆಯಾಗಿ ನೀಡಬೇಕಾಗುತ್ತದೆ. ನೀವು ಉದ್ಯೋಗ ಮಾಡುವ ಸಂಸ್ಥೆಯು ಅದಕ್ಕೆ ಅನುಗುಣವಾಗಿ ಅಷ್ಟೇ ಪ್ರಮಾಣದ ಹೂಡಿಕೆಯನ್ನು ಮಾಡುತ್ತದೆ. ಶೇಕಡ 12ರ ಪೈಕಿ ಶೇಕಡ 8.33ರಷ್ಟು ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹೋದರೆ, ಉಳಿದ ಶೇಕಡ 3.67ರಷ್ಟು ಮೊತ್ತ ಉದ್ಯೋಗಿಗಳ ಪಿಂಚಣಿ ನಿಧಿಗೆ ಹೋಗುತ್ತದೆ. ಒಟ್ಟಾಗಿ ಉದ್ಯೋಗಳು ಶೇಕಡ 12ರಷ್ಟು ಹೂಡಿಕೆ ಮಾಡಿದಂತಾಗುತ್ತದೆ.
ಇಪಿಎಫ್ ಕಾಲ್ಕುಲೇಟರ್
ನಿವೃತ್ತಿ ಬಳಿಕ ನಿಮ್ಮ ಇಪಿಎಫ್ ಮೊತ್ತವನ್ನು ಲೆಕ್ಕಾಚಾರ ಮಾಡುವ ಹಣಕಾಸು ಲೆಕ್ಕಾಚಾರದ ವಿಧಾನವನ್ನೇ ಇಪಿಎಫ್ ಅಥವಾ ಪಿಎಫ್ ಕಾಲ್ಕುಲೇಟರ್ ಎಂದು ಕರೆಯಲಾಗುತ್ತದೆ. ನೀವು ಇಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವವನ್ನು ಲೆಕ್ಕ ಹಾಕಬೇಕಾಗಬಹುದು. ಇದರಲ್ಲಿ ನೀವು ಮಾಡಿದ ಹೂಡಿಕೆ ಮತ್ತು ನಿಮ್ಮ ಸಂಸ್ಥೆ ಮಾಡಿದ ಹೂಡಿಕೆ, ಜೊತೆಗೆ ಬಡ್ಡಿದರವು ಕೂಡಾ ಸೇರಿರುತ್ತದೆ.
ಇಪಿಎಫ್ ಫಾರ್ಮೂಲ: ನಿಮ್ಮ ವಯಸ್ಸು, ಮಾಸಿಕ ವೇತನ, ಪಿಎಫ್ ಕೊಡುಗೆ, ಉದ್ಯೋಗ ನೀಡಿದ ಸಂಸ್ಥೆಯ ಪಿಎಫ್ ಕೊಡುಗೆ, ವಾರ್ಷಿಕ ವೇತಹ ಹೆಚ್ಚಳ ಶೇಕಡವಾರು ಲೆಕ್ಕಾಚಾರ, ನಿವೃತ್ತಿ ವಯಸ್ಸು, ಬಡ್ಡಿದರ ಮೊದಲಾದ ಮಾಹಿತಿಯನ್ನು ಇಪಿಎಫ್ ಫಾರ್ಮೂಲ ಒಳಗೊಂಡಿರುತ್ತದೆ. ಎಲ್ಲ ಡೇಟಾವನ್ನು ಸಲ್ಲಿಸಿದ ಬಳಿಕ ನಿವೃತ್ತಿ ಸಂದರ್ಭ ನಿಮಗೆ ಲಭ್ಯವಾಗುವ ಮೊತ್ತವನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ಇಪಿಎಫ್ ಪಿಂಚಣಿ= (ಪಿಂಚಣಿಗೆ ಒಳಪಡುವ ವೇತನ X ಪಿಂಚಣಿಗೆ ಒಳಗಾಗುವ ಸೇವೆ)/70
7071 ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?
ನೀವು ಅಧಿಕ ಪಿಂಚಣಿ ಆಯ್ಕೆಯನ್ನು ಮಾಡಿದರೆ, ನೀವು ಅಧಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. 25 ನೇ ವರ್ಷದಲ್ಲಿಯೇ ನೀವು ಇಪಿಎಸ್ ಕೊಡುಗೆಯನ್ನು ಆರಂಭಿಸಿದರೆ, 58 ವರ್ಷಕ್ಕೆ ನಿವೃತ್ತಿ ಹೊಂದುತ್ತೀರಿ. ಆ ಸಂದರ್ಭದಲ್ಲಿ ನೀವು ಮಾಸಿಕವಾಗಿ 7071 ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಅದರ ಲೆಕ್ಕಾಚಾರವು ಈ ಕೆಳಗಿನಂತೆ ನಡೆಯುತ್ತದೆ.
ಇಪಿಎಫ್ ಪಿಂಚಣಿ= (ಪಿಂಚಣಿಗೆ ಒಳಪಡುವ ವೇತನ X ಪಿಂಚಣಿಗೆ ಒಳಗಾಗುವ ಸೇವೆ)/70
7071= [(Rs. 1500033)/70].


Click it and Unblock the Notifications