ಬಾಲಿವುಡ್‌ನ ಬೋಲ್ಡ್ ನಟಿಯರಲ್ಲಿ ಒಬ್ಬರಾದ ಕಂಗನಾ ರಣಾವತ್ ಹೆಚ್ಚಾಗಿ ಸುದ್ದಿಯಾಗುತ್ತಾ ಇರುತ್ತಾರೆ. ತನ್ನ ಸಂದರ್ಶನ, ಇನ್‌ಸ್ಟಾ ವಿಡಿಯೋಗಳ ಮೂಲಕ ವಿವಾದಾದ್ಮತಕವಾಗಿಯೇ ಹೆಚ್ಚು ಸುದ್ದಿಯಾಗುತ್ತಾರೆ. ಫೋರ್ಬ್ಸ್ ಇಂಡಿಯಾದ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಾಣಸಿಕೊಂಡಿದ್ದಾರೆ. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಪದ್ಮಶ್ರೀ ಪಡೆದಿದ್ದಾರೆ.
ಹೆಚ್ಚಾಗಿ ಮಹಿಳಾ-ಕೇಂದ್ರಿತ ಚಲನಚಿತ್ರಗಳಲ್ಲಿ ಕಂಡು ಬರುವ ಕಂಗನಾ ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿದೆ. ಸರಳವಾದ ಹಿಮಾಚಲಿ ಹುಡುಗಿಯೊಬ್ಬಳು ಬಾಲಿವುಡ್‌ನಲ್ಲಿ ಅತೀ ಜನಪ್ರಿಯ ಹುಡುಗರಲ್ಲಿ ಒಬ್ಬರಾಗಿದ್ದಾರೆ. ಅತೀ ಅಧಿಕ ಸಂಪತ್ತನ್ನು ಗಳಿಸಿದ್ದಾರೆ. ಅಷ್ಟಕ್ಕೂ ನೀವು ಕಂಗನಾ ರಣಾವತ್ ಆದಾಯ ಕೇಳಿದ್ರೆ ಬೆರಗಾಗುವುದು ಖಂಡಿತ!... ಇಲ್ಲಿದೆ ವಿವರ ಮುಂದೆ ಓದಿ...

ಕಂಗನಾ ರಣಾವತ್ ನಿವ್ವಳ ಆದಾಯ ಇಲ್ಲಿದೆ
ಆರಂಭಿಕ ಜೀವನ: 23 ಮಾರ್ಚ್ 1987 ರಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಹಿಂದಿನ ಭಂಬ್ಲಾ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಕಂಗನಾ ರಜಪೂತ ಕುಟುಂಬಕ್ಕೆ ಸೇರಿದವರು ಆಗಿದ್ದಾರೆ. ಶಾಲಾ ಶಿಕ್ಷಕಿ ಆಶಾ ರಣಾವತ್ ಮತ್ತು ಉದ್ಯಮಿ ಅಮರದೀಪ್ ರಣಾವತ್‌ರ ಪುತ್ರಿಯಾಗಿದ್ದಾರೆ. ರಂಗೋಲಿ ಚಂದೇಲ್, ಅಕ್ಷಿತ್ ರಣಾವತ್ ಎಂಬ ಇಬ್ಬರು ಸಹೋದರ, ಸಹೋದರಿ ಇದ್ದಾರೆ.
ವೃತ್ತಿ: ಕಂಗನಾ ಮುಂಬೈನಲ್ಲಿ ಹೊಸಬರಾಗಿದ್ದಾಗ ರಮೇಶ್ ಶರ್ಮಾ ಮತ್ತು ಪಹ್ಲಾಜ್ ನಿಲಾನಿ ನಿರ್ಮಾಣದ ಐ ಲವ್ ಯೂ ಬಾಸ್‌ನಲ್ಲಿ ನಟಿಸಿದರು. ಗ್ಯಾಂಗ್‌ಸ್ಟರ್‌ನಲ್ಲಿ ಸಿಮ್ರಾನ್ ಪಾತ್ರಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದರು. ಲಮ್ಹೆ, ಲೈಫ್ ಇನ್ ಎ ಮೆಟ್ರೋ, ಫ್ಯಾಶನ್, ರಾಝ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
2023 ರಲ್ಲಿ ಕಂಗನಾ ರಣಾವತ್ ನಿವ್ವಳ ಮೌಲ್ಯ: ವರದಿಗಳ ಪ್ರಕಾರ, ಕಂಗನಾ ರಣಾವತ್ ನಿವ್ವಳ ಮೌಲ್ಯ 95 ಕೋಟಿ ರೂಪಾಯಿ ಆಗಿದೆ. ಆಕೆಗೆ ಅಧಿಕ ಆದಾಯವು ಚಲನಚಿತ್ರಗಳಿಂದ ಬರುತ್ತದೆ. ಪ್ರತಿ ಚಲನಚಿತ್ರಕ್ಕೆ 15 ರಿಂದ 27 ಕೋಟಿ ರೂಪಾಯಿ ಪಡೆಯುತ್ತಾರೆ. ಇತ್ತೀಚಿನ ಚಿತ್ರ ತಲೈವಿಗಾಗಿ 24 ಕೋಟಿ ರೂಪಾಯಿ ಪಡೆದಿದ್ದಾರೆ. ಬಹಳಷ್ಟು ಬ್ರ್ಯಾಂಡ್‌ಗಳಿಗೆ ಜಾಹೀರಾತು ನೀಡುತ್ತಿದ್ದು, ಪ್ರತಿ ಜಾಹೀರಾತಿಗೆ 3-3.5 ಕೋಟಿ ರೂಪಾಯಿ ವಿಧಿಸುತ್ತಾರೆ. ಇದರ ಹೊರತಾಗಿ ನಿರ್ದೇಶಕಿ, ನಿರ್ಮಾಪಕಿಯೂ ಹೌದು. ಇದರಿಂದಲೂ ಆದಾಯವನ್ನು ಸಂಪಾದಿಸುತ್ತಾರೆ.
ಕಂಗನಾ ಬಳಿಯಿರುವ ಅತೀ ದುಬಾರಿ ವಸ್ತುಗಳು
ಮನಾಲಿ ಬಂಗಲೆ: ಹಿಮಾಚಲದಿಂದ ಬಂದ ಕಂಗನಾ ಮನಾಲಿಯಲ್ಲಿ ಅದ್ದೂರಿ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದಾರೆ. ಹಲವಾರು ವರದಿಗಳು ಮತ್ತು ಪ್ರಕಟಣೆಗಳ ಪ್ರಕಾರ ಇದರ ಮೌಲ್ಯ 30 ಕೋಟಿ ರೂಪಾಯಿ ಆಗಿದೆ. 7,600 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಕಾಟೇಜ್ ರೀತಿಯ ಬಂಗಲೆ ಏಳು ಬೆಡ್‌ರೂಮ್‌ಗಳನ್ನು, ಏಳು ಸ್ನಾನಗೃಹಗಳನ್ನು ಹೊಂದಿದೆ. ಹಾಗೆಯೇ ಕನ್ಸರ್ವೇಟರಿ, ಜಿಮ್, ಯೋಗ ಕೊಠಡಿ ಇದೆ.
ಮುಂಬೈ ಅಪಾರ್ಟ್‌ಮೆಂಟ್: ಕಂಗನಾ ರಣಾವತ್ 20 ಕೋಟಿ ರೂಪಾಯಿಯ ಮುಂಬೈನಲ್ಲಿ ಮನೆಯನ್ನು ಸಹ ಹೊಂದಿದ್ದಾರೆ. ಇದು 5 ಬಿಎಚ್‌ಕೆ ಅಪಾರ್ಟ್‌ಮೆಂಟ್ ಆಗಿದ್ದು, ಸುಮಾರು 3,075 ಚದರ ಅಡಿ ವಿಸ್ತಾರವಾಗಿದ್ದು, ಬಹು ಮಹಡಿ ಹೊಂದಿದೆ. ರಣಾವತ್ 2017 ರಲ್ಲಿ ಈ ಮನೆಯನ್ನು ಖರೀದಿಸಿದರು, ಅದಾದ ಬಳಿಕ ಅಲ್ಲಿಯೇ ವಾಸವಾಗಿದ್ದಾರೆ.
ಮುಂಬೈ ಕಚೇರಿ: ಅನೇಕರಿಗೆ ಇದು ತಿಳಿದಿಲ್ಲ, ಆದರೆ ಕಂಗನಾ ರಣಾವತ್‌ರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಅನ್ನು ಹೊಂದಿರುವ ಕಚೇರಿಯು ಮತ್ತೊಂದು ಅದ್ದೂರಿ ಸ್ಥಳವಾಗಿದೆ. ಇದು ಪಾಲಿ ಹಿಲ್ಸ್‌ನಲ್ಲಿದೆ ಮತ್ತು 48 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ವರದಿಯಾಗಿದೆ.
ಐಷಾರಾಮಿ ಕಾರುಗಳು: ಐಷಾರಾಮಿ ಕಾರುಗನ್ನು ಕಂಗನಾ ರಣಾವತ್ ಹೊಂದಿದ್ದಾರೆ. ಇದರ ಲೆಕ್ಕಾಚಾರ ಮಾಡಿದರೆ, ಅವರ ನಿವ್ವಳ ಮೌಲ್ಯವು ಇನ್ನಷ್ಟು ಏರಿಕೆಯಾಗುತ್ತದೆ. 35 ಕೋಟಿ ಮೌಲ್ಯದ ಅದ್ದೂರಿ ಬಿಎಂಡಬ್ಲ್ಯೂ 7 ಹೊಂದಿದ್ದಾರೆ. 75 ಲಕ್ಷ ರೂಪಾಯಿ ಮೌಲ್ಯದ ಮೆರ್ಸಿಡೀಸ್ ಬೆನ್ಜ್, 34.75 ಲಕ್ಷ ರೂಪಾಯಿಯಿಂದ 43.61 ಲಕ್ಷ ರೂಪಾಯಿ ನಡುವಿನ ಆಡಿ ಕ್ಯೂ3 ಹೊಂದಿದ್ದಾರೆ. 2.69 ಕೋಟಿ ರೂಪಾಯಿಯಿಂದ 3.40 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಎಸ್ ಕ್ಯಾಸ್ ಹೊಂದಿದ್ದಾರೆ.


Click it and Unblock the Notifications