ಬಾಲಿವುಡ್ ನಟ, ನಿರ್ಮಾಪಕ ಸಲ್ಮಾನ್ ಖಾನ್ ಕಳೆದ 35 ವರ್ಷಗಳಿಂದ ಉದ್ಯಮದಲ್ಲಿದ್ದಾರೆ. ಭಾರತದ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರಾಗಿದ್ದಾರೆ. ಸಲ್ಮಾನ್ ಖಾನ್ ಪ್ರತಿ ಸಿನಿಮಾವು ವಿಶ್ವದಾದ್ಯಂತ ಬರೋಬ್ಬರಿ 30 ಬಿಲಿಯನ್ ಡಾಲರ್‌ಗಳಷ್ಟು ಗಳಿಸುತ್ತದೆ. ಸಲ್ಮಾನ್ ಖಾನ್ ಭಾರತದಲ್ಲಿ ಮನೆಮಾತಾಗಿದ್ದು, ಅವರ ಯಶಸ್ಸು ಬೆಳ್ಳಿತೆರೆಗೆ ಸೀಮಿತವಾಗಿಲ್ಲ.
ಸಲ್ಮಾನ್ ಖಾನ್ ಕಾರು ಸಂಗ್ರಹವು ಬಾಲಿವುಡ್‌ನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಇತರ ಉದ್ಯಮಗಳಿಂದ ಭಾರೀ ಪ್ರಮಾಣದ ಆದಾಯವನ್ನು ಸಲ್ಮಾನ್ ಗಳಿಸುತ್ತಾರೆ. ಸಲ್ಮಾನ್ ಖಾನ್ ನಿವ್ವಳ ಮೌಲ್ಯ, ಕಾರು ಸಂಗ್ರಹಣೆ ಮತ್ತು ಇತರ ಹಲವು ಆಕರ್ಷಕ ವಿವರಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಸಲ್ಮಾನ್ ಖಾನ್ ನಿವ್ವಳ ಆದಾಯ
ಸಲ್ಮಾನ್ ಖಾನ್ ನಿವ್ವಳ ಮೌಲ್ಯವು 2023 ರಲ್ಲಿ 350 ಮಿಲಿಯನ್ ಡಾಲರ್ ಅಥವಾ 2850 ಕೋಟಿ ರೂಪಾಯಿ ಆಗಿದೆ. ವಾರ್ಷಿಕವಾಗಿ 220 ಕೋಟಿ ರೂಪಾಯಿ ಮತ್ತು ಮಾಸಿಕವಾಗಿ ಸುಮಾರು 16 ಕೋಟಿ ರೂಪಾಯಿ ಗಳಿಸಿದ್ದಾರೆ. ಸಲ್ಮಾನ್ ಪ್ರಮುಖ ಆದಾಯದ ಮೂಲ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು, ಚಲನಚಿತ್ರಗಳು ಮತ್ತು ಅವರು ಹೋಸ್ಟ್ ಮಾಡುವ ಟಿವಿ ಶೋ ಬಿಗ್ ಬಾಸ್ ಆಗಿದೆ. ಪ್ರತಿ ಬ್ರ್ಯಾಂಡ್ ಅನುಮೋದನೆಗೆ 6-7 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಪಡೆಯುತ್ತಾರೆ.
ನಿವ್ವಳ ಮೌಲ್ಯ: 350 ಮಿಲಿಯನ್ ಡಾಲರ್ (2850 ಕೋಟಿ ರೂಪಾಯಿ)
ಆರಂಭಿಕ ಆದಾಯ: ಖಾನ್ ಟಿವಿ ನಟರಾಗಿ ವೃತ್ತಿಜೀವನ ಪ್ರಾರಂಭಿಸಿದ್ದು, ಪ್ರತಿ ಸಂಚಿಕೆಗೆ 1,500 ರೂಪಾಯಿ ಗಳಿಸಿದರು.
ಚಲನಚಿತ್ರ ಶುಲ್ಕ: 50-100 ಕೋಟಿ ರೂಪಾಯಿ
ಬ್ರಾಂಡ್ ಎಂಡೋರ್ಸ್‌ಮೆಂಟ್: ವರ್ಷಕ್ಕೆ 200-300 ಕೋಟಿ ರೂಪಾಯಿ
ಹೂಡಿಕೆ: ಟಿವಿ, ರಿಯಲ್ ಎಸ್ಟೇಟ್, ಕ್ರೀಡೆ, ಜಿಮ್‌ಗಳು, ಇತ್ಯಾದಿ
ಸಲ್ಮಾನ್ ಖಾನ್ ಕಾರು ಸಂಗ್ರಹ
ಸಲ್ಮಾನ್ ಖಾನ್ ಇತರ ಕೆಲವು ಟಾಪ್ ಸ್ಟಾರ್‌ಗಳಂತೆ ಕಾರುಗಳ ಮೇಲೆ ಅತೀಯಾದ ಮೋಹವನ್ನು ಹೊಂದಿಲ್ಲ. ಆದರೆ ಆದರೆ ಅವರು ಕಾರು ಸಂಗ್ರಹ ಹೊಂದಿದ್ದಾರೆ. ಪೋರ್ಷೆ ಕಯೆನ್ನೆ ಟರ್ಬೊ, ಲೆಕ್ಸಸ್ ಎಕ್ಸ್, ಮರ್ಸಿಡಿಯಸ್ ಬೆನ್ಜ್ ಜಿಎಲ್ 350 ಸಿಡಿಐ, ಮರ್ಸಿಡಿಯಸ್ ಬೆನ್ಜ್ ಎಎಂಜಿ GLE43, ರೋಲ್ಸ್-ರಾಯ್ಸ್ ಫ್ಯಾಂಟಮ್, ಮುಲ್ಸನ್ನೆ, ಬಿಎಂಡಬ್ಲ್ಯೂ ಎಕ್ಸ್6, ಆಡಿ ಆರ್‌ಎಸ್7, ಬೆಂಟ್ಲೆಯಂತಹ ವಿಶ್ವದ ಅತ್ಯಂತ ಐಷಾರಾಮಿ ಮತ್ತು ದುಬಾರಿ ಕಾರುಗಳನ್ನು ಹೊಂದಿದ್ದಾರೆ.
ಸಲ್ಮಾನ್ ಖಾನ್ ಮನೆಯ ವಿವರ
ಸಲ್ಮಾನ್ ಖಾನ್ ಭಾರತ ಮತ್ತು ದುಬೈನಲ್ಲಿ ಹಲವಾರು ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ 1 ಬಿಎಚ್‌ಕೆ ಅಪಾರ್ಟ್‌ನ ಸಲ್ಮಾನ್‌ರ ಅತ್ಯಂತ ಪ್ರಸಿದ್ಧವಾದ ಮನೆಯಾಗಿದೆ. ಈ ಅಪಾರ್ಟ್‌ಮೆಂಟ್ 40 ವರ್ಷಗಳಿಂದ ಸಲ್ಮಾನ್‌ರ ಕುಟುಂಬದ ಮನೆಯಾಗಿದೆ. ಇಲ್ಲಿಯೇ ಅವರು ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.
ಮೂರು ಬಂಗಲೆಗಳು, ಈಜುಕೊಳ ಮತ್ತು ಜಿಮ್‌ಗಳನ್ನು ಹೊಂದಿರುವ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಖಾನ್ 150 ಎಕರೆ ಜಾಗವನ್ನು ಹೊಂದಿದ್ದಾರೆ. ಮುಂಬೈನ ಗೊರೈನಲ್ಲಿ ಬೀಚ್ ಹೌಸ್ ಮತ್ತು ದುಬೈನ ಬುರ್ಜ್ ಪೆಸಿಫಿಕ್‌ನಲ್ಲಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.


Click it and Unblock the Notifications