ಎಸ್‌ಆರ್‌ಕೆ ಎಂದೇ ಪ್ರಸಿದ್ಧರಾದ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವ ಬಾಲಿವುಡ್‌ನಲ್ಲಿ ಅತೀ ಜನಪ್ರಿಯ, ಯಶಸ್ವಿ ನಟ ಆಗಿದ್ದಾರೆ. ಹಾಗೆಯೇ ಅತೀ ಶ್ರೀಮಂತ ನಟ ಎಂದು ಕೂಡಾ ಕರೆಸಿಕೊಳ್ಳುತ್ತಾರೆ.
"ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ," "ಬಾದ್‌ಶಾ", "ಡಾನ್," ಮತ್ತು "ಡಾನ್ 2" ಸೇರಿದಂತೆ ಅನೇಕ ಚಲನಚಿತ್ರಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಹಾಲಿವುಡ್ ಮತ್ತು ಬಾಲಿವುಡ್‌ನ ಟಾಪ್ 10 ಸ್ಟಾರ್‌ಗಳ ಪಟ್ಟಿಯಲ್ಲಿ ಕಂಡುಬರುವ ಏಕೈಕೈ ಭಾರತೀಯ ನಟ ಎಸ್‌ಆರ್‌ಕೆ ಆಗಿದ್ದಾರೆ. ಶಾರುಖ್ ನಿವ್ವಳ ಆದಾಯ ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ಶಾರುಖ್ ಖಾನ್ ನಿವ್ವಳ ಆದಾಯ
ಎರಡು ದಶಕಗಳಿಂದ, ಕಿಂಗ್ ಖಾನ್ ಆದಾಯವು ಅಧಿಕವಾಗುತ್ತಲೇ ಸಾಗುತ್ತಿದೆ. ಸಾಕಷ್ಟು ಸಂಪತ್ತನ್ನು ಕೂಡಾ ಸಂಗ್ರಹ ಮಾಡಿದ್ದಾರೆ. ಸಲ್ಮಾನ್ ಖಾನ್‌ನಂತೆಯೇ ಶಾರುಖ್ ಸಿನಿಮಾ, ಬ್ರ್ಯಾಂಡ್ ಅಂಬಾಸಿಡರ್ ಆಗಿ, ಹೂಡಿಕೆಗಳಿಂದ ಆದಾಯವನ್ನು ಗಳಿಸುತ್ತಾರೆ.
ಐಷಾರಾಮಿ ಜೀವನಶೈಲಿ ಹೊಂದಿರುವ ಶಾರುಖ್ ಖಾನ್ ಸಂಪತ್ತಿನ ಗಣನೀಯ ಭಾಗವು ಐಷಾರಾಮಿ ಕಾರುಗಳು ಮತ್ತು ದುಬಾರಿ ಆಸ್ತಿಗಳ ಪಾಲಿಗೆ ಸೇರುತ್ತದೆ. 2023 ರ ಹೊತ್ತಿಗೆ, ಶಾರುಖ್ ನಿವ್ವಳ ಆದಾಯವು 6010 ಕೋಟಿ ರೂಪಾಯಿ ಅಥವಾ 735 ಮಿಲಿಯನ್ ಡಾಲರ್ ಆಗಿತ್ತು. ಇನ್ನು ವಾರ್ಷಿಕ ಆದಾಯವು 22 ಮಿಲಿಯನ್ ಡಾಲರ್ ಆಗಿದೆ. ಒಂದು ಸಿನಿಮಾಕ್ಕೆ 80 ರಿಂದ 90 ಕೋಟಿ ರೂಪಾಯಿಗಳಷ್ಟು ಸಂಭಾವನೆಯನ್ನು ಪಡೆಯುತ್ತಾರೆ.
ಹೆಸರು: ಶಾರುಖ್ ಖಾನ್
ನಿವ್ವಳ ಆದಾಯ (2023): 730 ಮಿಲಿಯನ್ ಡಾಲರ್
ಭಾರತೀಯ ರೂಪಾಯಿಯಲ್ಲಿ ನಿವ್ವಳ ಆದಾಯ: 6142 ಕೋಟಿ ರೂಪಾಯಿ
ಮಾಸಿಕ ಆದಾಯ, ವೇತನ: 40 ಕೋಟಿ ರೂಪಾಯಿ
ವಾರ್ಷಿಕ ಆದಾಯ: 38 ಮಿಲಿಯನ್ ಡಾಲರ್
ಸಿನಿಮಾ ಶುಲ್ಕ: 80-90 ಕೋಟಿ ರೂಪಾಯಿ
ಬ್ರ್ಯಾಂಡ್ ಅಂಬಾಸಿಡರ್: 100 ಕೋಟಿ ರೂಪಾಯಿ
ಎಸ್‌ಆರ್‌ಕೆ ಕಾರು ಸಂಗ್ರಹ
ಭಾರತದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಶಾರುಖ್ ಖಾನ್ ಚಲನಚಿತ್ರಗಳಷ್ಟೇ ಐಷಾರಾಮಿ ಕಾರು ಸಂಗ್ರಹವನ್ನು ಹೊಂದಿದ್ದಾರೆ. ಬುಗಾಟಿ ವೆಯ್ರಾನ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಬಿಎಂಡಬ್ಲ್ಯು 7 ಸಿರೀಸ್, ಬಿಎಂಡಬ್ಲ್ಯು 6 ಸಿರೀಸ್, ಆಡಿ ಎ6 ಮತ್ತು ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಲಕ್ಷಾಂತರ ರೂಪಾಯಿ ಮೌಲ್ಯದ ವ್ಯಾನಿಟಿ ವ್ಯಾನ್ ಕೂಡ ಇದೆ. ಎಸ್‌ಆರ್‌ಕೆ ಕಾರು ಸಂಗ್ರಹವು ಅವರ ಯಶಸ್ಸು ಮತ್ತು ಅವರ ಐಷಾರಾಮಿ ಪ್ರೀತಿಗೆ ಸಾಕ್ಷಿಯಾಗಿದೆ. ಕಾರುಗಳು ಕೇವಲ ತಿರುಗಾಡುವ ಒಂದು ಮಾರ್ಗವಲ್ಲ, ಬದಲಾಗಿ ಐಷಾರಾಮಿ ಜೀವನದ ಪ್ರತೀಕವಾಗಿದೆ.
ಎಸ್‌ಆರ್‌ಕೆ ಮನೆಗಳ ಪಟ್ಟಿ
ಎಸ್‌ಆರ್‌ಕೆ ಮುಂಬೈ ನಿವಾಸವಾದ ಮನ್ನತ್ ಆರು ಮಹಡಿಗಳನ್ನು ಹೊಂದಿರುವ ಸೊಗಸಾದ ಆಸ್ತಿಯಾಗಿದೆ. ಐದು ಮಲಗುವ ಕೋಣೆಗಳು, ಅದ್ದೂರಿ ಗ್ರಂಥಾಲಯ, ಸುಸಜ್ಜಿತ ಜಿಮ್, ರಿಫ್ರೆಶ್ ಪೂಲ್ ಮತ್ತು ಖಾಸಗಿ ಚಲನಚಿತ್ರ ಮಂದಿರವನ್ನು ಹೊಂದಿದೆ. ಇದರ ಮೌಲ್ಯ ಸುಮಾರು 200 ಕೋಟಿ ರೂಪಾಯಿ ಆಗಿದೆ.
ಅಲಿಬಾಗ್‌ನಲ್ಲಿರುವ ಅವರ ಮನೆಯು 20,000 ಚದರ ಮೀಟರ್‌ಗಳಷ್ಟು ವಿಸ್ತಾರವಾದ ಫಾರ್ಮ್‌ನಲ್ಲಿ ಇದೆ. ಜನ್ನತ್ ಎಂದು ಹೆಸರಿಸಲಾಗಿರುವ ಶಾರುಖ್ ಖಾನ್‌ರ ದುಬೈನ ಮನೆಯು ಸುಮಾರು 18 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇದರಲ್ಲಿ ಆರು ಮಲಗುವ ಕೋಣೆಗಳು, ಎರಡು ರಿಮೋಟ್-ನಿಯಂತ್ರಿತ ಗ್ಯಾರೇಜ್‌ಗಳು, ಖಾಸಗಿ ಪೂಲ್ ಇದೆ.
ಜೊತೆಗೆ ಎಸ್‌ಆರ್‌ಕೆ ದೆಹಲಿಯಲ್ಲಿ ನಿವಾಸವನ್ನು ಹೊಂದಿದ್ದು, ಬಹು ಬಾಲ್ಕನಿ ಇರುವ ಎರಡು ಮಹಡಿಯಲ್ಲಿದೆ. ಇದಲ್ಲದೆ, ಅವರು ಇಂಗ್ಲೆಂಡ್‌ನಲ್ಲಿ ವಿಹಾರ ಗೃಹವನ್ನು ಹೊಂದಿದ್ದಾರೆ. ಇದು ಸೆಂಟ್ರಲ್ ಲಂಡನ್‌ನ ಪ್ರಧಾನ ರಿಯಲ್ ಎಸ್ಟೇಟ್ ಪ್ರದೇಶದಲ್ಲಿ ಪಾರ್ಕ್ ಲೇನ್‌ನಲ್ಲಿದೆ. ಈ ಮನೆಯ ಕುರಿತಾದ ವಿವರಗಳು ಖಾಸಗಿಯಾಗಿಯೇ ಉಳಿದಿವೆ . ಇದರ ಯಾವುದೇ ಚಿತ್ರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗಿಲ್ಲ.
ಶಾರುಖ್ ಖಾನ್ ಬ್ರ್ಯಾಂಡ್‌ಗಳು
ಶಾರುಖ್ ಖಾನ್ ಸಾಧನೆಗಳು ಬಾಲಿವುಡ್ ಅನ್ನು ಮೀರಿವೆ. ಅವರು ಅನೇಕ ಭಾರತೀಯ ಉತ್ಪನ್ನಗಳು ಮತ್ತು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ವಿಶೇಷವಾಗಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹೂಡಿಕೆಗಳನ್ನು ಮಾಡಿದ್ದಾರೆ.


Click it and Unblock the Notifications