ಭಾರತದಲ್ಲಿ ಕ್ರಿಕೆಟ್ ಅತೀ ಜನಪ್ರಿಯವಾದ ಕ್ರೀಡೆಯಾಗಿದೆ. ಎಷ್ಟು ಜನಪ್ರಿಯವೆಂದರೆ ದೇಶದಲ್ಲೇ ಕ್ರಿಕೆಟಿಗರೇ ಸೂಪರ್ ಸ್ಟಾರ್‌ಗಳು ಆಗಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ದೇವರೆಂದು ಕರೆಯುವವರು ಕೂಡಾ ಇದ್ದಾರೆ. ಫ್ರ್ಯಾಂಚೈಸ್ ಕಾಂಟ್ರಾಕ್ಟ್, ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ನಾವು ಕ್ರಿಕೆಟಿಗರನ್ನು ಕಾಣಬಹುದಾಗಿದೆ.
ಇನ್ನು ಪ್ರಮುಖವಾಗಿ ಕ್ರಿಕೆಟಿಗರು ಉತ್ತಮ ವೇತನವನ್ನು ಹೊಂದಿದ್ದಾರೆ. ಐಷಾರಾಮಿ ಜೀವನವನ್ನು ಕೂಡಾ ನಡೆಸುತ್ತಿದ್ದಾರೆ. ಅದು ಕೂಡಾ ಕ್ರಿಕೆಟಿಗರು ಉತ್ತಮ ಆದಾಯವನ್ನು ಹೊಂದಿದ್ದಾರೆ. ಇನ್ನು ಕ್ರಿಕೆಟಿಗರ ಮನೆಯನ್ನು ಭೂಮಿಯ ಮೇಲಿನ ಸ್ವರ್ಗವೆಂದು ಕೂಡಾ ಪರಿಗಣಿಸಲಾಗುತ್ತದೆ. ಭಾರತದಲ್ಲಿನ ಐದು ಕ್ರಿಕೆಟಿಗರ ಐಷಾರಾಮಿ ನಿವಾಸದ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಮಹೇಂದ್ರ ಸಿಂಗ್ ಧೋನಿ
ಈ ಹಿಂದೆ ಕ್ಯಾಪ್ಟೇನ್ ಕೂಲ್ ಎಂದು ಜನಪ್ರಿಯರಾಗಿದ್ದ ಮಹೇಂದ್ರ ಸಿಂಗ್ ಧೋನಿ, ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟೇನ್ ಆಗಿದ್ದಾರೆ. ಎಂ ಎಸ್ ಧೋನಿಯ ರಾಂಚಿಯ ಫಾರ್ಮ್ ಹೌಸ್ ಸುಮಾರು 7 ಎಕರೆಗೂ ಅಧಿಕ ವಿಸ್ತಾರದ್ದಾಗಿದೆ. ಸುಮಾರು 6 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಈ ಆಸ್ತಿಯಲ್ಲಿ ಒಳಾಂಗಣ ಆಟದ ಮೈದಾನವು ಕೂಡಾ ಇದೆ. ಹಾಗೆಯೇ ಶೋರೂಮ್ ಕೂಡಾ ಇದೆ. ಈ ಶೋರೂಮ್‌ನಲ್ಲಿ ಧೋನಿಯ ಕಾರುಗಳು ಮತ್ತು ಬೈಕುಗಳ ಸಂಗ್ರಹವಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ದೇಶದಲ್ಲಿ ಪ್ರಸ್ತುತ ಅತೀ ಜನಪ್ರಿಯ ಕ್ರಿಕೆಟರ್ ಆಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಮುಂಬೈನ ವರ್ಲಿಯಲ್ಲಿರುವ ಓಂಕಾರ್ 1973 ಟವರ್‌ನಲ್ಲಿ 2016 ರಲ್ಲಿ ಖರೀದಿಸಿದ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಅಪಾರ್ಟ್‌ಮೆಂಟ್ ಸುಮಾರು 7,171 ಸ್ಕ್ವೇರ್ ಫೀಟ್ ಅನ್ನು ಹೊಂದಿದೆ.
ಅರೇಬಿಯನ್ ಸಮುದ್ರದ ಜೊತೆಗೆ ಮುಂಬೈ ನಗರದ ಸುಂದರವಾದ ನೋಟವನ್ನು ಈ ಅಪಾರ್ಟ್‌ಮೆಂಟ್‌ನಲ್ಲಿ ನೋಡಬಹುದಾಗಿದೆ. ಜಿಮ್ ಮತ್ತು 13 ಅಡಿ ಎತ್ತರದ ಸೀಲಿಂಗ್ ಇದೆ. ಪ್ರತಿ ಮಲಗುವ ಕೋಣೆಯಲ್ಲಿ ವರಾಂಡಾಗಳಂತಹ ಇತರ ವ್ಯವಸ್ಥೆಗಳು ಇದೆ. ವಿರಾಟ್ ಕೊಹ್ಲಿ ಮನೆಯು ಸುಮಾರು 34-35 ಕೋಟಿ ರೂಪಾಯಿಯದ್ದಾಗಿದೆ. ಹರಿಯಾಣದ ಗುರುಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಆಸ್ತಿಯನ್ನು ಹೊಂದಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್‌ರ ಪತ್ನಿ ನಟಿ ಹೇಜಲ್ ಕೀಚ್ ಜೊತೆ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದಾರೆ. ವಿರಾಟ್ ಕೊಹ್ಲಿ ವಾಸವಾಗಿರುವ ಅಪಾರ್ಟ್‌ಮೆಂಟ್ ಪ್ರದೇಶದಲ್ಲಿಯೇ ಯುವರಾಜ್ ಸಿಂಗ್ ವಾಸವಿದ್ದಾರೆ. ಈ ನಿವಾಸವನ್ನು ಯುವರಾಜ್ ಸಿಂಗ್ 2013ರಲ್ಲಿ ಖರೀದಿ ಮಾಡಿದ್ದಾರೆ. ಸುಮಾರು 64 ಕೋಟಿ ರೂಪಾಯಿಯ ಐಷಾರಾಮಿ ಮನೆ ಇದಾಗಿದೆ. ಈ 16,000 ಸ್ಕ್ವೇರ್ ಫೀಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಅರೇಬಿಯನ್ ಸಮುದ್ರ ಮತ್ತು ಇತರೆ ಐಷಾರಾಮಿ ನಿವಾಸಗಳ ವೀವ್ ಇದೆ. ಒಂದು ಫ್ಲ್ಯಾಟ್‌ನಲ್ಲೇ ಎರಡು ಫ್ಲ್ಯಾಟ್‌ಗಳು ಇದೆ.
ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮುಂಬೈನ ಬಾಂದ್ರಾದಲ್ಲಿ 6,000 ಚದರ ಅಡಿ ವಿಸ್ತೀರ್ಣದ 'ದೊರಬ್ ವಿಲ್ಲಾ' ಎಂಬ ಹೆಸರಿನ ಭವನವನ್ನು ಹೊಂದಿದ್ದಾರೆ. ಇದನ್ನು ಪಾರ್ಸಿ ಕುಟುಂಬವು 2007 ರಲ್ಲಿ ಸಚಿನ್‌ಗೆ 39 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದೆ. ಈ ನಿವಾಸದಲ್ಲಿ ಈಜುಕೊಳ ಮತ್ತು ಜಿಮ್ ಸೇರಿದಂತೆ ಐಷಾರಾಮಿ ಆಧುನಿಕ ಮನೆಯಲ್ಲಿ ಇರುವ ಎಲ್ಲಾ ಸೌಲಭ್ಯಗಳು ಇದೆ.
ರೋಹಿತ್ ಶರ್ಮಾ
ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅಹುಜಾ ಟವರ್ಸ್‌ನಲ್ಲಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇದು ವರ್ಲಿಯಲ್ಲಿದೆ. 2015 ರಲ್ಲಿ ಈ ಅಪಾರ್ಟ್‌ಮೆಂಟ್ ಅನ್ನು 30 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ. ಅಪಾರ್ಟ್‌ಮೆಂಟ್ 6000 ಚದರ ಅಡಿ ವಿಸ್ತಾರವನ್ನು ಹೊಂದಿದೆ. ಅರಬ್ಬಿ ಸಮುದ್ರದ 270 ಡಿಗ್ರಿ ನೋಟ ಇ ಫ್ಲ್ಯಾಟ್‌ನಲ್ಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications