ಒಂದು ಕಾಲದಲ್ಲಿ ಹಳ್ಳಿಯಲ್ಲಿ ಗೃಹಿಣಿಯಾಗಿದ್ದ ಡಾ. ರೇಖಾ ಚೌಧರಿ ಅವರು ಈಗ ಅಂತಾರಾಷ್ಟ್ರೀಯ ಖ್ಯಾತಿಯ ಸಾಮಾಜಿಕ ಕಳಕಳಿ ಹೊಂದಿರುವ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಸಮಾಜದ ಅಗತ್ಯತೆ ಹಾಗೂ ಅವಶ್ಯಕತೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆಯನ್ನು ನೀಡಬೇಕೆಂಬ ಆಶಯದೊಂದಿಗೆ ಝೆಪ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ. 2010ರ ಜೂನ್ 15ರಂದು ಜನರ ಜೀವನ ಸುಧಾರಣೆ ಹಾಗೂ ಪರಿಸರ ಮರುಸ್ಥಾಪನೆ ಉದ್ದೇಶದೊಂದಿಗೆ ಝೆಪ್ ಫೌಂಡೇಷನ್ ಅನ್ನು ಸ್ಥಾಪಿಸಲಾಗಿದೆ. ಹಳ್ಳಿಯಿಂದ ಜಾಗತಿಕ ಮಟ್ಟದವರೆಗೆ ಪ್ರಯಾಣವು ಚೌಧರಿ ಅವರ ಪ್ರತಿಷ್ಠಾನದ ಮೂಲ ತತ್ತ್ವವನ್ನು ಪ್ರತಿಬಿಂಬಿಸುತ್ತದೆ.

ಇದು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸಲು ಹಾಗೂ ಸ್ವಾಸ್ಥ್ಯ ಉದ್ಯಮದಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಸಮರ್ಪಿಸಲಾಗಿದೆ. ಬಹುಮುಖಿ ವಿಧಾನದ ಮೂಲಕ ಜನರನ್ನು ಸಬಲೀಕರಣದತ್ತ ಕೊಂಡೊಯ್ಯುವುದು ಝೆಪ್ ಫೌಂಡೇಷನ್‌ನ ಮುಖ್ಯ ಉದ್ದೇಶವಾಗಿದೆ. ಆ ಮೂಲಕ ಡಿಜಿಟಲ್ ಡೆಟಾಕ್ಸ್, ವೆಲ್‌ನೆಸ್ ಶಿಕ್ಷಣ ಹಾಗೂ ಸ್ವಯಂ ವ್ಯಕ್ತಿತ್ವವನ್ನು ರೂಪಿಸಲಾಗುತ್ತದೆ.
ಅದರಲ್ಲಿಯೂ ಝೆಪ್ ಫೌಂಡೇಷನ್ ಬುಡಕಟ್ಟು ಜನಾಂಗ ಹಾಗೂ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಆಶಾಕಿರಣ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅವರಲ್ಲಿರುವ ವಿಶಿಷ್ಠ ಕೌಶಲ್ಯಗಳನ್ನು ಗುರುತಿಸಿ ಅವುಗಳ ಮೂಲಕ ಅವರನ್ನು ಸುಸ್ಥಿರ ಜೀವನೋಪಾಯದತ್ತ ಉತ್ತೇಜಿಸಲಾಗುತ್ತದೆ.
ಝೆಪ್ ಫೌಂಡೇಷನ್‌ನ ಮುಖ್ಯ ಕಚೇರಿಯು ಮಹಾರಾಷ್ಟ್ರದ ನವಿ ಮುಂಬೈ ಹಾಗೂ ನಂದೂರ್‌ಬಾರ್‌ನಲ್ಲಿದೆ. ಡಾ. ರೇಖಾ ಚೌಧರಿ ಅವರ ಅಚಲ ಬದ್ಧತೆ ಹಾಗೂ ದೂರದೃಷ್ಟಿಯ ನಾಯಕತ್ವದೊಂದಿಗೆ ಪ್ರತಿಷ್ಠಾನವನ್ನು ನಡೆಸಲಾಗುತ್ತಿದೆ. ಸಮಾಜದ ಏಳಿಗೆ ಹಾಗೂ ಸಬಲೀಕರಣವು ಫೌಂಡೇಷನ್‌ನ ಮುಖ್ಯ ಧ್ಯೇಯವಾಗಿದ್ದು, ಆ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.


Click it and Unblock the Notifications