ದೇಶದ ಅತೀ ದೊಡ್ಡ ಉದ್ಯಮಿ ಮತ್ತು ಅದಾನಿ ಗ್ರೂಪ್‌ನ ಚೇರ್‌ಮನ್ ಆದ ಗೌತಮ್ ಅದಾನಿಯ ಕಿರಿಯ ಪುತ್ರ ಜೀತ್ ಅದಾನಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಡೈಮಂಡ್ ಉದ್ಯಮ ನಡೆಸುವ ಜೈಮಿನ್ ಶಾ ಪುತ್ರಿಯಾದ ದಿವಾ ಜೈಮಿನ್ ಶಾ ಜೊತೆ ಗೌತಮ್ ಅದಾನಿ ಪುತ್ರ ಜೀತ್ ಅದಾನಿ ಮಾರ್ಚ್ 12ರಂದು ಅಹಮದಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ನಿಶ್ಚಿತಾರ್ಥವನ್ನು ಸರಳವಾಗಿ ನಡೆಸಲಾಗಿದ್ದು, ಸಮೀಪದ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ. ಗೌತಮ್ ಅದಾನಿಯ ಕಿರಿಯ ಸೊಸೆಯಾಗಲಿರುವ ದಿವಾ ಬಗ್ಗೆ ಅಧಿಕ ಮಾಹಿತಿ ಲಭ್ಯವಾಗಿಲ್ಲ. ಜೀತ್ ಅದಾನಿ ಪ್ರಸ್ತುತ ಅದಾನಿ ಗ್ರೂಪ್‌ನ ಹಣಕಾಸು ಘಟಕದ ಉಪಾಧ್ಯಕ್ಷರು ಆಗಿದ್ದಾರೆ. ಇನ್ನು ಜೀತ್ ಅದಾನಿಯು ಗೌತಮ್ ಅದಾನಿಯ ಹಿರಿಯ ಪುತ್ರ ಕರಣ್ ಅದಾನಿಗಿಂತ 10 ವರ್ಷ ಸಣ್ಣವರಾಗಿದ್ದಾರೆ.

ಜೀತ್ ಅದಾನಿ ಬಗ್ಗೆ ಅಧಿಕ ಮಾಹಿತಿ ತಿಳಿಯಿರಿ
ಸಾಮಾನ್ಯವಾಗಿ ಜೀತ್ ಅದಾನಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಅಧಿಕವಾಗಿ ಆಕ್ಟಿವ್ ಆಗಿಲ್ಲ, ಟ್ವಿಟ್ಟರ್‌ನಲ್ಲೂ ಸಕ್ರಿಯರಾಗಿಲ್ಲ. ಆದರೆ ತನ್ನ ಟೈಮ್‌ಲೈನ್‌ನಲ್ಲಿ ತಾನು ವಿಮಾನಯಾನ ಮಾಡುವ ಚಿತ್ರದೊಂದಿಗೆ ಜೀತ್ ಅದಾನಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಜೀತ್ ಅದಾನಿ ಉತ್ಸಾಹಿ ಪೈಲೆಟ್ ಎಂಬುವುದು ತಿಳಿದುಬರುತ್ತದೆ.
ಅದಾನಿ ಗ್ರೂಪ್‌ನ ವೆಬ್‌ಸೈಟ್ ಪ್ರಕಾರ ಜೀತ್ ಅದಾನಿ ತನ್ನ ವಿದ್ಯಾಭ್ಯಾಸವನ್ನು ಯೂನಿವರ್ಸಿಟಿ ಆಫ್ ಪೆನ್ನಿಸಿಲ್‌ವಾನಿಯಾ ಆಫ್ ಇಂಜಿಯರಿಂಗ್ ಆಂಡ್ ಅಪ್ಲೈಡ್ ಸೈನ್ಸ್‌ನಲ್ಲಿ ನಿರ್ವಹಣೆ ಮಾಡಿದ್ದಾರೆ. ತನ್ನ ವಿದ್ಯಾಭ್ಯಾಸದ ಬಳಿಕ ಜೀತ್ ಅದಾನಿ 2019ರಲ್ಲಿ ಅದಾನಿ ಗ್ರೂಪ್‌ನಲ್ಲಿ ಕಾರ್ಯ ಆರಂಭ ಮಾಡಿದ್ದಾರೆ. ಪ್ರಸ್ತುತ ಅದಾನಿ ಗ್ರೂಪ್‌ನ ಹಣಕಾಸು ಘಟಕದ ಉಪಾಧ್ಯಕ್ಷರಾಗಿದ್ದಾರೆ.
ಜೀತ್ ಅದಾನಿ ತನ್ನ ವೃತ್ತಿ ಜೀವನವನ್ನು ಅದಾನಿ ಗ್ರೂಪ್ ಸಿಎಫ್‌ಒ ಕಚೇರಿಯಲ್ಲಿ ಆರಂಭಿಸಿದ್ದಾರೆ. ಇಲ್ಲಿ ಹಣಕಾಸು ತಂತ್ರ, ಬಂಡವಾಳ ಮಾರುಕಟ್ಟೆ ಮತ್ತು ಅಪಾಯ & ಪಾಲಿಸಿ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು. ಹಾಗೆಯೇ ಅದಾನಿ ಏರ್‌ಪೋರ್ಟ್ ವಹಿವಾಟನ್ನು ಕೂಡಾ ನಿರ್ವಹಣೆ ಮಾಡಿದ್ದಾರೆ. ಹಾಗೆಯೇ ಅದಾನಿ ಡಿಜಿಟಲ್ ಲ್ಯಾಬ್ ಕೂಡಾ ನಿರ್ವಹಿಸಿದ್ದಾರೆ.
ಇನ್ನು ಗೌತಮ್ ಅದಾನಿಗೆ ಇಬ್ಬರು ಪುತ್ರರಿದ್ದು ಹಿರಿಯ ಮಗ ಕರಣ್ ಎರಡನೇ ಮಗ ಜೀತ್ ಆಗಿದ್ದಾರೆ. ಕರಣ್ ಅದಾನಿ ಅದಾನಿ ಪೋರ್ಟ್ಸ್ ಆಂಡ್ ಎಸ್‌ಇಝೆಡ್ ಲಿಮಿಟೆಡ್‌ನ ಸಿಇಒ ಆಗಿದ್ದು ಪರಿಧಿ ಶ್ರಾಫ್‌ರನ್ನು ವಿವಾಹವಾಗಿದ್ದಾರೆ. ಪರಿಧಿ ಶ್ರಾಫ್, ಸಿರಿಲ್ ಅಮರ್‌ಚಂದ್ ಮಂಗಳ್‌ದಾಸ್ ಸಂಸ್ಥೆಯ ಪಾಲುದಾರರಾದ ಸಿರಿಲ್ ಶ್ರಾಫ್‌ರ ಪುತ್ರಿಯಾಗಿದ್ದಾರೆ.


Click it and Unblock the Notifications