ಉದ್ಯಮಿ ಮುಕೇಶ್ ಅಂಬಾನಿ ಭಾರತ ಮಾತ್ರವಲ್ಲ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇವರಿಗಿದೆ. ಮುಖೇಶ್ ಅಂಬಾನಿ ಅವರು ತಮ್ಮ ಪತ್ನಿ ನೀತಾ ಅಂಬಾನಿ ಮತ್ತು ಪುತ್ರರಾದ ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಆಂಟಿಲಿಯಾದಲ್ಲಿ ವಾಸವಾಗಿದ್ದಾರೆ.
ಮುಖೇಶ್ ಮತ್ತು ನೀತಾ ಅಂಬಾನಿಯವರ ಮನೆ ಆಂಟಿಲಿಯಾ ಭಾರತದ ಅತ್ಯಂತ ಪ್ರಸಿದ್ಧ ಮತ್ತು ದುಬಾರಿ ಮನೆಗಳಲ್ಲಿ ಒಂದಾಗಿದೆ. ಇದು ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಆಂಟಿಲಿಯಾ ಸೌತ್ ಮುಂಬೈನ ಅಲ್ಟಮೌಂಡ್ ರಸ್ತೆಯಲ್ಲಿದೆ. ಈ ರಸ್ತೆ ಏಷ್ಯಾದ ಅತ್ಯಂತ ದುಬಾರಿ ಪ್ರದೇಶವಾಗಿದ್ದು ಇದನ್ನು 'ಬಿಲಿಯನೇರ್ಸ್ ರೋ' ಎಂದೂ ಕರೆಯಲಾಗುತ್ತದೆ.

ಮುಖೇಶ್ ಅಂಬಾನಿಯವರ ಮನೆಯಿರುವ ಈ ಸ್ಥಳವೂ ಹಲವು ಬಿಲಿಯನೇರ್ ಉದ್ಯಮಿಗಳ ವಾಸಸ್ಥಳವೂ ಹೌದು. ಮುಖೇಶ್ ಅಂಬಾನಿಯವರ ನೆರೆಹೊರೆಯವರ ನಿವ್ವಳ ಆಸ್ತಿಮೌಲ್ಯವನ್ನು ನೋಡೋಣ.
ಮೋತಿಲಾಲ್ ಓಸ್ವಾಲ್:
ಓಸ್ವಾಲ್ ಅವರ ಕುಟುಂಬ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ನೆರೆಹೊರೆಯವರು. 2020 ರಲ್ಲಿ, ಮುಂಬೈನ '33 ಸೌತ್' ನ 13 ಮತ್ತು 17 ನೇ ಪ್ಲೋರ್ ನಲ್ಲಿ ಮೋತಿಲಾಲ್ ಓಸ್ವಾಲ್ ಟ್ರಸ್ಟ್ ಡ್ಯುಪ್ಲೆಕ್ಸ್ ಮನೆಯನ್ನು ಖರೀದಿಸಿದೆ. ವರದಿಗಳ ಪ್ರಕಾರ ಮೋತಿವಾಲ್ ಓಸ್ವಾಲ್ ಅವರ ನಿವ್ವಳ ಆಸ್ತಿ ಮೌಲ್ಯವು 4242.11 ಕೋಟಿ ರೂ. ಆಗಿದೆ.
ಎನ್ ಚಂದ್ರಶೇಖರನ್
ಟಾಟಾ ಸನ್ಸ್‌ನ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ ಕುಟುಂಬವು ಮುಖೇಶ್ ಅಂಬಾನಿ ಅವರ ನೇಬರ್ಸ್ ಆಗಿದ್ದಾರೆ. ಚಂದ್ರಶೇಖರನ್ ಅವರ ಕುಟುಂಬವು ಸುಮಾರು ಐದು ವರ್ಷಗಳಿಂದ ಈ ಬಡಾವಣೆಯಲ್ಲಿ ವಾಸಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮತ್ತೊಂದು ಟವರ್ ನ 11 ಮತ್ತು 12ನೇ ಪ್ಲೋರ್ ನಲ್ಲಿ 98 ಕೋಟಿ ರೂ.ಗೆ ಡ್ಯೂಪ್ಲೆಕ್ಸ್ ಮನೆಯನ್ನು ಖರೀದಿಸಿದ್ದಾರೆ. 2021-2022 ರಲ್ಲಿ 109 ಕೋಟಿ ರೂ. ಪ್ಯಾಕೇಜ್ ನೊಂದಿಗೆ ಚಂದ್ರಶೇಖರನ್ ಅವರ್ರು ಭಾರತದ ಅತಿ ಹೆಚ್ಚು ವೇತನ ಪಡೆದ ಸಿಇಒ ಆಗಿದ್ದರು. ವರದಿಗಳ ವರದಿಗಳ ಪ್ರಕಾರ ಚಂದ್ರಶೇಖರನ್ ಬಿಲಿಯನೇರ್ ಆಗಿದ್ದಾರೆ.
ಹರ್ಷ ಜೈನ್
ಭಾರತೀಯ ಫ್ಯಾಂಟಸಿ ಕ್ರೀಡಾ ಅಪ್ಲಿಕೇಶನ್ "ಡ್ರೀಮ್ 11" ಸಹ ಸಂಸ್ಥಾಪಕರಾಗಿರುವ ಹರ್ಷ್ ಜೈನ್ ಅವರ ಪತ್ನಿ ರಚನಾ ಜೈನ್ ಅವರು ಈ ಪ್ರದೇಶದಲ್ಲಿ 72 ಕೋಟಿ ರೂ.ಗೆ ಡ್ಯೂಪ್ಲೆಕ್ಸ್ ಹೌಸ್ ಖರೀದಿಸಿದ್ದಾರೆ. ಹರ್ಷ್ ಜೈನ್ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 847.8 ಕೋಟಿ ರೂ. ಆಗಿದೆ.
ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್:
ಅಕ್ರಮ ಹಣ ವರ್ಗಾವಣೆ ಹಾಗೂ ಭ್ರಷ್ಟಚಾರ ಆರೋಪ ಕೇಳಿ ಬಂದಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮುಂಬೈನ ಆಲ್ಟಾಮೌಂಟ್ ರಸ್ತೆಯಲ್ಲಿರುವ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ನ್ನು128 ಕೋಟಿ ರೂ.ಗೆ ಖರೀದಿಸಿದ್ದರು. ಖುರ್ಷಿದಾಬಾದ್ ಬಿಲ್ಡಿಂಗ್ ಹೆಸರಿನ ಈ ಅಪಾರ್ಟ್‌ಮೆಂಟ್ ಬ್ಲಾಕ್‌ನಲ್ಲಿ 6 ಅಪಾರ್ಟ್‌ಮೆಂಟ್‌ಗಳಿವೆ. ಇದರ ಬೆಲೆ ಸುಮಾರು 150 ಕೋಟಿ ರೂ. ಆಗಿದೆ.


Click it and Unblock the Notifications