ಜನ್ಮಾಷ್ಟಮಿ, ಭಗವಂತ ಕೃಷ್ಣನ ಜನ್ಮ ಆಚರಣೆಯ ಒಂದು ಧಾರ್ಮಿಕ ಹಬ್ಬವಾಗಿದೆ. ಆದರೆ ಈ ದಿನದಂದು ಕೂಡಾ ನಾವು ತಿಳಿಯಬೇಕಾದ ಆರ್ಥಿಕ ಪಾಠಗಳಿದೆ. ಮಹಾಭಾರತ ಎಂದು ಕರೆಯಲ್ಪಡುವ ಪಾಂಡವರು ಮತ್ತು ಕೌರವರ ನಡುವಿನ ಯುದ್ಧ ಪ್ರಾರಂಭವಾಗುವ ಮೊದಲು ಕೃಷ್ಣನು ಅರ್ಜುನನಿಗೆ ಹೇಳಿದ ಭಗವದ್ಗೀತೆಯನ್ನು ನಾವಿಂದು ನೆನಯಬಹುದು.
ನಾವು ಭಗವದ್ಗೀತೆಯ ಬೋಧನೆಗನ್ನು ನಮ್ಮ ಹಣಕಾಸಿನ ನಿರ್ಧಾರಗಳಿಗೂ ಅನ್ವಯ ಮಾಡಿಕೊಳ್ಳಬಹುದು, ಹಾಗೆಯೇ ಅದು ಅನ್ವಯವಾಗುತ್ತದೆ. ಉದಾಹರಣೆಗೆ, ಬದಲಾವಣೆಯನ್ನು ಮಾಡುವುದು, ವೈವಿಧ್ಯೀಕರಣ, ತಾಳ್ಮೆ, ಸಮತೋಲನ, ಮೊದಲಾದವುಗಳಲ್ಲಿ ಆರ್ಥಿಕ ಪಾಠವು ಅಡಗಿದೆ. ಈ ಬಗ್ಗೆ ಇಲ್ಲಿದೆ ವಿವರ, ಮುಂದೆ ಓದಿ....

ಸಂಪತ್ತಿಗೆ ನಿರ್ಲಿಪ್ತತೆ ಮತ್ತು ಬಾಂಧವ್ಯವಿಲ್ಲದಿರುವುದು
ಭಗವಂತ ಕೃಷ್ಣನು ಭೌತಿಕ ಪ್ರಪಂಚದಿಂದ ಬೇರ್ಪಟ್ಟಿರುವ ಮತ್ತು ಸಂಪತ್ತಿಗೆ ಅಂಟಿಕೊಳ್ಳದಿರುವ ಮಹತ್ವವನ್ನು ಒತ್ತಿಹೇಳುತ್ತಾನೆ. ದುರಾಸೆಯಿಂದ ಹೂಡಿಕೆ ಮಾಡುವ ಬದಲಾಗಿ ನಾವು ದುರಾಸೆ ದೂರಕ್ಕಿಟ್ಟು ಹೂಡಿಕೆ ಮಾಡಬೇಕೆಂದು ಈ ಮಂತ್ರ ನಮಗೆ ಹೇಳುತ್ತದೆ. ನಾವಿದ್ದನ್ನು ಹಣಕಾಸಿನ ನಿರ್ಧಾರಗಳಿಗೆ ಅನ್ವಯಿಸಬಹುದು.
ನಿಮ್ಮ ಕ್ರಿಯೆಗಳ ಬಗ್ಗೆ ಜಾಗರೂಕರಾಗಿರಿ
ಶ್ರೀಕೃಷ್ಣನು ನಮ್ಮ ಕಾರ್ಯಗಳ ಬಗ್ಗೆ ಎಚ್ಚರದಿಂದಿರಲು ಸಲಹೆ ನೀಡುತ್ತಾನೆ. ಹಣಕಾಸಿನ ಸಂದರ್ಭದಲ್ಲಿ, ನಮ್ಮ ಹಣಕಾಸಿನ ನಿರ್ಧಾರಗಳ ಪರಿಣಾಮಗಳ ಬಗ್ಗೆ ತಿಳಿದಿರುವುದು ಮುಖ್ಯವಾಗಿದೆ. ಯಾವುದೇ ಹೂಡಿಕೆಯನ್ನು ಮಾಡುವ ಮೊದಲು, ದೀರ್ಘಾವಧಿಯ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಪರಿಶೀಲನೆ ಮಾಡಬೇಕು.
ಬದಲಾವಣೆಯನ್ನು ಅಳವಡಿಸಿಕೊಳ್ಳುವುದು
ಬದಲಾವಣೆಯು ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದು ಮತ್ತೊಂದು ಪ್ರಮುಖ ಬೋಧನೆಯಾಗಿದೆ. ಹಣಕಾಸಿನ ಸಂದರ್ಭದಲ್ಲಿ, ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಹೂಡಿಕೆಯ ಅವಕಾಶಗಳಿಗೆ ಹೊಂದಿಕೊಳ್ಳುವುದು ಎಂದರ್ಥ. ಹಣಕಾಸು ಪ್ರಪಂಚವು ನಿರಂತರವಾಗಿ ಬದಲಾಗುತ್ತಿರುತ್ತದೆ. ನಮ್ಮ ಹೂಡಿಕೆಯ ತಂತ್ರವನ್ನು ಕೂಡಾ ನಾವು ಬದಲಾಯಿಸುವುದು ಬಹಳ ಮುಖ್ಯ.
ವೈವಿಧ್ಯೀಕರಣ
ಭಗವದ್ಗೀತೆಯಲ್ಲಿ ಭಗವಂತ ಕೃಷ್ಣನು ವೈವಿಧ್ಯತೆಯ ಮಹತ್ವವನ್ನು ಒತ್ತಿಹೇಳುತ್ತಾನೆ. ಇದನ್ನು ನಾವು ಹಣಕಾಸು ಕ್ಷೇತ್ರಕ್ಕೆ ಅನ್ವಯ ಮಾಡಿದಾಗ ನಾವು ಮಾಡುವ ಹೂಡಿಕೆಯು ಒಂದೇ ಕಡೆ ಇರಬಾರದು ಬೇರೆ ಬೇರೆ ಇರಬೇಕು ಎಂದು ಹೇಳಬಹುದು. ಇದರಿಂದಾಗಿ ಆದಾಯವು ಹೆಚ್ಚಳ ಮಾಡಲು ಸಾಧ್ಯವಾಗುತ್ತದೆ. ನಾವು ಒಂದೇ ಕಡೆ ಹೂಡಿಕೆ ಮಾಡಿದರೆ ಆ ಕ್ಷೇತ್ರದಲ್ಲಿ ನಷ್ಟವಾದರೆ ನಮಗೆ ಸಂಪೂರ್ಣ ನಷ್ಟವಾಗುತ್ತದೆ. ಅದರ ಬದಲಾಗಿ ನಾವು ಬೇರೆ ಬೇರೆ ಕಡೆ ಹೂಡಿಕೆ ಮಾಡಿದರೆ ಒಂದಲ್ಲ ಒಂದು ಕಡೆ ಲಾಭ ಇರುತ್ತದೆ.
ತಾಳ್ಮೆ ಮತ್ತು ಪರಿಶ್ರಮ
ಹಣಕಾಸು ಸೇರಿದಂತೆ ಜೀವನದ ಎಲ್ಲಾ ವಿಚಾರದಲ್ಲಿ ತಾಳ್ಮೆ ಮತ್ತು ಪರಿಶ್ರಮದಿಂದ ಇರಲು ಶ್ರೀಕೃಷ್ಣ ನಮಗೆ ಕಲಿಸುತ್ತಾನೆ. ಹೂಡಿಕೆಗಳು ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಸಮಯ ಬೇಕಾಗುತ್ತದೆ. ಆದ್ದರಿಂದಾಗಿ ದೀರ್ಘಾವಧಿಯ ಯೋಜನೆಯನ್ನು ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ತಾಳ್ಮೆ ಮತ್ತು ಪರಿಶ್ರಮವು ಉತ್ತಮ ಆರ್ಥಿಕ ಫಲಿತಾಂಶಗಳಿಗೆ ಕಾರಣವಾಗಬಹುದು.
ಅಪಾಯ ಮತ್ತು ಪ್ರತಿಫಲದ ನಡುವಿನ ಸಮತೋಲನ
ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು "ಸ್ಥಿರ" (ಸ್ಥಿರತೆ) ಮತ್ತು "ಸುಖ" (ಸಂತೋಷ) ಪರಿಕಲ್ಪನೆಯನ್ನು ಒತ್ತಿಹೇಳುತ್ತಾನೆ. ಅದೇ ರೀತಿ, ಹೂಡಿಕೆಯ ವಿಷಯಕ್ಕೆ ಬಂದಾಗ, ಅಪಾಯ ಮತ್ತು ಪ್ರತಿಫಲದ ನಡುವೆ ನಾವು ಸಮತೋಲನವನ್ನು ಸಾಧಿಸುವುದು ಮುಖ್ಯವಾಗಿದೆ. ಹೆಚ್ಚಿನ ಅಪಾಯದ ಹೂಡಿಕೆಗಳು ಹೆಚ್ಚಿನ ಆದಾಯ ನೀಡುವ ಸಾಧ್ಯತೆ ಇರುತ್ತದೆಯಾದರೂ ಕೂಡಾ ಅದು ಸ್ಥಿರವಾಗಿರದು, ಬದಲಾಗಬಹುದು. ಮತ್ತೊಂದೆಡೆ, ಕಡಿಮೆ-ಅಪಾಯದ ಹೂಡಿಕೆಗಳು ಕಡಿಮೆಯಾದರೂ ಸ್ಥಿರವಾದ ಆದಾಯವನ್ನು ಒದಗಿಸುತ್ತವೆ. ಇವೆರಡರ ನಡುವೆ ಸಮತೋಲನವನ್ನು ಕಂಡುಕೊಳ್ಳುವುದು ಉತ್ತಮ ಹೂಡಿಕೆ ವಿಧಾನವಾಗಿದೆ.
ದೈವಿಕ ಮತ್ತು ಕರ್ಮದ ನಿಯಮದಲ್ಲಿ ನಂಬಿಕೆ
ಭಗವಂತ ಕೃಷ್ಣನು ನಮಗೆ ದೈವಿಕತೆಯನ್ನು ನಂಬಲು ಮತ್ತು ಕರ್ಮದ ಸಾರ್ವತ್ರಿಕ ನಿಯಮವನ್ನು ಅರ್ಥಮಾಡಿಕೊಳ್ಳಲು ಕಲಿಸುತ್ತಾನೆ. ಹಣಕಾಸಿನ ಸಂದರ್ಭದಲ್ಲಿ, ಇದನ್ನು ನೈತಿಕ ಮತ್ತು ಜವಾಬ್ದಾರಿಯುತ ಹೂಡಿಕೆಯ ಆಯ್ಕೆಗಳನ್ನು ಮಾಡುವುದು ಎಂದು ಅರ್ಥೈಸಬಹುದು.
ನಿರಂತರ ಕಲಿಕೆ ಮತ್ತು ಸ್ವಯಂ ಸುಧಾರಣೆ
ಭಗವದ್ಗೀತೆಯಲ್ಲಿ ನಿರಂತರ ಕಲಿಕೆ ಮತ್ತು ಸ್ವ-ಸುಧಾರಣೆಯನ್ನು ಶ್ರೀಕೃಷ್ಣ ಪ್ರೋತ್ಸಾಹಿಸುತ್ತಾನೆ. ಈ ತತ್ವವನ್ನು ನಮ್ಮ ಆರ್ಥಿಕ ಪ್ರಯಾಣಕ್ಕೂ ಅನ್ವಯಿಸಬಹುದು. ಹೂಡಿಕೆಗೆ ವಿವಿಧ ಹೂಡಿಕೆ ಸಾಧನಗಳು, ಮಾರುಕಟ್ಟೆ ಸ್ಥಿತಿ, ಆರ್ಥಿಕ ಅಂಶಗಳ ಬಗ್ಗೆ ತಿಳುವಳಿಕೆ ಮತ್ತು ಜ್ಞಾನದ ಅಗತ್ಯವಿದೆ. ತಿಳುವಳಿಕೆಯುಳ್ಳ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಅದರ ಬಗ್ಗೆ ತಿಳುವಳಿಕೆಯನ್ನು ಇಟ್ಟುಕೊಳ್ಳಬೇಕು. ಪುಸ್ತಕಗಳನ್ನು ಓದಬೇಕು, ಕಾರ್ಯಾಗಾರಗಳಿಗೆ ಹಾಜರಾಗಬೇಕು ಮತ್ತು ತಜ್ಞರ ಅಭಿಪ್ರಾಯಗಳನ್ನು ಪಡೆಯಬೇಕು.
More From GoodReturns

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications