KVS: ಹೂಡಿಕೆ ಡಬಲ್ ಮಾಡುವ ಬೆಸ್ಟ್ ಪೋಸ್ಟ್‌ ಆಫೀಸ್ ಯೋಜನೆ ಬಗ್ಗೆ ತಿಳಿಯಿರಿ

ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಲ್ಲಿ ಅಧಿಕ ರಿಟರ್ನ್ ಪಡೆಯಲು ಸಾಧ್ಯವೆಂದು ನೋಡುತ್ತೇವೆ. ಇಂದಿನ ಯುವಜನರು ಹೂಡಿಕೆ ಮಾಡಿದ ಮೊತ್ತದ ಸುರಕ್ಷತೆಯ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೂ ನಾವು ಮಾಡಿದ ಹೂಡಿಕೆಯು ರಿಸ್ಕ್ ಫ್ರೀ ಇದ್ದರೆ, ಮೈಂಡ್ ಫ್ರೀ ಆಗಿರುವುದು ಖಂಡಿದೆ. ಅಂತಹ ಸುರಕ್ಷಿತ, ಹಣ ಡಬಲ್ ಮಾಡುವ ಯೋಜನೆಗಳನ್ನು ಭಾರತೀಯ ಅಂಚೆ ಕಚೇರಿಯು ಹೊಂದಿದೆ.

ಭಾರತೀಯ ಅಂಚೆ ಕಚೇರಿಯ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಜನರು ದೇಶದಲ್ಲಿ ಅಧಿಕವಾಗಿದ್ದಾರೆ. ಹಣ ಡಬಲ್ ಮಾಡುವ ಯೋಜನೆಗಳಲ್ಲಿ ಪೋಸ್ಟ್ ಆಫೀಸ್‌ನ ಕಿಸಾನ್ ವಿಕಾಸ್ ಪತ್ರ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯು ಹೂಡಿಕೆದಾರರು ತಮ್ಮ ಹಣವನ್ನು ಡಬಲ್ ಮಾಡಲು ಅವಕಾಶ ನೀಡುತ್ತದೆ.

ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 120 ತಿಂಗಳುಗಳಲ್ಲಿ ಹಣವನ್ನು ಡಬಲ್ ಮಾಡಲು ಸಾಧ್ಯವಾಗುತ್ತದೆ. ಆದರೆ ಈ ಹೂಡಿಕೆ ದೀರ್ಘಾವಧಿ ಹೂಡಿಕೆ ಮಾಡಲು ಯಾರು ಸಿದ್ಧವಿದ್ದರೋ ಅವರಿಗೆ ಬೆಸ್ಟ್ ಯೋಜನೆ ಆಗಿದೆ. ಸರ್ಕಾರವು ನಿಯಮಿತವಾಗಿ ಎಲ್ಲ ಅಂಚೆ ಕಚೇರಿ ಯೋಜನೆಯ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತದೆ. ಡಿಸೆಂಬರ್ 2022ರಲ್ಲಿ ಹಲವಾರು ಯೋಜನೆಗಳ ಬಡ್ಡಿದರವನ್ನು ಸರ್ಕಾರ ಏರಿಸಿದೆ.

 KVS: ಹೂಡಿಕೆ ಡಬಲ್ ಮಾಡುವ ಬೆಸ್ಟ್ ಪೋಸ್ಟ್‌ ಆಫೀಸ್ ಯೋಜನೆ

ಕಳೆದ ವರ್ಷದ ಅಂತ್ಯದಲ್ಲಿ ಕೇಂದ್ರ ಸರ್ಕಾರವು ಕಿಸಾನ್ ವಿಕಾಸ್ ಪತ್ರ ಸೇರಿದಂತೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಗ್ರಾಹಕರು ಸುಮಾರು ಶೇಕಡ 1.10ರಷ್ಟು ಬಡ್ಡಿದರವನ್ನು ಏರಿಕೆ ಮಾಡಿದೆ. ಹಾಗೆಯೇ ಈ ಹಿಂದಿಕ್ಕಿಂತ ಮೂರು ತಿಂಗಳು ಮುನ್ನವೇ ಹೂಡಿಕೆದಾರರ ಹಣವು ಡಬಲ್ ಆಗುತ್ತದೆ.

ಯೋಜನೆಯ ಬಗ್ಗೆ ಮಾಹಿತಿ

ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಡ್ಡಿದರ ಈ ಹಿಂದೆ ಶೇಕಡ 7.00 ಆಗಿತ್ತು. ಆದರೆ ಬಡ್ಡಿದರ ಪರಿಷ್ಕರಣೆ ಮಾಡಿದ ಬಳಿಕ 2023ರ ಜನವರಿ 1ರಿಂದ ಜಾರಿಗೆ ಬರುವಂತೆ ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಡ್ಡಿದರವು ಶೇಕಡ 7.20 ಆಗಿದೆ. ಬಡ್ಡಿದರ ಪರಿಷ್ಕರಣೆ ಮಾಡಿದ ನಂತರ ಈ ಯೋಜನೆಯಲ್ಲಿ ಬರೀ 10 ವರ್ಷದಲ್ಲೇ ಹೂಡಿಕೆಯನ್ನು ಡಬಲ್ ಮಾಡಲು ಸಾಧ್ಯವಾಗುತ್ತದೆ. ನಾವು 1000 ರೂಪಾಯಿ ಕನಿಷ್ಠ ಹೂಡಿಕೆಯನ್ನು ಮಾಡಬಹುದು. ಆದರೆ ಯಾವುದೇ ಗರಿಷ್ಢ ಹೂಡಿಕೆಯ ಮಿತಿಯಿಲ್ಲ.

ಈ ಯೋಜನೆಯಲ್ಲಿ ಸಿಂಗಲ್ ಮತ್ತು ಜಾಯಿಂಟ್ ಖಾತೆಯನ್ನು ತೆರೆಯಲು ಅವಕಾಶವಿದೆ. ಹಾಗೆಯೇ ಡೆತ್‌ ಬೆನಿಫಿಟ್ ಕೂಡಾ ಇದೆ. ಹೂಡಿಕೆದಾರರು ಮೆಚ್ಯೂರಿಟಿಗೂ ಮುನ್ನ ಸಾವನ್ನಪ್ಪಿದರೆ, ನಾಮಿನಿಯು ಹಣವನ್ನು ಕ್ಲೈಮ್ ಮಾಡಬಹುದಾಗಿದೆ.

ಇನ್ನು ಕಿಸಾನ್ ವಿಕಾಸ್ ಪತ್ರ ಖಾತೆಯನ್ನು ತೆರೆಯುವುದು ಅತೀ ಸರಳವಾಗಿದೆ. 10 ವರ್ಷಕ್ಕಿಂತ ಮೇಲ್ಪಟ್ಟ ಯಾರೇ ಆದರೂ ಈ ಯೋಜನೆಯಡಿಯಲ್ಲಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತರ ಖಾತೆಯನ್ನು ಪೋಷಕರು ನಿರ್ವಹಣೆ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬೇಕಾದರೆ ನಾವು ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಖಾತೆ ತೆರೆದ ಬಳಿಕ ಹೂಡಿಕೆದಾರರಿಗೆ ಕಿಸಾನ್ ವಿಕಾಸ್ ಪತ್ರ ಪ್ರಮಾಣಪತ್ರ ಲಭ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+