ಭಾರತದ ಶ್ರೀಮಂತ ಮಹಿಳಾ ನಟರಲ್ಲಿ ಒಬ್ಬರಾದ 'ದಕ್ಷಿಣದ ಲೇಡಿ ಸೂಪರ್‌ಸ್ಟಾರ್' ನಯನತಾರಾ ಈ ಹಿಂದೆ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಬಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ. ಆದರೆ ಈಗ ಈ ನಟಿಯ ಅನ್ನಪೂರಣಿ ಸಿನಿಮಾ ಭಾರೀ ವಿವಾದಕ್ಕೆ ಕಾರಣವಾಗಿದೆ.
ದಕ್ಷಿಣ ಭಾರತದ ಪ್ರಮುಖ ನಟಿ ಸುಮಾರು 13 ವರ್ಷಗಳಿಂದ ಕ್ಷೇತ್ರದಲ್ಲಿದ್ದಾರೆ. ಹಾಗೆಯೇ ಭಾರತದಲ್ಲಿ ಅತೀ ಹೆಚ್ಚು ಆದಾಯ ಹೊಂದಿರುವ ಟಾಪ್ 10 ನಟಿಯರ ಪಟ್ಟಿಯಲ್ಲಿರುವ ಏಕೈಕ ದಕ್ಷಿಣ ಭಾರತದ ನಟಿ ಇವರಾಗಿದ್ದಾರೆ. ಆದರೆ ಈಗ ಇವರ ಅನ್ನಪೂರಣಿ ಸಿನಿಮಾ ಭಾರೀ ವಿವಾದದಲ್ಲಿದೆ. ನಯನತಾರಾ ಆದಾಯ, ವೇತನ, ಕಾರು ವಿವರ ಇಲ್ಲಿ ನೀಡಲಾಗಿದೆ ಮುಂದೆ ಓದಿ.....

ನಯನತಾರಾ ವೇತನ
ಮುಖ ನಟಿಯರಲ್ಲಿ ಒಬ್ಬರಾಗಿರುವ ನಯನತಾರಾ, ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮ ಪಾತ್ರಕ್ಕೆ ತಕ್ಕಂತೆ ಸಿನಿಮಾವೊಂದಕ್ಕೆ 5 ರಿಂದ 10 ಕೋಟಿ ರೂಪಾಯಿ ಸಂಭಾವನೆ ಪಡೆಯುವಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಟಿಒಐ ವರದಿ ಹೇಳುತ್ತದೆ.
ನಯನತಾರಾ ನಿವ್ವಳ ಆದಾಯ
ನಯನತಾರಾ ಅವರ ನಿವ್ವಳ ಆದಾಯವು ದಕ್ಷಿಣ ಭಾರತದ ನಟಿಯರಿಗೆ ಹೋಲಿಸಿದರೆ ಅತೀ ಅಧಿಕವಾಗಿದೆ. ಟಿಒಐ ವರದಿಯ ಪ್ರಕಾರ ನಯನತಾರಾ ನಿವ್ವಳ ಆದಾಯ ಸುಮಾರು 200 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. 2018 ರಲ್ಲಿ ಫೋರ್ಬ್ಸ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ 15 ಕೋಟಿ ರೂಪಾಯಿ ಆದಾಯದೊಂದಿಗೆ ಸ್ಥಾನ ಪಡೆದ ಏಕೈಕ ದಕ್ಷಿಣ ಭಾರತೀಯ ನಟಿ ಇವರಾಗಿದ್ದಾರೆ.
ನಯನತಾರಾ ಖಾಸಗಿ ಜೆಟ್
ಖಾಸಗಿ ಜೆಟ್ ಹೊಂದಿರುವ ದಕ್ಷಿಣದ ನಟಿಯರಲ್ಲಿ ನಯನತಾರಾ ಕೂಡ ಒಬ್ಬರಾಗಿದ್ದಾರೆ. ನಟಿ ದೇಶದಲ್ಲಿದ್ದಾಗ ಕೆಲಸದ ಕಾರಣ ಆಗಾಗ್ಗೆ ತಮ್ಮ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಾರೆ ಎಂದು ವರದಿಯಾಗಿದೆ. ನಯನತಾರಾ ಮತ್ತು ಅವರ ನಿರ್ದೇಶಕ ಪತಿ ವಿಘ್ನೇಶ್ ಶಿವನ್ ತಮ್ಮ ಕೊಚ್ಚಿನ್, ಹೈದರಾಬಾದ್ ಮತ್ತು ಮುಂಬೈ ಪ್ರವಾಸಕ್ಕಾಗಿ ಇದನ್ನು ಬಳಸುತ್ತಾರೆ.
ಐಷಾರಾಮಿ ಮನೆಗಳು
ಜವಾನ್ ತಾರೆ ನಯನತಾರಾ ಚೆನ್ನೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇದಲ್ಲದೆ, ಅವರು ಕೇರಳ, ಹೈದರಾಬಾದ್ ಮತ್ತು ಮುಂಬೈನಲ್ಲಿ ಕೆಲವು ಮಹಲುಗಳನ್ನು ಹೊಂದಿದ್ದಾರೆ. ಪ್ರಸ್ತುತ, ಅವರು ತಮ್ಮ ಪತಿ ವಿಘ್ನೇಶ್ ಶಿವನ್ ಜೊತೆ 4ಬಿಎಚ್‌ಕೆ ಫ್ಲಾಟ್‌ನಲ್ಲಿದ್ದಾರೆ. ಇದರ ಅಂದಾಜು ಮೌಲ್ಯ 100 ಕೋಟಿ ರೂಪಾಯಿ ಆಗಿದೆ.
ನಯನತಾರಾ ಅವರು ಶೂಟಿಂಗ್ ಇಲ್ಲದ ಸಮಯದಲ್ಲಿ ಪತಿ ಮತ್ತು ಇಬ್ಬರು ಪುತ್ರರೊಂದಿಗೆ ಈ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಟಿಇಐ ವರದಿಯ ಪ್ರಕಾರ ಈ ಮನೆಯು ಖಾಸಗಿ ಸಿನಿಮಾ ಹಾಲ್, ಈಜುಕೊಳ ಮತ್ತು ಜಿಮ್‌ನಂತಹ ವಿಶೇಷ ಸೌಕರ್ಯಗಳನ್ನು ಹೊಂದಿದೆ ಎಂದು ವರದಿಯಾಗಿದೆ. ನಟಿ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಎರಡು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ ಸುಮಾರು 30 ಕೋಟಿ ರೂಪಾಯಿ ಆಗಿದೆ.
ಕಾರು ಸಂಗ್ರಹದ ವಿವರ
'ಬಿಗಿಲ್' ನಟಿ ನಯನತಾರಾ ಅವರು ಬೆರಳೆಣಿಕೆಯಷ್ಟು ಅತ್ಯಾಧುನಿಕ ಆಟೋಮೊಬೈಲ್‌ಗಳನ್ನು ಹೊಂದಿದ್ದಾರೆ. ನಟಿ 1.76 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ ಎ ಸಿರೀಸ್ ಹೊಂದಿದ್ದಾರೆ. 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಜಿಎಲ್‌ಎಸ್ 350ಡಿ ಹೊಂದಿದ್ದಾರೆ.
ಹಾಗೆಯೇ ಬಿಎಂಡಬ್ಲ್ಯೂ 5ಎಸ್ ಸಿರೀಸ್, ಫೋರ್ಡ್ ಎಂಡೀವರ್ ಮತ್ತು ಇನ್ನೋವಾ ಕ್ರಿಸ್ಟಾ ಇತರ ಕಾರುಗಳನ್ನು ಹೊಂದಿದ್ದಾರೆ. ನಟಿ ಖಾಸಗಿ ಜೆಟ್ ಅನ್ನು ಕೂಡಾ ಹೊಂದಿದ್ದು, ಅದರ ಬೆಲೆ ಅಂದಾಜು 50 ಕೋಟಿ ರೂಪಾಯಿ ಆಗಿದೆ.
ನಯನತಾರಾ ಹೂಡಿಕೆ
ನಯನತಾರಾ ಅವರು ಲಿಪ್ ಬಾಮ್ ಕಂಪನಿ ಮತ್ತು ಯುಎಇ ಮೂಲದ ತೈಲ ಕಂಪನಿಯಂತಹ ಹಲವಾರು ವ್ಯಾಪಾರ ಉದ್ಯಮಗಳಲ್ಲಿ ಪಾಲನ್ನು ಹೊಂದಿದ್ದಾರೆ. ಲಿಪ್ ಬಾಮ್ ಕಂಪನಿಯು 2021 ರಲ್ಲಿ ಆರಂಭವಾಗಿದ್ದು, ಕಂಪನಿಯು ಲಿಪ್ ಬಾಮ್‌ನ 100 ಕ್ಕೂ ಹೆಚ್ಚು ವೇರಿಯಂಟ್‌ಗಳನ್ನು ಹೊಂದಿರುವ ಮೊದಲ ಅತಿದೊಡ್ಡ ಬ್ರ್ಯಾಂಡ್ ಎಂದು ಹೇಳಿಕೊಂಡಿದೆ.
ನಟಿ ಪ್ರಸಿದ್ಧ ಚಹಾ-ಮಾರಾಟದ ಸ್ನಾಕ್ ಬಾರ್‌ನಲ್ಲಿ ಒಂದು ಪಾಲನ್ನು ಸಹ ಹೊಂದಿದ್ದಾರೆಂದು ವರದಿಯಾಗಿದೆ. ನಟಿ ತಮ್ಮ ಪತಿ ವಿಘ್ನೇಶ್ ಜೊತೆಗೆ ರೌಡಿ ಪಿಕ್ಚರ್ಸ್ ಬ್ಯಾನರ್‌ನ ಸಹ-ಮಾಲೀಕತ್ವವನ್ನು ಹೊಂದಿದ್ದಾರೆ ಎಂದು ಇಕಾನಮಿಕ್ ಟೈಮ್ಸ್ ವರದಿ ಮಾಡಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications