ಸರ್ಕಾರಿ ಕೆಲಸ ತೊರೆದು ಕೃಷಿಯಲ್ಲಿ ತೊಡಗಿಸಿ 7 ಕೋಟಿಯ ಹೆಲಿಕಾಪ್ಟರ್ ಖರೀದಿಗೆ ಸಿದ್ಧರಾದ ರಾಜಾರಾಂ ತ್ರಿಪಾಠಿ, ಮೂಲತ: ಛತ್ತೀಸ್‌ಗಢ ರಾಜ್ಯದ ಬಸ್ತರ್ ನವರು. ಕೃಷಿ ಮೂಲಕ ಹೆಲಿಕಾಪ್ಟರ್ ಖರೀದಿಸುವ ಹಂತಕ್ಕೆ ಇವರು ಬೆಳೆದು ನಿಂತಿದ್ದಾರೆ.
ಬಸ್ತಾರ್‌ನಲ್ಲಿ ಅತಿಹೆಚ್ಚು ಕರಿ ಮೆಣಸು ಹಾಗೂ ಬಿಳಿ ಮುಸ್ಲಿ ಉತ್ಪಾದಿಸುವ ರಾಜಾರಾಂ ತ್ರಿಪಾಠಿ ಅವರು ತಮ್ಮ ಬೆಳೆಗಳ ಆರೈಕೆಗೆ ಪ್ರತ್ಯೇಕ ಹೆಲಿಕಾಪ್ಟರ್ ಖರೀದಿಸಲು ಸಿದ್ಧರಾಗಿದ್ದಾರೆ. ನಾಲ್ಕು ಬಾರಿ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಪಡೆದಿರುವ ರಾಜಾರಾಂ, ಕೊಂಡಗಾಂವ್ ಮತ್ತು ಜಗದಲ್‌ಪುರದ ಬಸ್ತಾರ್ ಜಿಲ್ಲೆಗಳಲ್ಲಿ ಸ್ಟ್ರೋವಿಯಾ, ಕರಿಮೆಣಸು ಹಾಗೂ ಬಿಳಿ ಮುಸ್ಲಿ ಕೃಷಿ ಮಾಡುತ್ತಿದ್ದಾರೆ.

ಆಜ್ ತಕ್ ವಾಹಿನಿಯ ಪ್ರಕಾರ, ತ್ರಿಪಾಠಿ ಈಗ ಹೊಸ ಹೆಲಿಕಾಪ್ಟರ್ ಖರೀದಿಗಾಗಿ ಹಾಲೆಂಡ್ ಮೂಲದ ರಾಬಿನ್ಸನ್ ಕಂಪನಿಯೊಂದಿಗೆ ಏಳು ಕೋಟಿ ರೂ. ಒಪ್ಪಂದವನ್ನು ಮಾಡಿಕೊಂಡಿದ್ದಾರೆ. R-44 ಮಾದರಿಯ ನಾಲ್ಕು ಆಸನಗಳ ಹೆಲಿಕಾಪ್ಟರ್ ಅನ್ನು ಕೃಷಿಗಾಗಿ ಬಳಸಲಾಗುತ್ತದೆ.
ರಾಜಾರಾಂ ತ್ರಿಪಾಠಿ ಅವರು ಮಾ ದಂತೇಶ್ವರಿ ಹರ್ಬಲ್ ಗ್ರೂಪ್‌ನ ಸಿಇಒ ಆಗಿದ್ದು, ಇದು ವಾರ್ಷಿಕ 25 ಕೋಟಿ ಆದಾಯವನ್ನು ಹೊಂದಿದ್ದು, 400 ಬುಡಕಟ್ಟು ಕುಟುಂಬಗಳೊಂದಿಗೆ 1,000 ಎಕರೆ ಜಾಗದಲ್ಲಿ ಸಾಮೂಹಿಕ ಕೃಷಿ ಮಾದರಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆಜ್ ತಕ್ ವರದಿ ಹೇಳಿದೆ. ಅವರ ಕಂಪನಿಯು ಕರಿಮೆಣಸನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ಗೆ ರಫ್ತು ಮಾಡುತ್ತದೆ.
ರಾಜಾರಾಂ ತ್ರಿಪಾಠಿ ಯಾರು?
ಕೊಂಡಗಾಂವ್ ನಿವಾಸಿಯಾಗಿರುವ ರಾಜಾರಾಮ್ ತ್ರಿಪಾಠಿ ಅವರು ವಿಶೇಷವಾಗಿ ಬಳಿ ಮುಸ್ಲಿ ಮತ್ತು ಸಾವಯವ ಕೃಷಿಗೆ ಹೆಸರುವಾಸಿಯಾಗಿದ್ದಾರೆ. ನೈಸರ್ಗಿಕ ಹಸಿರುಮನೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಅವರು ಕಾಳು ಮೆಣಸು ಬೆಳೆಸುವುದಕ್ಕೆ ಆಸ್ಟ್ರೇಲಿಯಾ ವಿಧಾನವನ್ನು ಅಳವಡಿಸಿಕೊಂಡರು.
ರಾಜಾರಾಂ ಅವರು ಕೃಷಿ ಸಚಿವಾಲಯ ಮತ್ತು ಭಾರತೀಯ ಕೃಷಿ ಮತ್ತು ಆಹಾರ ಮಂಡಳಿಯಿಂದ ಮೂರು ಬಾರಿ ರಾಷ್ಟ್ರದ ಅತ್ಯುತ್ತಮ ರೈತ ಪ್ರಶಸ್ತಿ ಹಾಗೂ ಅಗ್ರ ಪಂಕ್ತಿಯ ರಪ್ಪುದಾರರು ಎಂಬ ಮಾನ್ಯತೆ ಪಡೆದಿದ್ದಾರೆ.
ರಾಜಾರಾಂ ತ್ರಿಪಾಠಿ ಅವರು ಹೆಲಿಕಾಪ್ಟರ್ ಹೊಂದುವ ಬಸ್ತಾರ್‌ನ ಮೊದಲ ರೈತ ಎಂದು ಗುರುತಿಸಿಕೊಂಡಿದ್ದಾರೆ. ರಾಜಾರಾಂ ಅವರು ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿದ್ದಾಗ ಔಷಧ ಮತ್ತು ರಸಗೊಬ್ಬರ ಸಿಂಪಡಿಸಲು ಹೆಲಿಕಾಪ್ಟರ್ ಬಳಸುವುದನ್ನು ಗಮನಿಸಿರುವುದಾಗಿ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಸಮುದಾಯಗಳಲ್ಲಿ ಸಾವಿರ ಎಕರೆ ಕೃಷಿ ಭೂಮಿಯಲ್ಲಿ ಔಷಧ ಸಿಂಪಡಣೆಗೆ ಹೆಲಿಕಾಪ್ಟರ್ ಅನ್ನು ಬಳಸುವುದಕ್ಕೆ ಬಯಸಿದ್ದಾರೆ. ಅವರು ಇದಕ್ಕಾಗಿ ಬಹಳ ವಿಭಿನ್ನವಾಗಿ ಡಿಸೈನ್ ಮಾಡಿಕೊಂಡಿರುವ ಏರ್‌ಕ್ರಾಫ್ಟ್ ಅನ್ನು ಸಿದ್ಧಪಡಿಸಿಕೊಂಡಿದ್ದಾರೆ.
ತ್ರಿಪಾಠಿ ಅವರು ಹೇಳುವ ಪ್ರಕಾರ, ಬೆಳೆ ಕಟಾವಿಗೆ ಬರುವ ಸಂದರ್ಭದಲ್ಲಿ ಹಲವು ರೀತಿಯ ಕೀಟಬಾಧೆ ಉಂಟಾಗುತ್ತದೆ. ಆದರೆ ಕೈಯಿಂದ ಔಷಧ ಸಿಂಪಡಣೆ ಮಾಡುವುದರಿಂದ ಅದು ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ. ಆದರೆ, ಏರ್‌ಕ್ರಾಫ್ಟ್ ಮೂಲಕ ಕೀಟನಾಶಕ ಔಷಧ ಸಿಂಪಡಣೆ ಮಾಡಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಹೆಲಿಕಾಪ್ಟರ್ ಬಳಕೆಯಿಂದ ಅಕ್ಕ-ಪಕ್ಕದ ರೈತರ ಕೃಷಿಗೂ ಹೆಚ್ಚಿನ ಅನುಕೂಲವಾಗುತ್ತದೆ. ಉಜ್ಜಯಿನಿಯಲ್ಲಿರುವ ಏವಿಯೇಷನ್ ಅಕಾಡೆಮಿಯು ತಮ್ಮ ಮಗ ಹಾಗೂ ಕಿರಿಯ ಸಹೋದರನಿಗೆ ಹೆಲಿಕಾಪ್ಟರ್ ಹಾರಿಸಲು ತರಬೇತಿ ನೀಡಲಿದೆ ಎಂದು ರಾಜಾರಾಂ ತ್ರಿಪಾಠಿ ಹೇಳಿದ್ದಾರೆ.
ಸರ್ಕಾರಿ ಬ್ಯಾಂಕಿಂಗ್ ಕೆಲಸ ಬಿಟ್ಟು ಕೃಷಿಯತ್ತ
70 ವರ್ಷಗಳ ಹಿಂದೆ ರಾಜಾರಾಂ ತ್ರಿಪಾಠಿ ಅವರ ಅಜ್ಜ ಶಂಭುನಾಥ್ ತ್ರಿಪಾಠಿ ಅವರು ಉತ್ತರ ಪ್ರದೇಶದ ಪ್ರತಾಪ್‌ಗಢ ಪ್ರದೇಶದವರಾಗಿದ್ದು, ಛತ್ತೀಸಗಢದ ದರ್ಭಾ ಕಣಿವೆಯಲ್ಲಿರುವ ಕಕ್ನಾರ್‌ನಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದರು. ಆದರೆ ಅವರ ತಂದೆ ಜಗದೀಶ್ ಪ್ರಸಾದ್ ಅವರು ಶಿಕ್ಷಕರಾಗಿದ್ದರು.
ಜಗದಲ್ಪುರ್ ಕಾಲೇಜಿನಿಂದ ಪದವಿ ಪಡೆದ ನಂತರ ರಾಜಾರಾಂ ತ್ರಿಪಾಠಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಬ್ಯಾಂಕಿಂಗ್ ವೃತ್ತಿಯನ್ನು ಮುಂದುವರಿಸಿದ್ದರು. ರೈತರು ಎದುರಿಸುವ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ವೃತ್ತಿಯನ್ನು ತೊರೆದು 1998ರಲ್ಲಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು.
ರಾಜಾರಾಂ ಅವರು ಕೃಷಿಯಲ್ಲಿ ಯಾವಾಗಲೂ ಲಾಭದಾಯಕತೆಯನ್ನು ಹೆಚ್ಚಿಸುವ ವಿಧಾನಗಳನ್ನು ಅನುಸರಿಸಿಕೊಂಡಿದ್ದಾರೆ. ಕೃಷಿ ಕ್ಷೇತ್ರದ ಮಾರುಕಟ್ಟೆಯು ಸಾಕಷ್ಟು ನ್ಯೂನತೆಯನ್ನು ಹೊಂದಿದ್ದು ಅದನ್ನು ಸರಿಪಡಿಸುವ ಅಗತ್ಯವಿದೆ ಎಂದು ತ್ರಿಪಾಠಿ ಮನಗಂಡಿರುವುದಾಗಿ ಬೆಟರ್ ಇಂಡಿಯಾ ವರದಿ ಮಾಡಿದೆ. 1999ರಲ್ಲಿ ರಾಜಾರಾಂ ತ್ರಿಪಾಠಿ ಅವರು ಜಾಗತಿಕವಾಗಿ ಭಾರೀ ಬೇಡಿಕೆಯಿರುವ ಬಿಳಿ ಮುಸ್ಲಿ ಕೃಷಿಯನ್ನು ಪ್ರಾರಂಭಿಸಿದ್ದರು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications