ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿರುವ ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ)ಯನ್ನು ವಿಸ್ತರಿಸಿ, ಪರಿಷ್ಕೃತಗೊಳಿಸಿ ಜಾರಿಗೊಳಿಸಲಾಗಿದ್ದು, ತಿಂಗಳಿಗೆ 9250 ರು ತನಕ ಪಿಂಚಣಿ ಪಡೆದುಕೊಳ್ಳಬಹುದಾಗಿದೆ.
ಭಾರತೀಯ ಜೀವವಿಮಾ ನಿಗಮದ ಮೂಲಕ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿಯೂ ಖರೀದಿಸಬಹುದು, ಆದರೆ, ಪಾಲಿಸಿಗಳ ಒಟ್ಟು ಮೌಲ್ಯ 15 ಲಕ್ಷ ರೂ. ಮೀರಬಾರದು, ಮಾಸಿಕ ಗರಿಷ್ಠ 9,250 ರೂ. ಪಿಂಚಣಿ ಪಡೆಯಬಹುದು, ಇದು 10 ವರ್ಷಗಳ ಕಾಲಾವಢಿ ಹೊಂದಿರುತ್ತದೆ ಎಂಬ ಪರಿಷ್ಕೃತ ನಿಯಮಗಳನ್ನು ಎಲ್ ಐಸಿ ಹೊಂದಿದೆ. ಪಿಎಂವಿವಿವೈ ವಿಸ್ತರಣೆಯು ವೃದ್ಧಾಪ್ಯದ ಆದಾಯ ಸುರಕ್ಷತೆ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕೆ ಅನುವು ಮಾಡಿಕೊಡುತ್ತದೆ.
ಪಿಎಂವಿವಿವೈ ಪಿಂಚಣಿ ದರ ಶೇ. 8ರಷ್ಟಿತ್ತು.ಆದರೆ, ಮಾರ್ಚ್ 31, 2022ರೊಳಗೆ ಯೋಜನೆಯನ್ನು ಹೊಂದಿದ್ದರೆ ಪ್ರಸಕ್ತ ಸಾಲಿನಲ್ಲಿ ಪಿಂಚಣಿ ದರವನ್ನು ಶೇ 7.4ಕ್ಕೆ ಇಳಿಸಲಾಗಿದೆ. 10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಪ್ರತಿ ವರ್ಷ ಪಿಂಚಣಿ ದರವನ್ನು ಬದಲಾಯಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಎಲ್ ಐಸಿ ಮೂಲಕ ಆನ್ ಲೈನ್, ಆಫ್ ಲೈನ್ ನಲ್ಲಿ PM ವಯ ವಂದನ ಯೋಜನೆಯಲ್ಲಿ ಹೂಡಿಕೆ ಮಾಡಿ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು.
ಹೂಡಿಕೆ ಮೊತ್ತ, ಅವಧಿ ಮಾಸಿಕ ಅವಧಿ
ಹೂಡಿಕೆ ಮೊತ್ತ, ಅವಧಿ ಮಾಸಿಕ ಅವಧಿ
* ಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1.50 ಲಕ್ಷ; ಗರಿಷ್ಠ ಹೂಡಿಕೆ: ರೂ. 7.50 ಲಕ್ಷ ರು
* ತ್ರೈಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,49,068; ಗರಿಷ್ಠ ಹೂಡಿಕೆ: ರೂ. 7,45,342
* ಅರ್ಧವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,47,601; ಗರಿಷ್ಠ ಹೂಡಿಕೆ: ರೂ. 7,38,007
*ವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,44,578; ಗರಿಷ್ಠ ಹೂಡಿಕೆ: ರೂ. 7,22,892
ಪಿಂಚಣಿ ಮೊತ್ತ
ಪಿಂಚಣಿ ಮೊತ್ತ
* ಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 1,000/; ಗರಿಷ್ಠ ಪಿಂಚಣಿ: ರೂ. 5,000/
* ತ್ರೈಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 3,000/; ಗರಿಷ್ಠ ಪಿಂಚಣಿ: ರೂ. 15,000/
* ಅರ್ಧವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 6,000/ ಗರಿಷ್ಠ ಪಿಂಚಣಿ: ರೂ. 30,000/
* ವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 12,000/ ಗರಿಷ್ಠ ಪಿಂಚಣಿ: ರೂ. 60,000/
ಪಿಂಚಣಿದಾರರು ಮರಣ ಹೊಂದಿದಲ್ಲಿ?
ಪಿಂಚಣಿದಾರರು ಮರಣ ಹೊಂದಿದಲ್ಲಿ? ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಾರ್ಷಿಕ ಮರುಹೊಂದಿಸುವ ದರವನ್ನು ಅನುಮೋದಿಸಲು ಹಣಕಾಸು ಸಚಿವರಿಗೆ ಅಧಿಕಾರವನ್ನು ನೀಡಲಾಗಿದೆ. 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 7.40% ನಷ್ಟು ಆದಾಯದ ದರವನ್ನು ಆರಂಭದಲ್ಲಿ ಅನುಮತಿಸಲು ಮತ್ತು ನಂತರ ಪ್ರತಿ ವರ್ಷ ಮರುಹೊಂದಿಸಬಹುದಾಗಿದೆ. ಪಿಎಂವಿವಿವೈ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದಲ್ಲಿ, ಖರೀದಿ ಮೊತ್ತವನ್ನು ನಾಮಿನಿಗೆ/ಫಲಾನುಭವಿಗೆ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ ಯಾವುದೇ ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿಗೆ ಮೊತ್ತ ಸಲ್ಲಲಿದೆ.
ಸೇವಾ ತೆರಿಗೆ/ಜಿಎಸ್‌ಟಿಯಿಂದ ವಿನಾಯಿತಿ
ಈ ಯೋಜನೆಯು ಸೇವಾ ತೆರಿಗೆ/ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದೆ. ಸ್ವಯಂ ಅಥವಾ ಸಂಗಾತಿಯ ಯಾವುದೇ ನಿರ್ಣಾಯಕ/ಮಾರಣಾಂತಿಕ ಕಾಯಿಲೆಯ ಚಿಕಿತ್ಸೆಗಾಗಿ ಪಿಂಚಣಿದಾರರಿಗೆ ಹಣದ ಅಗತ್ಯವಿರುವಂತಹ ಅಸಾಧಾರಣ ಸಂದರ್ಭಗಳಲ್ಲಿ ಪಾಲಿಸಿಯ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಬಹುದು.
ಈ ಯೋಜನೆಯ ಅಡಿಯಲ್ಲಿ ಪಾವತಿಸಬೇಕಾದ ಸರೆಂಡರ್ ಮೌಲ್ಯವು ಖರೀದಿ ಬೆಲೆಯ 98% ಆಗಿರಬೇಕು. 3 ಪಾಲಿಸಿ ವರ್ಷಗಳು ಪೂರ್ಣಗೊಂಡ ನಂತರ ಸಾಲ ಸೌಲಭ್ಯ ಲಭ್ಯವಿದೆ. ನೀಡಬಹುದಾದ ಕನಿಷ್ಠ ಸಾಲವು ಖರೀದಿ ಬೆಲೆಯ 75% ಆಗಿರುತ್ತದೆ. ಖಾತರಿಯ ಪಿಂಚಣಿ ದರವು ಆಫ್‌ಲೈನ್ ಮತ್ತು ಆನ್‌ಲೈನ್ ಮೋಡ್‌ಗಳಿಗೆ ಹೋಲುತ್ತದೆ.

Click it and Unblock the Notifications