ಮಾಸಿಕವಾಗಿ ಕೇಂದ್ರ ಸರ್ಕಾರದಿಂದ ಪಿಂಚಣಿಯನ್ನು ಪಡೆಯುವವರು ವಾರ್ಷಿಕವಾಗಿ ಒಂದು ಬಾರಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇದಕ್ಕೆ ವಾರ್ಷಿಕ ಜೀವನ ಪ್ರಮಾಣಪತ್ರ ಎಂದು ಕೂಡಾ ಕರೆಯಲಾಗುತ್ತದೆ, ಹಾಗೆಯೇ ಜೀವನ ಪ್ರಮಾಣ ಎಂದು ಕೂಡಾ ಕರೆಯಲಾಗುತ್ತದೆ. ಪಿಂಚಣಿ ವಿತರಣೆ ಮಾಡುವ ಸಂಸ್ಥೆಯು ಪಿಂಚಣಿದಾರರು ಜೀವಂತವಾಗಿದ್ದಾರೆ ಎಂಬುವುದನ್ನು ಖಚಿತಪಡಿಸಲು ಈ ಜೀವನ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ.
ಸರ್ಕಾರವು 80 ವರ್ಷ ಮತ್ತು ಅದಕ್ಕಿಂತ ಅಧಿಕ ವಯಸ್ಸಿನವರಿಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಅಧಿಕ ಸಮಯಾವಕಾಶವನ್ನು ನೀಡಿದೆ. 80 ವರ್ಷಕ್ಕಿಂತ ಮೇಲಿನವರು ಅಕ್ಟೋಬರ್ 1ರವರೆಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಇದಕ್ಕಾಗಿ ಸರ್ಕಾರವು ಹಲವಾರು ಆಯ್ಕೆಗಳನ್ನು ಜನರಿಗೆ ನೀಡಿದೆ.
ಪಿಂಚಣಿದಾರರು ಜೀವಂತವಾಗಿದ್ದಾರೆ, ಪಿಂಚಣಿಯನ್ನು ಪಡೆಯಲು ಈಗಲೂ ಅರ್ಹರು ಎಂದು ತಿಳಿಯುವ ನಿಟ್ಟಿನಲ್ಲಿ ಈ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವುದು ಅತೀ ಮುಖ್ಯವಾಗಿದೆ. ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಹಲವಾರು ವಿಧಾನಗಳು ಇದೆ. ಪ್ರಮುಖವಾದ ಆರು ವಿಧಾನಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...
ಜೀವನ ಪ್ರಮಾಣ ಪೋರ್ಟಲ್
ಪಿಂಚಣಿದಾರರು ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಜೀವನ ಪ್ರಮಾಣ ಪೋರ್ಟಲ್ ಮೂಲಕ ಸಲ್ಲಿಸಬಹುದು. ಪಿಂಚಣಿದಾರರು ಜೀವನ ಪ್ರಮಾಣ ಅರ್ಜಿಯನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಯುಐಡಿಎಐ ಡಿವೈಸ್ ಮೂಲಕ ಬಯೋಮೆಟ್ರಿಕ್ ಡೇಟಾವನ್ನು ಸಲ್ಲಿಸಬೇಕಾಗುತ್ತದೆ. ಯುಐಡಿಎಐ ಎಲ್ಲ ಪಿಂಚಣಿದಾರರ ಬಯೋಮೆಟ್ರಿಕ್ ಡೇಟಾವನ್ನು ಜೀವನ ಪ್ರಮಾಣ ಡಿಜಿಟಲ್ ಸರ್ಟಿಫಿಕೇಟ್‌ಗಾಗಿ ಸಂಗ್ರಹಿಸಿರುತ್ತದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್
ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಅಂಚೆ ಕಚೇರಿ ಸಿಬ್ಬಂದಿಗಳ ಮೂಲಕ ಸಲ್ಲಿಸಬಹುದಾಗಿದೆ. ಅಂಚೆ ಕಚೇರಿ ಸಿಬ್ಬಂದಿಗಳು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಮನೆ ಬಾಗಿಲಿಗೆ ಬಂದು ಸೇವೆ ಸಲ್ಲಿಸುವ ಮೂಲಕ ಪೂರೈಸುತ್ತಾರೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಈ ಸೇವೆಯನ್ನು ಸಲ್ಲಿಸುತ್ತದೆ. ಪಿಂಚಣಿದಾರರು ಗೂಗಲ್ ಪ್ಲೇಸ್ಟೋರ್‌ನಿಂದ Postinfo APP ಡೌನ್‌ಲೋಡ್ ಮಾಡುವ ಮೂಲಕ ಜೀವನ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು.
ಮನೆಬಾಗಿಲಿಗೆ ಬಂದು ಬ್ಯಾಂಕಿಂಗ್ ಸೇವೆ
12 ಖಾಸಗಿ ವಲಯದ ಬ್ಯಾಂಕ್‌ಗಳು ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತದೆ. ಪಿಎಸ್‌ಬಿ ಈ ಸೇವೆಯನ್ನು ನೀಡುತ್ತದೆ. ಡಿಎಸ್‌ಬಿಯ ಪ್ರತಿನಿಧಿಗಳು ನಿಮ್ಮ ಮನೆಬಾಗಿಲಿಗೆ ಬಂದು ಈ ಸೇವೆಯನ್ನು ನೀಡುತ್ತಾರೆ. ಡೋರ್‌ಸ್ಟೆಪ್ ಬ್ಯಾಂಕಿಂಗ್ ಮೊಬೈಲ್ ಆಪ್ ಅನ್ನು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿ, ನೀವು ಮನೆ ಬಾಗಿಲಿಗೆ ಸೇವೆಯನ್ನು ಪಡೆಯಬಹುದು. ಡಿಎಸ್‌ಬಿ ಅಧಿಕೃತ ವೆಬ್‌ಸೈಟ್ ಮೂಲಕವು ನೀವು ಮನೆಬಾಗಿಲಿಗೆ ಸೇವೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಟೋಲ್ ಫ್ರೀ ಸಂಖ್ಯೆ 18001213721 ಮತ್ತು 18001037188 ಗೆ ಕರೆ ಮಾಡಿ ಕೂಡಾ ನೀವು ಸೇವೆಯನ್ನು ಪಡೆಯಬಹುದು.
ಫೇಸ್ ಅಥಂಟಿಫಿಕೇಷನ್
ಯುಐಡಿಎಐನ ಆಧಾರ್ ಮೂಲದ ಫೇಸ್ ಅಥೆಂಟಿಫಿಕೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಕೂಡಾ ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ನೀವು ಅಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸಿಕೊಂಡು ಕೂಡಾ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಜೀವನ ಪ್ರಮಾಣ ಮೊಬೈಲ್ ಆಪ್‌ನಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬಹುದು.
ಮನೆಬಾಗಿಲಿಗೆ ಅಂಚೆ ಸಿಬ್ಬಂದಿ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Meity) ಮತ್ತು ಅಂಚೆ ಇಲಾಖೆಯು ಸಹಭಾಗಿತ್ವದಲ್ಲಿ ಮನೆ ಬಾಗಿಲಿಗೆ ಬಂದು ಸೇವೆಯನ್ನು ಸಲ್ಲಿಸುತ್ತದೆ. ಮನೆ ಬಾಗಿಲಿಗೆ ಬಂದ ಅಂಚೆ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ನೀವು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಲು ಸಹಾಯವಾಗಲಿದೆ. ಸೇವೆಯನ್ನು ಬಳಸಿಕೊಂಡು ನೀವು ಜೀವನ ಪ್ರಮಾಣಪಯ್ರವನ್ನು ಸಲ್ಲಿಸಲು ಪಿಂಚಣಿದಾರರು ಮೊದಲು ಗೂಗಲ್ ಪ್ಲೇಸ್ಟೋರ್‌ನಲ್ಲಿ Postinfo App ಡೌನ್‌ಲೋಡ್ ಮಾಡಬೇಕಾಗುತ್ತದೆ.
ನಿಗದಿತ ಅಧಿಕಾರಿಗಳ ಸಹಿ
ನಿಗದಿತ ಅಧಿಕಾರಿಗಳ ಸಹಿಯ ಮೂಲಕವೂ ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಿಗದಿತ ಫಾರ್ಮ್ ಇದೆ. ಈ ಫಾರ್ಮ್‌ನಲ್ಲಿ ನೀವು ಎಲ್ಲ ಮಾಹಿತಿಯನ್ನು ಉಲ್ಲೇಖಿಸಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಪಿಂಚಣಿದಾರರು ನಿಗದಿತ ಅಧಿಕಾರಿಗಳ ಸಹಿಯೊಂದಿಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಿದರೆ ಪಿಂಚಣಿದಾರರು ವೈಯಕ್ತಿಕವಾಗಿ ಹಾಜರಾಗಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿಲ್ಲ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications