ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಸರ್ಕಾರವು ಮಾರ್ಚ್ 31, 2022 ರಿಂದ ಮಾರ್ಚ್ 31, 2023 ರವರೆಗೆ ಗಡುವನ್ನು ವಿಸ್ತರಿಸಿದೆ. ಆದರೆ ಇದರಿಂದ ನೀವು ಸಮಾಧಾನಗೊಳ್ಳಬೇಕಾಗಿಲ್ಲ. ಏಪ್ರಿಲ್ 1, 2022 ರಿಂದ, ನೀವು ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾದರೆ, ನೀವು ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕು. ಆದರೆ ಜುಲೈನಿಂದ ಈ ದಂಡ ದ್ವಿಗುಣವಾಗಲಿದೆ.
ಈವರೆಗೆ ಅಂದರೆ ಏಪ್ರಿಲ್ 1, 2022 ರಿಂದ ನೀವು ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ರೂ 500 ಶುಲ್ಕ ಪಾವತಿ ಮಾಡಬೇಕಾಗಿತ್ತು. ಆದರೆ ನೀವು ಜುಲೈ 1, 2022 ರಿಂದ ಪ್ಯಾನ್ ಆಧಾರ್ ಅನ್ನು ಲಿಂಕ್ ಮಾಡಬೇಕಾದರೆ ದುಪ್ಪಟ್ಟು ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಆಧಾರ್-ಪ್ಯಾನ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಜುಲೈ 1 ರಿಂದ, ನೀವು ರೂ 1,000 ದಂಡವನ್ನು ಪಾವತಿಸಬೇಕಾಗುತ್ತದೆ. ಸಿಬಿಡಿಟಿ ಪತ್ರಿಕಾ ಪ್ರಕಟಣೆಯಲ್ಲಿ ಈ ದಂಡ ಹೆಚ್ಚಳವನ್ನು ಪ್ರಕಟಿಸಿದೆ.

"ಆಧಾರ್-ಪ್ಯಾನ್ ಲಿಂಕ್ ಮಾಡಲು ತೆರಿಗೆದಾರರಿಗೆ ಮಾರ್ಚ್ 31, 2023 ರವರೆಗೆ ಅವಕಾಶ ನೀಡಲಾಗಿದೆ. ತೆರಿಗೆದಾರರು ತಮ್ಮ ಆಧಾರ್ ಅನ್ನು ಪ್ಯಾನ್ ಜೊತೆ ಲಿಂಕ್ ಮಾಡುವಾಗ 1ನೇ ಏಪ್ರಿಲ್ 2022 ರಿಂದ ಮೂರು ತಿಂಗಳವರೆಗೆ ರೂ 500 ಶುಲ್ಕವನ್ನು ಮತ್ತು ಅದರ ನಂತರ ರೂ 1000 ಶುಲ್ಕವನ್ನು ಪಾವತಿಸಬೇಕಾಗುತ್ತದೆ," ಎಂದು ತಿಳಿಸಿದೆ.
ಚಲನ್ ಸಂಖ್ಯೆ ITNS 280 ಅನ್ನು ಬಳಸಿಕೊಂಡು ಚಲನ್ ಪಾವತಿಸಬೇಕಾಗುತ್ತದೆ. ಆಧಾರ್ ಪ್ಯಾನ್ ಲಿಂಕ್ ಪ್ರಕ್ರಿಯೆಯನ್ನು ಮಾರ್ಚ್ 31, 2023 ರೊಳಗೆ ಪೂರ್ಣಗೊಳಿಸದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಹಾಗಾದರೆ ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...
ಪ್ಯಾನ್-ಆಧಾರ್ ಲಿಂಕ್
* ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ* ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ
* ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
* ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ
* ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ 'Profile Settings' ಗೆ ಹೋಗಿ, 'Link Aadhaar' ಕ್ಲಿಕ್ ಮಾಡಿ
* ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ


Click it and Unblock the Notifications