ಭಾರತದಲ್ಲಿ ಪ್ರಸ್ತುತ ಸ್ಟಾರ್ಟ್‌ಅಪ್ ಸಂಸ್ಥೆಗಳು ಅಧಿಕವಾಗುತ್ತಿದೆ. ಹಲವಾರು ಉದ್ಯಮಿಗಳು, ಯುವಕರು ಸ್ಟಾರ್ಟ್ ಅಪ್ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿ ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಸ್ಟಾರ್ಟ್ ಅಪ್ ಸಂಸ್ಥೆಗಳು ದೇಶದಲ್ಲಿ ಹೆಚ್ಚಾಗಿ ಬೆಳವಣಿಗೆ ಕಾಣುತ್ತಿರುವ ವಲಯವಾಗಿದೆ.
ಸರ್ಕಾರ ಕೂಡಾ ಸ್ಟಾರ್ಟ್ ಅಪ್ ಸಂಸ್ಥೆಗಳ ಬೆಳವಣಿಗೆಗಾಗಿ ಹಲವಾರು ಸಾಲ ಯೋಜನೆ, ಸಾಲ ಮನ್ನಾ ಯೋಜನೆಗಳನ್ನು ಜಾರಿ ಮಾಡಿದೆ. ಕಡಿಮೆ ಬಡ್ಡಿದರದಲ್ಲಿ ಸ್ಟಾರ್ಟ್‌ಅಪ್ ಸಂಸ್ಥೆಗಳು ಸಾಲವನ್ನು ಪಡೆಯಲು ಸಾಧ್ಯವಾಗುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದರಿಂದಾಗಿ ದೇಶದಲ್ಲಿ ಸ್ಟಾರ್ಟ್‌ಅಪ್ ಸಂಸ್ಥೆಗಳಿಗೆ ಇನ್ನಷ್ಟು ಬಲತುಂಬಿದ್ದಂತಾಗಿದೆ.
ಈ ನಡುವೆ ಹಲವಾರು ಸ್ಟಾರ್ ನಟರು, ನಟಿಯರುಗಳು ಕೂಡಾ ಭಾರತೀಯ ಸ್ಟಾರ್ಟ್ ಅಪ್ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿ ದೇಶದ ಆರ್ಥಿಕ ಅಭಿವೃದ್ಧಿಗೆ ಜೊತೆಯಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಹಲವಾರು ಬಾಲಿವುಡ್ ಸ್ಟಾರ್‌ಗಳು ಸ್ಟಾರ್ಟ್ ಅಪ್ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಸ್ಟಾರ್ಟ್ ಅಪ್‌ಗೆ ಉತ್ತೇಜನ ನೀಡುತ್ತಿರುವ ಬಾಲಿವುಡ್ ನಟಿ, ನಟರ ಪಟ್ಟಿ ಈ ಕೆಳಗಿದೆ ಮುಂದೆ ಓದಿ..
ಅಲಿಯಾ ಭಟ್, ಅನುಷ್ಕಾ ಶರ್ಮಾ ಹೂಡಿಕೆ
ಅಲಿಯಾ ಭಟ್: ನೀವು ಅಲಿಯಾ ಭಟ್‌ರನ್ನು ಬರೀ ನಟಿ ಎಂದುಕೊಂಡಿರಬಹುದು. ಆದರೆ ಅಲಿಯಾ ಭಟ್ ಅತೀ ಉತ್ತಮ ಹೂಡಿಕೆದಾರರು ಎಂಬುವುದು ತಿಳಿದಿದೆಯೇ?. Phool.co (ಪೂಲ್.ಕೋ) ಎಂಬ ಸ್ಟಾರ್ಟ್‌ಅಪ್‌ಗೆ ಅಲಿಯಾ ಭಟ್ ಹೂಡಿಕೆ ಮಾಡಿದ್ದಾರೆ. ಈ ಸಂಸ್ಥೆಯು ಅಗರಬತ್ತಿ ಹಾಗೂ ರಸಗೊಬ್ಬರವನ್ನು ತಯಾರಿಸಲು ಹೂವುಗಳನ್ನು ರಿಸೈಕಲ್ ಮಾಡುವ ಸಂಸ್ಥೆಯಾಗಿದೆ.
ಅನುಷ್ಕಾ ಶರ್ಮಾ: ಅನುಷ್ಕಾ ಶರ್ಮಾ ತನ್ನದೇ ಆದ ಸಿನಿಮಾ ಪ್ರೊಡೆಕ್ಷನ್ ಸಂಸ್ಥೆಯನ್ನು ಹೊಂದಿರುವುದು ಮಾತ್ರವಲ್ಲ, ತಾನು ಸ್ಟಾರ್ಟ್ ಅಪ್‌ನಲ್ಲಿ ಹೂಡಿಕೆ ಮಾಡುವುದನ್ನು ಕೂಡಾ ಆರಂಭಿಸಿದ್ದಾರೆ. ಬ್ಲ್ಯೂ ಟ್ರೈಬ್ ಎಂಬ ಸ್ಟಾರ್ಟ್ ಅಪ್ ಸಂಸ್ಥೆಯಲ್ಲಿ ಅನುಷ್ಕಾ ಹೂಡಿಕೆ ಮಾಡಿದ್ದಾರೆ. ಈ ಸಂಸ್ಥೆಯು ಮಾಂಸದ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಯಾಗಿದೆ.
ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ ಮಾಡಿದ ಹೂಡಿಕೆ
ಶಿಲ್ಪಾ ಶೆಟ್ಟಿ: ಫಿಟ್‌ನೆಸ್ ವಿಚಾರದಲ್ಲಿ ಹೆಸರುವಾಸಿಯಾದ ನಟಿ ಶಿಲ್ಪಾ ಶೆಟ್ಟಿ, ಹೂಡಿಕೆಯಲ್ಲೂ ಎತ್ತಿದ ಕೈ. ಫಾಸ್ಟ್&ಅಪ್ (Fast&Up) ಮತ್ತು ಚಿಕ್‌ನ್ಯೂಟ್ರಿಕ್ಸ್ (Chicnutrix) ಎಂಬ ಎರಡು ಸ್ಟಾರ್ಟ್ ಅಪ್ ಸಂಸ್ಥೆಗಳಲ್ಲಿ ಶಿಲ್ಪಾ ಶೆಟ್ಟಿ ಹೂಡಿಕೆ ಮಾಡಿದ್ದಾರೆ.
ದೀಪಿಕಾ ಪಡುಕೋಣೆ: ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತಿರುವ ಬಾಲಿವುಡ್ ಸ್ಟಾರ್‌ಗಳ ಪೈಕಿ ದೀಪಿಕಾ ಪಡುಕೋಣೆ ಕೂಡಾ ಒಬ್ಬರಾಗಿದ್ದಾರೆ. ತನ್ನ ಫ್ಯಾಷನ್ ಬ್ರ್ಯಾಂಡ್ ಹೊರತಾಗಿ D2C ಬ್ರ್ಯಾಂಡ್ ನುವಾ (Nua) ಮೇಲೆ ಹೂಡಿಕೆ ಮಾಡಿದ್ದಾರೆ.
ಸೋನು ಸೂದ್, ಸುನಿಲ್ ಶೆಟ್ಟಿ, ಮಲೈಕಾ ಅರೋರಾ
ಸೋನು ಸೂದ್: ದಾನ, ಸಮಾಜ ಸೇವೆಯ ಮೂಲಕವೇ ಸೋನು ಸೂದ್ ಹೆಸರುವಾಸಿಯಾಗಿದ್ದಾರೆ. ಆದರೆ ಸೋನು ಸೂದ್ ಉತ್ತಮ ಹೂಡಿಕೆದಾರರು ಕೂಡಾ ಹೌದು. ಸೋನು ಸೂದ್ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮೂಲದ (AI-based) ಸಾಮಾಜಿಕ ಮಾಧ್ಯಮದ ಆಪ್ ಎಕ್ಸ್‌ಪ್ಲರ್ಜರ್ (Explurger) ಮೇಲೆ ಹೂಡಿಕೆ ಮಾಡಿದ್ದಾರೆ.
ಸುನಿಲ್ ಶೆಟ್ಟಿ: ಸುನಿಲ್ ಶೆಟ್ಟಿ ಹಲವಾರು ಉದ್ಯಮಗಳನ್ನು ಹೊಂದಿದ್ದಾರೆ. ಫಿಟ್‌ನೆಟ್ ಸ್ಟಾರ್ಟ್‌ಅಪ್ ಆದ ಅಕ್ವಾಟೈನ್ (Aquatein) ಮೇಲೆಯೂ ಹೂಡಿಕೆ ಮಾಡಿದ್ದಾರೆ.
ಮಲೈಕಾ ಅರೋರಾ: ಯೋಗ ಮಾಡುವ ಮೂಲಕ ಹೆಸರುವಾಸಿಯಾದ ನಟಿ ಮಲೈಕಾ ಅರೋರಾ ಕಪಿವ ಎಂಬ ಸ್ಟಾರ್ಟ್‌ಅಪ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮಲೈಕಾ ಅರೋರಾ ಕಪಿವಾ ಅಕಾಡೆಮಿ ಆಫ್ ಆಯುರ್ವೇಧದಲ್ಲಿ ವೆಲ್‌ನೆಟ್ ಮೆಂಟರ್ ಹಾಗೂ ಬ್ರ್ಯಾಂಡ್ ಎಂಬಾಸಿಡರ್ ಆಗಿದ್ದಾರೆ.


Click it and Unblock the Notifications